ವಿಶ್ವವ್ಯಾಪಿಯಾದ, ವಿರಾಟ್ ಗೋರಕ್ಷಾಮಹಾಭಿಯಾನದ ಮೂಲಪ್ರೇರಣೆಯು ತನ್ನ ಮೂಲವನ್ನು ಸೇರಿದೆ..
ಮೊದಲು ನಮ್ಮಲ್ಲಿ,ಅಮೇಲೆ ಮಠದಲ್ಲಿ,ಮತ್ತೆ ರಾಜ್ಯದಲ್ಲಿ,ಈಗ ರಾಷ್ಟ್ರದಲ್ಲಿಯೇ ಮಹತ್ ಪರಿವರ್ತನೆಯೊಂದನ್ನು ಮಾತಿಲ್ಲದೇ ತಂದ
ಮಹಾಮೌನಸಾನ್ನಿಧ್ಯ ಚಿರಮೌನವನ್ನು ತಾಳಿದೆ..
ನಮ್ಮ ಮಠದ ಅವಿಭಾಜ್ಯ ಭಾಗವಾಗಿ, ಅನಂತಭಾಗ್ಯವಾಗಿ, ಗೋರಾಷ್ಟ್ರದ ಅನಭಿಷಿಕ್ತಸಮ್ರಾಟನಾಗಿ ಗೋವುಗಳನ್ನು,ಗೋಪ್ರೇಮಿಗಳ
ಹೃದಯಗಳನ್ನು ಆಳಿ,ಬಾಳಿ,ಬೆಳಗಿ,ಕೊನೆಗಿಂದು ಬೆಳಕಿನಲ್ಲಿ ಬೆಳಕಾಗಿ ಉಳಿದಿದೆ..
ಹೊರಗಣ್ಣಿಗೆ ಮರೆಯಾದ ಮಹಾನಂದಿಗಾಗಿ ಕಣ್ಣೀರು ಸುರಿಸೋಣವೇ..?
ಒಳಗಣ್ಣು ತೆರೆದು ನೋಡಿ,ಆ ಮಹಾಚೇತನದಿಂದ ಪ್ರೇರಿತರಾಗಿ, ನೊಂದ ಗೋವುಗಳ ಕಣ್ಣೀರು ಒರೆಸೋಣವೇ..!?

Facebook Comments