LIVE Channel

ಇತ್ತೀಚಿನ ಪ್ರತಿಕ್ರಿಯೆಗಳು

Newsletter

ಸಂವಾದ

Author: ; Published On: ಗುರುವಾರ, ಮೇ 19th, 2011;

Switch to language: ಕನ್ನಡ | English | हिंदी         Shortlink:

‘ನಾವು – ನೀವು’ ಕಲೆಯೋಣ

‘ಸಂವಾದ’ದ ಮಾಧುರ್ಯ ಸವಿಯೋಣ
ಬನ್ನಿ ! ‘ಹರೇರಾಮ ಸಂವಾದ’ಕ್ಕೆ
ಬೆಂಗಳೂರಿನ ಶ್ರೀರಾಮಾಶ್ರಮದ ಪರಿಸರದಲ್ಲಿ

ದಿನಾಂಕ 04-06-2011, ಶನಿವಾರ, ಮದ್ಯಾಹ್ನ 2.3೦ – 5 ದರ ಸಮಯದಲ್ಲಿ…

32 Responses to ಸಂವಾದ

 1. Raghavendra Narayana

  ಸುವರ್ಣಾವಕಾಶ ಉಪಯೋಗಿಸಿಕೊಳ್ಳುವ, ಬೆರೆಸುವ ನಮ್ಮ ದನಿಯ ಗುರುಪದಕ್ಕೆ.
  ಸ೦ವಾದಕ್ಕೆ ನಮ್ಮ ತನು ಮನ ಆತ್ಮವ ತರುವ.
  ಪ್ರಶ್ನೆಯೊ ಉತ್ತರವೊ ಒಪ್ಪಿಗೆಯೊ ತಿದ್ದುಗೆಯೊ ವಿಚಾರವೊ ವಿಮರ್ಶೆಯೊ ಚರ್ಚೆಯೊ, ಒ೦ದು ಭಾವವೊ.. ಎಲ್ಲವನ್ನು ಹೊತ್ತುತರುವ.
  ಗುರುಗಳೊ೦ದಿಗೆ ಕಳೆಯುವ ಸುವರ್ಣ ಸಮಯವ.
  .
  ಶ್ರೀ ಗುರುಭ್ಯೋ ನಮಃ

  [Reply]

 2. seetharama bhat

  ಹರೇರಾಮ…ಇನ್

  ಹರೇರಾಮ್ ಇನ್ನು ಇನ್ನೇ೦ದೂ ಇನ್(ಒಳಗೆ-ನಮ್ಮೊಳಗೆ)

  [Reply]

 3. gopalakrishna pakalakunja

  ಹರೇ ರಾಮ

  ಶ್ರೀಮದನುಗ್ರಹ

  [Reply]

 4. Pradeep Shankar M

  ಹರೇ ರಾಮ…!
  ಶಿಷ್ಯರಿಗೆ ಗುರುಗಳೊಂದಿಗೆ ಬೆರೆಯುವ ಸದಾವಕಾಶ…

  [Reply]

 5. Ganesh Bhat Madavu

  ಈ ಅಪೂರ್ವ ಕ್ಷಣದಲ್ಲಿ ಬೆರೆತು ಗುರುಗಳ ಅನುಗ್ರಹ ಪಡೆದು ಕೃತಾರ್ಥರಾಗೋಣ…ಹರೇರಾಮ

  [Reply]

 6. Raghavendra Narayana

  Would be great if we gather in large number, participate actively and take Hareraama website to next higher level.
  Request everyone to share thoughts, ideas, suggestions.
  .
  Shri Gurubhyo Namaha

  [Reply]

 7. Anuradha Parvathi

  ಶ್ರೀಮುಖ – ಸಾಕ್ಷಿ ಭಾವ ದಲ್ಲಿ ಓದುಗರ ಕೆಲವು ಪ್ರಶ್ನೆಗಳನ್ನು ಕೆಳಗೆ ಪಟ್ತಿ ಮಾಡಿದ್ದೇನೆಃ

  ಜಗತ್ತು ಮಿಥ್ಯ ಎಂದರೆ ಇಲ್ಲದಿರುವಿಕೆಯೆ?
  ಮಿಥ್ಯ ಎಂದರೆ ಜಗತ್ತಿನೆ ನಿರಾಕರಣೆಯೆ?
  ಜಗತ್ತು ಎಂದರೆ ಕನಸಿನಂತೆ ಒಂದು ಭ್ರಮಾ ಲೋಕವೆ?

  ಹಗ್ಗವು ಹಾವಿನಂತೆ ಕಾಣುವಂತೆ ಜಗತ್ತು ಎಂದಾದರೆ, ಹಗ್ಗವೇ ಹಗ್ಗವನ್ನು ಕಂಡು ಭ್ರಮೆಗೆ ಒಳಗಾಗುವುದೆ? ಬ್ರಹ್ಮನು ತನ್ನನ್ನೇ ಬೇರೆಯೆ ರೀತಿಯಲ್ಲಿ ನೋಡಿದ ಎಂದಾದರೆ ಅವನಲ್ಲಿ ಅಜ್ಞಾನವು ಹುದುಗಿತ್ತೆ? ಹಾಗೊಂದು ವೇಳೆ ಇದ್ದಿದ್ದರೆ ಅದಕ್ಕೆ ಅವನು ಒಳಗಾಗುವವನೆ? ನಿರ್ಗುಣ ಎಂದರೆ ಗುಣ ಪೂರ್ಣತೆಯೆ ಅಲ್ಲಾ ಸರ್ವ ಗುಣಗಳು ಇಲ್ಲದಿರುವಿಕೆಯೇ?

  “ವಿಶ್ವಂ ದರ್ಪಣ ದೃಶ್ಯಮಾನ ನಗರೀತುಲ್ಯಂ, ನಿಜಾಂತರ್ಗತಂ ….” ಆಚಾರ್ಯರು ಈ ಶ್ಲೋಕದಲ್ಲಿ ಜಗತ್ತು ಕನ್ನಡಿಯ ಬಿಂಬದಂತೆ ಎಂದಿದ್ದಾರೆ. ಕೇವಲ ಕನ್ನಡಿಯ ಗಂಟಾದರೆ, ನಿಜ ಯಾವುದು? ಕನ್ನಡಿ ಯಾವುದು?

  ಕನ್ನಡಿಯ ಬಿಂಬ ಅಜ್ಞಾನವಾದರೆ, ಆ ಬಿಂಬಕ್ಕೆ ಕಾರಣವಾದ ವಸ್ತುವು ಅಜ್ಞಾನವೇ ?

  ಅಜ್ಞಾನವು ಭ್ರಮೆಯಾದರೆ ಈ ಭ್ರಮೆಗೆ ಒಳಗಾದದ್ದು ಯಾರು?
  ಅಜ್ಞಾನವು ಭ್ರಮೆಯಾದರೆ ಈ ಭ್ರಮೆ ಯಾಕೆ ಹುಟ್ಟಿತು? ಯಾರಿಂದ ಹುಟ್ಟಿತು?
  ಅಜ್ಞಾನವು ನಿಜವಾದರೆ ಬ್ರಹ್ಮ-ಅಜ್ಞಾನ ಕಾರಕ ಇವು ಬೇರೆ ಎಂದಲ್ಲವೆ?

  ಅದ್ವೈತವೇ ಅಂತಿಮವಾದರೆ ದ್ವೈತಕ್ಕೆ ಕಾರಣವೇನು?

  ಬ್ರಹ್ಮ ಒಬ್ಬನೇ ಇದ್ದಿದ್ದರೆ, ಅವನು ನಿರ್ಗುಣನಾಗಿದ್ದರೆ ಈ ದ್ವಂದ್ವದ ಪ್ರಪಂಚ ಯಾಕೆ ಸೃಷ್ಟಿಯಾಯಿತು?

  ಸೃಷ್ಟಿಯು ಮಿಥ್ಯವಾದರೆ ಒಬ್ಬನಿಗೆ ಅದ್ವೈತ ಉಂಟಾದರೂ ಜಗತ್ತು ಯಾಕೆ ಉಳಿಯುವುದು?

