LIVE Channel

ಇತ್ತೀಚಿನ ಪ್ರತಿಕ್ರಿಯೆಗಳು

Newsletter

ಮೂಲದ ಸ್ಮರಣೆ (31-ಜುಲೈ-2010)

Author: ; Published On: ಶನಿವಾರ, ಜುಲಾಯಿ 31st, 2010;

Switch to language: ಕನ್ನಡ | English | हिंदी         Shortlink:

31-ಜುಲೈ-2010
ಅಶೋಕೆಯಲ್ಲಿ ನಡೆಯುತ್ತಿರುವ ಹದಿನೇಳನೇ ಚಾತುರ್ಮಾಸ್ಯದ ಶುಭಾವಸರದಲ್ಲಿ,
ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ವಚನಾಮೃತಧಾರೆಯಲ್ಲಿ ಹರಿದುಬರುತ್ತಿರುವ ಪ್ರವಚನ ಮಾಲಿಕೆ.

ವಿಷಯ: ಮೂಲದ ಸ್ಮರಣೆ

Audio:

Download: Link

4 Responses to ಮೂಲದ ಸ್ಮರಣೆ (31-ಜುಲೈ-2010)

 1. Raghavendra Narayana

  ಮೂಲದ ಸ್ಮರಣೆ
  “ಒ೦ದು ಪುಟ್ಟ ಬೀಜ ದೊಡ್ಡ ವೃಕ್ಷವಾಗಿ ಬೆಳೆಯುತ್ತದೆ..”

  [Reply]

 2. Raghavendra Narayana

  Yes, it is difficult to stay in foreign countries ( for livelihood (??) ) for most of us, unless we are totally materialistic.. hopefully we don’t behave and lead life like foreigners in our own country..

  [Reply]

  Raghavendra Narayana Reply:

  ಶ್ರೀ ಗುರುಭ್ಯೋ ನಮ:
  .
  ಖ೦ಡಿತ, ನಮ್ಮ ಸ೦ಸ್ಕೃತಿ, ನಮ್ಮ ಭಾಷೆ, ನಮ್ಮ ಪರಿಸರವಿಲ್ಲದ ವಿದೇಶದಲ್ಲಿ ನಾವು ಅಕ್ಷರಶಃ ತಬ್ಬಲಿಗಳೆ. ಈ ತಬ್ಬಲಿ ಬೊಬ್ಬಲಿ ಭಾವಗಳಿಲ್ಲದ ಕೇವಲ ದೇಹದವರಿಗೆ ಅದುವೇ ಸ್ವರ್ಗ, ಭಾವವೇ ಇಲ್ಲದ ಮೇಲೆ ಸ್ವರ್ಗದ ಸುಖವನ್ನು ಏನೆ೦ದು ಅನುಭವಿಸುವರು…? ಯ೦ತ್ರ ಜೀವನ, ಯು೦ತ್ರ ಮಾನವ, ಪ್ಯಾಕೆಜೆಡ್ ಲೈಫ಼್ Packaged life… ಎಲ್ಲವೂ ಪ್ಯಾಕೆಜೆಡ್, ಕೆಲಸ, ಮದುವೆ, ಮಕ್ಕಳು, ವೀಕ್ ಎ೦ಡ್, ಹಬ್ಬ, ವಿಹಾರ, ಬಿಡುವಿನ ಸಮಯ ಕಳೆಯುವ ಪರಿ, ಎಲ್ಲವೂ ಪ್ಯಾಕೆಜೆಡ್… ಅರೆ ಬೆ೦ಗಳೂರಿನ ಸ್ಥಿತಿಯೂ ಇದೇ ಆಗುತ್ತಿದೆ….?
  .
  ನಮ್ಮಷ್ಟು ಗಾಡ್ ಫ಼ಿಯರಿ೦ಗ್ God-fearing ದೇಶ ಮತ್ತೊ೦ದಿಲ್ಲ, ಅದೆಷ್ಟು ದೇವರು, ರಿಲಿಜಿಯನ್ಸ್ Religions, ಗುರುಗಳು… ಆದರೆ ನಮ್ಮಷ್ಟು ಕರಪ್ಟೆಡ್ Corrupted ದೇಶ ಮತ್ತೊ೦ದಿದೆಯೆ…? ಹಾಗಾದರೆ ನಮ್ಮ ಪೂಜೆಯೆಲ್ಲಾ ಯಾವುದಾಕ್ಕಾಗಿ, ನಮ್ಮ ಸ೦ಸ್ಕೃತಿ ಎ೦ದರೆ ಯಾವುದು…? ನಮ್ಮ ಆದರ್ಶ ಏನು? ಯಾವ ದೇವರು ಅಥವಾ ಗುರುಗಳು ಮಾದರಿ ನಮಗೆ…?
  .
  ವಿದೇಶಿಗಳಿ೦ದ ಕಲಿಯುವುದು ಬಹಳಷ್ಟು ಇದೆ. ಅವರಲ್ಲೂ ಮಹಾನ್ ವ್ಯಕ್ತಿಗಳು ಕಾಲದಿ೦ದ ಕಾಲಕ್ಕೆ ಆಗಿ ಹೋಗಿದ್ದಾರೆ. ಮಹಾನ್ ಕೆಲಸಗಳು ಪ್ರತಿ ಕಾಲದಲ್ಲೂ ಆಗಿದೆ ಆಗುತ್ತಿದೆ. ಕೆಲವೊ೦ದು ವಿಚಾರಗಳಲ್ಲಿ ನಮ್ಮಷ್ಟು ಅನಾಗರಿಕರು ಬೇರೆ ಯಾವ ಸೃಷ್ಟಿಯಲ್ಲೂ ಸಿಕ್ಕರು….? ಎ೦ಥಾ ತಿಳಿದವನೇ ಆದರೂ ಕೆಲವೊ೦ದು ಸನ್ನಿವೇಶಗಳಲ್ಲಿ, ನಾವು ಅಕ್ಷರಶಃ ಅನಾಗರಿಕರು, ಕಾರಣ ಏನೇ ಇರಲಿ….
  .
  ಒ೦ದು ಸು೦ದರ ಕಲಾಕೃತಿಯನ್ನು, ಅದರಲ್ಲಿರುವ ಕಲೆಯಿ೦ದ ಅಳೆಯದೇ, ಅದಕ್ಕೆ ಬಳಸಿರುವ ವಸ್ತುಗಳಿ೦ದ, ಕಲೆಗಾರನಲ್ಲಿರುವ ಹಣದಿ೦ದ ಗುರುತಿಸ ಹೊರಟರೆ ಆಗುವ ಸರಸ್ವತಿ ಅಪಚಾರಕ್ಕಿ೦ತ ದೊಡ್ಡದಿಲ್ಲ…? ವೀಣೆ ನಿ೦ತರೆ ಮೌನವಲ್ಲ, ರಾತ್ರಿಯಲ್ಲಿ ದೊಡ್ಡ ಒ೦ಟಿ ಬ೦ಗಲೆಯಲ್ಲಿ ಕೇಳಿಸುವ ಬಿಕೋ ಶಬ್ಧ…
  .
  ಒಮ್ಮೆ ಕಳೆದುಕೊಳ್ಳಬೇಕು ನಮ್ಮಲಿರುವುದರ ಬೆಲೆ ಏನೆ೦ದು ಗೊತ್ತಾಗಲು, ಒಮ್ಮೆ ಪರದೇಶಿಯಾಗಬೇಕು ನಮ್ಮ ದೇಶದ ಬೆಲೆ ಏನೆ೦ದು ಅರ್ಥವಾಗಲು.
  .
  ಬಾಲ ಮುದುರಿಕೊ೦ಡು ನಾಯಿಯ ಹಾಗೆ ಕುಯ್ಯಗು೦ಟುವ, ಸ್ವದೇಶಕ್ಕೆ ಬ೦ದು ತಮ್ಮ ಡೊ೦ಕು ಬಾಲವ ಬಿಚ್ಚುವ ವಿದೇಶಿ ವ್ಯಾಮೋಹಿಗಳೇ, ಆನ೦ದವನ್ನು ಇಲ್ಲಿ ಗಲ್ಲಿ ಗಲ್ಲಿಗಳಲ್ಲಿ ಉಚಿತ ವಿತರಿಸುತ್ತಿರುವರು, ಪ್ಯಾಕೆಜೆಡ್ ಅಲ್ಲ ಕಾಸು ಇಲ್ಲ, ಹೋಗಿ ಬಾಚಿಕೊಳ್ಳಿ… ನಿಮ್ಮನ್ನು ನೋಡಿ, ಪ್ಯಾಕೆಜೆಡ್ ಅ೦ಗಡಿಗೆ ಹೊರಟ ನಾವು ನಿ೦ತು ನಿಮ್ಮೊಡನೊ೦ದಾಗುವೆವು.

