LIVE Channel

ಇತ್ತೀಚಿನ ಪ್ರತಿಕ್ರಿಯೆಗಳು

Newsletter

ಅಬ್ಬಾ!!! ಬೆಳಕಿನ ಸೆಳೆತವೇ…!!

Author: ; Published On: ಗುರುವಾರ, ನವೆಂಬರ 5th, 2009;

Switch to language: ಕನ್ನಡ | English | हिंदी         Shortlink:

|| ಹರೇ ರಾಮ ||

ಅನಂತ ಕಾಲದಿಂದ ಬೆಳಕಿನ ರಾಶಿಯೇ ಆದ ಸೂರ್ಯನ ಸುತ್ತ ಸುತ್ತುತ್ತಿರುವ, ಭೂಮಂಡಲ, ಗ್ರಹಮಂಡಲ..
ಸಾವನ್ನೂ ಲೆಕ್ಕಿಸದೆ, ದೀಪವನ್ನು ಕಂಡೊಡನೆ ಧಾವಿಸುವ ಪತಂಗ..
ನೆರಳಿನಲ್ಲಿ ನೆಟ್ಟರೂ, ಬೆಳಕಿನೆಡೆ, ಬಿಸಿಲಿನೆಡೆ ಬಾಗುವ – ಸಾಗುವ ಗಿಡಬಳ್ಳಿಗಳು..
ಕಾಡಿನಲ್ಲಿ ರಾತ್ರಿ ಬೇಟೆಗಾರನ ಹಣೆಯ (Torch)ವಿದ್ಯುದ್ದೀಪಕ್ಕೆ ಕಣ್ಣು ಕೊಡುವ ಮೃಗಗಳು…
ಬೆಳಗಿನ ಹೊತ್ತು ಬೆಳಕು ಬಿಸಿಲುಗಳು ತನ್ನ ಮೇಲೆ ಬಿದ್ದೊಡನೆ, ತಾನಾಗಿ ತೆರೆದುಕೊಳ್ಳುವ ಕಣ್ಣುಗಳು..
ಸೂರ್ಯನ ಮುಖನೋಡಿದೊಡನೆ ಅರಳುವ ಕಮಲ..
ಪೂರ್ವದಿಂದ ಪಶ್ಚಿಮದವರೆಗೆ ನೇಸರ ಸಾಗಿದಂತೆಯೇ ಆ ಕಡೆಯೇ ಮುಖ ತಿರುಗಿಸುವ, ಅನವರತ ಸೂರ್ಯನನ್ನು ದಿಟ್ಟಿಸುತ್ತಲೇ ಇರುವ ಸೂರ್ಯಕಾಂತಿ..
ಜೀವಲೋಕಕ್ಕೆ ಅದೇಕೆ ಈ ಬಗೆಯ ಬೆಳಕಿನ ಸೆಳೆತ..!?

ಬೆಳಗಿನ ಬೆಳಕು

ಬೆಳಗಿನ ಬೆಳಕು

ಏಕೆಂದರೆ..
ಈ ಜಗದ ಮೂಲ – ಬೆಳಕು.
ಪ್ರತಿಯೊಂದು ಜೀವದ ಮೂಲವೇ ಬೆಳಕು.
ಜೀವಿ ತನ್ನನ್ನು ಪ್ರೀತಿಸುವಷ್ಟು ಯಾರನ್ನೂ ಪ್ರೀತಿಸಲಾರ.
ತಾನು ಎಂದರೆ ಬೆಳಕೇ ತಾನೇ . .!
ಒಳಗೆಲ್ಲೋ ಕಳೆದು ಹೋದ ನಾನೆಂಬ ಬೆಳಕನ್ನು ಜೀವಲೋಕ ಹೊರಗೆ ಹುಡುಕುವ ಪರಿ ಇದು!!
ಹೊರಜಗದಲ್ಲಿ ಕಾಣ ಸಿಗುವ ಬೆಳಕುಗಳೆಲ್ಲ ನಮ್ಮೊಳಗೆ ಸ್ವತಃ ಬೆಳಗುವ ’ನಾನೆಂ’ಬ ಬೆಳಕಿನ ಪ್ರತಿಬಿಂಬಗಳು..
ಮರೆತು ಹೋದ – ಮರೆಯಾದ ಆತ್ಮ ಜ್ಯೋತಿಯನ್ನು ನೆನಪಿಸಲು ಎಲ್ಲೆಲ್ಲೂ ಭಗವಂತನಿಟ್ಟ ಸ್ಮಾರಿಕೆಗಳು..!
ಬೆಳಕಿನ ಮೇಲಣ ಪ್ರೀತಿಯೇ ಭಾ-ರತಿ. (ಭಾ – ಬೆಳಕು, ರತಿ- ಅದರಲ್ಲಿ ಆಸಕ್ತಿ, ಆನಂದ)
ಬೆಳಕನ್ನು ಪ್ರೀತಿಸುವವರು ಭಾ-ರತರು.