  ೧.ಎಲ್ಲಾ ಕಡೆ ಗಣಪತಿಗೆ ಅಗ್ರ ಪೂಜೆ -ಆದರೆ ಪಂಚಾಯತನ ಪೂಜೆಯಲ್ಲಿ ಸೂರ್ಯನಿಗೆ ಅಗ್ರ ಪೂಜೆ ಯಾಕೆ?
  ೨.ಪಂಚಾಯತನಪೂಜೆ(ನಿತ್ಯಪೂಜೆಯಾಗಿ) ಮಾಡಿದರೆ ನಿತ್ಯವೂ ಕುಲ/ಮನೆದೇವರಿಗೆ ಪೂಜೆ ಬೇಡವೇ?

  ಅದ್ವೈತಿಗಳಾದ ನಮಗೆ ಪೂಜೆಗೆ ೧ ಬಿಂಬ (ಶಿವಲಿಂಗ/ಸಾಲಿಗ್ರಾಮ ಇತ್ಯಾದಿ) ಸಾಲದೇ? ಎಲ್ಲಾ ದೇವರನ್ನೂ ಒಂದೇ ಬಿಂಬದಲ್ಲಿ ಆವಾಹಿಸಬಾರದೇನು? ಒಂದಕ್ಕಿಂತ ಹೆಚ್ಚು ಬಿಂಬಗಳಿದ್ದರೆ ಏಕಾಗ್ರತೆಗೆ ಅಡಚಣೆ ಅಲ್ಲವೆ?
  ದೇವರಪೂಜೆ ನಿಶಿದ್ದ ಯಾವಾಗ(ಆಶೌಚ ಇತ್ಯಾದಿ)?

  ಆದರೆ ಕಣ್ಣಮು೦ದೆ ಆಗುವ ಅನ್ಯಾಯವನ್ನು ಮೋಸವನ್ನು ಕೆಟ್ಟದನ್ನು ಸಾಕ್ಷಿಭಾವದಿ೦ದ ನೋಡಲು ಸಾಧ್ಯವೆ ಮತ್ತು ಸರಿಯೆ? ಗುರುಗಳೆ, ದಯವಿಟ್ಟು ತಿಳಿಸಿ.
  ಆನ೦ದವನ್ನು ಸಾಕ್ಷಿಭಾವದಿ೦ದ ನೋಡಲು ಸಾಧ್ಯವೆ….?
  ಸಾಕ್ಷಿಭಾವವೆ೦ದರೆ ಯಾವುದಕ್ಕು ಅಂಟದ೦ತಿರುವುದೆ….? ಅಥವಾ ಯಾವುದಾದರು ಒ೦ದಕ್ಕೆ ಮಾತ್ರ ಅ೦ಟಿಕೊ೦ಡಿರುವುದೆ?
  ಸಾಕ್ಷಿಭಾವದ ಮು೦ದುವರಿಕೆ ಹೇಗೆ ಅದ್ವೈತಭಾವವನ್ನು ಸಾಧ್ಯವಾಗಿಸುತ್ತದೆ?
  ಸಾಕ್ಷಿಭಾವ – ಇದಕ್ಕೆ ಪ್ರಯತ್ನ ಪಡುತ್ತಾರೆಯೆ – ಅಥವಾ ತನ್ನಿ೦ದತಾನೆ ಆಗುವ ಪ್ರಕ್ರಿಯೆಯೆ? ಯಾರು ಪ್ರಯತ್ನಪಡಬೇಕು? ಎಲ್ಲರೂ ಸಾಕ್ಷಿಭಾವಕ್ಕೆ ಪ್ರಯತ್ನಪಡಲು ಶುರು ಮಾಡಿದರೆ, ದೇಶಕ್ಕೆ ಅನರ್ಥವಾಗುವುದಿಲ್ಲವೆ?

  [Reply]

  Sri Samsthana Reply:

  ಸಂವಾದಕ್ಕಾಗಿಯೇ..?

  [Reply]

  Anuradha Parvathi Reply:

  ಅಪ್ಪು ಸಂಸ್ಥಾನ…. ಸಾಕ್ಶಿ ಭಾವ – ಭಾಗ ೨ ರಲ್ಲಿಯೂ ಇದ್ದು ಪ್ರಶ್ನೆಗೊ….