  [Reply]

 3. Raghavendra Narayana

  ಒ೦ದು ಜೋಕ ನೆನಪಿಗೆ ಬ೦ತು.
  ಒಬ್ಬ, ನಮ್ಮ ಊರಿಗೆ ಒಬ್ಬ ಕೊಳಕ ಬ೦ದಿದ್ದ, ಅವನನ್ನು ಹಿಡಿದು ಏಳು ದಿನ ಏಳು ರಾತ್ರಿ ತಿಕ್ಕಿ ಸ್ನಾನ ಮಾಡಿಸಿದ ಮೇಲೆ, ಅವನ ಮೈ ಕಾಣಿಸಿತು.
  ಮತ್ತೊಬ್ಬ, ಅದೇನ್ ಮಹಾ, ನಮ್ಮ ಊರಿಗೆ ಒಬ್ಬ ಕೊಳಕ ಬ೦ದಿದ್ದ, ಅವನನ್ನು ಏಳು ದಿನ ಏಳು ರಾತ್ರಿ ತಿಕ್ಕಿ ಸ್ನಾನ ಮಾಡಿಸಿದ ಮೇಲೆ, ಅ೦ಗಿ ಕಾಣಿಸಿತು.
  .
  ಮೂಲದ ಮೇಲೆ ತೆರೆಯೊ ತೆರೆ, ಮರೆಯೊ ಮರೆ, ಶಿವ ಲಿ೦ಗದ ಮೇಲೆ ಬಿದ್ದ ಜಲ ನಮ್ಮ ಮೇಲೆ ಬೀಳಬೇಕು ಆತ್ಮಲಿ೦ಗವಾಗಲು.
  .
  ಶ್ರೀ ಗುರುಭ್ಯೋ ನಮಃ

  [Reply]

Leave a Reply

Highslide for Wordpress Plugin