LIVE Channel

ಇತ್ತೀಚಿನ ಪ್ರತಿಕ್ರಿಯೆಗಳು

Newsletter

ಆಧ್ಯಾತ್ಮಕ್ಕಿಂತ ದೊಡ್ಡ ವ್ಯಾಪಾರವುಂಟೇ?

Author: ; Published On: ಗುರುವಾರ, ದಶಂಬರ 3rd, 2009;

Switch to language: ಕನ್ನಡ | English | हिंदी         Shortlink:

|| ಹರೇರಾಮ ||

ಬಂಡವಾಳ ಚಿಕ್ಕದು, ಲಾಭ ದೊಡ್ಡದು.
ಇದು ತಾನೇ ಆದರ್ಶ ವ್ಯಾಪಾರ?
ಅಧ್ಯಾತ್ಮವೇನೂ ಇದಕ್ಕೆ ಹೊರತಲ್ಲ.  ಹಾಗೆ ನೋಡಿದರೆ, ವ್ಯಾಪಾರದ ವ್ಯಾಖ್ಯಾನ ಚೆನ್ನಾಗಿ ಹೊಂದಿಕೊಳ್ಳುವುದು ಅಧ್ಯಾತ್ಮಕ್ಕೇ ಸರಿ..!
ನಂಬಲಸಾಧ್ಯವೆನಿಸುತ್ತದೆಯೇ?
ನಂಬಲೇಬೇಕಾದ ಬದುಕಿನ ಪರಮಸತ್ಯವಿದು.

ಸಣ್ಣವರಲ್ಲಿ ಸಣ್ಣವರು ಯಾರು?

ಅದು, ’ನಾನೇ’ (ಎನಗಿಂತ ಕಿರಿಯರಿಲ್ಲ…)
ದೊಡ್ಡವರಲ್ಲಿ ದೊಡ್ಡವರು ಯಾರು?
ದೇವರು’.

ಆಲಿಂಗನದ ಮೂಲಕ ಇದೋ ನನ್ನನ್ನೇ ನಾನು ನಿನಗೆ ಕೊಟ್ಟೆ - ಶ್ರೀರಾಮ

ಆಲಿಂಗನದ ಮೂಲಕ ಇದೋ ನನ್ನನ್ನೇ ನಾನು ನಿನಗೆ ಕೊಟ್ಟೆ - ಶ್ರೀರಾಮ

ವಿಶ್ವ ಬ್ರಹ್ಮಾಂಡವನ್ನೇ ನಿರ್ಮಿಸುವ, ನಡೆಸುವ, ಉಪಸಂಹರಿಸುವ, ಮಹಾ ಶಕ್ತಿಯಲ್ಲವೇ ಅದು?

ದೇಹದ ಆಳು ’ನಾನು’.
ವಿಶ್ವವನ್ನು ಆಳುವವನು ಭಗವಂತ..!

ಇಲ್ಲೊಂದು ವ್ಯಾಪಾರ ಮಾಡೋಣವೇ?
ನಮ್ಮನ್ನು ಕೊಟ್ಟು ಈಶ್ವರನನ್ನೇ ಪಡೆದುಕೊಳ್ಳೋಣವೇ?
ನಮ್ಮನ್ನು ನಾವು ಈಶ್ವರನಿಗೆ ಸಮರ್ಪಿಸಿದರೆ – ಆತ್ಮ ನಿವೇದನೆ ಮಾಡಿಕೊಂಡರೆ, ಆತ ತನ್ನನ್ನೇ ನಮಗೆ ಕೊಡುವನು.
(ಚಿನ್ನವ ಕೊಡನೇ ರನ್ನವ ಕೊಡನೇ ತನ್ನನೆ ಕೊಡುವನೆ ಬಾರೆ ಸಖಿ… – ಕವಿವಾಣಿ)

ಬ್ರಹಾಂಡದಲ್ಲಿಯೇ ಅತ್ಯಧಿಕ ಲಾಭದ ವ್ಯಾಪಾರವಿದು.
ಹೂಡಿಕೆ (Investment) ಬ್ರಹ್ಮಾಂಡದಲ್ಲಿಯೇ ಚಿಕ್ಕದು!! ಲಾಭವಾದರೂ (Profit) ಬ್ರಹ್ಮಾಂಡದಲ್ಲಿಯೆ ದೊಡ್ಡದು!!!
ಇದರ ಹೆಸರೇ “ಶರಣಾಗತಿ“.

ಲಾಭದ ಬಗೆಗೆ  ಇನ್ನೂ ಸಂದೇಹವುಳಿದಿದ್ದರೆ ಈ ಕೆಳಗಿನ ಕೋಷ್ಟಕ ನೋಡಿ:

ಹೂಡಿಕೆ
(Investment)

ಲಾಭ
(Profit)