  . ಆದ್ಯಾತ್ಮ ಎ೦ದರೇನು?
  ೨. ಜೀವನವೆ೦ದರೇನು? ಈ ಪ್ರಶ್ನೆ ಸಾಮಾನ್ಯ ೩೫ ವಯಸ್ಸಾದ ನ೦ತರ ಎಲ್ಲರಲ್ಲೂ ಉದ್ಭವಿಸಲು ಶುರುವಾಗುತ್ತದೆ? ಜೀವನವೆ೦ದರೇನು ಗುರುಗಳೆ?
  ೩. ಸಾಧನೆ ಎ೦ದರೇನು? ಸಾಧನೆಯ ದಾರಿಗಳು ಬಹಳಷ್ಟಿದೆಯೆ?
  ೪. ನಮಗೆ ಯಾವ ಸಾಧನೆ ಸರಿ ಮತ್ತು ಯಾವ ಸಾಧನೆಯ ಹಾದಿ ಸರಿ ಎ೦ದು ಹೇಗೆ ತಿಳಿದುಕೊಳ್ಳುವುದು?
  ೫. ನಮಗೆ ಸರಿಯೆನಿಸಿದ ಸಾಧನೆಯಲ್ಲಿ ಯಾವ ಹ೦ತದಲ್ಲಿದ್ದೇವೆ ಹೇಗೆ ಅರಿತುಕೊಳ್ಳುವುದು?
  ೬. ಈ ಸಾಧನೆಗಳ ಸಾಧನೆಗಾಗಿ ಸರಿಯಾದ ಗುರುವನ್ನು / ಗುರುಕುಲವನ್ನು ಹೇಗೆ ಹುಡುಕುವುದು?
  ೭. ಜೀವನದ / ಸಾಧನೆಯ / ಆದ್ಯಾತ್ಮದ / ಮೋಕ್ಷದ – ಅತ್ಯ೦ತ ಸರಳ ಸೂತ್ರ ಇವತ್ತಿನ ವ್ಯಾವಾಹಾರಿಕ ಪ್ರಪ೦ಚಕ್ಕೆ ಸರಿ ಹೊ೦ದುವ೦ತಹುದು ಯಾವುದು?

  [Reply]

 8. Jayashree Neeramoole

  ಗುರುಚರಣಗಳಿಗೆ ಅನಂತ ಪ್ರಣಾಮಗಳು…

  ನಮ್ಮ ಗುರುಪರಂಪರೆಯಲ್ಲಿ “… ಕರ ಕಮಲ ಸಂಜಾತ …” ಎಂದು ಉಪಯೋಗಿಸುವುದರ ನಿಜವಾದ ಅರ್ಥವೇನು?

  [Reply]

  Sri Samsthana Reply:

  ಗುರುವು ತಲೆಯ ಮೇಲೆ ಕೈ ಇಟ್ಟಾಗ ಶಿಷ್ಯನಿಗೆ ಆಗುವ ಪುನರ್ಜನ್ಮಕ್ಕೆ ಸನ್ಯಾಸವೆಂದು ಹೆಸರು..
  ಆದುದರಿಂದಲೇ ಶಿಷ್ಯನು ಗುರುವಿನ ಕರಕಮಲ ಸಂಜಾತ….

  [Reply]

  Jayashree Neeramoole Reply:

  ಗುರುಚರಣಗಳಿಗೆ ಅನಂತ ಪ್ರಣಾಮಗಳು…

  ಅಬ್ಬ! ಗುರುಮಹಿಮೆಯನ್ನು ಬಣ್ಣಿಸಲಸಾಧ್ಯ…
  ಈ ಹರೇರಾಮದಿಂದಲೇ ಪುನರ್ಜನ್ಮ ಪಡೆದ ಅನುಭವ…

  [Reply]

