ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ:
ಭಯಗೊಂಡನು ಸುಗ್ರೀವ! ಶರಶಯ್ಯೆಯಲ್ಲಿ ಮಲಗಿರುವ ರಾಮ ಲಕ್ಷ್ಮಣರನ್ನು ಕಂಡು..  ತಾಯಿಯಿಂದ ದೂರವಾದಾಗ ಮಗುವಿಗೆ ಭಯವಾಗ್ತದೆ. ತೈತ್ತಿರೀಯ ಉಪನಿಷತ್ತಿನ ಬ್ರಹ್ಮವಲ್ಲಿ ಹೇಳುವ ಹಾಗೆ ಭಗವಂತನೊಂದಿಗೆ ಚಿಕ್ಕ ಅಂತರ ಬಂದರೂ ಕೂಡ ಭಯವೆನ್ನುವುದು ಉಂಟಾಗುವುದು. ಮತ್ತೆ ಹೋಗಿ ಪೂರ್ತಿ ಸೇರಿದಾಗ ಆ ಭಯವಿಲ್ಲ ಎಂಬುದಾಗಿ. ಇತ್ತ, ಸುಗ್ರೀವನಿಗೆ ತಾನು ಪಡೆದುಕೊಂಡ ಅಮೂಲ್ಯ ನಿಧಿಯನ್ನು ಕಳೆದುಕೊಳ್ಳುವ ಭಯ. ರಾಮನೆಂಬ ಅತ್ಯಪೂರ್ವ ಸಂಪತ್ತು, ಕೋಟಿ ಜನ್ಮಕ್ಕೂ ಲಭ್ಯವಾಗುವಂಥದ್ದಲ್ಲ, ಅವನನ್ನು ಮಿತ್ರನನ್ನಾಗಿ ಪಡ್ಕೊಂಡಿದ್ದಾನೆ ಸುಗ್ರೀವ. ಈಗ ನೋಡಿದ್ರೆ, ಆ ರಾಮನು ಲಕ್ಷ್ಮಣನೊಡಗೂಡಿ ಶರಗಳ ಮಂಚದಲ್ಲಿ ಮಲಗಿದ್ದಾನೆ. ಆ ಶರಗಳು ಸರ್ಪಗಳಾಗಿ ರಾಮ ಲಕ್ಷ್ಮಣರನ್ನು ಬಂಧಿಸಿದ್ದಾವೆ. ಇಡೀ ಶರೀರದಲ್ಲಿ ಎಲ್ಲಿಯೂ ಕೂಡ ಚಲನೆಯಿಲ್ಲ. ಬಾಣದಿಂದ ಭೇದಿಸಲ್ಪಡದ ಸ್ಥಳವೇ ಇಲ್ಲ ಶರೀರದಲ್ಲಿ. ಹೆದರಿಕೆ ಆಗದೆ ಏನಾದೀತು! ರಾಮ ಲಕ್ಷ್ಮಣರ ಶರೀರಗಳು ಬಾಣಗಳಿಂದ ನೇಯಲ್ಪಟ್ಟಿರಲು, ಅದನ್ನು ಕಂಡ ಸುಗ್ರೀವನ ಅಂಗೋಪಾಂಗಗಳಲ್ಲಿ ಭಯವುಂಟಾಯಿತು. ಸುಗ್ರೀವನಿಗೆ ಭಯವಾಗಿದೆ ಎನ್ನುವುದನ್ನು ನೋಡಿದ ಕೂಡಲೇ ಅರ್ಥ ಮಾಡಿಕೊಳ್ಳಬಹುದಾಗಿತ್ತು. 
ವಿಭೀಷಣ ಸುಗ್ರೀವನನ್ನು ಕಂಡ. ಸುಗ್ರೀವನ ಕಣ್ಣಿನಲ್ಲಿ ಕೂಡ ನೀರು ಹರೀತಾ ಇದ್ದು, ದೀನನಾಗಿದ್ದ, ಕಣ್ಣೆಲ್ಲ ಕಳೆಗೆಟ್ಟಿತ್ತು, ವ್ಯಾಕುಲವಾಗಿತ್ತು. ವಿಭೀಷಣ ಹೇಳ್ತಾನೆ, ‘ ಸುಗ್ರೀವ, ಭಯ ಪಡದಿರು. ಈ ಕಣ್ಣೀರ ಧಾರೆಯನ್ನು ನಿಗ್ರಹಿಸು. ಯಾಕಂದ್ರೆ, ಯುದ್ಧ ಅಂದ್ರೆ ಹೀಗೆ, ಅಲ್ಲಿ ಏನಾಗ್ತದೆ ಅನ್ನುವುದನ್ನು ಹೇಳ್ಲಿಕ್ಕೆ ಸಾಧ್ಯ ಇಲ್ಲ. ವಿಚಿತ್ರವಾಗಿ ಯಾರಿಗೆ ಬೇಕಾದರೂ ಗೆಲುವಾಗಬಹುದು, ಯಾರಿಗೆ ಬೇಕಾದರೂ ಸೋಲಾಗಬಹುದು. ಇದು ಹೀಗೆಯೇ ಎನ್ನುವುದನ್ನು ಹೇಳ್ಲಿಕ್ಕೆ ಸಾಧ್ಯ ಇಲ್ಲ. ಸುಗ್ರೀವ, ನಮ್ಮ ಭಾಗ್ಯ ಏನಾದರೂ ಒಂದು ಚೂರು ಉಳಿದಿದ್ರೆ ಇವರಿಬ್ಬರೂ ಮೂರ್ಛೆಯನ್ನು ಕಳೆದು ಬೋಧವನ್ನು ತಳೆದು ಮೇಲೇಳ್ತಾರೆ, ವ್ಯಥಿಸಬೇಡ. ನೀನೂ ಧೈರ್ಯ ತಾಳು; ನೋಡು, ಅನಾಥ ನಾನು. ನನಗೂ ಧೈರ್ಯ ತುಂಬು. ನನ್ನ ತಪಸ್ಸಿನ ಅನುಭವ ಹೇಳೋದಾದ್ರೆ, ಸತ್ಯ-ಧರ್ಮಗಳಲ್ಲಿ ಯಾರು ನಿರತರಾಗಿರ್ತಾರೋ ಅವರಿಗೆ ಮೃತ್ಯು ಭಯವಿಲ್ಲ. ಇವರಿಬ್ಬರು ಸತ್ಯ-ಧರ್ಮಾತ್ಮಕರು. ಅವರಿಗೆ ಮೃತ್ಯು ಭಯವಿರಲಾರದು ಎಂಬುದಾಗಿ ಹೇಳಿ ಒದ್ದೆ ಕೈಗಳಿಂದ ಸುಗ್ರೀವನ ಕಣ್ಣುಗಳನ್ನು ಒರೆಸ್ತಾನೆ. ಮತ್ತೆ ಪುನಃ ಸ್ವಲ್ಪ ನೀರು ತಗೊಂಡು, ವಿಶೇಷ ಜಪ ಮಾಡಿ ಆ ನೀರಿನಿಂದ ಸುಗ್ರೀವನ ಕಣ್ಣುಗಳನ್ನು ಮತ್ತೆ ಒರೆಸಿದ, ಮಾಯೆಯಿಂದ ಏನಾದರೂ ದುಷ್ಪರಿಣಾಮಗಳು ಅವನ ಮೇಲೆ ಆಗಿದ್ದಿದ್ರೆ ಅದೆಲ್ಲ ಹೋಗ್ಲಿ ಎನ್ನುವ ಭಾವದಲ್ಲಿ. ಮತ್ತೆ, ಕಾಲಕ್ಕೆ ತಕ್ಕ ಈ ಮಾತುಗಳನ್ನು ಹೇಳ್ತಾನೆ, ‘ಕಪಿರಾಜ, ನಾವೀಗ ದುರ್ಬಲರಾಗಬಾರದು. ಈ ಹೊತ್ತಿನಲ್ಲಿ ನಮ್ಮ ಅತಿಯಾದ ಪ್ರೀತಿಯೇ ತೊಂದರೆಗೆ ಕಾರಣವಾಗ್ತದೆ. ಆ ಅತಿಯಾದ ಪ್ರೀತಿಯ ಆವೇಗದಲ್ಲಿ ಕರ್ತವ್ಯಗಳನ್ನು ಮರೀಬೇಡ. ರಾಮ-ಲಕ್ಷ್ಮಣ ಮತ್ತು ಸೈನ್ಯಕ್ಕೆ ನಾವೇನು ಮಾಡಬಹುದು ಈಗ? ಕರ್ತವ್ಯ ಏನು ಮುಂದಕ್ಕೆ? ಅದರ ಬಗ್ಗೆ ಚಿಂತನೆ ಮಾಡು. ಅಥವಾ, ಎಚ್ಚರ ಬರುವವರೆಗೆ ನಾವು ರಾಮನ ಸುತ್ತ ಕಾವಲು ಕಾಯೋಣ. ಅವರಿಬ್ಬರಿಗೆ ಎಚ್ಚರ ಬಂತೋ, ನಮ್ ಭಯವನ್ನು ಅವರೇ ಕಡಿಮೆ ಮಾಡ್ತಾರೆ. ಅಲ್ಲಿಯವರೆಗೆ ಕಾದು ಕುಳಿತುಕೊಳ್ಬೇಕಾದ್ದು ನಮ್ಮ ಕೆಲಸ’.
‘ಇದು ರಾಮನಿಗೆ ಏನೂ ಅಲ್ಲ, ರಾಮನಿಗೆ ಮೃತ್ಯು ಬರ್ಲಿಕ್ಕೆ ಸಾಧ್ಯವಿಲ್ಲ. ನೋಡು ರಾಮನ ಮುಖವನ್ನು, ಎಷ್ಟು ಕಾಂತಿಯಿದೆ! ಮೃತ್ಯು ವಶರಾಗುವವರ ಮುಖದಲ್ಲಿ ಈ ಕಾಂತಿ ಇರೋದಿಲ್ಲ. ಅವರ ಆಯಸ್ಸು ಮುಗ್ದಿಲ್ಲ, ಅವರ ಪ್ರಾಣಕ್ಕೆ ಏನೂ ಆಗೋದಿಲ್ಲ’ ಎಂಬುದಾಗಿ ಹೇಳಿ ಸಂತೈಸಿ, ‘ನೋಡು ನಾನೊಮ್ಮೆ ಸುತ್ತ ಹೋಗಿ ವ್ಯವಸ್ಥೆಗಳೇನೇನು ಆಗಿದೆ ನೋಡಿ ಬರ್ತೇನೆ. ಅಲ್ಲಿಯವರೆಗೆ, ಸೈನ್ಯವನ್ನು ಸಂತೈಸು. ನಿನ್ನನ್ನೂ ನೀನು ಸಂತೈಸಿಕೋ’ ಹೇಳಿ ಹೊರಡ್ಲಿಕ್ಕೆ ಸಿದ್ಧನಾಗಿದಾನೆ ವಿಭೀಷಣ. ಕಪಿಗಳು ಗಾಬರಿಗೊಂಡ್ರಂತೆ. ಕಣ್ಣೆಲ್ಲ ಅಗಲವಾಗಿದೆ, ಗಾಬರಿ ಕಾಣ್ತಾ ಇದೆ, ವಿಭೀಷಣ ಅತ್ತ-ಇತ್ತ ಓಡುವಾಗ ಅವನು ಇಂದ್ರಜಿತು ಎಂಬುದಾಗಿ ಹೆದರಿ ಬಿಟ್ಟಿದ್ದಾರೆ. ವಿಭೀಷಣ ಹೇಳ್ತಾನೆ, ‘ಅವರಿಗೆಲ್ಲ ಯಾರಾದ್ರೂ ಹೇಳಿ ನಾನು ವಿಭೀಷಣ ಎಂಬುದಾಗಿ. ಏನೂ ಆಪತ್ತಿಲ್ಲ ನನ್ನಿಂದ ಎಂಬುದಾಗಿ ಹೇಳಿ’ ಎಂಬುದಾಗಿ ಹೇಳಿ ತನ್ನ ಕಾರ್ಯವನ್ನು ಮಾಡ್ಲಿಕ್ಕೆ ಮುಂದೆ ಹೋಗ್ತಾನೆ. ಎಲ್ಲೆಡೆಗೆ ಸಂಚಾರ ಮಾಡಿ, ವಾನರ ಸೈನ್ಯವನ್ನು ಮತ್ತೆ ಸಂತೈಸಿ, ಅದನ್ನು ವ್ಯವಸ್ಥಿತಗೊಳಿಸುವ ಪ್ರಯತ್ನವನ್ನು ಮಾಡ್ತಾ ಇದ್ದಾನೆ ವಿಭೀಷಣ.
ಅತ್ತ, ಆ ಮಹಾಮಾಯ ಇಂದ್ರಜಿತು ಸರ್ವ ಸೈನ್ಯದೊಡಗೂಡಿ ಲಂಕಾನಗರಿಯನ್ನು ಪ್ರವೇಶಿಸಿ ರಾವಣನನ್ನು ಕಂಡು ರಾವಣನಿಗೆ ಅಭಿವಾದನ ಮಾಡ್ತಾನೆ. ಕೈ ಮುಗಿದು, ‘ರಾಮ ಲಕ್ಷ್ಮಣರು ಹತರಾದರು’ ಎನ್ನುವ ಪ್ರಿಯ ವಾರ್ತೆಯನ್ನು ರಾವಣನಿಗೆ ಹೇಳ್ತಾನೆ. ರಾವಣನಿಗೋ ವಿಪರೀತ ಸಂತೋಷವಾಗಿದೆ. ಎದ್ದು ಹಾರಿದನಂತೆ ಆಸ್ಥಾನದಿಂದ. ಓಡಿ ಬಂದು ಮಗನನ್ನು ತಬ್ಬಿಕೊಂಡನಂತೆ. ರಾಕ್ಷಸರೆಲ್ಲ ಸುತ್ತ ನೆರೆದಿದ್ದಾರೆ, ಒಂದಿಷ್ಟು ವಾರ್ತೆ ಸಿಕ್ಕಿದೆ ಅವನಿಗೆ, ವಿವರವನ್ನು ಕೇಳ್ತಾನೆ. ಇಡೀ ಕಥೆಯನ್ನು ಇಂದ್ರಜಿತು ತನ್ನ ತಂದೆಗೆ ಹೇಳ್ತಾನೆ. ಹೀಗೆ, ಶರಬಂಧನದಿಂದ, ನಾಗಪಾಶದ ಮೂಲಕವಾಗಿ ಅವರೆಲ್ಲರನ್ನೂ ಬಂಧಿಸಿದ್ದೇನೆ. ಅಲುಗಾಡಲಿಕ್ಕೂ ಸಾಧ್ಯವಿಲ್ಲ. ನಾ ನೋಡಿ ಬಂದೆ, ಇನ್ನೇನೂ ಇಲ್ಲ, ಹತರಾಗಿದ್ದಾರೆ ಇಬ್ರೂ ಕೂಡ’ ಎಂದಾಗ ಹರ್ಷದ ವೇಗವನ್ನು ತಡ್ಕೊಳ್ಳಲಿಕ್ಕೇ ಸಾಧ್ಯವಾಗಿಲ್ಲ ರಾವಣನಿಗೆ. ಅಂತೂ ಜ್ವರದಂತಹಾ ಭಯವನ್ನು ಕಳೆದುಕೊಂಡು ತನ್ನ ಮಗನನ್ನು ಅಭಿನಂದಿಸಿದ ರಾವಣ. ಅಷ್ಟು ಭಯ ಅವನಿಗಾಗಿತ್ತು! ಈಗ ಸಂತುಷ್ಟನಾಗಿ ತನ್ನ ಮಗನನ್ನು ಅಭಿನಂದಿಸ್ತಾ ಇದ್ದಾನೆ. 
ಆ ಕಡೆಗೆ ಯೂತಪತಿಗಳೆಲ್ಲ ರಾಮನ ಸುತ್ತ ಕುಳಿತಿದ್ದಾರೆ ಮತ್ತು ತುಂಬ ಜಾಗರೂಕರಾಗಿದ್ದಾರೆ. ಅವರ ಕೈಗಳಲ್ಲಿ ದೊಡ್ಡ ದೊಡ್ಡ ವೃಕ್ಷಗಳು. ಆಕಸ್ಮಾತ್ ಆಪತ್ತು ಏನಾದ್ರೂ ಬಂದರೆ, ರಾಮ ಲಕ್ಷ್ಮಣರಿಗೆ ಮತ್ತೆ ಏನಾದ್ರೂ ತೊಂದ್ರೆ ಮಾಡ್ಲಿಕ್ಕೆ ಬಂದ್ರೆ ಎನ್ನುವ ಕಾರಣಕ್ಕೆ ಸುತ್ತ ಕಾಯ್ತಾ ಇದ್ದಾರೆ, ಎಲ್ಲಾ ದಿಕ್ಕುಗಳನ್ನೂ ನೋಡ್ತಾ ಇದ್ದಾರಂತೆ, ಒಂದು ಹುಲ್ಲು ಅಲುಗಾಡಿದ್ರೂ ಕೂಡ ರಾಕ್ಷಸನಾ? ಎಂಬ ಭಾವದಲ್ಲಿ, ಕಮಾಂಡೋಗಳ ಹಾಗೆ. ಆ ರೀತಿಯಲ್ಲಿ ಅವರು ಕಾವಲು ಕಾಯ್ತಾ ಇದ್ದಾರೆ ರಾಮ-ಲಕ್ಷ್ಮಣರನ್ನು. 
ಈ ಕಡೆ ರಾವಣ ಪರಮ ಸಂತುಷ್ಟನಾಗಿದ್ದಾನೆ. ಇಂದ್ರಜಿತುವನ್ನು ಕಳುಹಿಸಿಕೊಟ್ಟು ಸೀತೆಯನ್ನು ಕಾಯುವ ರಾಕ್ಷಸಿಯರನ್ನು ಕರೆದ. ಬಂದ್ರು ತ್ರಿಜಟೆಯೇ ಮೊದಲಾದ ರಾಕ್ಷಸಿಯರೆಲ್ಲ. ಹೃಷ್ಟನಾಗಿ ರಾಕ್ಷಸಿಯರಿಗೆ ರಾಕ್ಷಸಾಧಿಪತಿ ಹೇಳಿದನಂತೆ, ‘ಹೋಗಿ ಸೀತೆಗೆ ಹೇಳಿ, ‘ಇಂದ್ರಜಿತನಿಂದ ರಾಮ ಲಕ್ಷ್ಮಣರು ಹತರಾದರು‌. ನಂಬಿಕೆ ಬರಲಿಕ್ಕಿಲ್ಲ. ಈಗ ಸೀತೆಯನ್ನು ನಂಬಿಸಲು ಸೀತೆಯನ್ನು ಪುಷ್ಪಕದಲ್ಲಿ ಕರೆದುಕೊಂಡು ಹೋಗಿ ಕಣ್ಣಾರೆ ತೋರಿಸಿ ನಂಬಿಸಿ. ರಾಮನ ಆಶ್ರಯದಿಂದ ಸೊಕ್ಕಿದ ಸೀತೆ ನನ್ನ ಬಳಿಗೆ ಬರಲು ನಿರಾಕರಿಸ್ತಾ ಇದ್ದಾಳೆ. ಈಗ ಆಕೆಯ ಪತಿ ಸೋದರನೊಡನೆ ರಣದಲ್ಲಿ ವಿರಕ್ತನಾಗಿದ್ದಾನೆ. ಹಾಗಾಗಿ ಇನ್ನು ಆಶ್ರಯ ಯಾರೂ ಇಲ್ಲ ಅವಳಿಗೆ. ಬಹುಶಃ ಅವಳಿಗೆ ಶಂಕೆ ಇದ್ದಿರ್ಬಹುದು ನನ್ನನ್ನು ಒಪ್ಪಿಕೊಳ್ಲಿಕ್ಕೆ‌ ಮಹಾಬಲನಾದ ರಾಮ ನನ್ನನ್ನು ಗೆದ್ದುಬಿಟ್ರೆ ಆಗ ಏನಾಗ್ಬಹುದೋ ಅಂತ. ಇನ್ನೇನೂ ಆ ಶಂಕೆ ಇಲ್ಲ. ಆಮೇಲೆ ಉದ್ವೇಗವೂ ಇಲ್ಲ. ಆದ್ರೆ ಈಗ ಎಲ್ಲ ಮುಗಿದುಹೋಗಿದೆ. ಹಾಗಾಗಿ ಈಗ ಬೇರೆ ಗತಿಯಿಲ್ಲದೆ ಅವಳು ಸರ್ವಾಭರಣ ಭೂಷಿತೆಯಾಗಿ  ದಿವ್ಯ ವಸ್ತ್ರಧಾರಿಣಿಯಾಗಿ ತಾನಾಗಿಯೇ ಬಂದು ನನ್ನೊಡನೆ ಇರ್ತಾಳೆ’ ಎಂಬ ಹಗಲುಗನಸು ರಾವಣನದು! ಅದಕ್ಕಾಗಿ ರಾಮ-ಲಕ್ಷ್ಮಣರಿಗೆ ಹೀಗಾಗಿದೆ ಎಂದು ಖಚಿತಪಡಿಸಿ ಅವಳಿಗೆ. ಆ ದುರಾತ್ಮನ ಮಾತನ್ನು ಕೇಳಿದ ರಾಕ್ಷಸಿಯರು ‘ಹಾಗೆಯೇ ಆಗಲು’ ಎಂದು ಹೇಳಿ ಪುಷ್ಪಕವಿಮಾನವನ್ನು ತಂದು ಅಶೋಕವನದಲ್ಲಿದ್ದ ಸೀತೆಯನ್ನು ಅದರಲ್ಲಿ ಕರೆದುಕೊಂಡು ಹೋಗ್ತಾರೆ. ಆಕೆಗೋ, ಒಂದೇ ಭಾವ; ರಾಮಶೋಕದಲ್ಲಿ ಮುಳುಗೇಳ್ತಾ ಇದ್ದಾಳೆ. ಆಕೆಯನ್ನು ಯುದ್ಧಭೂಮಿಗೆ ಕರ್ಕೊಂಡು ಹೋಗ್ತಾ ಇದ್ದಾರೆ. ಇತ್ತ ರಾವಣನು ಅಪ್ಪಣೆ ಮಾಡ್ತಾನೆ, ‘ಇಡೀ ಲಂಕೆಯನ್ನು ಅಲಂಕಾರ ಮಾಡಿ, ಧ್ವಜ-ಪತಾಕೆಗಳನ್ನು ಏರಿಸಿ, ಉತ್ಸವ ಮಾಡಿ, ಮತ್ತು ಇಂದ್ರಜಿತುವು ರಾಮ-ಲಕ್ಷ್ಮಣರನ್ನು ಕೊಂದಿದ್ದಾನೆ ಎಂದು ಇಡೀ ಲಂಕೆಯಲ್ಲಿ ಘೋಷಣೆ ಮಾಡಿಸ್ತಾನೆ. 
ಆ ಕಡೆ ಸೀತೆ ರಣಭೂಮಿಯನ್ನು ಸೇರಿ ವಿಮಾನದಲ್ಲಿ ಕುಳಿತು ನೋಡ್ತಾ ಇದ್ದಾಳೆ, ವಾನರರ ಸೈನ್ಯವೆಲ್ಲವೂ ಕುಸಿದಿದೆ. ಅದೊಂದು ದೃಶ್ಯ. ಇನ್ನೊಂದು ಕಡೆಗೆ, ಹಸಿಮಾಂಸ ತಿನ್ನುವ ರಾಕ್ಷಸರು ಹರ್ಷದ ಬೊಬ್ಬೇರಿ ವಿಜೃಂಭಿಸ್ತಾ ಇದ್ದಾರೆ. ಅತ್ತ ನೋಡ್ತಾಳೆ, ರಾಮ ಲಕ್ಷ್ಮಣರ ಸುತ್ತಮುತ್ತ ದುಃಖಿತರಾದ ವಾನರ ನಾಯಕರು. ಈ ದೃಶ್ಯ ಅವಳಿಗೆ ಕಂಡಿದೆ. ವಿಮಾನವು ಇನ್ನೂ ಮುಂದೆ ಹೋದಾಗ ಆಕೆಗೆ ರಾಮ ಲಕ್ಷ್ಮಣರ ದರ್ಶನವಾಯ್ತು. ವಿಶೇಷವೆಂದರೆ, ರಾವಣನೇ ಮಾಡಿಸಿದ ರಾಮ-ಲಕ್ಷ್ಮಣರ ದರ್ಶನ ಸೀತೆಗೆ. ನೋಡ್ತಾಳೆ … ಯಾಕೆ ಕಣ್ಣಿದೆಯೋ ಎನ್ನಿಸುವಂತಹ ದೃಶ್ಯ ಅದು. ಎಚ್ಚರವಿಲ್ಲ ಅವರಿಗೆ. ಕವಚ, ಧನುಸ್ಸು ಅತ್ತ-ಇತ್ತ ಆಗಿದೆ. ಬಾಣಗಳು ಎಲ್ಲಾ ಅವಯವಗಳನ್ನು ಕಟ್ಟಿದ್ದಾವೆ. ರಾಮ-ಲಕ್ಷ್ಮಣರು ಬಾಣಗಳ ಪೊದೆಗಳಂತೆ ಕಾಣುತ್ತಿದ್ದಾರೆ. ಅಂತಹ ಸ್ಥಿತಿಯಲ್ಲಿ ಆ ಸಹೋದರರನ್ನು ನೋಡಿದ ಜಾನಕಿಯು ರೋದಿಸಿದಳು. ಪುಂಡರೀಕನೇತ್ರರು, ತೇಜಸ್ಸಿನಲ್ಲಿ ಸ್ಕಂದನನ್ನು ಹೋಲುವಂಥವರು ಅವರಿಬ್ಬರು,ಯಾರು ಎಂಬ ಗುರುತು ಕೂಡಾ ಸಿಗದ ಸ್ಥಿತಿಯಲ್ಲಿ ಮಲಗಿದ್ದಾರೆ. ತುಂಬಾ ರೋದಿಸುತ್ತಾಳೆ ಸೀತೆ. ಧೂಳಿನಲ್ಲೇ ಮಲಗಿದ್ದಾರೆ ಇಬ್ಬರೂ ಕೂಡಾ. ಅವಳಿಗೆ ಅವರಿಬ್ಬರು ಬದುಕೇ ಇಲ್ಲ ಎಂದೆನಿಸಿತು. ಇಂದ್ರಜಿತುವೂ ಹಾಗೆಯೇ ಅಂದುಕೊಂಡು ಹೋಗಿದ್ದಾನೆ. ಅವರು ನಿಧನವಾಗಿರಬಹುದು ಎಂಬ ಭಾವ ಆಕೆಯನ್ನು ಕಾಡಿದೆ. ಒಂದು ಘೋರವಾದ ಸಂದರ್ಭ ಇದು.                   ಸೀತೆಯು ಒಮ್ಮೆ ತನ್ನನ್ನು ತಾನು ನೋಡಿಕೊಂಡಳು. ತಾನೇ ಸುಳ್ಳು ಎಂದೆನಿಸಿತು ಆಕೆಗೆ. ಏಕೆಂದರೆ ಆಕೆಯ ದೇಹಲಕ್ಷಣಗಳ ಪ್ರಕಾರ ರಾಮನಿಗೆ ಹಾಗಾಗುವಂತಿಲ್ಲ. ಸಾಮುದ್ರಿಕಶಾಸ್ತ್ರವು ದೊಡ್ಡ ಶಾಸ್ತ್ರ. ಸೀತೆ ಸಣ್ಣವಳಿದ್ದಾಗ ಲಕ್ಷಣಜ್ಞರು ಆಕೆಯನ್ನು ಕಂಡು ಗಂಡುಮಕ್ಕಳ ತಾಯಿ, ಎಂದೂ ವಿಧವೆಯಾಗುವವಳಲ್ಲ ಎಂಬ ಫಲವನ್ನು ಹೇಳಿದ್ದಾರೆ. ಆ ಫಲಕ್ಕೆ ತಕ್ಕ ಲಕ್ಷಣಗಳು ಅವಳಲ್ಲಿವೆ. ಅವಳ ಶರೀರದಲ್ಲಿ 66 ಲಕ್ಷಣಗಳಿದ್ದವು. ಆಕೆಯ ಬಾಯಿಂದ ಬಂದ ಮಾತೇನೆಂದರೆ ‘ಆ ಜ್ಞಾನಿಗಳು ಇಂದು ಸುಳ್ಳಾದರು. ಅವರು ಹೇಳಿದ್ದರು ಯಜ್ಞಶೀಲನ ಮಡದಿಯಾಗುತ್ತಾಳೆ ಎಂದು. ರಾಮನು ಹತನಾಗಿರಲು ಅವರು ಇಂದು ಸುಳ್ಳಾದರು’. ಆಕೆಯ ಮುಂದೆಯೇ ವಿಧಿಯನ್ನು ಬಲ್ಲವರು ಹೇಳಿದ್ದಾರೆ ಈ ಲಕ್ಷಣಗಳ ಪ್ರಕಾರ ವೀರಪಾರ್ಥಿವನ ಪತ್ನಿ ಎಂದು. ಅವಳ ಪಾದಗಳಲ್ಲಿ ಪದ್ಮಗಳಿವೆ. ಅಂದರೆ ಅವಳು ಸಮ್ರಾಟನ ಪಕ್ಕದಲ್ಲಿ ಕುಳಿತು ಸಮ್ರಾಜ್ಞಿಯಾಗಿ ರಾಜ್ಯಾಭಿಷೇಕವಾಗಬೇಕು. ‘ಆ ಪದ್ಮಗಳು ಸುಳ್ಳಾದವೇ?’ ವೈಧವ್ಯದ ಲಕ್ಷಣಗಳು ಯಾವುದೂ ಇಲ್ಲ ಅವಳಲ್ಲಿ. ‘ಪದ್ಮ ಚಿಹ್ನೆ ಎಂದೂ ಸುಳ್ಳಾಗುವುದಿಲ್ಲ. ಆದರೆ ನನ್ನ ಪಾಲಿಗೆ ಸುಳ್ಳಾದವು. ಯಾವಾಗ ರಾಮನು ಹತನಾದನೋ ಈ ಚಿಹ್ನೆಗಳಿಗೇನರ್ಥ?’ ತೆಳುವಾದ, ಸಮವಾದ ಕಪ್ಪುಕೂದಲು. ಹುಬ್ಬುಗಳು ಸೇರಿಲ್ಲ. ಮೊಣಕಾಲು ವೃತ್ತಾಕಾರವಾಗಿವೆ ರೋಮವಿಲ್ಲ. ಹಲ್ಲುಗಳೆಲ್ಲಾ ಸೇರಿದ್ದಾವೆ, ಮಧ್ಯದಲ್ಲಿ ಎಡೆಯಿಲ್ಲ, ಇದ್ದರೆ ವೈಧವ್ಯಕ್ಕೆ ಅವಕಾಶವಿದೆ. ಕೆಲವು ಅಂಗಗಳು ಉಬ್ಬಿರಬೇಕು. ಕಣ್ಣಿನ ಪಕ್ಕದ ಭಾಗ, ಹಸ್ತ, ಪಾದಗಳು, ಪಾದ-ಕಾಲು ಸೇರುವ ಜಾಗ, ತೊಡೆಗಳು ಎಲ್ಲಾ ಪುಷ್ಟವಾಗಿರಬೇಕು, ಸೋಲಬಾರದು. ಉಗುರುಗಳು ವೃತ್ತಾಕಾರವಾಗಿ, ನುಣುಪಾಗಿ ಇರಬೇಕು. ಬೆರಳುಗಳು ಪಾದದ ಅಳತೆಗೆ ಸರಿಯಾಗಿರಬೇಕು. ಹೀಗೆಲ್ಲಾ ಇದ್ದಾಗ ಅವಳು ವಿಧವೆಯಾಗುವುದಿಲ್ಲ, ಚಕ್ರವರ್ತಿನಿಯಾಗುತ್ತಾಳೆ. ನಾಭಿ ಒಳಗೆ ಹೋಗಿ ಸುತ್ತ ಎತ್ತರ ಇರಬೇಕು. ಪಾರ್ಶ್ವಭಾಗ ಮತ್ತು ವಕ್ಷಸ್ಥಳಗಳು ಸೋತಿರಬಾರದು. ಇವೆಲ್ಲಾ ಲಕ್ಷಣಗಳನ್ನು ಆಕೆ ಗಮನಿಸಿಕೊಳ್ಳುತ್ತಾಳೆ. ಸೀತೆಯ ವರ್ಣ ಮಣಿಯಂತಹ ವರ್ಣ. ಮೃದುವಾದ ರೋಮಗಳು. ಹತ್ತು ಬೆರಳುಗಳು ಮತ್ತು 2 ಪಾದಗಳು ಸರಿಯಾಗಿ ಭೂಮಿಯ ಮೇಲೆ ನೆಲೆಗೊಳ್ಳಬೇಕು. ಹೀಗಿದ್ದರೆ ಶುಭಲಕ್ಷಣ. ಬೆರಳಿನ ಗಣ್ಣುಗಳು ಗೋಧಿಕಾಳಿನ ಆಕಾರವಿರಬೇಕು. ಕೂಡಿಸಿದಾಗ ಅಂತರವಿರಬಾರದು. ಇಷ್ಟು ಇದ್ದಾಗ ಅದೊಂದು ಮಂದಸ್ಮಿತ ಎಂಬ ಸ್ತ್ರೀ ಜಾತಿ. ಅದು ಸೀತೆ. ಎಲ್ಲಾ ಸುಳ್ಳಾಯಿತು.                                      ‘ಪಂಚವಟಿಯನ್ನು ಶೋಧಿಸಿ, ಸುದ್ದಿಯನ್ನು ತಿಳಿದು, ಸಾಗರವನ್ನು ದಾಟಿ ಬಂದ ಸೋದರರು ಗೋವಿನ ಹೆಜ್ಜೆಯಲ್ಲಿ ಮುಳುಗಿದರಾ? ವರುಣ, ಆಗ್ನೇಯ, ಐಂದ್ರ, ವಾಯವ್ಯ ಎಲ್ಲಾ ಅಸ್ತ್ರಗಳನ್ನು ಬಲ್ಲ ರಾಮ-ಲಕ್ಷ್ಮಣರಿಗೆ ಈ ಸ್ಥಿತಿ ಹೇಗೆ ಬಂತು?’ ಆಕೆಯೇ ಉತ್ತರ ಹೇಳುತ್ತಾಳೆ. ‘ಕಣ್ಣಿಗೆ ಕಾಣದ ಶತ್ರು ಶಸ್ತ್ರಪ್ರಹಾರವನ್ನು ಮಾಡಿದರೆ ಇನ್ನೇನಾಗಬೇಕು? ಕಣ್ಣಿಗೆ ಕಂಡಿದ್ದರೆ ರಾಮ-ಲಕ್ಷ್ಮಣರ ಶತ್ರುವಿಗೆ ಅವರು ಕೊಟ್ಟರೆ ಬದುಕು, ಹೊರತು ಬದುಕಿಲ್ಲ. ಹೀಗೆ ಅನಾಥೆಯಾದ ನನ್ನ ನಾಥನನ್ನು ಈ ಕಪಟಿಯು ಹತಗೊಳಿಸಿದನು ಎಂದು ದುಃಖಿಸುತ್ತಾಳೆ. ಎಂಥ ಕಾಲವಿದು?’ ಆದರೆ ಆಕೆಗೆ ರಾಮನಿಗಿಂತ, ಲಕ್ಷ್ಮಣನಿಗಿಂತ ತನಗಿಂತ ಹೆಚ್ಚಿನ ವ್ಯಥೆ ಕೌಸಲ್ಯೆಯ ಕುರಿತು ಆಯಿತು. ‘ರಾಮನಲ್ಲ, ಲಕ್ಷ್ಮಣನಲ್ಲ, ನಾನಲ್ಲ, ನನ್ನಮ್ಮನೂ ಅಲ್ಲ, ಕೌಸಲ್ಯೆ. ಅವಳು ಕಾದು ಕುಳಿತಿರುತ್ತಾಳೆ ಅಯೋಧ್ಯೆಯಲ್ಲಿ. ರಾಮನು ಒಂದು ದಿನ ಬರುತ್ತಾನೆ ಎಂದು ಕಾಯುತ್ತಿರುತ್ತಾಳೆ.’ ಅವಳನ್ನು ನೆನೆಸಿ ಪರಿತಪಿಸುತ್ತಾಳೆ ಸೀತೆ.                    ತ್ರಿಜಟೆಯು ಸೀತೆಯನ್ನು ಸಂತೈಸುತ್ತಾಳೆ. ‘ಅಳಬೇಡ. ದುಃಖ ಪಡಬೇಡ, ಏಕೆಂದರೆ ನಿನ್ನ ಪತಿ ಜೀವಿಸಿದ್ದಾನೆ. ಹೇಗೆಂದರೆ ಲಕ್ಷಣಗಳ ಮೂಲಕ ಹೇಳುತ್ತಿದ್ದೇನೆ. ಸುತ್ತ ಕುಳಿತಿರುವ ವಾನರಯೂತಪತಿಗಳನ್ನು ನೋಡು. ಆ ಮುಖದಲ್ಲಿ ಕೋಪ, ಯುದ್ಧೋತ್ಸಾಹವಿದೆ. ನಾಯಕನು ಹತನಾಗಿರಲು ಮುಖಗಳು ಹೀಗಿರುವುದಿಲ್ಲ. ಮತ್ತು ರಾಮನು ಗತಿಸಿ ಹೋಗಿದ್ದರೆ ನೀನು ಪುಷ್ಪಕವಿಮಾನದಲ್ಲಿ ಕೂರಲು ಆಗುತ್ತಿರಲಿಲ್ಲ. ಸಾಮಾನ್ಯವಾಗಿ ಸೇನೆಯ ಪ್ರಧಾನನು ಹತನಾದರೆ  ಸೇನೆ ದಿಕ್ಕಿಲ್ಲದೇ ಚದುರಿಹೋಗುತ್ತದೆ. ಇಲ್ಲಿ ಇಡೀ ಸೇನೆ ರಾಮ-ಲಕ್ಷ್ಮಣರನ್ನು ಕಾಯುತ್ತಿದೆ. ಹಾಗಾಗಿ ಅವರು ಜೀವಂತ ಇದ್ದಾರೆ. ಸೀತೆ, ನಾನು ಇಲ್ಲಿಯವರೆಗೆ ಸುಳ್ಳಾಡಿಲ್ಲ. ಮುಂದೆಯೂ ಆಡುವುದಿಲ್ಲ. ನಿನ್ನ ಶೀಲದಿಂದಾಗಿ ನೀನು ನನ್ನ ಹೃದಯದಲ್ಲಿ ನೆಲೆಸಿರುವೆ. ಹಾಗಾಗಿ ಮನಸ್ಸಿನಿಂದ ಹೇಳುತ್ತೇನೆ ಇವರ ಜೀವ ಹೋಗಿಲ್ಲ. ನನ್ನ ದೃಷ್ಟಿಯಿಂದ ಯಾರು ಬಂದರೂ ಇವರನ್ನು ಜಯಿಸಲು ಸಾಧ್ಯವಿಲ್ಲ. ನಾನು ಅಂದು ನಿನಗೆ ಸ್ವಪ್ನವನ್ನು ಕಂಡು ಹೇಳಿರಲಿಲ್ಲವೇ?  ಶುಭಲಕ್ಷಣಗಳು ಕಂಡಿದ್ದನ್ನು. ಈಗ ಹೀಗಾಗಲು ಸಾಧ್ಯವಿಲ್ಲ. ಗಮನಿಸಿ ನೋಡು, ಆ ಮುಖದಲ್ಲಿ ಕಾಂತಿಯು ಕುಂದಿಲ್ಲ. ಅವರಿಗೆ ಏನೂ ಆಗಿಲ್ಲ. ಅವರಿಗಾಗಿ ಬದುಕಬೇಕು ನೀನು’ ಎಂದು ಸೀತೆಯನ್ನು ಸಂತೈಸುತ್ತಾಳೆ. ರಾಕ್ಷಸರ ಮಧ್ಯದಲ್ಲೂ ಕೂಡಾ ಅಳಿಲು ಸೇವೆ ಮಾಡುತ್ತಿದ್ದಾಳೆ.                     ಅದನ್ನು ಕೇಳಿದ ಸೀತೆ ಕೊಂಚ ಸಮಾಧಾನಗೊಂಡು ದೈವಕ್ಕೆ ಕೈಮುಗಿದು ‘ನೀನು ಹೇಳಿದ್ದು ಸತ್ಯವಾಗಲಿ’ ಎಂದಳು. ಪುಷ್ಪಕವಿಮಾನವನ್ನು ಮರಳಿಸಿದರು. ಅದು ಪುನಃ ಅಶೋಕವನಕ್ಕೆ ಹೋಯಿತು. ಸೀತೆಯನ್ನು ಹಳೆಯ ಜಾಗದಲ್ಲಿ ಕುಳ್ಳಿರಿಸಿದರು. ಅವಳಿಗೆ ಏನೂ ಕಾಣುತ್ತಿಲ್ಲ. ಆಕೆಗೆ ರಣಭೂಮಿಯ ರಾಮ-ಲಕ್ಷ್ಮಣರ ದೃಶ್ಯ ಮಾತ್ರ ಕಾಣುತ್ತಿದೆ. ಅತ್ತ ವಾನರರು ಕಣ್ಣೀರಿಡುತ್ತಾ ಕಾಯುತ್ತಾ ಕುಳಿತಿದ್ದಾರೆ. ತನ್ನ ಅಪಾರವಾದ ಸತ್ವದ ಫಲವಾಗಿ ರಾಮನಿಗೆ ಎಚ್ಚರವಾಯಿತು. ಮೊದಲು ಅವನಿಗೆ ಕಂಡಿದ್ದು ಲಕ್ಷ್ಮಣ ಶರಶಯ್ಯೆಯಲ್ಲಿ ಮಲಗಿದ್ದು. ಅಲುಗಾಡುವ ಸ್ಥಿತಿಯಲ್ಲಿ ರಾಮನಿಲ್ಲ. ಅವನನ್ನು ಕಂಡು ದುಃಖ ಬಂತು ರಾಮನಿಗೆ. ಲಕ್ಷ್ಮಣನಿಗೆ ಕೊನೆಯಲ್ಲಿ ಕಂಡಿದ್ದು ರಾಮ ಬೀಳುತ್ತಿದ್ದಿದ್ದು. ಎಚ್ಚರವಾಗಿದ್ದೂ ರಾಮನಿಗೇ ಮೊದಲು. ಅವನಿಗೆ ತನ್ನ ನೋವು ಕಾಣಲಿಲ್ಲ. ‘ಸೀತೆಯನ್ನು ಪಡೆದು ನಾನೇನು ಮಾಡಲಿ? ಲಕ್ಷ್ಮಣ ಇಲ್ಲದಿದ್ದರೆ ಜೀವದಿಂದ ಏನು? ಪ್ರಪಂಚವನ್ನು ಹುಡುಕಿದರೆ ಸೀತೆಯಂತಹ ನಾರಿ ಸಿಗಬಹುದೋ ಏನೋ, ಆದರೆ ಲಕ್ಷ್ಮಣನಂತಹ ಸಹೋದರ ಸಿಗುವುದಿಲ್ಲ. ಒಂದು ವೇಳೆ ಲಕ್ಷ್ಮಣನು ಮರಣ ಹೊಂದಿದರೆ, ನಾನೂ ಮರಣ ಹೊಂದುತ್ತೇನೆ’. ಅವನ ಮುಂದೆ ಕೌಸಲ್ಯೆ, ಸುಮಿತ್ರೆ, ಕೈಕೆಯಿಯರು ಬಂದರು. ‘ಅವರಿಗೆ ಏನು ಹೇಳಲಿ? ತನ್ನ ಮಗನನ್ನು ಕಾಣಲು ಕಾತರಿಸುವ ಸುಮಿತ್ರೆಗೆ ಏನು ಉತ್ತರಕೊಡಲಿ? ಅವಳನ್ನು ಹೇಗೆ ಸಂತೈಸಲಿ? ಭರತ-ಶತ್ರುಘ್ನರಿಗೆ ಏನು ಹೇಳಲಿ? ಸುಮಿತ್ರೆಯ ನೋವಿನ ಮಾತುಗಳನ್ನು ಕೇಳಲು ಸಾಧ್ಯವಿಲ್ಲ. ಇಲ್ಲಿಯೇ ಪ್ರಾಣ ಬಿಡುತ್ತೇನೆ. ಧಿಕ್ಕಾರ ನನಗೆ. ಎಂತಹ ದುಷ್ಕೃತ ನಾನು. ಏಕೆಂದರೆ ನನಗಾಗಿ ಲಕ್ಷ್ಮಣ ಶರಶಯ್ಯೆಯಲ್ಲಿ ಮಲಗಿದ್ದಾನೆ’ ಎಂದು ಲಕ್ಷ್ಮಣನೊಂದಿಗೆ ಮಾತನಾಡುತ್ತಾನೆ. ‘ನಿತ್ಯವೂ ನಾನು ವಿಪರೀತ ನೋವಿನಲ್ಲಿದ್ದಾಗ ನೀನು ನನ್ನನ್ನು ಸಂತೈಸುತ್ತಿದ್ದೆ. ಈಗ ಯಾರು? ನೀನು ಮಾತನಾಡಲು ಬಂದಿದ್ದರೆ ಈಗಲೂ ಅದನ್ನೇ ಮಾಡುತ್ತಿದ್ದೆ. ಆದರೆ ನೀನು ಈಗ ಎಲ್ಲಿಂದ ಮಾತನಾಡುತ್ತೀಯೆ? ಇಂದು ಯಾವ ಯುದ್ಧದಲ್ಲಿ ಲಕ್ಷ್ಮಣನಿಂದ ಅನೇಕ ರಾಕ್ಷಸರು ಸಂಹರಿಸಲ್ಪಟ್ಟು ಧರೆಗೆ ಒರಗಿದರೋ ಅದೇ ಮಣ್ಣಿನಲ್ಲಿ ಲಕ್ಷ್ಮಣನೂ ಮಲಗಿದ್ದಾನೆ, ತನ್ನ ರಕ್ತದಲ್ಲಿ ತಾನೇ ತೊಯ್ದು. ಅವನ ಮೈಯಲ್ಲಿರುವ ಬಾಣಗಳೆಲ್ಲಾ ಕೆಂಪಾಗಿದ್ದವು. ಹಾಗಾಗಿ ಕೆಂಪು ಕಿರಣಗಳ ಸೂರ್ಯನ ಹಾಗೆ’.
ಲಕ್ಷ್ಮಣನ ಕಣ್ಣಲ್ಲಿ ಏನೋ ಚಲನೆ. ಆ ಭಾವವನ್ನು ರಾಮ ಗುರುತಿಸುತ್ತಾನೆ. ರಾಮ ಮನಸ್ಸಿನಲ್ಲಿಯೇ ಅಂದುಕೊಂಡು, “ನನ್ನನ್ನು ಹಿಂಬಾಲಿಸಿ ನೀನು ಕಾಡಿಗೆ ಬಂದೆ, ನೀನು ಯಮಲೋಕಕ್ಕೆ ಹೋಗುವುದಿದ್ದರೇ ನಾನು ನಿನ್ನನ್ನು ಹಿಂಬಾಲಿಸಿ ಬರುತ್ತೇನೆ. ನನ್ನಿಂದಾಗಿ ನಿನಗೆ ಹೀಗಾಯಿತು. ಎಂದಾದರೂ ನೀನು ದೊಡ್ಡ ಸ್ವರದಲ್ಲಿ ಮಾತನಾಡಿದ್ದಿದೆಯಾ ಇಲ್ಲಿಯವರೆಗೂ? ಅಂತಹ ಲಕ್ಷ್ಮಣ. ಕಾರ್ತಿವೀರ್ಯಾರ್ಜುನನಿಗೆ, ಅರ್ಜುನನ ಮಗ, ಒಂದು ಸಾವಿರ ಕೈಗಳಿದ್ದವು. ಅವನು ಎಡಗೈಯಲ್ಲಿ ೫೦೦ ಧನಸ್ಸುಗಳನ್ನು ಹಿಡಿದುಕೊಂಡು ಬಲಗೈಯಲ್ಲಿ ಐದು ನೂರು ಬಾಣಗಳನ್ನು ಹಿಡಿದುಕೊಂಡು ಒಮ್ಮೆಗೇ ಐದುನೂರು ಬಾಣಗಳನ್ನು ಏಕಕಾಲದಲ್ಲಿ ಬಿಡ್ತಾ ಇದ್ದನಂತೆ. ಎರಡೇ ಕೈಗಳಿಂದ ಅದಕ್ಕಿಂತ ಹೆಚ್ಚಿನ ಬಾಣಗಳನ್ನು ಅದೇ ಸಮಯದಲ್ಲಿ ಏಕಕಾಲಕ್ಕೆ ಲಕ್ಷ್ಮಣ ಪ್ರಯೋಗ ಮಾಡ್ತಾ ಇದ್ದನಂತೆ. ಅಂತವನು ಹತನಾಗಿ ವೀರಶಯನದಲ್ಲಿ ಮಲಗಿದ್ದಾನೆ.” ಅಂತ ರಾಮನ ವ್ಯಥೆ. ಇಷ್ಟು ಹೇಳುವ ಹೊತ್ತಿಗೆ ವಿಭೀಷಣನ ನೆನಪಾಯಿತು ರಾಮನಿಗೆ.  ವಿಭೀಷಣನನ್ನು ದೊರೆಯಾಗಿಸುತ್ತೇನೆ ಎನ್ನುವುದು ಮಿಥ್ಯಾ ಪ್ರಲಾಪವಾ?”  ಸುಗ್ರೀವನಿಗೆ ಹೇಳ್ತಾನೆ ರಾಮ, “ಸುಗ್ರೀವ ಹೊರಟುಹೋಗು. ನಾನಿಲ್ಲದ ಹೊತ್ತು, ಈ ಸಮಯದಲ್ಲಿ, ರಾವಣ ನಿನ್ನ ಮೇಲೆ ಬೀಳಬಹುದು. ನೀನು ಉಳಿದುಕೊಳ್ಳಬೇಕು. ಅಂಗದನನ್ನು ಮುಂದಿಟ್ಟುಕೊಂಡು ಈ ಸೈನ್ಯವನ್ನೆಲ್ಲ ಕೂಡಿಕೊಂಡು, ರಾವಣ ಮತ್ತೆ ಹೊರಗೆ ಬರುವುದರೊಳಗೆ, ಬೇಗ ಈ ಸಮುದ್ರವನ್ನು ದಾಟು.” ಅಂತಹ ಸಮಯದಲ್ಲಿ ಯಾರಾದರೂ ಹೀಗೆ ಹೇಳಲಿಕ್ಕೆ ಸಾಧ್ಯವಾ?.  ಅಲ್ಲಿಯೂ ರಾಮನಿಗೆ ಸುಗ್ರೀವನ ಕ್ಷೇಮದ ಚಿಂತೆ. ಅವರನ್ನು ಬೀಳ್ಕೊಡುವ ಮೊದಲು ಒಳ್ಳೆಯ ಮಾತನ್ನು ಹೇಳ್ತಾನೆ, “ಹನುಮಂತ ದೊಡ್ಡ ಸೇವೆಯನ್ನು ಮಾಡಿದ್ದಾನೆ. ನೀನು ಮಾಡಿದ ಸೇವೆಯನ್ನು ಇನ್ಯಾರೂ ಮಾಡಲಿಕ್ಕೆ ಸಾಧ್ಯ ಇಲ್ಲ, ಸಂತುಷ್ಟ ನಾನು. ಜಾಂಬವಂತ ಮೆಚ್ಚಿದೆ ನಾನು. ಗೋಲಾಂಗುಲನ ಅಧಿಪತಿ ಗವಾಕ್ಷ, ನಿನ್ನ ಸೇವೆಗೆ ರಾಮ ಮೆಚ್ಚಿದ್ದಾನೆ. ಅಂಗದ, ಮೈಂದ, ದ್ವಿವಿಧರು, ಕೇಸರಿ, ಸಂಪಾದಿ ನಿಮ್ಮ ಘೋರ ಯುದ್ಧ ನನ್ನ ಮನಸ್ಸನ್ನು ಮುಟ್ಟಿದೆ. ಗವಯ ಗವಾಕ್ಷ ಎಲ್ಲರೂ ನನಗಾಗಿ ಪ್ರಾಣ ಕೊಟ್ಟು ಹೋರಾಡಿದ್ದೀರಿ ನೀವು. ನಿಮ್ಮೆಲ್ಲರ ಪರಾಕ್ರಮ ನನ್ನ ಮನಸ್ಸಿಗೆ ಬಂದಿದೆ. ಹೊರಟು ಹೋಗಿ.” 
ಸುಗ್ರೀವ ಅಲಗಾಡಲಿಲ್ಲ ಕುಳಿತಲ್ಲಿಂದ. ಆಗ ಸುಗ್ರೀವನಿಗೆ ಹೇಳ್ತಾನೆ, “ಮನುಷ್ಯ ಪ್ರಯತ್ನದಿಂದ ದೈವವನ್ನು ಮೀರಲಿಕ್ಕೆ ಸಾಧ್ಯ ಇಲ್ಲ. ನೀನು ಮನುಷ್ಯನಾಗಿ ಏನು ಪ್ರಯತ್ನ ಮಾಡಬೇಕೊ ಅದನ್ನು ಮಾಡಿದ್ದೀಯೆ. ನಿನ್ನ ಕರ್ತವ್ಯವನ್ನು ಮಾಡಿದ್ದೀಯಾ. ಇದು ದೈವ. ನೀನು ಮಿತ್ರನಾಗಿ ಏನು ಪ್ರಯತ್ನ ಮಾಡಬೇಕೊ ಅದನ್ನು ಮಾಡಿದ್ದೀಯೆ. ಹಾಗಾಗಿ ನನ್ನ ಋಣವನ್ನು ನೀನು ತೀರಿಸಿದ್ದೀಯಾ. ಧರ್ಮಕ್ಕೆ ಭಯ ಪಟ್ಟು, ಬೆಲೆ ಕೊಟ್ಟು ನೀನು ನಿನ್ನ ಎಲ್ಲ ಕರ್ತವ್ಯವನ್ನು ಮಾಡಿದ್ದೀಯ. ನಾನು ನಿನಗೆ ಏನು ಮಾಡಿದ್ದೇನೋ ನೀನು ಆ ಋಣವನ್ನು ತೀರಿಸಿದ್ದಿಯಾ. ಅಪ್ಪಣೆ ಕೊಟ್ಟಿದ್ದೇನೆ ನಿನಗೆ ಹೊರಟು ಹೋಗು.” ಆ ಸನ್ನಿವೇಶ ಬಹಳ ಮನಮುಟ್ಟುವಂತಹದ್ದು. ಎಲ್ಲರೂ ಓಡಿಹೋಗ್ತಾ ಇದ್ದರು. ರಾಮನಿಲ್ಲದಿದ್ದರೇ ಅವರಿಗೆ ಏನು ರಕ್ಷಣೆ? ಇಂದ್ರಜಿತು ಮತ್ತೆ ಬಂದು ಇನ್ನೇನಾದರೂ ಮಾಡಿದ್ರೆ ಎದುರಿಸುವುದು ಹೇಗೆ? ರಾಮನ ಹೊರತಾಗಿ ರಾವಣನನ್ನೋ ಕುಂಭಕರ್ಣನನ್ನೋ ಇಂದ್ರಜಿತುವನ್ನು ಎದುರಿಸುವ ತಾಕತ್ತು ಎಲ್ಲಿದೆ? ಆದರೆ ಯಾರೂ ತಮ್ಮ ಜಾಗವನ್ನು ಬಿಟ್ಟು ಅಲುಗಾಡಲಿಲ್ಲ. ಸ್ವಾರ್ಥಭಾವ ಯಾರಲ್ಲೂ ಇಲ್ಲ. ರಾಮ ಹೀಗೆ ಹೇಳಿದಾಗ ಅವರು ಕಣ್ಣೀರು ಹಾಕಿದ್ರು ಹೊರತು ತಮ್ಮ ಜಾಗವನ್ನು ಬಿಟ್ಟು ಅಲುಗಾಡಲಿಲ್ಲ ಮತ್ತು ಸುಮ್ಮನೆ ಕುಳಿತಿದ್ದರು. ಸೇನೆ ಸ್ವಲ್ಪ ಆಚೆ ಈಚೆ ಆಗಿಬಿಡ್ತು, ಇಂದ್ರಜಿತು ಬಂದನೋ ಅಂತ ಅಂದುಕೊಂಡ್ರು.  ಸುಗ್ರೀವನಿಗೆ ಆಶ್ಚರ್ಯ. ಯಾಕೆ ಸೇನೆ ಅಸ್ತವ್ಯಸ್ತವಾಯಿತು ಎಂದು ಸುಗ್ರೀವ ಕೇಳಿದಾಗ ಅಂಗದ ಹೇಳ್ತಾನೆ, “ರಾಮ ಲಕ್ಷ್ಮಣರು ಶರಶೈಯೆಯಲ್ಲಿ ಮಲಗಿದ್ದಾರಲ್ವಾ!”. ಅಕಾರಣವಾಗಿ ಹೀಗೆ ಆಗಿಲ್ಲ ಎಂದು ವಿಭೀಷಣ ಹೇಳುತ್ತಿರುವಾಗಲೇ ವಿಭೀಷಣ ಗಧಾಪಾಣಿಯಾಗಿ ಬಂದ. ಎಲ್ಲರಿಗೂ ಅಭಿನಂದಿಸಿದ ವಿಭೀಷಣ. ಆಗ ಸುಗ್ರೀವ ಜಾಂಬವಂತನಿಗೆ ಎಲ್ಲರಿಗೂ ಬಂದವನು ವಿಭೀಷಣ ಅಂತ ಹೇಳು ಎಂದು ವಿನಂತಿ ಮಾಡಿದ. ಜಾಂಬವಂತ ಹೇಳಿದಾಗ ಎಲ್ಲರಿಗೂ ಸಮಾಧಾನ ಆಯಿತು. 
ವಿಭೀಷಣ ರಾಮನನ್ನು ನೋಡಿ ಆ ಪರಿಸ್ಥಿತಿಗೆ ಧೈರ್ಯ ಬಿಟ್ಟ. ತನ್ನ ಕೈಯನ್ನು ಒದ್ದೆ ಮಾಡಿಕೊಂಡು ಅವರಿಬ್ಬರ ಕಣ್ಣನ್ನು ಒರೆಸುತ್ತಾನೆ ವಿಭೀಷಣ. ಶೋಕವನ್ನು ತಾಳಲಾರದೇ ವಿಲಪಿಸುತ್ತಾನೆ, ಶೋಕಿಸುತ್ತಾನೆ. ಅವನು ತನ್ನ ಜಾತಿಯನ್ನೇ ನಿಂದಿಸುತ್ತಾನೆ. ಕೂಟದ ಯುದ್ಧ ಮಾಡುವವರು, ಮೋಸಗಾರರು. ಧರ್ಮಾತ್ಮರನ್ನು ಈ ಸ್ಥಿತಿಗೆ ತಂದರು. ಆಮೇಲೆ ಇಂದ್ರಜಿತುವನ್ನು ದುಷ್ಪುತ್ರ, ದುರಾತ್ಮ ಎಂದು ಕರೆಯುತ್ತಾನೆ. ಅವರ ಅವಸ್ಥೆಯನ್ನು ನೋಡಿ ಶಪಿಸುತ್ತಾನೆ. ಲಂಕಾ ರಾಜ್ಯವನ್ನು ರಾವಣನಿಂದ ಮುಕ್ತಗೊಳಿಸಿ ಲಂಕೆಗೆ ಬೆಳಕು ತರುವ ಕನಸಿತ್ತು.  ಅಲ್ಲಿ ಧರ್ಮ ರಾಜ್ಯವನ್ನು ಸ್ಥಾಪನೆ ಮಾಡಬೇಕೆಂಬ ಕನಸಿತ್ತು ಅವನಿಗೆ. ಆ ಕನಸು ಕಮರಿತ್ತು. ರಾವಣ ಎಂತಹ ಅಧರ್ಮಿ ಆದರೂ ವಿಜ್ರಂಭಿಸುತ್ತಾನೆ ಇನ್ನು. ಸುಗ್ರೀವ ವಿಭೀಷಣನಿಗೆ ಸಂತೈಸುತ್ತಾನೆ. ಆಮೇಲೆ ಸುಶೇಣನಿಗೆ ಹೇಳ್ತಾನೆ, ರಾಮ ಲಕ್ಷ್ಮಣರನ್ನು ಎತ್ತುಕೊಂಡು ಕಿಷ್ಕಿಂಧೆಗೆ ಹೋಗಿಬಿಡು. ನಿನ್ನ ಜೊತೆಗೆ ವೀರವಾನರರನ್ನು ಇಟ್ಟುಕೊ, ದಾರಿ ಮಧ್ಯದಲ್ಲಿ ಯಾರಾದರೂ ತೊಂದರೆ ಕೊಟ್ರೆ. ನಾನು ಈ ರಾವಣನನ್ನು ಕುಟ್ಟಿ ಅರೆದು ಬರ್ತೆನೆ. ತನ್ನ ರೋಷವನ್ನು ತೋರಿಸುತ್ತಾನೆ. ಆಗ ಸುಶೇಣ ಹೇಳ್ತಾನೆ,”ನನಗೆ ದೈವಾಸುರ ಯುದ್ಧ ನೆನಪು ಆಗ್ತಾ ಇದೆ. ಅಲ್ಲಿ, ಮಾಯಾವಿ ದಾನವರು ಇದೇ ರೀತಿಯಲ್ಲಿ ದೇವತೆಗಳನ್ನು ಕೊಲ್ತಾ ಇದ್ದರು. ಆ ಯುದ್ಧದಲ್ಲಿ ಕೆಲವರು ಎಚ್ಚರ ತಪ್ಪಿ ಬೀಳ್ತಾ ಇದ್ರು. ಕೆಲವರು ಗಾಯ ಆಗಿ ಬೀಳ್ತಾ ಇದ್ರು, ಕೆಲವರು ಸತ್ತೇ ಹೋಗಿದ್ದರು. ಮಂತ್ರೋಕ್ತ ವಿದ್ಯೆಗಳಿಂದ, ಮೃತ ಸಂಜೀವಿನಿಯಂತಹ ವಿದ್ಯೆಗಳಿಂದ, ಕೆಲವು ಔಷಧಿಗಳಿಂದ ಇವರನ್ನೆಲ್ಲ ಬ್ರಹಸ್ಪತಿ ಬದುಕಿಸುತ್ತಿದ್ದ. ಚಿಕಿತ್ಸೆ ಮಾಡ್ತಾ ಇದ್ದ. ಆ ಔಷಧಿಗಳನ್ನು ತರಲು ವಾನರರು ಕ್ಷೀರಸಾಗರಕ್ಕೆ ಹೋಗಲಿ. ಸಂಜೀವಕರಣಿ ಮತ್ತು ವಿಷಲ್ಲಕರಣಿ ಎಂಬ ಎರಡು ಗಿಡಮೂಲಿಕೆಯ ಬಗ್ಗೆ ವಾನರರಿಗೆ ಗೊತ್ತು. ಸಂಜೀವಕರಣಿ ಅಂದ್ರೆ ಅಷ್ಟೇ ಪ್ರಾಣ ಹೋಗಿದ್ರೆ ಮರಳಿ ಬರ್ತದೆ. ವಿಷಲ್ಲ ಕರಣಿ ಅಂದ್ರೆ ಒಳಹೊಕ್ಕ ಬಾಣಗಳನ್ನು ಅಥವಾ ಶಸ್ತ್ರಗಳನ್ನು ಹೊರಗೆ ಹಾಕ್ತದೆ ಅದು. ಇನ್ನೂ ಎರಡಿದೆ ಅಂತಹದ್ದೇ, ಒಂದು ಸಂಧಾನಕರಣಿ, ಅಂದ್ರೆ ಅಂಗಗಳು ಮುರಿದಿದ್ದರೇ ಕೂಡಿಸುತ್ತದೆ ಅದು. ಇನ್ನೊಂದು ಸಾವರನಕರಣಿ ಅಂದ್ರೆ ಕಲೆ ಕೂಡ ಉಳಿಯೋದಿಲ್ಲ. ನಾಲ್ಕು ವಿಶಿಷ್ಟವಾಗಿರತಕ್ಕಂತಹ ಮೂಲಿಕೆಗಳು. ಚಂದ್ರ ಮತ್ತು ದ್ರೋಣ ಎಂಬ ಪರ್ವತಗಳಿವೆ ಈ ಕ್ಷೀರಸಾಗರದ ಸಮೀಪ. ಅಲ್ಲೇ ಸಮುದ್ರಮಥನ ಆದದ್ದು ಮತ್ತು ಅಮೃತ ಹೊರಗೆ ಬಂದಿದ್ದು. ಹಾಗಾಗಿ ಇಲ್ಲಿ ಈ ಮೂಲಿಕೆಗಳು ಸಿಗುತ್ತವೆ. ಈ ಪರಮೌಷಧಗಳನ್ನು ಈ ದೇವತೆಗಳು ