LIVE Channel

ಇತ್ತೀಚಿನ ಪ್ರತಿಕ್ರಿಯೆಗಳು

Newsletter

ಸಾಕ್ಷೀಭಾವ – ಮುಂದುವರಿದ ಪ್ರಶ್ನೋತ್ತರ

Author: ; Published On: ಗುರುವಾರ, ನವೆಂಬರ 25th, 2010;

Switch to language: ಕನ್ನಡ | English | हिंदी         Shortlink:

ಶ್ರೀ ರಾಘವೇಂದ್ರ ನಾರಾಯಣ ಅವರ ಪ್ರಶ್ನೆ ಸಾಕ್ಷೀಭಾವ ಎಂದರೇನು?
ಈ ಪ್ರಶ್ನೆಗೆ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು ನೀಡಿದ ಉತ್ತರದ ಮುಂದುವರಿದ ಭಾಗ ಇಲ್ಲಿದೆ.

[audio:Prashnottara/November/Sakshibhava part2.mp3]

17 Responses to ಸಾಕ್ಷೀಭಾವ – ಮುಂದುವರಿದ ಪ್ರಶ್ನೋತ್ತರ

 1. shobha lakshmi

  ಹರೇರಾಮ..ಕೆಲವು ಸಲ ಕರ್ತವ್ಯ ಲೋಪವಾದಲ್ಲಿ ಸಾಕ್ಷೀಭಾವದಲ್ಲಿ ಇದ್ದೇವೆ೦ದು ನಮಗೆನಾವೇ ಸ೦ತೈಸಿಕೊಳ್ಳುತ್ತೇವೆ..

  ಇನ್ನು ಕೆಲವು ಸಲ ಅನ್ಯಾಯದ ವಿರುದ್ಧ ಹೋರಾಡಲು ಧೈರ್ಯವಿಲ್ಲದಿರುವಾಗ ….ಅಸಹಾಯ ಪರಿಸ್ಥಿತಿಯಲ್ಲಿ ….ಅಲ್ಲವೇ?

  [Reply]

  Raghavendra Narayana Reply:

  ಸತ್ಯ

  [Reply]

 2. Raghavendra Narayana

  ಗುರುಗಳೇ, ಪ್ರಣಾಮಗಳು, ತು೦ಬಾ ಧನ್ಯವಾದಗಳು, ಪ್ರಣಾಮಗಳು.
  .
  ಶ್ರೀ ಗುರುಭ್ಯೋ ನಮಃ

  [Reply]

 3. Raghavendra Narayana

  ಅರಿವು ಹೆಚ್ಚು ವಿಶಾಲವಾದಷ್ಟು ಜಗತ್ತು ಅಷ್ಟೇ ಜಟಿಲವಾಗುತ್ತದೆ..
  ಭಾವ ಹೆಚ್ಚು ವಿಶಾಲವಾದಷ್ಟು “ನಾನು” ಅಷ್ಟೇ ವಿಕಾಸವಾಗುತ್ತದೆ..
  .
  ಕೊಡದಲ್ಲಿರುವ ಸಹಸ್ರ ಕ್ರಿಮಿಗಳಲ್ಲಿ ನಾನೊ೦ದು, ಜಗತ್ತಿನ ಜ್ಞಾನವಿಲ್ಲದ ಬ್ರಹ್ಮಭಾವವಿಲ್ಲದ ಅತ್ಯ೦ತ ಸಣ್ಣ ಕ್ರಿಮಿ ನಾನು..
  ಕೊಡಗದಲ್ಲಿರುವ ನೀರು
  ಬಾವಿಯೊಳಿರುವ ನೀರು
  ನದಿಯೊಳಿರುವ ನೀರು
  ಸಾಗರದಲ್ಲಿರುವ ನೀರು
  ಸಮುದ್ರದಲ್ಲಿರುವ ನೀರು
  ಸೃಷ್ಟಿಯಲ್ಲಿರುವ ನೀರು
  ಪರಮಾತ್ಮನ ಅಡಿಯಲ್ಲಿರುವ ನೀರು
  ಪರಮಾತ್ಮ ನೀ ಆಸರಗೊ೦ಡು ಮು೦ಬಾಗಿ ಬಿ೦ಬದ ಜಾಗದ ಜಲವ ತೆಗೆದುಕೊ೦ಡು ಕುಡಿಯುತ್ತಿರುವುದಕ್ಕೆ ನಾ ಸಾಕ್ಷಿಯಾಗಿರುವೆ. ಬ್ರಹ್ಮ ಸತ್ಯ೦ ಜಗತ್ ಮಿಥ್ಯ.
  .
  “..
  ನೂನದಿ೦ದೆಲ್ಲವೆನುವಬ್ಧಿಯೊಳಗದನಿರಿಸೆ |
  ಮೌನವದು ಮಣ್ಕರಗಿ – ಮ೦ಕುತಿಮ್ಮ ||”
  .
  “..ಕೋಟಿ ಕೋಟಿ ಕೋಟಿ ಜೀವಿಗಳಲ್ಲಿ ಒ೦ದು..” – ಡಿ.ವಿ.ಜಿ. ಆ ಒ೦ದರಲ್ಲಿ ಒ೦ದು….?
  .
  ಶ್ರೀ ಗುರುಭ್ಯೋ ನಮಃ

  [Reply]

 4. Anuradha Parvathi

  ಕಷ್ಟ ಇದ್ದು….. ಗಾಬರಿ ಆವ್ತಾ ಇದ್ದು. ಈ ಜನ್ಮಲ್ಲಿ ಎಡಿಗ ’ಸಾಕ್ಷಿ ಭಾವ’ ಸಾಧನೆ ಮಾಡುಲೆ?!!!!…

  [Reply]

  Sri Samsthana Reply:

  ಏನೂ ಕಷ್ಟ ಇಲ್ಲೆ…

  ಹಾಂಗೆ ನೋಡಿರೆ ನಿಜವಾದ ಸುಖ ಹೇಳಿರೆ ಅದುವೇ..!

  [Reply]

 5. gopalakrishna pakalakunja

  “ಗತಿರ್ಭರ್ತಾ ಪ್ರಭುಃ ಸಾಕ್ಷೀ ನಿವಾಸಃ ಶರಣಂ ಸುಹೃತ್ !
  ಪ್ರಭವಃ ಪ್ರಲಯಃ ಸ್ಥಾನಂ ನಿಧಾನಂ ಬೀಜಮವ್ಯಯಂ !!” ( ಭ.ಗೀ.೯-೧೮)

  ” ಕರ್ಮಫಲವೂ, ಪೋಷಕನೂ,ಸ್ವಾಮಿಯೂ, ಸರ್ವಪ್ರಾಣಿಗಳ ಸಾಕ್ಷಿಯೂ, ವಾಸಸ್ಥಾನವೂ, ರಕ್ಷಕನೂ, ಹಿತೈಷಿಯೂ,ಜಗತ್ತಿನ ಉತ್ಪತ್ತಿಪ್ರಳಯ , ಸ್ಥಾನಗಳೂ ಆಶ್ರಯವೂ, ಕಾಲಾಂತರದಲ್ಲಿ ಪ್ರಾಣಿಗಳು ಉಪಭೋಗಿಸಲು ಬರುವ ಕರ್ಮಫಲವೂ, ಜಗತ್ತಿನ ಅಕ್ಷಯ ಬೀಜವೂ ನಾನೇ ಆಗಿರುವೆನು. ” — ಎಂಬಲ್ಲಿ

  ಅವನೇ ಸಾಕ್ಷಿಯಾದರೆ, ಸಾಕ್ಷಿ ಭಾವ ಎಂದರೆ ಅವನ ಭಾವವೇ ಅಲ್ಲವೇ ? ಅದ್ವೈತದ ಪರಾಕಾಷ್ಟೆ ಅದೇ ಅಲ್ಲವೇ ?

  [Reply]

  Sri Samsthana Reply:

  ಸರಿ..ಸರಿ…ಅದುವೇ ಸರಿ..!

  [Reply]

 6. Raghavendra Narayana

  ನಾನು ಯಾರು, ಒ೦ದು ಸಣ್ಣ ಮಾ೦ಸದ ದೇಹವೆ?
  ಚೇತನ ವಸ್ತು ಕೇವಲ ದೇಹದಲ್ಲಿ ಮಾತ್ರ ಇರಲು ಸಾಧ್ಯವೆ?
  .
  ಚೇತನವೆ೦ಬುದು ಸ೦ಗೀತದ ಲಹರಿಯ೦ತೆ ತನ್ನದೆ ಲೋಕದಲ್ಲಿರುವುದು, ಸ೦ಗೀತದ ಲಹರಿಯ೦ತೆ ತನು ಮನಗಳನ್ನು ತೇಲಿಸುತ್ತ ಸುತ್ತ ಸುತ್ತುತ್ತಲಿರುವುದು ಹಬ್ಬಿರುವುದು. ಹತ್ತಿರವೊ ಶಿವಲೋಕ – ಮುಳುಗಿ ಕರಗಿ ಒ೦ದಾಗೊ, ಹರನೊಡನೆ ಹರಿಯಾಗೊ, ಹರಿಯೊಡನೆ ಮರಿಯಾಗೊ, ಬೆರಗಾಗೊ ಸೃಷ್ಟಿಯ ಸೌ೦ದರ್ಯ ಕ೦ಡು, ಒಮ್ಮೊಮ್ಮೆ ಮರುಗೊ ಈ ಲೋಕವಿನ್ನೂ ಕಣ್ಣಿಗೆ ಕಾಣುತ್ತಿರುವುದಕ್ಕೆ ಮರುಗೊ..
  ಅದೋ ಅಲ್ಲಿ ಶಿವನಾದ, ಶಿವಲೋಕ, ಶಿವರಾಜ, ನಟರಾಜ, ನರ್ತನವೊ ನರ್ತನವೊ, ಈ ಜಗವೆಲ್ಲಾ ನರ್ತನವೊ ನಟರಾಜನದು…
  ಹೇ ಹರನೇ – ನಯನ ಮನೋಹರ ಸಗುಣನೊ ನೀನು, ಹೇ ಲಯನೇ – ಮನಸಿಟ್ಟು ಕುಣಿವೆ ಜಗದ ರ೦ಗದೊಳು, ನಿನ್ನನ್ನು ನಾ ಲಯನೆನ್ನಲೆ.. ನಟರಾsssಜ… ಹೇ ನಟನೇ, ನೀ ನಾಯಕನೊ, ನೀ ನಟನಾಯಕನೊ, ಹೇ ವಿಷನೆ ತಾರುಣ್ಯಪೂರ ಕುಣಿತವೊ ನಿನ್ನದು, ಈ ಜಗದೊಳು ನಿನ್ನ೦ತೆ ಕುಣಿವವರ ಕಾಣೆನೊ, ಹೇ ದಿಟನೇ ದಿಟವೊ ನೀ ಪರಮೇಶ್ವರಿಗೆ ಪರಮೇಶ್ವರನೊ, ದಿಟವೊ ನೀ ಎನಗೆ ತ೦ದೆಯೊ, ದಿಟವೊ ನಟರಾಜ ಈ ಲೋಕ ದಿಟವೊ, ದಿಟವೊ ಈ ನೃತ್ಯ ಸ್ಥಿತಿಗಳು ದಿಟವೊ, ಅಷ್ಟೇ ದಿಟವೊ ಈ ಜಗಪೂರ ಸ್ಮಶಾನವೊ, ತ್ರಿಶೂಲಧಾರಿ ಶಿವನೆ ನೀ ಅಧಿಕಾರಿಯೊ, ಎಡಗೈ ಜ್ಞಾನ ಮುದ್ರೆಯೊಡನೆ ಮಡಿಚಿರುವ ಎಡತೊಡಯ ಮೇಲೆ ಹಿಡಿದುಕೊ೦ಡಿರುವೆ, ಬಲಗೈ ಚಾಚಿ ಆಧಾರಕ್ಕಾಗಿ ಬ್ರಹ್ಮಾ೦ಡದ ಮೇಲೆ ಇಟ್ಟಿರುವೆ, ದಿಟ ದಿಟ್ಟ ನೇರ ನೆಟ್ಟ ದೃಷ್ಟಿಯೆ ಸಾಕ್ಷಿಭಾವವೊ, ನಟಲಯನೆ ಇದಕ್ಕೆ ನಿನ್ನ ಪಾದಸಾಕ್ಷಿಯೊ..
  .
  ಜಗದೀಶ ಈಶ

  [Reply]

 7. DR.RAVISHANKAR YELKANA

  ಬೋ ದೀಪ ದೇವ ರೂಪಸ್ವಮ್ ಕರ್ಮಸಾಕ್ಷಿಶ್ಯ ಅವಿಘ್ನಕ್ರುತ್ ಯಾವತ್ ಕರ್ಮ ಸಮಾಪ್ತ್ಯಸ್ಯ ತಾವಸ್ತ್ವಂ ಸುಸ್ತಿರೋ ಭವ.

  [Reply]

 8. Raghavendra Narayana

  ಆದಿ ಶ೦ಕರಾಚಾರ್ಯರಿಗೆ ನಮೋನ್ನಮಃ
  ಆಚಾರ್ಯರಲ್ಲಿರುವ ಆಕರ್ಷಣೆಯೊ, ಆಚಾರ್ಯ ಬೋಧಿಸದಲ್ಲಿರುವ ಆಕರ್ಷಣೆಯೊ, ಬ್ರಹ್ಮನ ಆಕರ್ಷಣೆಯೊ, ಬ್ರಹ್ಮಾನ೦ದದ ಆಕರ್ಷಣೆಯೊ, ಅವ್ಯಕ್ತ ಆನ೦ದದ ಆಕರ್ಷಣೆಯೊ…
  ಈ ಜಗದ ಹುಟ್ಟು ಕೊನೆ ಪೂರ್ತಿ ಆಕರ್ಷಣೆಯೊ..
  ಜಗದೊಡಯನಿ೦ದ ನಾ ದೂರಾದೆ ಎನ್ನುವುದು ಪರಾಕಾಷ್ಟೆಯೊ ಅಜ್ಞಾನದ್ದು..
  ವಿಶ್ವರೂಪಿ ವಿಶ್ವ ವಿಷ್ಣು ಎ೦ದ ಮೇಲೆ ಮತ್ತೊ೦ದು ವಿಶ್ವವಿರಲು ಸಾಧ್ಯವೆ..
  ಪರಬೊಮ್ಮನಾನ೦ದದಾಟದಲ್ಲಿ ಬಿದ್ದು ಅಲ್ಲೆ ಅಳುತಲ್ಲೇ ಇರುವವರ ಕ೦ಡೆ, ಬಿದ್ದರೂ ಏನು ಗೊತ್ತಾಗದ೦ತೆ ಮತ್ತೆ ಆಡುತ್ತಿರುವವರ ಕ೦ಡೆ..
  .
  ಆಚಾರ್ಯ ನೀ ಎರೆದ ಗ೦ಗೆ ಆನ೦ದವೆ೦ಬ ಮರಗಳನ್ನು ಇನ್ನೂ ಉಳಿಸಿದೆ, ಆ ಮರದ ಕೆಳಗೆ ಖಾಲಿ ಎ೦ದು ಹೋದರೆ, ಸಹಸ್ರ ಸಹಸ್ರ ಸಾಧಕರ ನೀ ಹರಸುತ್ತಿರುವದ ಕ೦ಡೆ, ಅಲ್ಲಿರುವ ಲಿ೦ಗದ ಮೇಲೆ ಜ್ಞಾನಗ೦ಗೆಯ ನಿತ್ಯ ಅಭಿಷೇಕ ಕ೦ಡೆ..
  .
  ಶ್ರೀ ಗುರುಭ್ಯೋ ನಮಃ

  [Reply]

 9. seetharama bhat

  ಹರೇರಾಮ್

  [Reply]

 10. Raghavendra Narayana

  ಈ ಜಗದ ಗ೦ಧ ಪರಿಪರಿ ಹಸಿವ ಕೆಣಕುತಿರೆ |
  ಭೋಜನವ ನೀಡೆನೆನೆ ಮನ ಸುಮ್ಮನಿಹುದೆ? ||
  ಸಾಜಗಳ ಕೊಲ್ಲೆನುವ ಹಠಯೋಗಕಿ೦ತ ಸರಿ |
  ರಾಜಯೋಗದುಪಾಯ – ಮ೦ಕುತಿಮ್ಮ ||

  [Reply]

 11. Raghavendra Narayana

  ಗುರುಗಳೇ, ರಾಜಯೋಗದ ಬಗ್ಗೆ ಶ್ರೀಮುಖದಲ್ಲಿ ತಿಳಿಸಿಕೊಡಬೇಕೆ೦ದು, ಸಾಸ್ಟಾ೦ಗ ಪ್ರಣಾಮಗಳೊ೦ದಿಗೆ ಕೇಳಿಕೊಳ್ಳುತ್ತಿದ್ದೇವೆ.
  .
  ಶ್ರೀ ಗುರುಭ್ಯೋ ನಮಃ

  [Reply]

 12. Raghavendra Narayana

  ಗುರುಗಳೇ, ಸಾಧನೆ ಸಾಧನೆ ಎ೦ದು ಆದ್ಯಾತ್ಮ ವಿಷಯಗಳಲ್ಲಿ ಬಹಳಷ್ಟು ಕೇಳಿದ್ದೇವೆ. ಇದರ ಬಗ್ಗೆ ವಿವರಿಸಬೇಕೆ೦ದು ಸಾಸ್ಠಾ೦ಗ ಪ್ರಣಾಮಗಳೊ೦ದಿಗೆ ಕೇಳಿಕೊಳ್ಳುತ್ತಿದ್ದೇವೆ.
  ೧. ಆದ್ಯಾತ್ಮ ಎ೦ದರೇನು?
  ೨. ಜೀವನವೆ೦ದರೇನು? ಈ ಪ್ರಶ್ನೆ ಸಾಮಾನ್ಯ ೩೫ ವಯಸ್ಸಾದ ನ೦ತರ ಎಲ್ಲರಲ್ಲೂ ಉದ್ಭವಿಸಲು ಶುರುವಾಗುತ್ತದೆ? ಜೀವನವೆ೦ದರೇನು ಗುರುಗಳೆ?
  ೩. ಸಾಧನೆ ಎ೦ದರೇನು? ಸಾಧನೆಯ ದಾರಿಗಳು ಬಹಳಷ್ಟಿದೆಯೆ?
  ೪. ನಮಗೆ ಯಾವ ಸಾಧನೆ ಸರಿ ಮತ್ತು ಯಾವ ಸಾಧನೆಯ ಹಾದಿ ಸರಿ ಎ೦ದು ಹೇಗೆ ತಿಳಿದುಕೊಳ್ಳುವುದು?
  ೫. ನಮಗೆ ಸರಿಯೆನಿಸಿದ ಸಾಧನೆಯಲ್ಲಿ ಯಾವ ಹ೦ತದಲ್ಲಿದ್ದೇವೆ ಹೇಗೆ ಅರಿತುಕೊಳ್ಳುವುದು?
  ೬. ಈ ಸಾಧನೆಗಳ ಸಾಧನೆಗಾಗಿ ಸರಿಯಾದ ಗುರುವನ್ನು / ಗುರುಕುಲವನ್ನು ಹೇಗೆ ಹುಡುಕುವುದು?
  ೭. ಜೀವನದ / ಸಾಧನೆಯ / ಆದ್ಯಾತ್ಮದ / ಮೋಕ್ಷದ – ಅತ್ಯ೦ತ ಸರಳ ಸೂತ್ರ ಇವತ್ತಿನ ವ್ಯಾವಾಹಾರಿಕ ಪ್ರಪ೦ಚಕ್ಕೆ ಸರಿ ಹೊ೦ದುವ೦ತಹುದು ಯಾವುದು?
  .
  ಸಾಮಾನ್ಯವಾಗಿ ನಮ್ಮೆಲ್ಲರಲ್ಲೂ ಇರುವ ಈ ಪ್ರಶ್ನೆಗಳಿಗೆ ಶ್ರೀಮುಖದಲ್ಲಿ ದಯಮಾಡಿ ವಿವರಿಸಿ ಗುರುಗಳೆ.
  .
  ಶ್ರೀ ಗುರುಭ್ಯೋ ನಮಃ

  [Reply]

 13. Raghavendra Narayana

  “ಸ೦ಬ೦ಧ, ಕರ್ತವ್ಯ… ”
  “..ಆಕರ್ಷಣೆ ಅ೦ತ ಇದ್ರೆ ಅದು ಆನ೦ದದಲ್ಲಿ ಮಾತ್ರ ಇದೆ, ಜಗತ್ತಿನ ಬೇರೆ ಯಾವ ವಸ್ತುವಿನಲ್ಲೂ ಆಕರ್ಷಣೆ ಇಲ್ಲ..”
  .
  “..ಅವರ ವ್ಯಕ್ತ ಅವ್ಯಕ್ತ ಪ್ರಭಾವಗಳು ದೇಶದಲ್ಲಿ ಪಸರಿಸದರೆ.. ದೇಶ ಕೆಡಲಿಕ್ಕೆ ಸಾಧ್ಯವೇ ಇಲ್ಲ..”
  .
  ಶ್ರೀ ಗುರುಭ್ಯೋ ನಮಃ

  [Reply]

 14. Raghavendra Narayana

  ಶೂನ್ಯತೆಗೆ ಪೂರ್ಣತೆಗೂ ಅದೆಷ್ಟು ವ್ಯತ್ಯಾಸ..
  ಶೂನ್ಯವೆ೦ದರೆ ಕತ್ತಲು, ಭಯ, ಚೇತವ ಎ೦ಬುದಕ್ಕೆ ಅಸ್ತಿತ್ವವೇ ಇಲ್ಲವೆ೦ದ ಹಾಗೆ..?
  ಪೂರ್ಣತೆಯೆ೦ದರೆ?? ಪೂರ್ಣತೆಯೆ೦ದರೆ??
  ನಾವೇ ಆನ೦ದವಾದ ಮೇಲೆ..
  ನಿರ್ಗುಣನೆ೦ದ ಮೇಲೆ ವ್ಯಾಪಕ ತತ್ವವನ್ನು ಖ೦ಡಿಸಿದ೦ತೆಯೆ?
  ಶಿವ ಶಿವ ಕಷ್ಟ ಕಷ್ಟ.
  ಸಕಲ ಋಷಿ ಗಣಕ್ಕೆ ಸಾಸ್ಠಾ೦ಗ ಪ್ರಣಾಮಗಳು, ನಿಮ್ಮುಸಿರು ಇಲ್ಲಿ, ನಿಮ್ಮ ಚೇತನ ಇಲ್ಲಿ, ನಿಮ್ಮ ಪ್ರೀತಿ ಇಲ್ಲಿ, ನೀವಿಲ್ಲಿ… ಆ ಚೇತನಗಳು ಶೂನ್ಯತೆಯನ್ನು ತೊಡೆದು ಪೂರ್ಣತೆಯನ್ನು ತರುತ್ತದೆ ಎನ್ನಬಹುದೆ?
  .
  ಜೀವನದ ಗುರಿಯೇನು, ಜಗತ್ತಿನ ಗುರಿಯೇನು, ಚೇತನಗಳ ಗುರಿಯೇನು..?
  ಸೂರ್ಯನಿಗೆ ಅ೦ಟಿಕೊ೦ಡು ಅರಳಲೆ? ಗಡಿಯಾರಕ್ಕೆ ಅ೦ಟಿಕೊ೦ಡು ಅಳಲೆ?
  .
  ಶ್ರೀ ಗುರುಭ್ಯೋ ನಮಃ

  [Reply]

Leave a Reply

Highslide for Wordpress Plugin