 9. RAVINDRA BHATT T L

  ಶ್ರೀ ಸಂಸ್ಥಾನಕ್ಕೆ ಹೃತ್ಪೂರ್ವಕ ನಮನಗಳು,

  ಜನ್ಮ ಸೂತಕವಿದ್ದುದರಿಂದ ಬರಲಾಗಲಿಲ್ಲ ( ಮನಸ್ಸು ಆ ಕಡೆಗೇ ಇದ್ದದ್ದು ಬೇರೆ! ),
  ಹಾಗಂತ, ನಮ್ಮನೆಯವರೇಲ್ಲರ ಸಮಸ್ಯೆ ಇದೇ ಆಗಿದೆ, ಯಾರೋ, ಏನೋ, ನಮ್ಮ ಗಮನಕ್ಕೂ ಬಾರದವರಿಂದಲೂ, ಈ ಸೂತಕ ಬಿಡದಲ್ಲ, ವರ್ಷವಿಡೀ ಇದರದೇ ಸಮಸ್ಯೆ. ಇದಕ್ಕೇನಾದರು ದಾರಿ ಇದೆಯ ಗುರೂಜೀ?

  [Reply]

  Sri Samsthana Reply:

  ಪರಿಹಾರವಿದೆ..
  ಏಳು ತಲೆಮಾರು ಕಳೆದಿದ್ದರೆ ಅಘಸಂಕೋಚದ ಮೂಲಕ ಆಶೌಚದ ಸಂಕೋಚ ಮಾಡಿಕೊೞಬಹುದು….

  [Reply]

  Jayashree Neeramoole Reply:

  ಗುರುಚರಣಗಳಿಗೆ ಅನಂತ ಪ್ರಣಾಮಗಳು…

  ಅಶೌಚಗಳೆಲ್ಲವೂ ಶರೀರಕ್ಕೆ ಸಂಬಂಧಿಸಿದವುಗಳೇ? ಮಾನಸ ಪೂಜೆಗೆ ಯಾವುದಾದರೂ ನಿಯಮಗಳಿವೆಯೇ? ಹಾಗೊಂದು ವೇಳೆ ಇದ್ದರೂ ಪಾಲಿಸುವುದು ತುಂಬಾ ಕಷ್ಟ…

  [Reply]

  Sri Samsthana Reply:

  ಭಾವವೆಲ್ಲಿಯೋ ಇದ್ದರೂ ಬಾಹ್ಯಪೂಜೆಯನ್ನು ಆಯಿತೆಂದು ಮಾಡಿಬಿಡಬಹುದು..
  ಆದರೆ ಮಾನಸ ಪೂಜೆ ಹಾಗಲ್ಲ, ಭಾವವಿಲ್ಲದಿದ್ದರೆ ಅದು ನಡೆಯುವುದೇ ಇಲ್ಲ…!
  ಎಂದರೆ ಬಾಹ್ಯಪೂಜೆಯ ನಿಯಮಗಳಲ್ಲಿ ಮೋಸಕ್ಕೆ ಅವಕಾಶವಿದೆ,ಆಂತರಪೂಜೆಯಲ್ಲಿ ಇಲ್ಲವೇ ಇಲ್ಲ..

  [Reply]

 10. Raghavendra Narayana

  ಅದ್ಭುತವಾದ ಕಾರ್ಯಕ್ರಮ, ತಪ್ಪಿದವರಿಗೆ ಆಡಿಯೋ / ವಿಡಿಯೋ ಸಿಗಬಹುದು, ಬಹಳಷ್ಟು ವಿಷಯ ಬ೦ದಿತು, ಪ್ರಶ್ನೋತ್ತರಕ್ಕೆ ಇನ್ನೂ ಹೆಚ್ಚಿನ ಸಮಯ ಸಿಕ್ಕಿದ್ದರೆ ಅದ್ಭುತ.
  ಇ೦ತಹ ಕಾರ್ಯಕ್ರಮ ಬೇರೆ ಊರುಗಳಲ್ಲೂ ನೆಡೆದರೆ ಅದ್ಭುತ.
  .
  ಶ್ರೀ ಗುರುಭ್ಯೋ ನಮಃ

  [Reply]

 11. subhas

  Hare raama…
  Ellaru ellelliyu change keluva samayadalli change annu alavadisikollalu maadida karyakrama tumba chennagittu…..
  Shri gurubyo namaha…

  [Reply]

 12. ಮಂಗ್ಳೂರ ಮಾಣಿ...

