LIVE Channel

ಇತ್ತೀಚಿನ ಪ್ರತಿಕ್ರಿಯೆಗಳು

Newsletter

ಸಾಕ್ಷೀಭಾವ

Author: ; Published On: ಶನಿವಾರ, ನವೆಂಬರ 13th, 2010;

Switch to language: ಕನ್ನಡ | English | हिंदी         Shortlink:

ಶ್ರೀ ರಾಘವೇಂದ್ರ ನಾರಾಯಣ ಅವರ ಪ್ರಶ್ನೆ ಸಾಕ್ಷೀಭಾವ ಎಂದರೇನು?
ಈ ಪ್ರಶ್ನೆಗೆ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು ನೀಡಿದ ಉತ್ತರ ಇಲ್ಲಿದೆ.

[audio:Prashnottara/November/Sakshibhava.mp3]

52 Responses to ಸಾಕ್ಷೀಭಾವ

 1. Anuradha Parvathi

  ಗುರುಗಳೇ, ಆಶೀರ್ವಾದ ಬೇಕು ಇದಕ್ಕೆ. ಜೀವನದಲ್ಲಿ ಆಗುವ ಆಗು ಹೋಗುಗಳಲ್ಲಿ ಅನವಶ್ಯಕವಾಗಿ involve ಆಗಿ ಹೊಗುತ್ತೇವೆ

  [Reply]

  Sri Samsthana Reply:

  ಆಶೀರ್ವಾದ ಕೇಳಲೇಬೇಕಾದ , ಮಾಡಲೇಬೇಕಾದ ವಿಷಯವಿದು..

  [Reply]

 2. gopalakrishna pakalakunja

  ಹರೇ ರಾಮ!
  ಧನ್ಯೋಸ್ಮಿ!
  “ಸಾಕ್ಷೀ ಭಾವ “ನಾಲ್ಕು ಅಕ್ಷರದಲ್ಲಿ ಅಡಗಿರುವ ವಿಚಾರ ವೈಶಾಲ್ಯತೆ ಅದ್ಭುತ!
  ಸಂಸ್ಥಾನ ಅದಕ್ಕೆ ಕೊಟ್ಟ ಪ್ರಾಮುಖ್ಯತೆ, ಐದಾರು ನಿಮಿಷಗಳಲ್ಲಿ ಮನದಟ್ಟಾಗುವಂತೆ
  ಗಹನವನ್ನು ಸರಳಗೊಳಿಸಿದ ಪರಿ ಅದು ಇನ್ನೂ ಅದ್ಭುತ !
  “…ಯೇಷಾಂ ಸಾಕ್ಷೀಣಮಾತ್ಮಾನಂ ಚಿದ್ರೂಪಂ ವಿದ್ದಿ ಮುಕ್ತಯೇ” (೩)
  “….ಅಸಂಗೋಸಿ ನಿರಾಕಾರೋ ವಿಶ್ವಸಾಕ್ಷೀ ಸುಖೀ ಭವ !! “(೫)
  (ಅಷ್ಟಾವಕ್ತ ಗೀತೆ)

  ಜೀವ, ಜಗತ್ತು, ಆತ್ಮ…ಮೂರಾಗಿ ತೋರುತ್ತಿರುವದು ವ್ಯಾವಹಾರಿಕ ಸತ್ಯ,
  ಜಗತ್ತು ಜೀವದಲ್ಲಿ , ಜೀವ ಆತ್ಮದಲ್ಲಿ ಲಯಗೊಳ್ಳುವ ಅದ್ವಿತೀಯ ಅಧ್ಹೈತ ಸಿದ್ದಾಂತ ಅದೆಷ್ಟು ಸುಂದರ..!
  ತ್ರಿಪುಟಿ ನಾಶ ಗೊಳ್ಲದೆ ವೇದಾಂತದ ಅನುಭವ ಸಾದ್ಯ ?

  ಗುರುದೇವಾನುಗ್ರಹ ದಿಂದ ಮಾತ್ರ ಸಾಧ್ಯ ..ಅನುಗ್ರಹಿಸಿ ಉದ್ದರಿಸಿ ಓ ತಂದೆ.

  [Reply]

  Sri Samsthana Reply:

  ಮೂರು ಒಂದಾಗಲಿ..

  [Reply]

 3. Sharada Jayagovind

  ಹರೆರಾಮ ಸಂಸ್ಥಾನ

  In Bhagavathgeetha the expressions seer, witness and knower are used… Is there any connection between these words and Sakshi bhava? Pl. clarify …

  We wish our eyes can see samsthana in U tube when we listen to the answers…

  [Reply]

  Sri Samsthana Reply:

  ದ್ರಷ್ಟಾ, ಸಾಕ್ಷೀ, ಜ್ಞಾತಾ….ತುಂಬಾ ಹತ್ತಿರವಿರುವ ಪದಗಳು…

  [Reply]

  Sri Samsthana Reply:

  ನಾವು ಕಾಣಿಸಿಕೊಳ್ಳಬೇಕೇ..?

  ನೀವು ಸಾಕ್ಷಿಯಾಗುವಿರೇ..?

  [Reply]

 4. shobha lakshmi

  ಹರೇರಾಮ, ಉದಾಸೀನ ಹಾಗೂ ಸೋಮಾರಿ ಇದೆರಡು ಪದ ಒ೦ದೇ ವ್ಯಕ್ತಿತ್ವವನ್ನು ಗುರುತಿಸಲು ಬಳಸುತ್ತೇವೆ..ಇದೆರಡು ಪದಕ್ಕೆ ವ್ಯತ್ಯಾಸವಿದೆಯೆ?
  ಕೆಲಸ ಮಾಡದೆ ಕೇವಲ ಸಾಕ್ಷೀಭಾವದಿ೦ದಿದ್ದರೆ ಪ್ರಪ೦ಚ ನಡೆಯುದು ಹೇಗೆ? ಕೆಲವರು ಕೆಲಸ ಮಾಡದೆ ಸುಮ್ಮನೆ ಸಮಯ ಕಳೆಯುವವರು ಸಾಕ್ಷೀ ಭಾವದಲ್ಲಿರುವವರು(ಉದಾಸೀನರು) ಎ೦ದು ತಿಳಿದುಕೊಳ್ಳಬೇಕೆ?

  ದೀಪವೂ ಬೇಕು. ದೀಪದ ಬೆಳಕನ್ನು ನೋಡುವವರೂ ಬೇಕಲ್ಲವೇ?

  [Reply]

  Sri Samsthana Reply:

  ಜ್ಞಾನಕ್ಕೂ – ಜಾಡ್ಯಕ್ಕೂ ನಡುವೆ ಯಾವ ಅಂತರವಿದೆಯೋ ಉದಾಸೀನ – ಸೋಮಾರಿಗಳ ನಡುವೆ ಅದೇ ಅಂತರವಿದೆ…

  [Reply]

  Sri Samsthana Reply:

  ಪ್ರಶ್ನೆ ; ಕೇವಲ ಸಾಕ್ಷೀಭಾವದಿಂದಿದ್ದರೆ ಪ್ರಪಂಚ ನಡೆಯುವುದು ಹೇಗೆ..?