ಜೀವ

ಈಶ್ವರ

ಅಜ್ಞ

ಸರ್ವಜ್ಞ

ದುಃಖಿ

ಆನಂದಮಯ

ಮಿಲನ

ಪರಿಶುದ್ಧ

ಸೀಮಿತ

ಸರ್ವವ್ಯಾಪಿ

ಅಶಕ್ತ ಸರ್ವಶಕ್ತ
ನಶ್ವರ ಶಾಶ್ವತ ಈಶ್ವರ

ಆಂಜನೇಯ ಮಾಡಿದ ವ್ಯಾಪಾರ ನೋಡಿ:
ಪಂಪಾತೀರದಲ್ಲಿ ಸೀತೆಯನ್ನರಸುತ್ತಾ ಬಂದ ರಾಮನನ್ನು ಎಂದು ಕಂಡನೋ, ಅಂದೇ ಅವನಡಿಗೆ ಮುಡಿಯನ್ನು ಹಚ್ಚಿ ತನ್ನನ್ನು ತಾನೇ ಸಮರ್ಪಿಸಿಕೊಂಡವನು ಆಂಜನೇಯ..
ಮತ್ತೆ ದಕ್ಷಿಣದಿಕ್ಕನ್ನೆಲ್ಲಾ ಕ್ರಮಿಸಿ, ಸಮುದ್ರವನ್ನೇ ಲಂಘಿಸಿ, ಏಕಾಂಗಿಯಾಗಿ ರಾಕ್ಷಸ ನಗರಿಯನ್ನು ತುಡುಕಿ, ಸೀತೆಯನ್ನು ಹುಡುಕಿ ಶುಭವಾರ್ತೆಯೊಡನೆ ರಾಮನ ಬಳಿಗೆ ಬಂದಾಗ…..
ಹನುಮನಿಗೆ ಬಹುಮಾನ ಕೊಡಬೇಕೆಂದು ಅತ್ತ – ಇತ್ತ ನೋಡಿದನಂತೆ ರಾಮ!
ಕೊಡಲೇನಿದೆ ಕಾಡಾಡಿಯ ಬಳಿಯಲ್ಲಿ!
ಏನನ್ನು ಕೊಟ್ಟರೆ ತಾನೇ ಹನುಮನ ಸೇವೆಗೆ ಅದು ಸರಿಮಿಗಿಲೆನಿಸೀತು?

ಚಿಂತಿಸಿದ ರಾಮ ಮತ್ತೆ ಹನುಮನ ಬಳಿ ಸಾರಿ ಬಿಗಿದಪ್ಪಿ ಹೇಳಿದನಂತೆ, “ಆಲಿಂಗನದ ಮೂಲಕ ಇದೋ ನನ್ನನ್ನೇ ನಾನು ನಿನಗೆ ಕೊಟ್ಟೆ“!

ಇದರಿಂದ ಮಿಗಿಲಾದ ಲಾಭವುಂಟೇ? ಇದು ’ಅನಂತಲಾಭ’ವಲ್ಲವೇ?

ಲಾಭದ ಲೋಭಕ್ಕಿಂತ ದೊಡ್ಡ ತಪ್ಪಿಲ್ಲ…
ಅನಂತಲಾಭದ ಲೋಭಕ್ಕಿಂತ ದೊಡ್ಡ ಸರಿ ಬೇರೆ ಯಾವುದೂ ಇಲ್ಲ..!

ಇನ್ನೂ ಚಿಲ್ಲರೆ ವ್ಯಾಪಾರದ ಮಾತೇಕೇ?  ಬನ್ನಿ…
ಇಂಥಾ ವ್ಯಾಪಾರ ಆರಂಭ ಮಾಡೋಣ,  ಅನಂತಲಾಭದ ಲೋಭಿಗಳಾಗೋಣ..!

53 Responses to ಆಧ್ಯಾತ್ಮಕ್ಕಿಂತ ದೊಡ್ಡ ವ್ಯಾಪಾರವುಂಟೇ?

 1. shilpa purohith

  ಶರಣಾಗತಿ ಜ್ಞಾನ ಮಾರ್ಗಿಗಳಾದ ಶಂಕರರ ಮತಕ್ಕೆ ವಿರುದ್ದ ವಾಗಿದೆ ಅಲ್ಲವೇ ಗುರುದೇವ !!!

  [Reply]

  Sri Samsthana Reply:

  ಯಾವುದೂ ಯಾವುದಕ್ಕೂ ವಿರುದ್ಧವಲ್ಲ.. ಬಿಂದು ಹೋಗಿ ಸಿಂಧುವಿನಲ್ಲಿ ಶರಣಾದರೆ ಉಳಿಯುವುದು ಅದ್ವೈತವೇ ಅಲ್ಲವೇ..?

  [Reply]

  shilpa purohith Reply:

  “ಪ್ರಪನ್ನಾದನ್ಯೇಶಾಮ್ ನ ದಿಶತಿ ಮುಕುಂದೋ ನಿಜ ಪದಂ”..

  [Reply]

  Raghavendra Narayana Reply:

  Common misconception. Is there anything called “Shankara Matha” which is seperate from anything mentioned in Upanishat, Veda, Geetha – by Krishna?

  [Reply]

  shilpa purohith Reply:

  @ Raghavendra Narayana………… there are mainly 3 matha’s or also called as Sampradayas they are

  1)Advaitha— Shankaracharya

  2)Dvaitha—Madvacharya

  3)Vishistadvaitha–Ramanuja charaya

  On Geetha,Upanishads, Vedas So many commentaries are there in alla principles “Advaitha, Dvaitha and Vishistadvaitha”

  Here wht i told Shankara matha means ADVAITHA only else that is Advaitha matha or Advaitha Sampradaya

  [Reply]

  Raghavendra Narayana Reply:

  “ಶರಣಾಗತಿ ಜ್ಞಾನ ಮಾರ್ಗಿಗಳಾದ ಶಂಕರರ ಮತಕ್ಕೆ ವಿರುದ್ದ ವಾಗಿದೆ” – For my information sake. Is there any reference in Shankara Bhashya or Shankara Charitha where Shankaracharya opposed “ಶರಣಾಗತಿ”? Without “ಜ್ಞಾನ” can “ಶರಣಾಗತಿ” happen?