ಅಂತವರ ನಾಡು ಭಾರತ!

ಉತ್ತಿಷ್ಠತ | ಮಾ ಸ್ವಪ್ತ ||
ಅಗ್ನಿಮಿಚ್ಛಧ್ವಂ ಭಾರತಾಃ ||

(ಭಾರತರೇ! ಎದ್ದೇಳಿ! ನಿದ್ರಿಸಬೇಡಿ!
ನಿಮ್ಮೊಳಗೆ ಸದಾ ಬೆಳಗುವ ಅಗ್ನಿಯನ್ನು ಗುರುತಿಸಿ ಬಯಸಿ –
ಋಷಿ ವಾಣಿ)

ಭಾರತೀಯರು ’ಭಾರತ’ರಾದರೆ…
ವಿಶ್ವವೇ ಭಾರತವಾದೀತು!!
ಭಾರತೀಯರು ಬೆಳಕನ್ನು ಮರೆತರೆ…?
ಭಾರತ… ಭೀ-ರತವಾದೀತು! (ಭೀ ಅಂದರೆ ಭಯ ಎಂದರ್ಥ)

ನಿತ್ಯ ದೀಪೋತ್ಸವದ ಈ ಕಾರ್ತಿಕ ಮಾಸ ಬೆಳಕನ್ನು ಪ್ರೀತಿಸಲು ಆರಂಬಿಸುವುದಕ್ಕೆ ಶುಭ ಸಮಯವಲ್ಲವೇ…?

|| ತಮಸೋಮಾ ಜ್ಯೋತಿರ್ಗಮಯ ||

44 Responses to ಅಬ್ಬಾ!!! ಬೆಳಕಿನ ಸೆಳೆತವೇ…!!

 1. shilpa purohith

  Bhoomandalave bhaaratha vaagali…

  [Reply]

 2. ashwini

  ಅದೆಷ್ಟು ಅದ್ಭುತ ಸೃಷ್ಟಿ…
  ಕಂಡಸ್ಟೂ ಕೇಳಿದಸ್ಟೂ ಮುಗಿಯದ ಸುಂದರ ಸೃಷ್ಟಿ…
  ಅರ್ಥವಾಗದಂತಿದ್ದರೂ ಅರ್ಥವಾಗಬಹುದಾದ, ಅರ್ಥವಾಗಿದೆ ಅಂದುಕೊಂಡರೂ ಅರ್ಥವಾಗದಂತಿರುವ ವಿಚಿತ್ರ ಸೃಷ್ಟಿ…!!!

  [Reply]

 3. Madhu Dodderi

  ಬೆಳಕೇ ಮೂಲವಾದ ‘ಭಾ’ರತೀಯರು ಕತ್ತಲಾಶ್ರಯಿಸಿದ್ದು ಹೇಗೆ?

  [Reply]

  Sri Sri Reply:

  ಮಧು,
  ಭಾರತೀಯರೆಂದೂ ಬೆಳಕನ್ನು ಮರೆಯಲಾರರು..
  But indians……??????