  ಉತ್ತರರೂಪದ ಪ್ರಶ್ನೆ ; ನಾವು ಗುಣಮುಖರಾದರೆ ಆಸ್ಪತ್ರೆ ನಡೆಯುವುದು ಹೇಗೆ..?

  [Reply]

  Sri Samsthana Reply:

  ಪ್ರಶ್ನೆ : ಕೆಲವರು ಕೆಲಸ ಮಾಡದೆ ಸುಮ್ಮನೆ ಸಮಯ ಕಳೆಯುವವರು ಸಾಕ್ಷೀಭಾವದಲ್ಲಿರುವವರು (ಉದಾಸೀನರು) ಎಂದು ತಿಳಿದುಕೊಳ್ಳಬೇಕೇ?

  ಈ ಪ್ರಶ್ನೆ(ಧ್ವನಿ)ಯಲ್ಲಿಯೇ ಉತ್ತರವಿದೆ..!

  [Reply]

 5. Vishwa M S Maruthipura

  ಹರೆರಾಮ ….ತಾವರೆಯ ಎಲೆಯ ಹಾಗೆ ನೀರಿನಲ್ಲೆ ಇದ್ದು ನೀರನ್ನು antisikollada ಹಾಗೆ

  [Reply]

 6. ಮಂಗ್ಳೂರ ಮಾಣಿ...

  ಸಾಕ್ಷೀ ಭಾವದಲ್ಲಿ ನೋವು – ಸುಖ ಇರುವುದಿಲ್ಲವೇನೋ?? ಬರಿಯ ಆನಂದ ಮಾತ್ರ ಅನ್ನಿಸುತ್ತಿದೆ.
  ಸಾಕ್ಷೀ ಭಾವದಲ್ಲಿ ಎಲ್ಲವನ್ನೂ ನೋಡುವುದಕ್ಕೂ – ಪ್ರೇಮಕ್ಕೂ ಇರುವ ಸಂಬಂಧ ಏನು ಗುರುಗಳೇ???

  [Reply]

  Sri Samsthana Reply:

  ನೋವಿಲ್ಲದ ಸುಖವೇ ‘ಆನಂದ’

  [Reply]

  Sri Samsthana Reply:

  ವೈರವಿರಹಿತವಾದ ಶುದ್ಧಪ್ರೇಮವಲ್ಲಿದೆ..!

  [Reply]

 7. gopalakrishna pakalakunja

  ಗುರುಗಳೇ, ಪ್ರಶ್ನೆಗಳಿವೆ, ಶ್ರೀಮುಖದಲ್ಲಿ ವಿವರಿಸಬೇಕೆ೦ದು ಸಾಷ್ಟಾಂಗ ಪ್ರಣಾಮಗಳೊ೦ದಿಗೆ ಕೇಳಿಕೊಳ್ಳುತ್ತಿದ್ದೇವೆ.
  ಆದಿ ಗುರು ಶಂಕರರು ಅದ್ವೈತ ಪ್ರತಿಪಾದನೆಯೊಂದಿಗೆ ಪಂಚಾಯತನ ಪೂಜೆಯನ್ನು ಆದೇಶಿಸುವ ಮತ್ತು ಬೋಧಿಸುವ
  ವಿರೋಧಾಭಾಸದಂತೆ ಕಾಣುವ ವಿಚಾರದಲ್ಲಿ ಇರುವ ವಿಶೇಷತೆ ಏನು ?
  ಪಂಚಾಯತನ ಪಂಚ ಭೂತ / ಪಂಚ ತತ್ವಗಳ ಆರಾಧನೆಯೇ ? (ಪ್ರಕೃತಿಯಾರಾಧನೆಯೇ)?
  ಧರ್ಮ ದೇವರ ಹೆಸರಲ್ಲಿ ಹರಿದು ಹಂಚಿ ಹೋಗಿದ್ದ ವೈದಿಕ ಜಗತ್ತನ್ನು ಒಂದು ಗೂಡಿಸುವ ಮರ್ಮವೋ ?
  ಅಥವಾ…?
  ಕೆಲವಾರು ಸಮಯಗಳಿಂದ ಕೊರೆಯುತ್ತಿರುವ ಸಂಶಯ ಬಗೆಹರಿಸಿ ಅನುಗ್ರಸುವಿರಾ ಗುರುದೇವ ?

  [Reply]

  Sri Samsthana Reply:

  ಆಗಲಿ..

  [Reply]

 8. Raghavendra Narayana

  ಸ೦ಸ್ಥಾನ, ಸಾಷ್ಟಾಂಗ ಪ್ರಣಾಮಗಳು, ವಿವರಿಸಿದಕ್ಕೆ ತು೦ಬಾ ಧನ್ಯವಾದಗಳು.
  “..ಆ ಸಾಕ್ಷಿಭಾವವನ್ನು ದಾಟಿರತಕ್ಕ೦ತಹ ಐಕ್ಯ ಸ್ಥಿತಿ ಅದ್ವೈತ ಸ್ಥಿತಿ ಬರುತ್ತದೆ,
  ಅದ್ವೈತ ಅನ್ನುವುದು ಸಾಧನೆ ಅಲ್ಲ, ಅದ್ವೈತ ಅನ್ನುವುದು ಸಾಧ್ಯ,
  ಅದ್ವೈತ ಅನ್ನುವುದು ದಾರಿಯಲ್ಲ, ಅದ್ವೈತ ಅನ್ನುವುದು ಗುರಿಯದು, ಫಲ ಅದು,
  ಹಾಗಾಗಿ, ಸಾಕ್ಷಿಭಾವದ ಪರಿವಸಾನವೇ, ಸಾಕ್ಷಿಭಾವದ ಮು೦ದುವರಿಕೆಯೆ ಅದ್ವೈತ..”
  .
  ————————————————————
  “ಅದ್ವೈತ ಅನ್ನುವುದು ಸಾಧನೆ ಅಲ್ಲ, ಅದ್ವೈತ ಅನ್ನುವುದು ಸಾಧ್ಯ”
  ————————————————————
  .
  ಶ್ರೀಮುಖ, ಅಗ್ನಿಯನ್ನು ಹಿಡಿದ ದಕ್ಷಿಣಾಮೂರ್ತಿಯ ಮು೦ದೆ ಕಲಿಯಲು ಕುಳಿತು ಪ್ರಿಯಶಿಷ್ಯಜನರ ಭಾವವ ಉದಯಿಸುತ್ತಿದೆ..
  .
  ಶ್ರೀ ಗುರುಭ್ಯೋ ನಮಃ

  [Reply]

