ಮಂಗಳವಾರ, ಜೂನ್ 29th, 2010 - Sri Samsthana - 5 Comments
Comments solicited…!
ಕೊಲೆಗಡುಕನೆನಿಪ ಹುಲಿ ಸಲಹದೇ ಮರಿಗಳನು..!
Krishnamurthy Hegde
“ವ್ಯಾಘ್ರ ಕಿಶೋರ ನ್ಯಾಯ”?
ಈ ಹುಲಿಮರಿಯ ನೋಡಿ ಅಸೂಯೆಯಾಗುತ್ತಿದೆ. ಈ ನಮ್ಮ ಸದಾ’ವ್ಯಗ್ರ’ ಮನಸ್ಸಿಗೆಲ್ಲಿ ಬಂದೀತು ಈ ಮರಿ-ವ್ಯಾಘ್ರನ ಶರಣಾಗತಿಯ ಪರಮಾನಂದದ ಸ್ಥಿತಿ? ‘ಕೊಡುವ ಕರ್ತ್ರು ಬೇರೇ ಇರುತಿರೆ, ಬಿಡು ಬಿಡು ಚಿಂತೆಯನು ಮನುಜ” ಎಂಬ ದಾಸವಾಣಿ ಗುನುಗುನಿಸುವ ಪದ್ಯವಾಗೇ ಉಳಿದು, ನಮ್ಮಾಳಕ್ಕೆ ಇಳಿಯದಿರುವುದೇ ನಮ್ಮ ಮನೋವ್ಯಗ್ರತೆಯ ಗುಟ್ಟು.
‘ಪುರುಷ-ವ್ಯಾಘ್ರ’ನಾದ ಅರ್ಜುನನಿಗೆ ಶರಣಾಗತಿ ಸುಲಭವಾದದ್ದು ‘ನರ-ಸಿಂಹ’ನಾದ ಕೃಷ್ಣನ ವಿಶ್ವರೂಪದರ್ಶನದಿಂದ. ಹಾಗೆಯೇ, ನಮ್ಮೆಲ್ಲರಿಗೂ ಕೂಡ ಗುರುದರ್ಶನ ಮಾತ್ರದಿಂದ ಈ ಮರಿ-ವ್ಯಾಘ್ರದಂದದ ಶರಣಾಗತಿಯು ಅನಾಯಾಸವಾಗಿ ಕರುಣಿಸಲ್ಪಟ್ಟು, ತನ್ಮೂಲಕ ಸತ್ಯದರ್ಶನ ದೊರೆಯಲಿ ಎಂಬುದು ಪ್ರಾರ್ಥನೆ.
ರಾಘವೇ೦ದ್ರ ನಾರಾಯಣ Raghavendra Narayana
—————————————————————————–
ಧರೆಗೆನವಒಲವತರುವ೦ದು
ವಾತ್ಸಲ್ಯರಸಝರಿಯಾಗಿಹರಿವ೦ದು
ಕರುಳಕುಡಿಯ ಭೂ ಮಡಿಲಿಗೆ ಬಿಡಲೊಲ್ಲೆಯೆ೦ದು
ಕರುಣಾಸುಮವ ಹೃದಯಮುಡಿಯೊಳುಧರಿಸಿಗೊ೦ಡು
ನಡೆಯುತಿಹಳ ನೋಡಿ ಹರ ನಿ೦ತನೊ ಹರಿ ಕುಳಿತನೊ ಮಾಯೆ ತನ್ನನ್ನೆ ಮರೆತಳೊ
—————————————————————————–
govindaraj korikkar
“Lokadalli ketta maga irabahudu,adare ketta thayi iralaralu”
ಹುಲಿ ಕ್ರೂರ ಪ್ರಾಣಿಯೇ ಇರಬಹುದು. ಆದರೆ ತನ್ನ ಮಗುವಿಗೆ ತಾಯಿಯೇ ತಾನೇ? ಜಗಜ್ಜನಿಯ ವಾಹನ ಅದೇ ವ್ಯಾಘ್ರವೇ ಅಲ್ಲವೇ? ಕೋರೆ ಹಲ್ಲುಗಳೇ ಆದರೂ ತನ್ನ ಮಗುವಿಗಾದಾಗ ಅದು ಮೃದು ಹಸ್ತವೇ ಆಗುತ್ತದಲ್ಲ.ಅದೆಂತಹ ಅದ್ಭುತ pressure measurement ಇರಬಹುದು- ಅಷ್ಟೊಂದುತೂಕವನ್ನು ಸರಿದೂಗಿಸಿ, ಮರಿಗೆ ಒಂದಿನಿತೂ ನೋವಾಗದಂತೆ, ಗಾಯವಾಗದಂತೆ,ತನ್ನ ಮರಿಯನ್ನು ಹೊತ್ತೊಯ್ಯುವ ತಂತ್ರಗಾರಿಕೆ! ಕೋರೆ ಹಲ್ಲು ಕ್ರೂರವಲ್ಲ- ಕ್ರೂರತೆ ಇರುವುದು ಮನಸ್ಸಿನಲ್ಲಿ.ಮಿದುಳಲ್ಲಿ. ಇಂದಿನ terrorist ನೋಡಲು ನಮ್ಮ ನಿಮ್ಮಂತೆಯೇ. ಆದರೆ ಅವನೆಷ್ಟು ಕ್ರೂರಿ!
ಹರೇರಾಮ.