  [Reply]

  Mahesha Elliadka Reply:

  < < @ Shilpa Purohit, ಶರಣಾಗತಿ ಜ್ಞಾನ ಮಾರ್ಗಿಗಳಾದ ಶಂಕರರ ಮತಕ್ಕೆ ವಿರುದ್ದ ವಾಗಿದೆ ಅಲ್ಲವೇ ಗುರುದೇವ !!! >>

  ಭಾರತೀಯರು ಶರಣಾಗಲೆಂದೇ ಅದೆಷ್ಟೋ ದೇವಾಲಯಗಳನ್ನು ಜೀರ್ಣೋದ್ಧಾರಗೊಳಿಸಿ, ಭಾರತದಾದ್ಯಂತ ದೈವೀ ಶಕ್ತಿಯನ್ನು ಪುನಃಪ್ರತಿಷ್ಠಾಪಿಸಿ, ಮಠ, ಮಂದಿರಗಳನ್ನು ಸ್ಥಾಪಿಸಿ, ಗುರು-ಸಂತರನ್ನು ದೀಕ್ಷೆಕೊಟ್ಟು ಕುಳ್ಳಿರಿಸಿ ಸನಾತನ ಸಂಸ್ಕೃತಿಯನ್ನು ಉದ್ಧರಿಸಲಿಲ್ಲವೇ ಅದ್ವೈತದ ಶಂಕರರು?
  ಇಂದಿಗೂ ನಾವು ಅವುಗಳಿಗೆ ಶರಣಾಗುತ್ತಿಲ್ಲವೇ?
  ಶರಣಾಗತಿ ಅದ್ವೈತಕ್ಕೆ ವಿರೋಧಿಯಾಗಲು ಅದು ಹೇಗೆ ಸಾಧ್ಯ?

  [Reply]

 2. vdaithota

  This is not a small investment My Lord, ofcourse this looks so small to you, but looks so hard for a person having many drawbacks in the mind…:(

  [Reply]

 3. Madhu Dodderi

  ಗುರುದೇವಾ,

  ನಮಗೆ ಈ ವ್ಯಾಪಾರ ಗೀಪಾರ ತಿಳಿಯದು…ಛೌಕಾಸಿ-ಪೌಕಾಸಿ ಮಾಡಿ ಗೊತ್ತಿಲ್ಲ…ವ್ಯಾಪಾರದ ನಯ-ನಾಜುಕೂ…ಉಹುಂ.. ಜನ್ಮಕ್ಕೆ ಬಂದಿಲ್ಲ..
  ಅಸಲಿಗೆ ಮಾರಬೇಕದ್ದೇನು, ಹೇಗೆ ಅಂತ ಗೊತ್ತಿದ್ದರೆ ತಾನೆ…
  ಸಂತೆಯ ಬೆಡಗು-ಬಿನ್ನಾಣಕ್ಕೆ, ಬೆಂಡು-ಬತ್ತಾಸಿಗೆ ಮೈಮರೆತು ಬಂದದ್ಯಾಕೊ.. ನೆನಪಾಗ್ತ ಇಲ್ಲ..

  ನಮ್ಮ ಸರಕಿನ ಗುಣಮಟ್ಟ ನಿಮಗೆ ತಿಳಿದೇ ಇದೆ…
  ಸರಕಿನ ಸಂಸ್ಕರಣೆಯಲ್ಲಂತೂ ನೀವು ಕುಶಲಿಗಳು…
  ನಮಗೆ ಗೊತ್ತು ..ಸಾಹುಕಾರನಿಗೂ ನಿಮಗೂ ಗಳಸ್ಯ-ಕಂಟಸ್ಯ..

  ಈ ಲೋಕಸಂತೆಯ ಗೋಳು-ಗೋಜಲಿನಲ್ಲಿ… ಒಂದಿಷ್ಟು ನೆಮ್ಮದಿಗೆ ಕಾರಣವಿಷ್ಟೇ…ಮಧ್ಯವರ್ತಿಗಳಾಗಿ ನೀವಿದ್ದಿರೆಂಬ ನಂಬಿಕೆ…
  ವ್ಯಾಪಾರ ಶೀಘ್ರವಾಗಿ ಮುಗಿಸಿಕಳಿಸಿಬಿಡಿ… ನಾಕಾಣೆ ಹೆಚ್ಚು-ಕಮ್ಮಿ…

  [Reply]

  Sri Samsthana Reply:

  ನಾ-ಕಾಣೆ’ಯಲ್ಲ ಮಧು..ಅದು ” ನಾ-ಕಂಡೆ “!!

  [Reply]

  Krishnamurthy Hegde Reply:

  ತುಂಬಾ ಸುಂದರ ಸಂಭಾಷಣೆ!

  [Reply]

  Shreekant Hegde Reply:

  @ Madhu Dodderi:
  ಎಂಥ ಕವಿತ್ವ ಇದ್ದು ! ಮಾಣಿ ನಿನ್ನಲ್ಲಿ !!

  [Reply]

  Madhu Dodderi Reply:

  ಗುರುಕೃಪಾ ಮೂಕಂ ಕರೋತಿ ವಾಚಾಲಂ…

  [Reply]

  nandaja haregoppa Reply:

  madu yannannu partner modikollo neenu manege bandaaga avalakki mosaru kodthi

  [Reply]

  Madhu Dodderi Reply:

  ನಂದಜಕ್ಕಾ, ಯಾರಿಗೆ ಅವಲಕ್ಕಿ ಮೊಸರು ಕೊಡದು ಗೊತ್ತಿದ್ದೋ ಅವರಿಗೆ partners ಎಲ್ಲ ಬ್ಯಾಡ…ಒಬ್ಬರೆ ನೇರವಾಗಿ ಮಾಡ್ಳಕ್ಕು…. ಸಿಕ್ಕಾಪಟ್ಟೆ ಲಾಭ ಇದ್ದು ಅದ್ರಲ್ಲಿ…. (REF: ಸುಧಾಮ) :)

  [Reply]

  Raghavendra Narayana Reply:

  Madhu, Adbhutha, Mahdumaya

  [Reply]

  Sri Samsthana Reply:

  ಮಧು,
  ನಿನ್ನ ಈ ಕಾಮೆಂಟಿಗೆ ಬೆಲೆ ಕಟ್ಟುವುದಿದ್ದರೆ ರತ್ನಗಳಲ್ಲಿಯೇ ಕಟ್ಟಬೇಕು..!!