 9. Raghavendra Narayana

  ನ೦ಜನಗೂಡು ನ೦ಜುಡೇಶ್ವನೊಡನೆ ಅವನ ಪರಿವಾರದ ದರ್ಶನ.. ನಾ ಕ೦ಡ ಅದ್ಭುತಗಳಲೊ೦ದು..
  “ಚ೦ದ್ರಮೌಳೀಶ್ವರ”, “ಮೌ” ಅಕ್ಷರ ಶಿವ ಧರಿಸಿರುವ ಚ೦ದ್ರನ೦ತೆ ಕಾಣುತ್ತದೆ.. ಶಿವದರ್ಶನ..
  “ಮನಮೋಹನ”, ಅದ್ಭುತವಾದ ಹೆಸರು… “ಚ೦ದ್ರಮೌಳೀಶ್ವರ” ಅದ್ಭುತವಾದ ಹೆಸರು..
  .
  ನಿರಾಕಾರ ಲಿ೦ಗದಲ್ಲಿ ಸಾಕಾರದ ದರ್ಶನ, ಸಾಕಾರದ ಅತಿ ಅಲ೦ಕಾರದ ನಡುವೆಯು ನಿರಾಕಾರದ ದರ್ಶನ, ಸಾಕಾರಾ ನಿರಾಕಾರ – ಮಿಥ್ಯೆಯೊ ಇವೆರಡು.
  ವೀಕ್ಷಣೆಯೊ ಪ್ರದಕ್ಷಿಣೆಯೊ ಇದು ಮಹಾಪ್ರಸ್ಥಾನದ ನಡಿಗೆಯೊ, ಅಡಿಗೆಯೊ ಪರಬೊಮ್ಮನದು.. ಉಣಬಡಿಸುವ, ಕ೦ಡಕ೦ಡಲ್ಲಿ ಪ್ರಸಾದದ ವಿತರಣೆ..
  ಶಿವನೆ, ನಿನ್ನ ಗರ್ಭಗುಡಿಯಲ್ಲಿ ನಿನ್ನಡಿಯಲ್ಲಿ ನಿನ್ನ ಬಿಗಿದಪ್ಪಿ ಕುಳಿತಿರುವೆ, ಮಗು ತ೦ದೆಯನ್ನು ಅಪ್ಪುವ೦ತೆ, ನಿನಗೆ ನಡೆಯುತ್ತಿರುವ ಅಭಿಷೇಕ – ನಿನ್ನ ಅಕ್ಷಗಳ ಮೇಲೆ ಬಿದ್ದ ಜಲ – ನನ್ನ ಅಕ್ಷಗಳ ಮೇಲೆ ಬೀಳುತ್ತಿರುವುದು.. ನಿನ್ನ ಕಾರುಣ್ಯದ ಪ್ರತಿ ಜಲಬಿ೦ದುವಿಗೂ ನನ್ನ ಆನ೦ದದ ಜಲಬಿ೦ದು ಸೇರುತ್ತಿರುವುದು..
  .
  ಜಗಪೂರ ಆದಿ ಪುರುಷನ ನಾಭಿಯಿ೦ದ ಹೊರಬ೦ದ ಬ್ರಹ್ಮನ ಕನಸುಗಳು..?
  ಆದಿಪುರುಷ ಪರಮಾತ್ಮನ ಹುಸಿನಗು..?
  ಬ್ರಹ್ಮ ಕ೦ಡ ಮೊದಲ ಕನಸು ನಟರಾಜನ ನೃತ್ಯ – ನ೦ತರ ಕೇಳಿತು ಅಲ್ಲಿ ತಾಳ ನಾದ ರಾಗ – ಇಷ್ಟಾದ ನ೦ತರ ಭಾವ ಹೊರ ಹೊಮ್ಮಿಸುವ ಬ್ರಹ್ಮ, ಬ್ರಹ್ಮಾ೦ಡ ಬ್ರಹ್ಮಾ೦ಡಗಳ ಸೃಷ್ಟಿ, ನಟರಾಜನ ಒ೦ದೊ೦ದು ಹೆಜ್ಜೆಯಿ೦ದ ಎದ್ದ ಧೂಳು ಅಸ೦ಖ್ಯ ನೋಟಕರನ್ನು ಸೃಷ್ಟಿಸಿತು, ಸೃಷ್ಟಿ-ಸ್ಥಿತಿ-ಲಯಗಳು ಕುಳಿತಲ್ಲೆ ಕುಣಿಯುತಿಹುದು ಈ ನೃತ್ಯವನ್ನು ಸವಿಯುತ್ತ ಒ೦ದೆಡೆ ಒಡಗೂಡಿ – ಇದಷ್ಟೇ ಸತ್ಯ, ಉಳಿದೆಲ್ಲವು ಪರಮಾತ್ಮನ ಹುಸಿನಗೆಯಷ್ಟೇ ಮಿಥ್ಯ..
  .
  ಭಕ್ತಿಯಿ೦ದ ಜ್ಞಾನ, ಜ್ಞಾನದಿ೦ದ ಭಕ್ತಿ ವೃದ್ಧಿ.. ಈ ಸ೦ಗಮ, ಅದ್ವೆತವನ್ನು ಸಾಧ್ಯವಾಗಿಸುವುದು..?
  ಸಾಕ್ಷಿಭಾವದಿ೦ದ ನೋಡಹೊರಟರೆ ಸರ್ವವೂ ಸು೦ದರ.. ಹಕ್ಕಿಯಾಗಿ ರೆಕ್ಕೆಯನ್ನು ಬಡಿಯದೆ ತೇಲುತ್ತ, ಸಾಕ್ಷಿಯಾಗಿ ಜಗವೆಲ್ಲವನ್ನು ನೋಡುತ್ತಿದ್ದರೆ, ಅಲ್ಲೊ೦ದು ಕರಗುವಿಕೆ, ಅಲ್ಲೊ೦ದು ಬೆರೆಸುವಿಕೆ, ಸಾಕ್ಷಿಯಾಗಿ ಕ೦ಡ ಚಿತ್ರಗಳೆಲ್ಲ ಅನುಕ್ಷಣವೂ ಮರೆಯಾಗುತಿರಲು, ನೋಡಲೇನಿರುವುದು ಹಾರಲೇನಿರುವುದು..
  ಸದ್ಗುರುವೆ ಅಗ್ನಿಯಾಗು ಅಗ್ನಿಯಾಗಿಸು, ಅಪ್ಪಟ್ಟ ಚಿನ್ನವಾಗಿಸು, ಅಗ್ನಿಯಾಗು ಅಗ್ನಿಯಾಗಿಸು ಐಕ್ಯವಾಗಿಸು, ನೃತ್ಯದ ಹೆಜ್ಜೆಗಳಿ೦ದ ನಟರಾಜನ ಹಣೆಯೊಳು ಮೂಡುವ ಬಿ೦ದುಗಳಲ್ಲಿ ನನ್ನನ್ನೂ ಒ೦ದು ಬಿ೦ದುವಾಗಿಸು, ಅದು ತ್ರಿವರ್ಣವಾಗಿ ಹೊಳೆಯುವ ರತ್ನವಾಗಿ ತೋರಿ ನ೦ತರ ಬೂದಿಯಾಗಿ ಅವನಲ್ಲೆ ಕರಗಲಿ..
  .
  ಈ ದೇಹವಿರುವುದೆ ದೇಹ ಸಿಗುವುದೆ ಮಹಾಪ್ರಸ್ಥಾನಕ್ಕೆ.. ಅದೋ ಅಲ್ಲಿ ಉದಾಸೀನ ಭಾವ, ನಿ೦ತ ಭಾವ, ಅದೋ ಅಲ್ಲಿ ಅನ೦ತ ನಡಿಗೆ, ಅದೋ ಅಲ್ಲಿ ಕೃಷ್ಣನ ಮುರಲಿಗಾನ, ಅದೋ ಅಲ್ಲಿ ಸು೦ದರ ಮರಗಿಡಪುಷ್ಪಎಲೆತ೦ಗಾಳಿತು೦ತುರು, ಅದೋ ಅಲ್ಲಿ ಶಿವನಾರಾಯಣಪರಮಾತ್ಮರ ಅಪ್ಪುಗೆ, ಅದೋ ಅಲ್ಲಿ ಮತ್ತೆ ಅನ೦ತ ನಡಿಗೆ ಅವರೊಡನೆ.. ಪರಮಾತ್ಮನೆ೦ದರೆ ಅದೊ೦ದು ನಡಿಗೆಯೆ…?
  .
  ಪರಮಾತ್ಮ ನೀನಿಲ್ಲಿದೆಡೆಯೆಲ್ಲಿ.. ಪ್ರತಿ ಹೆಜ್ಜೆಗೂ ನೀ ಕಾಣುತಿರಲು, ಹೆಜ್ಜೆಯೇಕೆ..
  .
  ಶ್ರೀ ಗುರುಭ್ಯೋ ನಮಃ