  [Reply]

  bharatheesha Reply:

  tricky answer.
  that doesn’t manifest the reality.

  [Reply]

  shobha lakshmi Reply:

  tricky answer ಆಗುದು ಹೇಗೆ? ಸರಿಯದ ಉತ್ತರ..ನಾನು ಭಾರತೀಯ ಎ೦ದು ಒಪ್ಪಿಕೊ೦ಡವನು ಬೆಳಕನ್ನು ಮರೆಯಲಾರರು,,ಭಾರತದಲ್ಲಿದ್ದು Indians ಅ೦ದು ಕೊಳ್ಳುವವರು ,,ಪಾಶ್ಛಿಮಾತ್ಯರ ಅ೦ಧಾನುಕರಣೆ ಮಾಡುವವ ತನ್ನೊಳಗೆ ಸಹಜವಾಗಿ ಬೆಳಗುವ ಬೆಳಕಿಗೆ ಮುಸುಕು ಹಾಕಿರುವುದು ಎ೦ದು ಅರ್ಥೈಸಿಕೊಳ್ಳಬಹುದಲ್ಲವೇ???

  [Reply]

  Sri Sri Reply:

  ಭಾರತೀಶಾ..
  ಭಾರತೀಯರೆಂದೂ ಬೆಳಕನ್ನು ಮರೆಯಲಾರರು..ಇದು reality..
  ಇಂಡಿಯನ್ನರು ಎಂದೂ ಬೆಳಕನ್ನು ನೆನೆಯಲಾರರು..ಇದೂ reality’ಯೇ..!!

  [Reply]

  guru ranjan Reply:

  belaku haagu jyotjiya swaroopa onde aadaroo bhinna … kathalinalli belakannu maretharoo saha bharathiyaru jyotiyannu mareyuvudilla mattu mareyabaaradu.. ondu jyothiyinda mattondu jyotiya belegisutta prakaashmanavaagisabahudallave???
  shrigalinda matra saadya… ulidavarella nimitta matra….

  [Reply]

 4. Madhu Dodderi

  ಕೆಲವು ಬರಹಗಳನ್ನು ವಿಮರ್ಶಿಸಬಹುದು, ಕೆಲವನ್ನು ಮೆಚ್ಚಿ ಶ್ಲಾಘಿಸಬಹುದು..
  ಆದರೆ ಕೆಲವು ಲೇಖನಗಳಿಗೆ ಪ್ರತಿಯಾಗಿ ಮನಸ್ಸಿನಲ್ಲಿ ಉದ್ಭವಿಸುವುದು ಅಚ್ಚರಿಯ ಉದ್ಘಾರಗಳು ಮಾತ್ರ…

  ಈ ಲೇಖನ ಓದಿದಾಗ ‘ಓಹ್’ ಎಂದಷ್ಟೇ ಅನಿಸಿದ್ದು…
  ಮರೆತಿದ್ದನ್ನು ನೆನಪಿಸಿದ್ದಕ್ಕಾ?
  ನೆನಪಿದ್ದಿದ್ದು ಓದಿದಕೂಡಲೆ ಮರೆತಂತಾಗಿದ್ದಕ್ಕಾ?
  ಅಥವಾ ನೆನಹು, ಮರೆವುಗಳ ಗೊಜಲಿನ ನಡುವೆ ಹೊಸಹೊಳಹ ಮೂಡಿಸಿದ್ದಕ್ಕಾ?

  ‘ಭಾ’ ಸ್ವರೂಪರಿಗೆ ಶರಣು..

  [Reply]

 5. beleyurvenu

  hare rama

  this arictle super writng by sree samshtan

  [Reply]

 6. Dr Shamaraj Kidoor

  ಹರೇ ರಾಮ
  ನಮಗ೦ತೂ ಗುರುಗಳೇ ದಾರಿ ತೋರಿಸುವ ಬೆಳಕು…ಬೆಳಕೇ ಈ ಜೀವರಾಶಿಯ ಚೈತನ್ಯದ ಮೂಲ.