  ಬಯಸಿಯೂ ಬರಲಾಗಲಿಲ್ಲ :(:(:(
  ಕಾರ್ಯಕ್ರಮ ಹೇಗೆ ನಡೆಯಿತೆಂದು ಭಾಗವಹಿಸಿದವರು ತಿಳಿಸುವಿರಾ???

  [Reply]

  Raghavendra Narayana Reply:

  In Short it was Sweet.
  .
  Shri Gurubhyo Namaha

  [Reply]

  Sri Samsthana Reply:

  ಮಂಗಳೂರಿನಲ್ಲಿ ಒಮ್ಮೆ ಮಾಡೋಣವೇ..?

  [Reply]

  ಮಂಗ್ಳೂರ ಮಾಣಿ... Reply:

  ಮಂಗಳೂರಿಗರ ಭಾಗ್ಯ…..!!!
  ಪೂರ್ಣಾವಧಿ ಸ್ವಯಂಸೇವಕನಾಗಿ ಖಂಡಿತಾ ಭಾಗವಹಿಸುವೆ…

  ಮನಕ್ಕೆ ಗುರುಗಳ ಆಗಮನವಾಗಿದೆ..
  ಮನೆಗೆ – ಊರಿಗೆ ಯಾವಾಗ??

  ಕಾತರದಿಂದ ಕಾಯುತಿರುವೆ…

  [Reply]

  Raghavendra Narayana Reply:

  “ಪೂರ್ಣಾವಧಿ ಸ್ವಯಂಸೇವಕನಾಗಿ ಖಂಡಿತಾ ಭಾಗವಹಿಸುವೆ…” – ಇದನ್ನು ಓದಿ ಬಹಳ ಸ೦ತೋಷವಾಯಿತು.
  .
  ಶ್ರೀ ಗುರುಭ್ಯೋ ನಮಃ

  [Reply]

  Sri Samsthana Reply:

  ನಮಗೂ..

  [Reply]

 13. seetharama bhat

  ಹರೆರಾಮ್,
  ಉತ್ತಮ ಕಾರ್ಯಕ್ರಮ.ಅಬಿವ್ರದ್ದಿಗೆ ಪೂರಕ. ನಾವೆಲ್ಲಿದ್ದರೂ, ಬಯಸಿದಾಗಲೆಲ್ಲಾ ಗುರುದರ್ಶನ ಕರುಣಿಸುವ ಹರೆರಾಮ ತ೦ಡಕ್ಕೆ ತು೦ಬುಹ್ರದಯದ ಕ್ರುತಜ್ನತೆ ಗಳು.ಅನೇಕ ಹೊಸವಿಶಯಗಳು ಈ ಸ್೦ವಾದ ದಲ್ಲಿ ತಿಳಿದವು

  ಹಲವಾರು ಹೊಸ ಅ೦ಕಣಗಳನ್ನು ಅಳವಡಿಸುವಬದಲು ಒ೦ದ೦ಕಣ(ವಿಚಾರ/ವಿಷೇಷ) ದಿನಕ್ಕೊ೦ದು/ವಾರಕ್ಕೊ೦ದು ವಿಶಯ(ಗೊವು,ಕ್ರಷಿ,ಅದ್ವೆತ)ಗಳನ್ನು ಪ್ರಸ್ತುತ ಪಡಿಸಬಹುದು.

  ಸ೦ವಾದ/ಜಿಜ್ನಾಸೆ ಗಾಗಿ ಒ೦ದರಲ್ಲಿ ಯಾರು ಯಾವುದೆ ಪ್ರಶ್ನೆ ಕೇಳಿದರೂ ಸ೦ಬ೦ದ ಪಟ್ಟವರಿ೦ದ ಸಮಾಧಾನ ಸಿಗುವ೦ತೆ(ಪೂರ್ಣಜೀವನ ಕೇ೦ದ್ರ ದ೦ತೆ) ವೆಯಕ್ತಿಕವಾದರೆ ಅವರಿಗೆ ಮಾತ್ರ ಸಿಗುವ೦ತೆ ಇಲ್ಲವಾದರೆ ಎಲ್ಲರಿಗು ಸಿಗುವ೦ತೆ ಮಾಡಬಹುದು.

  ದಿನಚರಿ ದಿನವೂ ಸಿಗುವ೦ತೆ ಅದರೊ೦ದಿಗೆ ದಿನಪ೦ಚಾಗ/ದಿನವಿಶೆಷ ವಿದ್ದರೆ ಉತ್ತಮ. ಸ್ತಳದ ಪೂರ್ಣವಿಳಾಸ ನಮ್ಮನ್ನು ಪೂರ್ಣವಾಗಿ ಅಲ್ಲಿಗೆ ಕರೆದೊಯ್ಯಲು ಸಹಾಯ ಮಾಡುವುದು

  ದಿನಕ್ಕೊ೦ದು ಗುರುವಾಣಿ/ಉಪದೇಶದ ತುಣುಕು ಸಿಕ್ಕಿದರೆ ದಿನದಾರ೦ಭಕ್ಕೆ ಒಳ್ಲೆಯದು.

  ಎಲ್ಲವು ಕ್ಲಪ್ತ/ನಿರ್ಧಿಷ್ತ ಸಮಯ/ದಿನಗಳಲ್ಲಿ ಬರಲೇಬೇಕು.ಆಗಲೇ ಇದೊ೦ದು ಮಹತ್ವದ್ದಾಗುವುದು

  ಹರೇರಾಮ್

  [Reply]

  Raghavendra Narayana Reply:

  “ದಿನಕ್ಕೊ೦ದು ಗುರುವಾಣಿ/ಉಪದೇಶದ ತುಣುಕು ಸಿಕ್ಕಿದರೆ ದಿನದಾರ೦ಭಕ್ಕೆ ಒಳ್ಲೆಯದು” – Yes, many of us recommend this, look forward for this, makes us to live the day on good thought.
  .
  Shri Gurubhyo Namaha

  [Reply]

  Sri Samsthana Reply:

  ನಿನ್ನೆಯ ಶ್ರೀಮುಖ ಗಮನಿಸಿ..

  [Reply]

 14. mayakk

  HARE RAMAAA
  BHAGAVAHSIDAVARU VISHAYAVA THILSUVIRAA???

  THILKOLLUVAASE,,,
  HARERAMA

  [Reply]

  Sri Samsthana Reply:

  ಕಾರ್ಯಕ್ರಮದ ವರದಿಯನ್ನು ತಾಣದಲ್ಲಿಯೇ ಕಾಣಬಹುದು..

  [Reply]

 15. Raghavendra Narayana

  ಪ್ರತಿಕ್ರಿಯೆ ನೀಡುತ್ತಿರುವ ಮತ್ತು ಪ್ರಶ್ನೆಗಳನ್ನು ಕೇಳುತ್ತಿರುವ, ಇದನೆಲ್ಲ ತಪ್ಪದೇ ನೋಡುತ್ತಿರುವ ಎಲ್ಲರಿಗೂ ಧನ್ಯವಾದಗಳು.
  .
  ಪ್ರತಿಕ್ರಿಯೆ ಉತ್ತರ ಜ್ಞಾನ ಅನುಗ್ರಹ ಆಶೀರ್ವಾದವನ್ನು ನೀಡುತ್ತಿರುವ ಗುರುಗಳಿಗೆ ಶಿರಸಾಷ್ಟಾ೦ಗ ಪ್ರಣಾಮಗಳು.
  .
  ಶ್ರೀ ಗುರುಭ್ಯೋ ನಮಃ

  [Reply]

 16. Pooja Prakash

  Hare Raama.
  Has this samvada been recorded? Searched the transcript on the site, but did not find it.

  [Reply]

  Pooja Prakash Reply:

  Found the transcript here. If anyone else is searching, it can be found here: http://hareraama.in/?p=11461
  Hare Raama.

  [Reply]

Leave a Reply

Highslide for Wordpress Plugin