  [Reply]

  Raghavendra Narayana Reply:

  ನಿರಾಕಾರ ಲಿ೦ಗದಲ್ಲಿ ಸಾಕಾರದ ದರ್ಶನ,
  ಸಾಕಾರದ ಅತಿ ಅಲ೦ಕಾರದ ನಡುವೆಯು ನಿರಾಕಾರದ ದರ್ಶನ,
  ಸಾಕಾರಾ ನಿರಾಕಾರ – ಮಿಥ್ಯೆಯೊ ಇವೆರಡು.
  .
  ವೀಕ್ಷಣೆಯೊ ಪ್ರದಕ್ಷಿಣೆಯೊ ಇದು ಮಹಾಪ್ರಸ್ಥಾನದ ನಡಿಗೆಯೊ,
  ಅಡಿಗೆಯೊ ಪರಬೊಮ್ಮನದು.. ಉಣಬಡಿಸುವ, ಕ೦ಡಕ೦ಡಲ್ಲಿ ಪ್ರಸಾದದ ವಿತರಣೆ..
  .
  ಶಿವನೆ, ನಿನ್ನ ಗರ್ಭಗುಡಿಯಲ್ಲಿ ನಿನ್ನಡಿಯಲ್ಲಿ ನಿನ್ನ ಬಿಗಿದಪ್ಪಿ ಕುಳಿತಿರುವೆ,
  ಮಗು ತ೦ದೆಯನ್ನು ಅಪ್ಪುವ೦ತೆ,
  ನಿನಗೆ ನಡೆಯುತ್ತಿರುವ ಅಭಿಷೇಕ ನಿನ್ನ ಅಕ್ಷಗಳ ಮೇಲೆ ಬಿದ್ದ ಜಲ ನನ್ನ ಅಕ್ಷಗಳ ಮೇಲೆ ಬೀಳುತ್ತಿರುವುದು..
  ನಿನ್ನ ಕಾರುಣ್ಯದ ಪ್ರತಿ ಜಲಬಿ೦ದುವಿಗೂ ನನ್ನ ಆನ೦ದದ ಜಲಬಿ೦ದು ಸೇರುತ್ತಿರುವುದು..
  .
  ಜಗಪೂರ ಆದಿ ಪುರುಷನ ನಾಭಿಯಿ೦ದ ಹೊರಬ೦ದ ಬ್ರಹ್ಮನ ಕನಸುಗಳು..?
  ಆದಿಪುರುಷ ಪರಮಾತ್ಮನ ಹುಸಿನಗು..?
  ಬ್ರಹ್ಮ ಕ೦ಡ ಮೊದಲ ಕನಸು ನಟರಾಜನ ನೃತ್ಯ – ನ೦ತರ ಕೇಳಿತು ಅಲ್ಲಿ ತಾಳ ನಾದ ರಾಗ – ಇಷ್ಟಾದ ನ೦ತರ ಭಾವ ಹೊರ ಹೊಮ್ಮಿಸುವ ಬ್ರಹ್ಮ,
  ಬ್ರಹ್ಮಾ೦ಡ ಬ್ರಹ್ಮಾ೦ಡಗಳ ಸೃಷ್ಟಿ, ನಟರಾಜನ ಒ೦ದೊ೦ದು ಹೆಜ್ಜೆಯಿ೦ದ ಎದ್ದ ಧೂಳು ಅಸ೦ಖ್ಯ ನೋಟಕರನ್ನು ಸೃಷ್ಟಿಸಿತು,
  ಸೃಷ್ಟಿ-ಸ್ಥಿತಿ-ಲಯಗಳು ಕುಳಿತಲ್ಲೆ ಕುಣಿಯುತಿಹುದು ಈ ನೃತ್ಯವನ್ನು ಸವಿಯುತ್ತ ಒ೦ದೆಡೆ ಒಡಗೂಡಿ – ಇದಷ್ಟೇ ಸತ್ಯ,
  ಉಳಿದೆಲ್ಲವು ಪರಮಾತ್ಮನ ಹುಸಿನಗೆಯಷ್ಟೇ ಮಿಥ್ಯ..
  .
  ಭಕ್ತಿಯಿ೦ದ ಜ್ಞಾನ, ಜ್ಞಾನದಿ೦ದ ಭಕ್ತಿ ವೃದ್ಧಿ.. ಈ ಸ೦ಗಮ, ಅದ್ವೆತವನ್ನು ಸಾಧ್ಯವಾಗಿಸುವುದು..?
  ಸಾಕ್ಷಿಭಾವದಿ೦ದ ನೋಡಹೊರಟರೆ ಸರ್ವವೂ ಸು೦ದರ..
  ಹಕ್ಕಿಯಾಗಿ ರೆಕ್ಕೆಯನ್ನು ಬಡಿಯದೆ ತೇಲುತ್ತ,
  ಸಾಕ್ಷಿಯಾಗಿ ಜಗವೆಲ್ಲವನ್ನು ನೋಡುತ್ತಿದ್ದರೆ, ಅಲ್ಲೊ೦ದು ಕರಗುವಿಕೆ, ಅಲ್ಲೊ೦ದು ಬೆರೆಸುವಿಕೆ,
  ಸಾಕ್ಷಿಯಾಗಿ ಕ೦ಡ ಚಿತ್ರಗಳೆಲ್ಲ ಅನುಕ್ಷಣವೂ ಮರೆಯಾಗುತಿರಲು, ನೋಡಲೇನಿರುವುದು ಹಾರಲೇನಿರುವುದು..
  ಸದ್ಗುರುವೆ ಅಗ್ನಿಯಾಗು ಅಗ್ನಿಯಾಗಿಸು, ಅಪ್ಪಟ್ಟ ಚಿನ್ನವಾಗಿಸು,
  ಅಗ್ನಿಯಾಗು ಅಗ್ನಿಯಾಗಿಸು ಐಕ್ಯವಾಗಿಸು,
  ನೃತ್ಯದ ಹೆಜ್ಜೆಗಳಿ೦ದ ನಟರಾಜನ ಹಣೆಯೊಳು ಮೂಡುವ ಬಿ೦ದುಗಳಲ್ಲಿ ನನ್ನನ್ನೂ ಒ೦ದು ಬಿ೦ದುವಾಗಿಸು,
  ಅದು ತ್ರಿವರ್ಣವಾಗಿ ಹೊಳೆಯುವ ರತ್ನವಾಗಿ ತೋರಿ ನ೦ತರ ಬೂದಿಯಾಗಿ ಅವನಲ್ಲೆ ಕರಗಲಿ..
  .
  ಈ ದೇಹವಿರುವುದೆ ದೇಹ ಸಿಗುವುದೆ ಮಹಾಪ್ರಸ್ಥಾನಕ್ಕೆ..
  ಅದೋ ಅಲ್ಲಿ ಉದಾಸೀನ ಭಾವ, ನಿ೦ತ ಭಾವ, ಅದೋ ಅಲ್ಲಿ ಅನ೦ತ ನಡಿಗೆ,
  ಅದೋ ಅಲ್ಲಿ ಕೃಷ್ಣನ ಮುರಲಿಗಾನ, ಅದೋ ಅಲ್ಲಿ ಸು೦ದರ ಮರಗಿಡಪುಷ್ಪಎಲೆತ೦ಗಾಳಿತು೦ತುರು,
  ಅದೋ ಅಲ್ಲಿ ಶಿವನಾರಾಯಣಪರಮಾತ್ಮರ ಅಪ್ಪುಗೆ ಚಿತ್ರ, ಅದೋ ಅಲ್ಲಿ ಮತ್ತೆ ಅನ೦ತ ನಡಿಗೆ ಅವರೊಡನೆ..
  ಪರಮಾತ್ಮನೆ೦ದರೆ ಅದೊ೦ದು ನಡಿಗೆಯೆ…?
  .
  ಪರಮಾತ್ಮ ನೀನಿಲ್ಲಿದೆಡೆಯೆಲ್ಲಿ.. ಪ್ರತಿ ಹೆಜ್ಜೆಗೂ ನೀ ಕಾಣುತಿರಲು, ಹೆಜ್ಜೆಯೇಕೆ..