  [Reply]

 7. Suma Nadahalli

  ಶ್ರೀ ಭಾರತಿಗಳ ಮಾರ್ಗದರ್ಶನದಲ್ಲಿ ಭಾರತೀಯರು (ನಾವು),  ಈ   ದಿವ್ಯ ಬೆಳಕಿನ ಮಾಸದಲ್ಲಿ  ಜ್ಞಾನದ/ಆತ್ಮದ ಬೆಳಕು ನಿತ್ಯವೂ ಹೊರಗೂ, ಒಳಗೂ ಗೋಚರವಾಗಿ  ನಿಜವಾದ ಭಾ-ರತರು ಆಗುವಂತೆ ಆಗಲಿ.

  ಬೆಳಕಿನಲ್ಲೇ ಪ್ರಾರಂಭ ಮತ್ತು ಬೆಳಕಿನಲ್ಲೇ ಅಂತ್ಯ!!!!!!!!!!!!!!!!!!
  (ಗ್ರಹಗಳು  – ಚಿತ್ರದಲ್ಲಿರುವಂತೆ)

  [Reply]

 8. Shilpa Purohith

  ನಮಃ ಸವಿತ್ರೇ ಜಗದೇಕ  ಚಕ್ಶುಷೇ 
  ಜಗತ್ ಪ್ರಸೂತಿ ಸ್ಥಿತಿ ನಾಶ ಹೇತವೇ |
  ತ್ರಯೀಮಯಾಯ ತ್ರಿಗುಣಾತ್ಮ ಧಾರಿಣೇ
  ನಮೋ ವಿರಿಂಚಿ ನಾರಾಯಣ ಶಂಕರಾತ್ಮನೇ ||

  ತನ್ನ ಕಿರಣ ಮಾತ್ರದಿಂದಲೇ  ಜಗತ್ತನ್ನು ಪೋಷಿಸಿ ಪಾಲಿಸುತ್ತಿರ್ವ ಸೂರ್ಯ ನಾರಾಯಣ ,ತನ್ನ ಕರ್ತವ್ಯವನ್ನು ನಿಷ್ಪಲಾ ಪೆಕ್ಷೆಯಿಂದ ಮಾಡುವ ಸೂರ್ಯ ನಾರಾಯಣ , ತ್ರೀಮೂರ್ತಿ ಸ್ವರೂಪನು ಆಗಿರುವ ಪ್ರಭು
  ಬೆಳಕು ಕೊಡುವ ಎಲ್ಲ ವಸ್ತುಗಳಿಗೂ  ಕಾರಣ  ನಾಗಿರುವ  ಓ  ಸೂರ್ಯ ದೇವ  ನೀನೆ ಆತ್ಮನು .. ನಿನಗೆ ನಮೋ ನಮಃ ||

  [Reply]

 9. jagadisha sharma

  ಬೆಳಕಿನ ಬೆರಗ ಬಿಚ್ಚಿ ಬಿತ್ತರಿಸಿದ, ಬದುಕ ಬಾಂದಳಕೆ ಭವಿಯ ಎತ್ತರಿಸಿದ, ಭುವಿಯ ಭಾವವನು ಅನುಭವಕಾಗಿ ಎಚ್ಚರಿಸಿದ, ಭುವಿ-ದಿವಿಯ ಅನುಬಂಧ ಬೆರೆಸಿದ ಭವ್ಯ ಬರಹ. ಬಾಗಿದ ಶಿರದ ನಮ್ರ ನಮನ.

  [Reply]

  Raghavendra Narayana Reply:

  ಇ೦ದು ಓದಿದೆ. ಅತ್ಯದ್ಭುತ

  [Reply]

 10. ashwini

  ಎಷ್ಟು ಬಾರಿ ಓದಿದರೂ ಮತ್ತೆ ಮತ್ತೆ ಮತ್ತೆ ಓದಬೇಕಿನ್ನಿಸುತ್ತಿದೆ…
  ಆ ಬೆಳಕಿನ ಬಗ್ಗೆ ಕೇಳಿದ್ದಸ್ಟಕ್ಕೇ ಹೀಗಾದರೆ ಇನ್ನು ಅದನ್ನು ಕಂಡುಂಡವರು ಅದಕ್ಕಾಗಿ ಎಲ್ಲವನ್ನೂ ಪರಿತ್ಯಾಗ ಮಾಡುವುದರಲ್ಲಿ ಆಶ್ಚರ್ಯವೇನಿದೆ??