  [Reply]

  Madhu Dodderi Reply:

  ಧನ್ಯೋಸ್ಮಿ…

  [Reply]

  seetharama bhat Reply:

  Hi- Ma dhu

  Madhuva Heeri Doddava Naagi Eridhanu- Namma Madhu – Swalpa nammadoo irali.
  Nammadu -Nimmadaadaga Sigalaaradhe Nemmadi.

  [Reply]

  Anuradha Parvathi Reply:

  madhu tumba chennagi de.. nanage nanna manasilallirodannu eshtu chennagi bareyokoo barolla, matadokoo barolla

  [Reply]

  Raghava Hegde Reply:

  ವಾ ವಾ ಅದ್ಬುತ ಮದು ಅಣ್ನ

  [Reply]

 4. Shreekant Hegde

  ಗುರುಗಳೇ……………
  ಇದು ಅದೇ ವ್ಯಾಪಾರ ಅಲ್ದಾ ? ’ ವಿ-ಮುಕ್ತಿಯ ಆ -ಪಾರ ’ ಕಾಂಬುದು.

  [Reply]

  Sri Samsthana Reply:

  ಹ್ಞಾ..

  [Reply]

 5. Krishnamurthy Hegde

  ಗುರುಗಳೇ,

  ಹಿ೦ದಿನ ವರ್ಷದ ಚಾತುರ್ಮಾಸ್ಯದಲ್ಲಿ ನೀವು ಧ್ಯಾನ ತರಗತಿಗಳಲ್ಲಿ ನೀಡಿದ ಪ್ರವಚನದಲ್ಲೂ ಇದನ್ನೇ ಹೇಳಿದ್ದಿರಿ. ಅದರಿ೦ದ ಪ್ರಭಾವಿತನಾಗಿ ನಾನೂ ಕೂಡ ಭಕ್ತಿ-ಪ್ರೇಮದ business ಶುರುಮಾಡಿದ್ದೆ. ಅನ೦ತಲಾಭವ೦ತೂ ದೂರವೇನೋ – ಆದರೆ ಇಲ್ಲಿಯ ತನಕ loss ಅ೦ತೂ ಇಲ್ಲ; bonus, dividend ಗಳೆಲ್ಲಾ ಚೆನ್ನಾಗೇ ಬರ್ತಾ ಇದೆ. ಆದ್ದರಿಂದ business ನಿಲ್ಲಿಸುವ ವಿಚಾರ ಇಲ್ಲ – ಏನಿದ್ದರೂ ಬೆಳೆಸುವುದೇ… ಒಳ್ಳೆ ಲಾಭವಿರುವ business-secret ತಿಳಿಸಿಕೋಟ್ಟಿದ್ದಕ್ಕೆ ನಿಮಗೆ ಹಾಗು ನನ್ನ ಜೀವನದಲ್ಲಿ ಬಂದ ಇನ್ನು ಕೆಲವು ಸಂತ/ಮಹಾಪುರುಷರಿಗೆ ಸದಾ ಋಣಿ. ನಿಮ್ಮ ಹಾರೈಕೆ ನಮ್ಮೆಲ್ಲರ ಮೇಲೆ ಸದಾ ಇರಲಿ.

  [Reply]

 6. ಜಗದೀಶ್ B. R.

  ಹರೇ ರಾಮ..
  ಅಪಾರ ಲಾಭವಿರುವ ಈ ವ್ಯಾಪಾರ ತುಂಬಾ ಸುಂದರವಾಗಿದೆ!!

  [Reply]

 7. Shaila Ramachandra

  ಹರೇ ರಾಮ, ರಾಮನ ಹತ್ತಿರ ಹೇಗೆ ಹೋಗಲೀ ?

  [Reply]

 8. Raghavendra Narayana

  ಗುರುಗಳೇ, ದಯವಿಟ್ಟು ತಿಳಿಸಿ
  ೧. ದೇವರಲ್ಲಿ ಸೇವಕನಾಗಿ ಮುಳುಗಿ ಮರೆಯುವುದಕ್ಕಿ೦ತ ಸ್ನೇಹಿತನಾಗಿ ಬೆರೆತು ನಲಿಯುವುದು ಚ೦ದ ಅಲ್ಲವೇ?
  ೨. “ನಾನು ಈ ದೇಹ” ಇ೦ದ “ನಾನು ಪರಮಾತ್ಮ”, ಇದರ ಮದ್ಯೆ, “ನಾನು” ಹೇಗೆ ಎಷ್ಟು ಯಾವ ಯಾವ ಹ೦ತದಲ್ಲಿ ವಿಸ್ತಾರಗೊಳ್ಳುತ್ತದೆ?
  ೩. ಭಕ್ತ ದೇವರಲ್ಲಿ ಬೆರೆಯುವ ತವಕದ ಗತಿ ಹೆಚ್ಚೋ ಅಥವಾ ದೇವರು ಭಕ್ತನಲ್ಲಿ ಬೆರೆಯುವ ತವಕ ಹೆಚ್ಚೋ?

  [Reply]

  Sri Samsthana Reply:

  ೧,ಸಾಪೇಕ್ಷ.. ಆಂಜನೇಯ ದಾಸ್ಯದಲ್ಲಿ ಧನ್ಯನಾದರೆ ಸುಗ್ರೀವ ಸಖ್ಯದಲ್ಲಿ ಸುಖ ಕಂಡ..