  [Reply]

 10. Ashwini

  ‘ಸಾಕ್ಷೀಭಾವ‘, ನಾಲ್ಕು ಅಕ್ಷರದ ಪದದಲ್ಲಿ ಅಡಗಿರುವ ನಾರಾಯಣತ್ವವನ್ನು ಸರಳ ಪದಗಳಲ್ಲಿ ವಿವರಿಸಿದ ಪರಿ ಅದ್ಭುತ!!
  ಗುರುಕಾರುಣ್ಯಕ್ಕಿದೋ ನಮೋಃ ನಮಃ.

  ಗುರುವೇ, ಜೀವನದಲ್ಲಿ ಸಂಬಂಧಗಳ ಅಂಟು-ನಂಟು, ಅಕಾರಣವೋ ಸಕಾರಣವೋ ಬಂಧಿಸಿಬಿಡುತ್ತದೆ.
  ನಂಟು ಸಾಕ್ಷೀಭಾವಕ್ಕೇ ಅಡ್ಡಿಯೇ?

  [Reply]

  Sri Samsthana Reply:

  ಹೌದು..

  ಭಾಗಿ, ಸಾಕ್ಷಿ ಎಂಬ ಎರಡು ಪದಗಳನ್ನು ಗಮನಿಸು..

  ಅಂಟು-ನಂಟುಗಳು ಇದ್ದರೆ ‘ಭಾಗಿ’

  ಅದಿಲ್ಲದೆ ದೂರ ನಿಂತು ನೋಡಿದರೆ ‘ಸಾಕ್ಷಿ’

  [Reply]

 11. seetharama bhat

  ಹರೇರಾಮ್,

  ಆನ೦ದದ ಒ೦ದು ರೂಪ
  ಭಾವದ ವ್ಯೆಭವ
  ಸಾಕ್ಷಾತ್ಕಾರವಾದ ಸಾಕ್ಷಿ

  ಹರೇರಾಮ್

  [Reply]

 12. Raghavendra Narayana

  ಕಷ್ಟವನ್ನು, ದುಃಖವನ್ನು, ಸುಖಃವನ್ನು ಸಾಕ್ಷಿಭಾವದಿ೦ದ ನೋಡಬಹುದು..
  ೧) ಆದರೆ ಕಣ್ಣಮು೦ದೆ ಆಗುವ ಅನ್ಯಾಯವನ್ನು ಮೋಸವನ್ನು ಕೆಟ್ಟದನ್ನು ಸಾಕ್ಷಿಭಾವದಿ೦ದ ನೋಡಲು ಸಾಧ್ಯವೆ ಮತ್ತು ಸರಿಯೆ? ಗುರುಗಳೆ, ದಯವಿಟ್ಟು ತಿಳಿಸಿ.
  ೨) ಆನ೦ದವನ್ನು ಸಾಕ್ಷಿಭಾವದಿ೦ದ ನೋಡಲು ಸಾಧ್ಯವೆ….?
  ೩) ಸಾಕ್ಷಿಭಾವವೆ೦ದರೆ ಯಾವುದಕ್ಕು ಅಂಟದ೦ತಿರುವುದೆ….? ಅಥವಾ ಯಾವುದಾದರು ಒ೦ದಕ್ಕೆ ಮಾತ್ರ ಅ೦ಟಿಕೊ೦ಡಿರುವುದೆ?
  ೪) ಸಾಕ್ಷಿಭಾವದ ಮು೦ದುವರಿಕೆ ಹೇಗೆ ಅದ್ವೈತಭಾವವನ್ನು ಸಾಧ್ಯವಾಗಿಸುತ್ತದೆ?
  ೫) ಸಾಕ್ಷಿಭಾವ – ಇದಕ್ಕೆ ಪ್ರಯತ್ನ ಪಡುತ್ತಾರೆಯೆ – ಅಥವಾ ತನ್ನಿ೦ದತಾನೆ ಆಗುವ ಪ್ರಕ್ರಿಯೆಯೆ? ಯಾರು ಪ್ರಯತ್ನಪಡಬೇಕು? ಎಲ್ಲರೂ ಸಾಕ್ಷಿಭಾವಕ್ಕೆ ಪ್ರಯತ್ನಪಡಲು ಶುರು ಮಾಡಿದರೆ, ದೇಶಕ್ಕೆ ಅನರ್ಥವಾಗುವುದಿಲ್ಲವೆ?
  .
  ಶ್ರೀ ಗುರುಭ್ಯೋ ನಮಃ

  [Reply]

  Raghavendra Narayana Reply:

  ಈಗಾಗಲೆ ಪಾಶ್ಚಾತ್ಯ ಸ೦ಸ್ಕೃತಿಯ ಗುಲಾಮರಾಗಿದ್ದೇವೆ, ಸೂರ್ಯ ಹುಟ್ಟುವುದು ಮುಳುಗುವುದು ನಮಗೆ ಉದಯ ಅಸ್ತಮಾನವಲ್ಲ, ನಮ್ಮ ಸ೦ಜೆ ಶುರುವಾಗುವುದು ಶುಕ್ರವಾರದ ಸ೦ಜೆಯ ಹೊತ್ತಿಗೆ, ನಮ್ಮ ಬೆಳಿಗ್ಗೆ ಶುರುವಾಗುವುದು ಸೋಮವಾರದ ಬೆಳಿಗ್ಗೆ, ಇಡೀ ವಾರವೆ ಒ೦ದು ದಿನ ನಮಗೆ, ನಾವು ಬ್ರಹ್ಮನಿಗೆ ಹತ್ತಿರವಾಗುತ್ತಿದ್ದೇವೆ :-) ಬ್ರಹ್ಮನ ಒ೦ದು ದಿನ ಅದೆಷ್ಟೋ ಕಲ್ಪಗಳಲ್ಲವೆ…

  [Reply]

  Sri Samsthana Reply:

  ಇದು ಇನ್ನೊಂದು ಶ್ರೀಮುಖವಾಗಲಿ..

  [Reply]

  Raghavendra Narayana Reply:

  ಪ್ರಣಾಮಗಳು, ಧನ್ಯವಾದಗಳು, ಪ್ರಣಾಮಗಳು.
  .
  ಶ್ರೀ ಗುರುಭ್ಯೋ ನಮಃ

  [Reply]

  Raghavendra Narayana Reply:

  ಅಹ೦ಕಾರ ಭಕ್ತಿ ಜ್ಞಾನ ಗರ್ವ ಆನ೦ದ ನಿಸ್ಸ೦ಗ….
  ಅದಾವ ಭಾವ ತು೦ಬಿಕೊ೦ಡಿರುತ್ತದೆ ಸಾಕ್ಷಿಭಾವವ ಸಾಕ್ಷತ್ಕರಿಸಿಕೊ೦ಡಿರುವ ಮಹಾತ್ಮನಲಿ?
  .
  ಜಗದ ಆತ್ಮ ರಾಮ

  [Reply]

 13. DR.RAVISHANKAR YELKANA

  ಹರೇರಾಮ, ಗುರುಗಳೇ,
  ಪಕಳಕುಂಜ ಗೋಪಾಲಣ್ಣನ ಪಂಚಾಯತನ ಪೂಜೆಗೆ ಪೂರಕವಾಗಿ ೨ ಪ್ರಶ್ನೆ-
  ೧.ಎಲ್ಲಾ ಕಡೆ ಗಣಪತಿಗೆ ಅಗ್ರ ಪೂಜೆ -ಆದರೆ ಪಂಚಾಯತನ ಪೂಜೆಯಲ್ಲಿ ಸೂರ್ಯನಿಗೆ ಅಗ್ರ ಪೂಜೆ ಯಾಕೆ?
  ೨.ಪಂಚಾಯತನಪೂಜೆ(ನಿತ್ಯಪೂಜೆಯಾಗಿ) ಮಾಡಿದರೆ ನಿತ್ಯವೂ ಕುಲ/ಮನೆದೇವರಿಗೆ ಪೂಜೆ ಬೇಡವೇ?

  [Reply]

  Sri Samsthana Reply:

  ಇನ್ನೊಂದು ಶ್ರೀಮುಖದಲ್ಲಿ ನಿರೀಕ್ಷಿಸಿ..

  [Reply]

  DR.RAVISHANKAR YELKANA Reply:

  ಅದ್ವೈತಿಗಳಾದ ನಮಗೆ ಪೂಜೆಗೆ ೧ ಬಿಂಬ (ಶಿವಲಿಂಗ/ಸಾಲಿಗ್ರಾಮ ಇತ್ಯಾದಿ) ಸಾಲದೇ? ಎಲ್ಲಾ ದೇವರನ್ನೂ ಒಂದೇ ಬಿಂಬದಲ್ಲಿ ಆವಾಹಿಸಬಾರದೇನು? ಒಂದಕ್ಕಿಂತ ಹೆಚ್ಚು ಬಿಂಬಗಳಿದ್ದರೆ ಏಕಾಗ್ರತೆಗೆ ಅಡಚಣೆ ಅಲ್ಲವೆ?
  ದೇವರಪೂಜೆ ನಿಶಿದ್ದ ಯಾವಾಗ(ಆಶೌಚ ಇತ್ಯಾದಿ)?

  [Reply]

  Raghavendra Narayana Reply:

  ಮೊದಲೆರಡು ಪ್ರಶ್ನೆಗಳಿಗೆ ಉತ್ತರವನ್ನು ಶ್ರೀಮುಖದಲ್ಲಿ ಕಾತರದಿ೦ದ ಕಾಯುತ್ತಿದ್ದೇವೆ.
  .
  ಜಗದಾತ್ಮ ರಾಮ

  [Reply]

 14. Sharada Jayagovind

  Bhaavavillide Saakshi allide, daari thoridare saakshi aaguvevu

  Hareraama Samsthana

  [Reply]

 15. Raghavendra Narayana

  ಜಗದೀ ಜಗತ್ವವನು, ಮಾಯಾವಿಚಿತ್ರವನು |
  ಒಗೆದಾಚೆ ಬಿಸುಡೆಲ್ಲ ಕರಣವೇದ್ಯವನು ||
  ಮಿಗುವುದೇ೦? ರೂಪಾಖ್ಯೆಯೊ೦ದುಮಿಲ್ಲದ ವಸ್ತು |
  ಹೊಗಿಸಾ ಕಡೆಗೆ ಮತಿಯ – ಮ೦ಕುತಿಮ್ಮ ||

  [Reply]

  Raghavendra Narayana Reply:

  ಅತ್ಯ೦೦೦೦೦೦೦೦೦೦೦೦೦೦೦೦೦೦೦೦೦೦೦೦೦ತ ಪ್ರಿಯವಾದ ಕಗ್ಗ..
  .
  ಶ್ರೀ ಗುರುಭ್ಯೋ ನಮಃ

  [Reply]

  Madhu Dodderi Reply:

  ನನಗೂ ತುಂಬಾ ಇಷ್ಟವಾದ ಕಗ್ಗ…

  [Reply]

  Sri Samsthana Reply:

  ಬದುಕಿಗೊಂದೇ ‘ಕಗ್ಗ’ ಸಾಕು…

  [Reply]

 16. Raghavendra Narayana

  ಶರಣುವೊಗು ಜೀವನರಹಸ್ಯದಲಿ ಸತ್ತ್ವದಲಿ |
  ಶರಣು ಜೀವನವ ಸುಮವೆನಿಪ ಯತ್ನದಲಿ ||
  ಶರಣ೦ತರಾತ್ಮ ಗ೦ಭೀರಪ್ರಶಾ೦ತಿಯಲಿ |
  ಶರಣು ವಿಶ್ವಾತ್ಮದಲಿ – ಮ೦ಕುತಿಮ್ಮ ||
  .
  ಡಿ.ವಿ.ಜಿ.ಯವರ “ಮ೦ಕುತಿಮ್ಮನ ಕಗ್ಗ” ಪುಸ್ತಕದಲ್ಲಿರುವ ಕೊನೆಯ ಕಗ್ಗವಿದು..
  .
  ಶ್ರೀ ಗುರುಭ್ಯೋ ನಮಃ

  [Reply]

  Raghavendra Narayana Reply:

  Just wondering the order of Kagga’s in Manku Thimmana Kagga book. Whenever certain thoughts have come/triggered, Kagga’s might have produced, is it the same order… not grouping / rearranging is done I guess. In that case, curious to match D.V.G.’s life and year with Kagga to understand more deeper meaning of Kagga’s… If someone attempt to match atleast some of the Kagga’s, how it got created, would be a treat to read…
  .
  Shri Gurubhyo Namaha

  [Reply]

  Sri Samsthana Reply:

  ನಮಗತ್ಯಂತಪ್ರಿಯವಾದ ಕಗ್ಗವಿದು..

  [Reply]

  Raghavendra Narayana Reply:

  ಈ ಕಗ್ಗ ಹೆಚ್ಚು ಅರ್ಥ ಆಗಲಿಲ್ಲ, ಗುರುಗಳೇ ದಯವಿಟ್ಟು ಶ್ರೀಮುಖದಲ್ಲಿ ಇದನ್ನು ವಿವರಿಸಬೇಕು ಎ೦ದು ಸಾ೦ಸ್ಠಾ೦ಗ ಪ್ರಣಾಮಗಳೊ೦ದಿಗೆ ಕೇಳಿಕೊಳ್ಳುತ್ತಿದ್ದೇವೆ.
  .
  ಶ್ರೀ ಗುರುಭ್ಯೋ ನಮಃ

  [Reply]

  Raghavendra Narayana Reply:

  ಹಾಗೆಯೆ ಗುರುಗಳಿಗೆ ಪ್ರಿಯವಾದ ಇನ್ನಿತರ ಕಗ್ಗಗಳನ್ನು ಶ್ರೀಮುಖದಲ್ಲಿ ವಾರಕೊಮ್ಮೆ / ಎರಡು ವಾರಕೊಮ್ಮೆ ನಮ್ಮೊಡನೆ ಜ್ಞಾನಪ್ರೀತಿಯನ್ನು ಗುರುಗಳು ಹ೦ಚಿಕೊ೦ಡರೆ ಅದ್ಭುತವಾಗಿರುತ್ತದೆ.
  .
  ಶ್ರೀ ಗುರುಭ್ಯೋ ನಮಃ

  [Reply]

 17. Anuradha Parvathi

  ಹೊರಗೆ ಲೋಕಾಸಕ್ತಿಯೊಳಗೆ ಸಕಲ ವಿರಕ್ತಿ
  ಹೊರಗೆ ಕಾರ್ಯಾಧ್ಯಾನವೊಳಗುದಾಸೀನ
  ಹೊರಗೆ ಸಂಸ್ಕೃತಿಭಾರವೊಳಗದರ ತಾತ್ಸಾರ
  ವರಯೋಗಮಾರ್ಗವಿದು – ಮಂಕುತಿಮ್ಮ.

  ಸಾಕ್ಷಿಭಾವ ಅಂದರೆ ಇದೇ ಅಲ್ಲದ ಗುರುಗಳೇ…. ತಪ್ಪಿದ್ದರೆ ತಿದ್ದೆಕ್ಕು ಹಾಗು ಕ್ಷಮಿಸೆಕ್ಕು.

  [Reply]

  Arunkumar Reply:

  ತಾತ್ಸಾರವೂ ಉದಾಸೀನದಂತೆ ವಿಕಾರವಾಗಿದೆ. (ವ್ಯಾವಹಾರಿಕದಲ್ಲಿ)

  [Reply]

  Sri Samsthana Reply:

  ಸಾಕ್ಷಿಭಾವದ ‘ಸೋಪಾನ ಭಾವ’ವಿದು…

  ಏಕೆಂದರೆ ಸಾಕ್ಷಿಭಾವದಲ್ಲಿ ಭಾಗವಹಿಸುವಿಕೆ ಇಲ್ಲ…

  ಇದರಲ್ಲಿ ಭಾಗವಹಿಸುವಿಕೆಯಿದೆ..ಅಂಟಿಲ್ಲ…

  [Reply]

  Raghavendra Narayana Reply:

  ಈ ಕಗ್ಗವನ್ನು ಈ ರೀತಿ ಯೋಚನೆ ಮಾಡಿರಲಿಲ್ಲ..
  ಯೋಚನೆಗಳು ಚಿ೦ತನೆಗಳು ವಾದಗಳು ಅಹ೦ಗಳು ಹಲವುಗಳು… ಆದರೆ ಸರಿಯಾದದು ಯಾವುದು?
  ಗುರಿ ಮತ್ತು ಗುರಿ ಸೇರಲು ಸರಿಯಾದ ದಾರಿ ಸಿಗದೆ ಸುಮ್ಮನೆ ಅಲಿದಾಡುವುದು ಸರಿಯೆ? – ಸಾಕ್ಷಿಭಾವದಿ೦ದ ಓಡಾಡುತಿದ್ದರೆ ಅದು ಪೂಜೆಯೆ, ಪರಮಾತ್ಮನಿಗಾಗುವ ಪೂಜೆ, ಭಾವ ಪೂಜೆ, ಸ೦ಸಾರದಭಾವ ಭಾವದಿ೦ದ ಭಾವಗಳನ್ನು ಸುಳಿದಾಡುವೆಡೆಯೆಲ್ಲ ತು೦ಬಿಸುವ ಭಾವಲೋಕ / ಸುಲೋಕಭಾವ.
  .
  ಶ್ರೀ ಗುರುಭ್ಯೋ ನಮಃ

  [Reply]

 18. Pradeep Shankar M

  ಹರೇ ರಾಮ….

  [Reply]

 19. Sri Samsthana

  ಹರೇರಾಮ…

  [Reply]

 20. Ganesh Bhat Madavu

  ಆತ್ಮ ಪರಮಾತ್ಮರ ಮಿಲನವು ಜೀವಂತ. ಜೀವನ ನಡೆಸುತ್ತಿರುವಾಗಲೂ ಎಚ್ಚರದ ಸ್ಥಿತಿಯಲ್ಲಿ ಸುಪ್ತವಾಗಿ ಗುಪ್ತವಾಗಿ ನಡೆಯುತ್ತಿರುತ್ತದೆ. ಇಂತಹ ಮಿಲನದ ಮಂದಿರದೊಳಗೆ ಮಹಾದ್ವಾರದಂತಿದೆ. ಧ್ಯಾನ ಪ್ರಕ್ರಿಯೆ ಇಂತಹ ಗಾಢತಮವಾದಂತೆ ಸಾಕ್ಷೀಭಾವವು ತೀವ್ರತರವಾಗುವುದು ಸತ್ಯ ಅಲ್ಲವೇ ಸಂಸ್ಥಾನ?

  [Reply]

 21. Krishna Prasad

  ಜಗತ್ತು ಮಿಥ್ಯ ಎಂದರೆ ಇಲ್ಲದಿರುವಿಕೆಯೆ?
  ಮಿಥ್ಯ ಎಂದರೆ ಜಗತ್ತಿನೆ ನಿರಾಕರಣೆಯೆ?
  ಜಗತ್ತು ಎಂದರೆ ಕನಸಿನಂತೆ ಒಂದು ಭ್ರಮಾ ಲೋಕವೆ?

  ಹಗ್ಗವು ಹಾವಿನಂತೆ ಕಾಣುವಂತೆ ಜಗತ್ತು ಎಂದಾದರೆ, ಹಗ್ಗವೇ ಹಗ್ಗವನ್ನು ಕಂಡು ಭ್ರಮೆಗೆ ಒಳಗಾಗುವುದೆ? ಬ್ರಹ್ಮನು ತನ್ನನ್ನೇ ಬೇರೆಯೆ ರೀತಿಯಲ್ಲಿ ನೋಡಿದ ಎಂದಾದರೆ ಅವನಲ್ಲಿ ಅಜ್ಞಾನವು ಹುದುಗಿತ್ತೆ? ಹಾಗೊಂದು ವೇಳೆ ಇದ್ದಿದ್ದರೆ ಅದಕ್ಕೆ ಅವನು ಒಳಗಾಗುವವನೆ? ನಿರ್ಗುಣ ಎಂದರೆ ಗುಣ ಪೂರ್ಣತೆಯೆ ಅಲ್ಲಾ ಸರ್ವ ಗುಣಗಳು ಇಲ್ಲದಿರುವಿಕೆಯೇ?

  “ವಿಶ್ವಂ ದರ್ಪಣ ದೃಶ್ಯಮಾನ ನಗರೀತುಲ್ಯಂ, ನಿಜಾಂತರ್ಗತಂ ….” ಆಚಾರ್ಯರು ಈ ಶ್ಲೋಕದಲ್ಲಿ ಜಗತ್ತು ಕನ್ನಡಿಯ ಬಿಂಬದಂತೆ ಎಂದಿದ್ದಾರೆ. ಕೇವಲ ಕನ್ನಡಿಯ ಗಂಟಾದರೆ, ನಿಜ ಯಾವುದು? ಕನ್ನಡಿ ಯಾವುದು?

  ಕನ್ನಡಿಯ ಬಿಂಬ ಅಜ್ಞಾನವಾದರೆ, ಆ ಬಿಂಬಕ್ಕೆ ಕಾರಣವಾದ ವಸ್ತುವು ಅಜ್ಞಾನವೇ ?

  ಅಜ್ಞಾನವು ಭ್ರಮೆಯಾದರೆ ಈ ಭ್ರಮೆಗೆ ಒಳಗಾದದ್ದು ಯಾರು?
  ಅಜ್ಞಾನವು ಭ್ರಮೆಯಾದರೆ ಈ ಭ್ರಮೆ ಯಾಕೆ ಹುಟ್ಟಿತು? ಯಾರಿಂದ ಹುಟ್ಟಿತು?
  ಅಜ್ಞಾನವು ನಿಜವಾದರೆ ಬ್ರಹ್ಮ-ಅಜ್ಞಾನ ಕಾರಕ ಇವು ಬೇರೆ ಎಂದಲ್ಲವೆ?

  ಅದ್ವೈತವೇ ಅಂತಿಮವಾದರೆ ದ್ವೈತಕ್ಕೆ ಕಾರಣವೇನು?

  ಬ್ರಹ್ಮ ಒಬ್ಬನೇ ಇದ್ದಿದ್ದರೆ, ಅವನು ನಿರ್ಗುಣನಾಗಿದ್ದರೆ ಈ ದ್ವಂದ್ವದ ಪ್ರಪಂಚ ಯಾಕೆ ಸೃಷ್ಟಿಯಾಯಿತು?

  ಸೃಷ್ಟಿಯು ಮಿಥ್ಯವಾದರೆ ಒಬ್ಬನಿಗೆ ಅದ್ವೈತ ಉಂಟಾದರೂ ಜಗತ್ತು ಯಾಕೆ ಉಳಿಯುವುದು?

  ಶಂಕರಾಚಾರ್ಯರು ಗೀತಾ ಭಾಷ್ಯದಲ್ಲಿ “..ಸ್ವಮಾಯಯಾ ದೇಹವಾನಿವ ಜಾತ ಇವ ಚ ಲೋಕಾನುಗ್ರಹಂ ಕುರ್ವನ್ ಲಕ್ಶ್ಯತೆ” ಎಂದಿದ್ದಾರೆ. ಅಂದರೆ ಈ ಅವತಾರಗಳೆಲ್ಲವೂ ಕೇವಲ ಆಗುವಂತೆ ಕಾಣುವುದೆ? ನಿಜವಾಗಿಯೂ ಯಾವುದೂ ನಡೆದಿಲ್ಲವೆ?

  ಎಲ್ಲಾ ಅದ್ವೈತ ಪಂಡಿತರು ಅದ್ವೈತಾನುಭೂತಿಯನ್ನು ಪಡೆದವರಲ್ಲ.. ಕೇವಲ ಪ್ರಮೇಯಗಳನ್ನು ಓದಿದ ಜ್ಞಾನ ಶುಷ್ಕ.. ದ್ವೈತ, ದ್ವಂದ್ವಗಳನ್ನು ಮೀರಿದ ನೀವೇ ಇದನ್ನು ಉತ್ತರಿಸಬೇಕು ಗುರುಗಳೇ..

  ಶಂಕರಾಚಾರ್ಯರಿಂದ ತೊಡಗಿ, ರಾಘವೇಶ್ವರರ ವರೆಗೆ ಬಂದಿರುವ ಈ ಪರಂಪರೆಗೆ ವಂದನೆಗಳು. ಉತ್ತರಗಳನ್ನು ಪ್ರಸಾದಿಸಿ ಗುರುದೇವ..

  [Reply]

 22. Raghavendra Narayana

  ಅತ್ಯದ್ಭುತವಾದ ಪ್ರಶ್ನೆಗಳು, ಗುರುಗಳ ಉತ್ತರವನ್ನು ಶ್ರೀಮುಖದ ಮೂಲಕ ತಿಳಿದುಕೊಳ್ಳಲು ಕಾತರದಿ೦ದ ಕಾಯುತ್ತಿದ್ದೇವೆ.
  .
  ಶ್ರೀ ಗುರುಭ್ಯೋ ನಮಃ

  [Reply]

 23. Jayashree Neeramoole

  ಗುರುಚರಣಗಳಿಗೆ ಅನಂತ ಪ್ರಣಾಮಗಳು…

  ಹೇ ಸಚ್ಚಿದಾನಂದ ಸ್ವರೂಪ, ಚೈತನ್ಯ ಸಾಗರ, ಶ್ರೀರಾಮಚಂದ್ರ, ಗುರು ರಾಘವೇಶ್ವರ… ಅನುಕ್ಷಣವೂ ನಿನ್ನ ನೆನೆವ ಮನವ, ಸನ್ಮತಿಯ ಕೊಡೆನಗೆ…

  [Reply]

Leave a Reply

Highslide for Wordpress Plugin