  [Reply]

 11. lakshmi

  harerama..thamasoma jyothirgamaya…

  [Reply]

 12. Lakshmi Bangaradka

  ಹರೇರಾಮ..
  ಅ೦ತರ೦ಗದಲ್ಲಿ ಸದಾ ಬೆಳಗುತ್ತಿರುವ ಬೆಳಕಿಗೆ , ಕವಿದ ಮೋಡವನ್ನು ಸರಿಸಿ ಬೆಳಗಿಸುತ್ತಿರುವ ಗುರುದೇವರಿಗೆ ಶರಣೂ ಶರಣೂ….

  [Reply]

 13. Jayashree Yajnesh

  ಹರೇ ರಾಮ,

  ಬೆಳಕಿನ ಬಗ್ಗೆ ಹೇಳಿ ನಮ್ಮಲ್ಲಿ ಒಂದು ರೀತಿಯ ಬೆಳಕನ್ನು ಹೆಚ್ಚಿಸಿದ ಶಕ್ತಿಗೆ ನಮನಪುಷ್ಪಗಳು

  [Reply]

  guru ranjan Reply:

  arive belaku…!!!!!!!

  [Reply]

 14. vishwa

  ಮನದ ಅಂಧಕಾರವ ತೆಗೆದು ಮಲಿನ ಹೃದಯವ ತೊಳೆದು ಮನುಜ ಮಹಥ್ವವ ತಿಳಿಸಿದ ಗುರುವಿಗೆ ನಮನಗಳು ನೀವೇ ನಮ್ಮ ಬದುಕಿನ ಬೆಳಕು ….ನೀವೇ ನಮ್ಮ ಬದುಕಿಗೆ ಉಸಿರು ..ಹರೇರಾಮ

  [Reply]

 15. aruna shyam

  ಬಾಬೆ

  [Reply]

  lakshmi Reply:

  ಬಾಬೆ=ಬಾ ಬೆಳಕೆ

  [Reply]

 16. Shaila Ramachandra

  Hare Raama, atmada a belakina kaanuva pari????

  [Reply]

  Sri Sri Reply:

  ‘ಅಗ್ನಿಮಿಚ್ಛಧ್ವಂ ಭಾರತಾಃ’

  [Reply]

  lakshmi Reply:

  ಗುರುದೇವಾ..ಇದನ್ನು ಸ್ವಲ್ಪ ವಿವರಿಸಬಹುದೇ?…

  [Reply]

  Sri Sri Reply:

  ಈ ವೇದ-ವಾಕ್ಯದ ಅರ್ಥ ; ‘ಭಾರತರೆ ! ನಿಮ್ಮೊಳಗೆ ಬೆಳಗುವ ಅಗ್ನಿಯನ್ನು ಬಯಸಿ’ ಎಂಬುದಾಗಿ..
  ಆಸೆಯನ್ನು ದುಃಖಗಳ ಮೂಲ ಎಂದು ಹೇಳುತ್ತಾರೆ..ಆದರೆ ಅದು ಸಾಧನೆ’ಯ ಮೂಲ ಆಗಲೂ ಸಾಧ್ಯವಿದೆ..
  ಆಸೆ ಸಣ್ಣ-ಸಣ್ಣ ವಸ್ತುಗಳ ಕುರಿತು ಇದ್ದಾಗ ದುಃಖಗಳ ಮೂಲ..ಒಳಗಿನ ಬೆಳಕಿನ ಕುರಿತು ಇದ್ದರೆ ಅದೇ ಸಾಧನೆಯ ಮೂಲವಾಗುತ್ತದೆ..
  ಬೆಳಕನ್ನು ಎಲ್ಲಿಂದಲೋ ಎರವಲು ತರಬೇಕಾಗಿಲ್ಲ..ಅದು ನಮ್ಮೊಳಗೇ ಅನಂತವಾಗಿ ಇದೆ..ನಾವದನ್ನು ಪಡೆದುಕೊಳ್ಳುವುದು ಮಾತ್ರ ಬಾಕಿ..
  ಪಡೆದುಕೊಳ್ಳುವ ಪ್ರಕ್ರಿಯೆಯ ಪ್ರಾರಂಭ ಬಯಕೆಯಿಂದಲೇ..!! ಬಯಸಲೇನಡ್ಡಿ..??