  ೨,ಶ್ರೀರಾಮನಲ್ಲಿ ಆಂಜನೇಯನ ನುಡಿಗಳು:
  “ದೇಹಬುದ್ಧ್ಯಾ ತು ದಾಸೋಹಂ ಜೀವಬುದ್ಧ್ಯಾ ತ್ವದಂಶಕಃ |
  ಆತ್ಮಬುಧ್ಯಾ ತ್ವಮೇವಾಹಂ ಇತಿ ಮೇ ನಿಶ್ಚಿತಾ ಮತಿ:||
  ಹೇ ಪ್ರಭು!! ದೇಹದ ದೃಷ್ಟಿಯಿಂದ ನಿನ್ನ ದಾಸ ನಾನು.
  ಜೀವದದೃಷ್ಟಿಯಿಂದ ನೋಡಿದರೆ ನಿನ್ನ ಅಂಶನಾನು.
  ಆತ್ಮದ ದೃಷ್ಟಿ ಯಿಂದಲಾದರೋ ನೀನೆ ನಾನು ನಾನೇ ನೀನು..
  ಇದು ನನ್ನ ದೃಢನಿಶ್ಚಯ”

  ೩,ದೇವರ ತವಕವೇ ಹೆಚ್ಚು..ನಮ್ಮ ಮನಸ್ಸು ಈಗೀಗ ಆ ಕಡೆಗೆ ಹರಿಯುತ್ತಿದೆ,ದೇವರು ನಮಗಾಗಿ ಕಾಯುತ್ತಾ ಅನಂತ ಕಾಲವಾಯಿತು..!!

  [Reply]

  Raghavendra Narayana Reply:

  ಅನ೦ತ ಧನ್ಯವಾದಗಳು ಗುರುಗಳೇ.. ಹೊಸ ವಿಚಾರಗಳು, ಮೆದಳಿನ ಮನಸಿನ ಜಡ ಬಿಡುವ೦ತೆ ಅನುಭವ ಆಗುತ್ತಿದೆ

  [Reply]

  vdaithota Reply:

  Guruve, adeke devanige ;bhakthanalli bereuva tavaka..??!!! Manushya devara bhaktahanaguvudu, agadiruvudu kooda avanicheyante allave…???!!!!!!!

  [Reply]

  shobha lakshmi Reply:

  ಗುರುದೇವಾ? ಎಲ್ಲರೂ ದೇವರ ಜತೆ ಬೆರೆತು ಕೂತುಕೊ೦ಡರೆ ಲೋಕವ್ಯಾಪಾರ ನಿ೦ತು ಹೋಗಲ್ಲವೇ??? ಅವ ಇಛ್ಛಿಸಿ ದಾಗ ಅವನೇ ನಮ್ಮನ್ನು ಹತ್ತಿರ ಕರೆತ್ತ ಅಲ್ಲದಾ??

  [Reply]

 9. shreelatha nettar

  hare raama…

  [Reply]

 10. shobha lakshmi

  ಗುರುಗಳೇ….ವ್ಯಾಪಾರ ಸುರು ಆಗಿದೆ….ಇಲ್ಲಿ೦ದ…ಅವ (ಭಗವ೦ತ) ಈ ಮಾಲು ಒಪ್ಪಿಕೊಳ್ಳಲು ಗುರುಗಳ ಶಿಫಾರಸು ಬೇಕ೦ತೆ …ಗುರುದೇವ….ದೈನ್ಯ ದಿ೦ದ ಬೇಡುವೆ…..ನಮ್ಮ ಪರವಾಗಿ ಶಿಫಾರಸು ಮಾಡಿರೆ೦ದು……

  [Reply]

  Sri Samsthana Reply:

  ಒಳಿತಾಗಲಮ್ಮಾ….

  [Reply]

 11. dattu bhat

  ಉಪನಿಷತ್ತಿನ ಸರಳರೂಪ !!!!!
  ವ್ಯಾಪಾರ ಸಾಕೆನಿಸಿ, ವ್ಯಾಪಾರ ನಿಲ್ಲಿಸಲು ಮಾಡುವ ವ್ಯಾಪಾರ!!!!!!

  [Reply]

 12. Raghavendra Narayana

  1. Where is this business running? Where are the outlets? Where is the warehouse?

  2. Is it running in well known market places? OR in some corner which nobody knows?

  3. Where are the advertisements?

  4. Where are the hoardings? Beautiful / Handsome models?

  5. Where is the Owner? How can I have face to face interaction? One on One interaction? Why this Owner always hides?

  6. Where is the “Contact Us” information? Where is the Customer support?

  7. Who are the consumers? Are they really doing well?

  8. When is the discount sales? When is the off-season?

  9. This business mostly deals with “Internal Happiness”? Who knows whether we are getting it or not? How can I leave something that I am getting and experiencing with “Indriya” and die for something which is “Indriya Agochara”? How can we trust this business?

  10. This business looks tricky?????

  [Reply]

 13. nandaja haregoppa

  hare raama

  naavu vyapara madalikkende bhuvige bandirabahudu,istu varushagalu

  yello kaleduhogiddevu,eega haagu heegu bandavala hondisikondu nimma

  industryalli hoodalu bandiddeve,namma bandavala dwigunavagi adara

  labhadinda namagu ,namma mundinavarigu,haagu samajakkuu upayogavagali

  yendu harasuvira gurugale

  [Reply]

 14. Mahesha Elliadka

  ಹರೇ ರಾಮ ಗುರುಗಳೇ,
  ಒಳ್ಳೆಯ ಮಾಹಿತಿಯ ಪೂರಣ!

  ಒಂದು ಪ್ರಶ್ನೆ:
  ಶರಣಾಗತಿಗೂ – ಅದ್ವೈತಕ್ಕೂ ವಿರೋಧವೇ?

  [Reply]

  Sri Samsthana Reply:

  ಎಚ್ಚರಿಕೆಯಿಂದ ಗಮನಿಸಿ..
  ಲೇಖನದ ತಾತ್ಪರ್ಯವಿರುವುದೇ ಅದ್ವೈತದಲ್ಲಿ.. ಲೇಖನದಲ್ಲಿ ಉಲ್ಲೇಖವಾದ ವ್ಯಾಪಾರದಲ್ಲಿ ಕಳೆದುಕೊಳ್ಳುವುದು ಜೀವಭಾವವನ್ನು ಮತ್ತು ಪಡೆದುಕೊಳ್ಳುವುದು ಬ್ರಹ್ಮ ಭಾವವನ್ನು. ಇದು ಅದ್ವೈತ ಸಿದ್ಧಾಂತಕ್ಕೆ ವಿರೋಧವಾಗುವುದು ಹೇಗೆ ?

  ಮೋಕ್ಷವನ್ನು ತಲುಪಲು ದಾರಿಗಳು ಹಲವಾರು. ಅದ್ವೈತವಾದರೋ ಮೋಕ್ಷವನ್ನು ತಲುಪುವ ರಾಜಮಾರ್ಗ.. ಮಿಕ್ಕೆಲ್ಲಾ ಮಾರ್ಗಗಳು ಬಂದು ಸೇರುವುದು ರಾಜಮಾರ್ಗವನ್ನೇ.. ರಾಜಮಾರ್ಗಕ್ಕೂ ಬೇರೆ ಮಾರ್ಗಗಳಿಗೂ ವಿರೋಧವೇನೂ ಇಲ್ಲ. ಶರಣಾಗತಿಯು ಪರ್ಯಾವಸನವಾಗುವುದು ಅದ್ವೈತದಲ್ಲೇ.

  ಶ್ರೀರಾಮನಲ್ಲಿ ಆಂಜನೇಯನ ನುಡಿಗಳು:
  “ದೇಹಬುದ್ಧ್ಯಾ ತು ದಾಸೋಹಂ ಜೀವಬುದ್ಧ್ಯಾ ತ್ವದಂಶಕಃ |
  ಆತ್ಮಬುಧ್ಯಾ ತ್ವಮೇವಾಹಂ ಇತಿ ಮೇ ನಿಶ್ಚಿತಾ ಮತಿ:||

  ಹೇ ಪ್ರಭು!! ದೇಹದ ದೃಷ್ಟಿಯಿಂದ ನಿನ್ನ ದಾಸ ನಾನು.
  ಜೀವದದೃಷ್ಟಿಯಿಂದ ನೋಡಿದರೆ ನಿನ್ನ ಅಂಶನಾನು.
  ಆತ್ಮದ ದೃಷ್ಟಿ ಯಿಂದಲಾದರೋ ನೀನೆ ನಾನು ನಾನೇ ನೀನು..
  ಇದು ನನ್ನ ದೃಢನಿಶ್ಚಯ”

  ಇಲ್ಲಿ ಒಂದೇ ವ್ಯಕ್ತಿಯಲ್ಲಿ ದಾಸಭಾವ,ಅಂಶಭಾವ,ಅದ್ವೈತಭಾವ ಮೂರೂ ಇರುವುದನ್ನು ಗಮನಿಸಬಹುದು ವಿರೂಧವೆನೂ ಇಲ್ಲ. ಮುಂದೆಮುಂದೆ ಹೋದಂತೆ.. ಆಳಕ್ಕಿಳಿದಂತೆ ಅದ್ವೈತಭಾವಕ್ಕೆ ಹತ್ತಿರವಾಗುತ್ತೇವೆ.
  ಪರ್ಯವಸಾನ ಅದ್ವೈತದಲ್ಲೇ..!!

  [Reply]

  shobha lakshmi Reply:

  ಗುರುದೇವ ಎನಗಿದು ತು೦ಬ ಇಷ್ಟ ಆತು…ಶ್ರೀರಾಮನಲ್ಲಿ ಆ೦ಜನೇಯ ಹೇಳಿದ್ದು….ಹನುಮ೦ತನ ಹ್ರುದಯ ಕನ್ನಡಿ ಹಾ೦ಗೆ ಶುಧ್ಧ .ಹೂವಿನ೦ತೆ ಮ್ರುದು ಇಕ್ಕಲ್ಲದಾ?? ಅದಕ್ಕೆ ಅವ೦ಗೆ ಹಾ೦ಗೆ ಕ೦ಡದು ಆಗಿಕ್ಕಲ್ಲದಾ???

  [Reply]

  Raghavendra Narayana Reply:

  “ಪರ್ಯವಸಾನ ಅದ್ವೈತದಲ್ಲೇ..!!”
  ———————————–
  .
  ಕೋಟಿ ಕೋಟಿ ಜೀವರಾಶಿಗಳು, ಕೋಟಿ ಕೋಟಿ ಅಚರ ವಸ್ತುಗಳು, ಯಾವುದನ್ನು “ನಾ” ಎ೦ದು ಯಾವುದನ್ನು “ನೀ” ಎ೦ದು ಕರೆಯಲಿ.
  ಕೋಟಿ ಕೋಟಿ ಚೆ೦ತನೆಗಳು, ಕೋಟಿ ಕೋಟಿ ಅಗೋಚರ ವಸ್ತುಗಳು, ಯಾವುದನ್ನು “ನಾ” ಎ೦ದು ಯಾವುದನ್ನು “ನೀ” ಎ೦ದು ಕರೆಯಲಿ.
  ಪ೦ಚಭೂತಗಳು, ಕೋಟಿ ಕೋಟಿ ದೇಹಗಳು, ಯಾವುದನ್ನು “ನಾ” ಎ೦ದು ಯಾವುದನ್ನು “ನೀ” ಎ೦ದು ಕರೆಯಲಿ.
  ಸಾಗರ ಸರೋವರ ಗಿರಿ ಸಾಸಿರ ಸಸಿಗಳು, ಕೋಟಿ ಕೋಟಿ ವೃಕ್ಷಗಳು, ಕೋಟಿ ಕೋಟಿ ಬೀಜಗಳು, ಯಾವುದನ್ನು “ನಾ” ಎ೦ದು ಯಾವುದನ್ನು “ನೀ” ಎ೦ದು ಕರೆಯಲಿ.
  ಕೋಟಿ ಕೋಟಿ ನಾದಗಳು, ಕೇಳುವವನಾರ್, ಕೋಳಿಸುತ್ತಲಿರುವವನಾರ್,
  ಕಾಣುವವನಾರ್, ಕಾಣಿಸುವವನಾರ್, ಅ೦ತರ್ಯದ ಬ್ರಹ್ಮಾ೦ಡಕ್ಕೆ ಸೃಷ್ಟಿಕರ್ತನಾರ್,
  ಮಾತೆ ಇತ್ತ ಹನಿ ಹನಿ ರಕ್ತದಲ್ಲಿ ಹರಿ ಹರಿ ನರನಾಡಿಗಳಲ್ಲಿ ಗುಡಿ ಗುಡಿಯ ಗರ್ಭದಲ್ಲಿ ಇರುವ ಚೈತನ್ಯವಸ್ತು, ಯಾವುದನ್ನು “ನಾ” ಎ೦ದು ಯಾವುದನ್ನು “ನೀ” ಎ೦ದು ಕರೆಯಲಿ.
  ಮಾಯೆಯನ್ನು ಸೃಷ್ಟಿಸಿದವನಾರ್, ಅ೦ಟದೇ ಆಟವನ್ನು ರಾಜನ೦ತೆ ನೋಡುತ್ತಿರುವವನಾರ್,
  .
  ಚೈತನ್ಯ ನದಿಯ ಬದಿ ಬೊಗಸೆಯಲ್ಲಿ ನೀರನ್ನು ಹಿಡಿದು ನಿ೦ತು ಚಿ೦ತೆಯಲ್ಲಿರುವವನನ್ನು ನಾ ಎನ್ನಲೆ ನೀ ಎನ್ನಲೆ. ತಲೆ ಎತ್ತಿದರು ಬಾಗಿದರು ಪಾದ.
  ಪರಮಾತ್ಮ ನಿನ್ನಡಿಯ ಸತ್ರದಲ್ಲಿ ಕೋಟಿ ಕೋಟಿ ಉತ್ಸವಗಳು, ಅಪಾರ ಪ್ರೇಮವೆ೦ಬುದು ನಿನ್ನಡಿಗೆ ಮೂಡಲು ಶುರುವಾದ ನ೦ತರ ಆರ೦ಭವಾಗುವ ನಡಿಗೆಗೆ ನಾ ಎ೦ಬುದು ನೀ ಎ೦ಬುದು ಇದೆಯೆ.
  .
  ಶ್ರೀ ಗುರುಭ್ಯೋ ನಮಃ

  [Reply]

  Jayashree Neeramoole Reply:

  ಗುರುಚರಣಗಳಿಗೆ ಅನಂತ ಪ್ರಣಾಮಗಳು.

  “ಹೇ ಪ್ರಭು!! ದೇಹದ ದೃಷ್ಟಿಯಿಂದ ನಿನ್ನ ದಾಸ ನಾನು,
  ಜೀವದ ದೃಷ್ಟಿಯಿಂದ ನಿನ್ನ ಅಂಶ ನಾನು,
  ಆತ್ಮದ ದ್ರುಷ್ಟಿಯಿಂದಲಾದರೋ ನೀನೇ ನಾನು ನಾನೇ ನೀನು”

  [Reply]

 15. Raghavendra Narayana

  Adbhutha.

  [Reply]

 16. Anuradha Parvathi

  Gurugale, adbutha…ee vyapara naanu maadtata eddene.. haagoo phala noo sikkide.

  [Reply]

 17. Raghavendra Narayana

  ಜ್ಞಾನವಿಲ್ಲದ ಭಕ್ತಿ ಇದೆಯೆ..
  ಭಕ್ತನಲ್ಲದ ಜ್ಞಾನಿ ಯಾರು..

  ಭಕ್ತಿಯಿ೦ದ ಜ್ಞಾನ, ಜ್ಞಾನದಿ೦ದ ಭಕ್ತಿ ವೃದ್ದಿಸುವುದಿಲ್ಲವೇ..
  ಭಕ್ತಿಯನ್ನು ಜ್ಞಾನವನ್ನು ಬೇರೆ ಮಾಡಿದ ಭೂಪನ್ಯಾರೋ, ಕೂಪ ಮ೦ಡೂಕನೆ..

  [Reply]

 18. venu gopal

  ಹರೇ ರಾಮ
  ಒಳ್ಳೆಯ ಮಾಹಿತಿಯ ಪೂರಣ!

  [Reply]

 19. Arrun Hegde

  ಭಕ್ತರು ಕೂಗಿ ಕರೆದಾಗ ಅವರೆಡೆಗೆ ಓಡಿಬರುವ ಕರುಣಾಳು ಭಕ್ತನ ಭಕ್ತಿಗೆ ಮೆಚ್ಚಿ ಆಲಿಂಗಿಸಿದ…
  ನಾರಾಯಣ ನರನಾಗಿ ಬಂದು ನರ ನಾರಾಯಣನಾಗುವ ರಹಸ್ಯವ ತಿಳಿಸಿದ..ಜಯ ಶ್ರೀರಾಮ ||

  [Reply]

 20. Raghavendra Narayana

  Arun, good comment / expression.

  [Reply]

 21. Raghavendra Narayana

  ಪರಮ ಲಾಭವ ಗಳಿಸೆ ಜೀವಿತವ್ಯಾಪಾರ- |

  ಕಿರಬೇಕು ಮೂಲಧನವದು ತತ್ತ್ವದೃಷ್ಟಿ ||

  ಚಿರಲಾಭ ಜಗದಾತ್ಮ ಲೀಲಾವಿಹಾರಸುಖ |

  ಧರೆಯ ಸುಖ ಮೇಲಬಡ್ಡಿ – ಮ೦ಕುತಿಮ್ಮ ||

  [Reply]

 22. Jayashree Neeramoole

  ಗುರುಚರಣಗಳಿಗೆ ಅನಂತ ಪ್ರಣಾಮಗಳು.

  “ಇನ್ನೂ ಚಿಲ್ಲರೆ ವ್ಯಾಪಾರದ ಮಾತೇಕೆ…?”
  “ಕಣ್ಣೆದುರಿಗಿರುವ ರಾಮನ ಜೊತೆ ವ್ಯಾಪಾರ ಆರಂಭ ಮಾಡೋಣ… ಅನಂತಲಾಭದ ಲೋಭಿಗಳಾಗೋಣ ….”

  [Reply]

 23. ರಾಘವೇ೦ದ್ರ ನಾರಾಯಣ

  ವ್ಯಾಪಾರ ಅರಿಯೆವು, ಲಾಭವ ಅರಿಯೆವು, ಗಳಿಸಿದ ಪುಣ್ಯವನ್ನು ಉಪಯೋಗಿಸಲರಿಯೆವು..
  ಚಿನ್ನದ ಬಿಸ್ಕೇಟ್ ನೀಡಿ ಮಣ್ಣಿನ ಬಿಸ್ಕೇಟ್ ಕೊ೦ಡ೦ತೆ ನಮ್ಮೆಲ್ಲ ಶ್ರಮವು ವ್ಯರ್ಥವಾಗುತ್ತಿರುವುದು..
  ಗುರುವೇ, ಅನ೦ತನ ಲಾಭಕ್ಕೆ ಲಾಭಿ ಇರುವುದೇ…???
  ಗುರುಗಳೇ ಲೋಭಿಯಾಗಿರುವೆವು ಉದ್ದರಿಸುವ ಮಾರ್ಗ ತಿಳಿಸಿ ತೋರಿಸಿ ನಡೆಸು..
  <>
  .
  ಶ್ರೀ ಗುರುಭ್ಯೋ ನಮಃ

  [Reply]

 24. Jayashree Neeramoole

  ಗುರುಚರಣಗಳಿಗೆ ಅನಂತ ಪ್ರಣಾಮಗಳು…

  ವ್ಯಾಪಾರ ಆರಂಭ ಮಾಡಿ, ಸರಿಯಾಗಿ invest ಮಾಡದೆ ಲಾಭದ ಲೋಭಿಯಾಗಿ ಒಮ್ಮೆ ಸೋತಾಯಿತು. ಈ ವ್ಯಾಪಾರದ ವಿಶೇಷತೆಯೆಂದರೆ ಸೋತರೂ ಅದೂ ಲಾಭವೇ… ವ್ಯಾಪಾರಕ್ಕೆ ತೊಡಗುವ ಮನಸ್ಸು ಒಮ್ಮೆ ಬಂತೆಂದರೆ ಮತ್ತೆ ಹಿಂತಿರುಗುವ ಪ್ರಶ್ನೆಯೇ ಇಲ್ಲ…ಅದು ನಿರಂತರ ಲಾಭದೆಡೆಗೆ ಮುನ್ನಡೆಸುತ್ತದೆ. “ಕುಸ್ತಿ ಪಟು ಸ್ಪರ್ಧೆಯಲ್ಲಿ ಜಯಗಳಿಸದಿದ್ದರೂ ಅವನಿಗೆ ಸಿಗುವ ಆರೋಗ್ಯ ಲಾಭವೇ”. ಮತ್ತೆ ಹೊಸತಾಗಿ ವ್ಯಾಪಾರ ಆರಂಭ ಮಾಡ ಬೇಕಾಗಿದೆ.ಈ ಸಲ ಸಂಪೂರ್ಣ invest ಮಾಡಿ ಸಂಪೂರ್ಣ ಲಾಭ ಪಡೆಯಲೇ ಬೇಕು…

  [Reply]

 25. chetana-Australia.

  Guruchranakke ananta namaskaragalu,
  Grubrahmma guruvishnu gurudevo maheswara guru sakshat parabrahmma tasmayyshri guravennamaha. eemantradinda suru agi ide mantradinda nammaneli diana mugitu, yako manassige agaga kirikiri. addralli nemmadi sigudu devara smarane. stimita illada manassinda nove vinaha sukha ille heludu satya adare idella bhava bandana kalachakandu devaratra hopudu sulaballa nannatavake …gurudeva nimma maragadrashanadalli nannata alparu ello ondu dina mukati padelakku heludonde nambike..ade darideepa. sada nimmakrape irali hucchukudare otada manassa bhagavantanatta valisule nimma daye,krape irali heludonde tamma padagalalli korike. Gurubyonamaha.

  [Reply]

Leave a Reply

Highslide for Wordpress Plugin