ಹರೇ ರಾಮ

||ಶ್ರೀ ಶಂಕರಾಚಾರ್ಯ ವಿರಚಿತ ಏಕಶ್ಲೋಕೀ ಗಣಪತಿ ಸ್ತೋತ್ರಮ್||

ಗಳದ್ದಾನ ಗಂಡಂ ಮಿಳದ್ಭೃಂಗ ಖಂಡಂ |
ಚಲಚ್ಚಾರುಶುಂಡಂ ಜಗತ್ರಾಣಶೌಂಡಮ್ ||

ಲಸದ್ದಂತಕಾಂಡಂ ವಿಪದ್ಭಂಗಚಂಡಂ |

ಶಿವಪ್ರೇಮ ಪಿಂಡಂ ಭಜೇ ವಕ್ರ ತುಂಡಮ್ ||

(ಯಾರ ಗಲ್ಲದಿಂದ ಮದೋದಕವು ಸುರಿಯುತ್ತಿರುವುದೋ, (ಆ ವಾಸನೆಗೆ) ಭ್ರಮರವು ಗುಂಪಾಗಿ ಮುತ್ತಿರುವುದೋ, ಯಾರ ಸುಂದರ ಸೊಂಡಿಲು  ಚಲಿಸುತ್ತಿರುವುದೋ, ಜಗತ್ತನ್ನು ರಕ್ಷಿಸುವಲ್ಲಿ ಕುಶಲನೋ, ಕೋರೆಯ ಹಲ್ಲು ಶೋಭಾಯಮಾನವಾಗಿರುವುದೋ, ವಿಪತ್ತನ್ನು ಭಂಗಗೊಳಿಸುವಲ್ಲಿ ಮಹಾಪರಾಕ್ರಮಿಯೋ, ಶಿವನ ಪ್ರೇಮದ ಖನಿಯಾದ ವಕ್ರತುಂಡನನ್ನು ಭಜಿಸುತ್ತೇನೆ.)

 

 

 

 

Facebook Comments