  [Reply]

 17. satyanarayna sharma.

  Guru endare belaku ennuttare,thilidavaru.
  namma arivannu aavarisida marevina arive duuraagabeku guruvininda.
  belakina batte needi nijada batte thorisuvudu adee.
  aadare vyasaru “kaalasya balamethaavat vipareethaarthadarshanam” emba maathige drashtaantharaada ee namma vipreethadarshanada anthya yaavaga?

  [Reply]

  Sri Sri Reply:

  ऐश्वर्यमदमत्तस्य दारिद्र्यं परमान्जनम्..

  यस्यानुग्रहमिच्छामि तस्य वित्तं हराम्यहम् ..

  [Reply]

 18. lakshmi

  ಗುರು ದೇವಾ?ಆತ್ಮ ವಿಸ್ಮ್ರುತಿ ಎ೦ದರೆ ಏನೆ೦ದು ಅರ್ಥೈಸಿ ಕೊಳ್ಳಬಹುದು? ಇದರ ಅರ್ಥ ವ್ಯಾಪ್ತಿ ನಮ್ಮ ಮಟ್ಟಿಗೆ ಹೇಗೆ??

  [Reply]

  govindaraj k Reply:

  ಹರೇ ರಾಮ,ಬೆಳಕಿನ ಬೆಳಕು ತೋರಿ ಹರಸಿದಿರಿ.ಸದಾ ಬೆಳಕವುದು, ಕತ್ತಲವುದೆಂದು ಅರಿಯುವ ಬೆಳಕ ಮನಕೆ ನೀಡಿ ಹರಸಿ

  [Reply]

  Sri Sri Reply:

  ತನ್ನನ್ನುಳಿದು ಅನ್ಯವನ್ನು ಮರೆತರೆ ಅದೇ ಮೋಕ್ಷ…

  ತನ್ನನ್ನೇ ಮರೆತರೆ ಅದೇ ಸಂಸಾರ.. ಆತ್ಮ-ವಿಸ್ಮೃತಿ…

  [Reply]

  Raghavendra Narayana Reply:

  ಪರಮ ಸ್ವಾರ್ಥದ “ನಾನು” ಇ೦ದ, ಪರಮ ಪಾವನದ “ನಾನು” ಆಗಬೇಕಿದೆ,
  ದಿಶೆಯಲ್ಲಿ ಆತ್ಮನಶೆಯಲ್ಲಿ ನಡೆಯಬೇಕಿದೆ (ತೂರಾಡದ, ತೊದಲದ, ತೊಳಲಾಡದ ಆತ್ಮನಶೆ, ಸಾತ್ವಿಕ ನಶೆ, ಚಿತ್ತಸತ್ತ್ವನಶೆ, ಬೇರೆಲ್ಲವನ್ನು ಮರೆಸಿ ತನ್ನನ್ನು ನೆನಪಿಸುವ.. ),
  ನಕ್ಷೆ ತೋರಿಸಿ, ದಿಶೆಯೆಡೆಗೆ ಸಾಕ್ಷಿಯಾಗಿ ಗುರುಚರಣ ಚಲಿಸಬೇಕಿದೆ, ದಾರಿ ಕಳೆಯಲು ಗುರುಕಥೆ ಬೇಕಿದೆ..
  (ಹರೇರಾಮ (ಬ್ಲಾಗ್ಸ್) ಗುರುಗಳೇ – ದಿಕ್ಕು ತಪ್ಪಿದ ಪಕ್ಷಿಗಳು)
  .
  ಶ್ರೀ ಗುರುಭ್ಯೋ ನಮಃ

  [Reply]

 19. Raghavendra Narayana Upadhya

  ಸೆಳೆತ ಪದ ನಮ್ಮನ್ನು ಸೆಳೆದಿದೆ… ಜ್ಞಾನದ ಹಸಿವಿಗೆ ಇಲ್ಲಿ ಅನ್ನ ಸಿಗುವಂತೆ ತೋರುತ್ತಿದೆ… ಗುರುಗಳಿಗೆ ನಮಸ್ತೆ… ಈ ಹಸಿವು ಹೆಚ್ಚಾಗಲಿ, ಗುರುಗಳಿಂದ ಸಿಗುವ ಅನ್ನ ಸದಾ ರುಚಿಯಾಗಿರಲಿ

  [Reply]

 20. Shantha Bhat

  Hare raama
  “Karunaalu baa belake, Musukidee mabbinali – kai hididu nadesennanu…”
  Sadaa nimma belake namma daari deepavagali…

  [Reply]

 21. ಭಾಲಕೃಷ್ಣ. ಡಿ

  ಹರೇ ರಾಮ:
  ಭರತ ಖಂಡದ ಮಹತ್ವ್ವವ ತಿಳಿಸಿದ ಶ್ರೀ ಗುರುಗಳಿಗೆ ಹ್ರುದಯಪೂರ್ವಕ ಪ್ರಣಾಮಗಳು. ಶ್ರೀ ಗುರುಗಳ ಹಿತನುಡಿಗಳಿಂದ (ಬೆಳಕು) ಈ ನಾಡೆಲ್ಲಿ ಅಂಧಕಾರವು ನಾಶವಾಗಲಿ…..

  ಹರೇ ರಾಮ

  [Reply]

 22. ಭಾಲಕೃಷ್ಣ. ಡಿ

  ಹರೇ ರಾಮ:
  ಭರತ ಖಂಡದ ಮಹತ್ವ್ವವ ತಿಳಿಸಿದ ಶ್ರೀ ಗುರುಗಳಿಗೆ ಹ್ರುದಯಪೂರ್ವಕ ಪ್ರಣಾಮಗಳು. ಶ್ರೀ ಗುರುಗಳ ಹಿತನುಡಿಗಳಿಂದ (ಬೆಳಕು) ಈ ನಾಡಲ್ಲಿ ಅಂಧಕಾರವು ನಾಶವಾಗಲಿ…..

  ಹರೇ ರಾಮ

  [Reply]

