LIVE Channel

ಇತ್ತೀಚಿನ ಪ್ರತಿಕ್ರಿಯೆಗಳು

Newsletter

ನಾನು – ನಾವು – ನಾಡು

Author: ; Published On: ರವಿವಾರ, ನವೆಂಬರ 1st, 2009;

Switch to language: ಕನ್ನಡ | English | हिंदी         Shortlink:

ಇದು ವ್ಯಕ್ತಿ ಸಂತೋಷವಲ್ಲ.

ಇದು ಮನೆಯ ಸಂಭ್ರಮವಲ್ಲ.

ಇದು ಊರ ಹಬ್ಬವಲ್ಲ.

ಇದು ರಾಜ್ಯೋತ್ಸವ

ಸಮಸ್ತ ಕನ್ನಡ ನಾಡಿನ ಮಹೋತ್ಸವ

ಇದಕ್ಕೆ ಆತ್ಮ ವಿಸ್ತಾರವೆಂದು ಹೆಸರು.

ಶರೀರ ಒಂದಕ್ಕೇ ಆತ್ಮ ಸೀಮಿತವಾಗಿದ್ದರೆ ಕೇವಲ ಒಂದು ಶರೀರದ ಸುಖ ದುಖಃಗಳು ಮಾತ್ರವೇ ವೇದ್ಯವಾಗುತ್ತದೆ.

ಆತ್ಮ ಒಂದು ಶರೀರದ ಸೀಮೆಯನ್ನು ಮೀರಿದರೆ…

ಅಪ್ಪ ಅಮ್ಮ ಅಣ್ಣತಮ್ಮಂದಿರಲ್ಲಿ ವಿಸ್ತರಿಸಿದರೆ…

“ನಾನು”ವಿನ ಸ್ಥಾನದಲ್ಲಿ “ನಾವು” ಪ್ರತಿಷ್ಠೆಗೊಂಡರೆ…

ನನ್ನವರ ಸುಖಃ ದುಖಃಗಳು ನನ್ನಲ್ಲಿ ಪ್ರತಿಫಲಿತವಾಗುತ್ತದೆ.

ಆಗ…

ನನ್ನವರ ಸುಖಃ ನನ್ನ ಮುಖವನ್ನರಳಿಸುತ್ತದೆ.

ನನ್ನವರ ದುಖಃ ನನ್ನಲ್ಲಿ ಕಣ್ಣೀರಾಗಿ ಹರಿಯುತ್ತದೆ.

ನಮ್ಮ ಆತ್ಮ ವಿಸ್ತರಿಸಬೇಕು.

ಈ ಧರೆಯಲ್ಲಿ ನಮ್ಮ ಒಡನಾಡಿಗಳಾಗಲು ಅದೆಷ್ಟು ಜೀವರಾಶಿಗಳನ್ನು ಭಗವಂತ ಕಳುಹಿಸಿಕೊಟ್ಟಿದ್ದಾನೆ!!!

ಅವರೆಲ್ಲರಲ್ಲಿ ನಮ್ಮ ಆತ್ಮ ಹಬ್ಬಿ ಹರಡಿದರೆ…

ಸುತ್ತ ಮುತ್ತಲಿನ ಎಲ್ಲರ ಸುಖಃ ದುಖಃಗಳು ನಮ್ಮೆದೆಯ ಮೀಟುವಂತಿದ್ದರೆ…

ಅದೇ ಅದ್ವೈತವಲ್ಲವೇ?

ವ್ಯಸನೇಷು ಮನುಷ್ಯಾಣಾಂ ಭೃಶಂ ಭವತಿ ದುಖಿತಃ |
ಉತ್ಸವೇ ಪರಿಸಂಪ್ರಾಪ್ತೇ
ಪಿತೇವ ಪರಿತುಷ್ಯತಿ ||– ವಾಲ್ಮೀಕಿ ರಾಮಾಯಣ

ತನ್ನ ಪ್ರಜೆಗಳ ದುಖಃಕ್ಕೆ ಕಂಬನಿ ಮಿಡಿಯುವ, ಅವರ ಸಂತಸದಲ್ಲಿ ಹೆತ್ತ ತಂದೆಯಂತೆ ಹಿರಿ ಹಿರಿ ಹಿಗ್ಗುವ ಶ್ರೀರಾಮ…
ವನವಾಸದ ಪಥದಲ್ಲಿ ತನ್ನೆಡೆಗೆ ಸಾಗಿ ಬಂದ ಶ್ರೀರಾಮನ ಹಸಿವಿಂಗಿಸಲು ಗುಹ ಔತಣವೀಯ ಬಂದರೆ…
ತನ್ನನ್ನು ಹೊತ್ತು ತಂದ ಕುದುರೆಗಳ ಹೊಟ್ಟೆ ತುಂಬಿಸಿ ಅದರಲ್ಲೇ ತೃಪ್ತನಾದ ಶ್ರೀರಾಮ…

ದ್ರೌಪದಿಯ ಅಕ್ಷಯ ಪಾತ್ರೆಯ ಒಂದಗಳು ಶ್ರೀಕೃಷ್ಣನ ಉದರ ಸೇರಿದರೆ ದೂರ್ವಾಸರು ಮತ್ತು ಅವರ ಶಿಷ್ಯರಿಗೆ ತೇಗು ಬರಬೇಕೇ?…

ನಾನು ನಾವಾಗಲಿ.

ನಾವು ನಾಡಾಗಲಿ.

ನಾನು – ನಾವು – ನಾಡುಗಳ ಪದೋನ್ನತಿಯೇ ನಿಜವಾದ ರಾಜ್ಯೋತ್ಸವ.

10 Responses to ನಾನು – ನಾವು – ನಾಡು

 1. lakshmi

  nijavaada artha idu..eega gothaayithu..

  [Reply]

 2. karthikshrikar

   A  wonderful treatise on  Rama Rajya- the individual, the community and the  state become  one- indeed the ideal  illustration of     Advytha   -ONENESS – of  ALL
  sharada jayagovind

  [Reply]

 3. shilpa purohith

  ವ್ಯಸನೇಷು ಮನುಷ್ಯಾಣಾಂ ಭೃಶಂಭವತಿ ದುಖಿತಃ |
  ಉತ್ಸವೇ ಪರಿಸಂಪ್ರಾಪ್ತೇ ಪಿತೇವ ಪರಿತುಷ್ಯತಿ ||
  – ವಾಲ್ಮೀಕಿ ರಾಮಾಯಣ
   
  RaamaayaNa dalli bahaLashtu prakshipta bhaagavide antha aadhunika  Teeka Kaarara vaada…..
  adakke naavu “hamsa ksheera ” nyayadante  olleyadannu mantrave grahisabeku allve guru deva..!!

  [Reply]

 4. sannivaasa

  hare rama…..
  preethiyannu preethiyinda gellalu preethipoorvakavaada sandesha……

  vandanegalu…..

  [Reply]

 5. Raghavendra Narayana

  ತಾಯಿ ಭುವನೇಶ್ವರಿಯ ಕಂದಮ್ಮಗಳ ಹೃದಯದಿಂದ ಕಸ್ತೂರಿ ಪುಷ್ಪದ ಗಂಗೆಯೇ ಹರಿದು ಮಹಾ ತಾಯಿ ದುರ್ಗೆಯ ಮೇಲೆ ಬೀಳಲಿ.. ಅದನ್ನು ತಡೆಯಲು, ಶಿವನ ಜಟೆ ಇಲ್ಲದಾಗಲಿ.. ದುರ್ಗೆಯ ಯೋಗಮುದ್ರೆ ಭಗ್ನಗೊಂಡು ಒಮ್ಮೆ ನಸು ನಗಲಿ.. ಹಬ್ಬವಾಗಲಿ.. ಸರ್ವೋದಯವಾಗಲಿ.. ಕನ್ನಡದ ಮನಸುಗಳಿಗೆ ಶುಭವಾಗಲಿ..

  [Reply]

 6. Raghavendra Narayana

  ನಿನ್ನ ಗರ್ಭ ನೀ ಇತ್ತಿರುವ ಜನ್ಮ ನಿತ್ಯ, ಸತ್ಯ ಸೌ೦ದರ್ಯ. ಸತ್ವ ಉಳಿದಿದ್ದರೆ ಬಹುಪಾಲು ನಿನ್ನ ಗರ್ಭಕ್ಕೆ ಸಲ್ಲುತ್ತದೆ ತಾಯಿ ಭುವನೇಶ್ವರಿ.
  .
  ಶ್ರೀ ಗುರುಭ್ಯೋ ನಮಃ

  [Reply]

 7. ರಾಘವೇ೦ದ್ರ ನಾರಾಯಣ

  ತಾಯೇ, ಸುಖ ಸ೦ತೋಷ ಸೌ೦ದರ್ಯ ನಿನ್ನಿ೦ದ, ಆನ೦ದ ನೆಮ್ಮದಿ ನಿನ್ನಿ೦ದ, ಆಧ್ಯಾತ್ಮ ಅದ್ವೈತ ನಿನ್ನಿ೦ದ,
  ಭಾವ ಭಾಷೆ ನಿನ್ನಿ೦ದ, ನಾ ನಿನ್ನಿ೦ದ.. ಕನ್ನಡ ಕನ್ನಡಿ ನಮಗೆ, ಸೌ೦ದರ್ಯ ನಮ್ಮಿ೦ದ ಅದ್ವೈತದಿ೦ದ..
  ~~ ಹರೇರಾಮ (ಬ್ಲಾಗ್ಸ್) ಗುರುಗಳೇ — ಭುವನೇಶ್ವರಿ ~~

  [Reply]

  Jayashree Neeramoole Reply:

  ಪ್ರತಿಕ್ರಿಯೆ ನೀಡುವ ಹೊಸ ಶೈಲಿ ಉತ್ತಮವಾಗಿದೆ. ಹರೇ ರಾಮ…

  [Reply]

  ರಾಘವೇ೦ದ್ರ ನಾರಾಯಣ Reply:

  ಹರೇರಾಮ
  ಶ್ರೀ ಗುರುಭ್ಯೋ ನಮಃ

  [Reply]

 8. Jayashree Neeramoole

  ಗುರುಚರಣಗಳಿಗೆ ಅನಂತ ಪ್ರಣಾಮಗಳು…

  ಅಮ್ಮ… ನಿನ್ನ ಕಾವಿನಿಂದ ಮೊಟ್ಟೆಯೊಡೆದು ಹೊರ ಬಂದ ಮರಿ ಹಕ್ಕಿ ನಾನು…
  ನಾ ಹಾರಲು ಪ್ರಯತ್ನಿಸದೆ ಸುಮ್ಮನಿದ್ದರೂ….
  ಪ್ರಯತ್ನಿಸಿ ಕೆಳಗೆ ಬಿದ್ದರೂ…
  ನೀ ನೊಂದು ಕೊಳ್ಳುವೆ…
  ಅಮ್ಮ…ಅಮ್ಮ… ಅಮ್ಮ…

  [Reply]

Leave a Reply

Highslide for Wordpress Plugin