 23. Ishwara Bhat Elliadka

  ಹರೇ ರಾಮ,
  ನಮ್ಮ ಧಾರ್ಮಿಕ ನಂಬಿಕೆಯಂತೆ ಬೆಳಕು ಭಗವಂತನ ಸ್ವರೂಪ. ವೈಜ್ಞಾನಿಕವಾಗಿ ಬೆಳಕು ಶಕ್ತಿಯ ಒಂದು ರೂಪ.
  ಬೆಳಕಿನ ಜೊತೆ ಉಷ್ಣತೆ , ವಿಕಿರಣ ಶೀಲತೆಯಂತೆ ಇದರ ಶಕ್ತಿಗಳೂ ಕಾಣದ ರೂಪದದಲ್ಲಿವೆ. ಬೆಳಕನ್ನು ಅರಸಿ ಹೋದಾಗ ಮೂಲದಲ್ಲಿನ ಉಷ್ನತೆಯೂ ಅರಿವಾಗುತ್ತದೆ.
  ಮಾನವನ ಶಕ್ತಿ ಸಾಮರ್ಥ್ಯಗಳನ್ನು ಹೊಂದಿ ಆತ ಬೆಳಕನ್ನು ಬಳಸಿಕೊಳ್ಳ ಬಲ್ಲ.
  ಪಶು ಪಕ್ಷಿಗಳು ನಾವು ಕಾಣಲಾರದಷ್ಟು ಮಂದ ಬೆಳಕಿನಲ್ಲೂ ವಸ್ತುಗಳನ್ನು ಗುರುತಿಸಬಲ್ಲವು.
  ಪ್ರಭೆ ಹೆಚ್ಚಾದಾಗ ಅದನ್ನು ನೋಡುವ ಶಕ್ತಿಯೂ ನಮಗಿಲ್ಲ. ಅತೀ ಹೆಚ್ಚಿನ ಬೆಳಕು ನಮ್ಮ ಸುತ್ತು ಮುತ್ತಲಿದ್ದರೂ ನಾವು ಏನನ್ನೋ ಗುರುತಿಸಲಾರೆವು.
  ಬೆಳಕು ಕಡಿಮೆಯಾದಾಗ ತಮ್ಮ ಪ್ರಭಾವಲಯದಿಂದ ಬೆಳಕು ನೀಡಿ,ಬೆಳಕು ಹೆಚ್ಚಾದಾಗ ಅಭಯ ಹಸ್ತದಿಂದ ಮರೆಮಾಡಿ ಸುತ್ತುಮುತ್ತಲ ನಿಜ ಪ್ರಪಂಚ ಅರಿವು ನೀಡುತ್ತಾ ಮುನ್ನಡೆಸುತ್ತಿರುವ ಮಹಾವ್ಯಕ್ತಿಗಳೇ ಸಮಾಜಕ್ಕೆ ಗುರುಗಳು , ದಾರ್ಶನಿಕರು ,ಮಾರ್ಗದರ್ಶಕರು.

  [Reply]

 24. Raghava Hegde

  Ajnaana thimiraandasya jnaanaanjana shalakaya chakshurunmeelitham yena thasmai shri gurave namaha,

  [Reply]

 25. dattu bhat

  ಬೆಳಕಿನ ಸೆಳೆತವೋ………………….?????????????????????
  ಅಥವಾ, ಮೂಲದ ಸ್ಮರಣೆಯಿಂದ ಉಂಟಾದ ಮೂಲವನ್ನು ಸೇರುವ ತವಕವೋ……….?????????????

  [Reply]

 26. ಹರಸುವವರ ಹಾರೈಕೆಯ ‘ಹರೇ ರಾಮ’ ….! « Oppanna : ಒಪ್ಪಣ್ಣನ ಒಪ್ಪಂಗೊ

  […] ವಾರ ದೀಪ-ಬೆಣಚ್ಚಿನ ಬಗ್ಗೆ ಬರದ್ದವಡ: ಇಲ್ಲಿದ್ದು ಓದಿ, ಅನಿಸಿಕೆ ಹೇಳಿ : […]

 27. ಸತ್ಯನಾರಾಯಣ ಬಟ್ರಕೋಡಿ

  ಮನದ ಕೊಳಕನ್ನು ಕಳೆದು, ಬಾಳಿಗೆ ಬೆಳಕಾಗಿ ದಾರಿತೋರುವ ಗುರುವಿಗೆ ನಮನ. ಹರೇರಾಮ

  [Reply]

 28. Vishnu S Bhat

  Deepagre Vasate Laksmi,
  Deepa madhye Saraswaty,
  Deepa mule sthite Goury
  Deepa jyotirnamostute.
  Embante a navu belaguva deepada mula uddesha nammaloge kaledu hoda belaka huduku emba namma shrigala vakya adbhuta!!!!!!!!!!!
  Atma jyothy darshanakke beku belaku idu namma bharatiyara sanskrutiyalli adagide emba nimma hemmeya matige naviu sharanu.
  Guruvina gulamanaguva tanaka doreyadanna mukuty
  Shri gurubhyo guru padukabhyo namaha….

  [Reply]

 29. gshegde

  harerama..thamasoma jyothirgamaya…
  we are living in Bharata…….

  [Reply]

Leave a Reply

Highslide for Wordpress Plugin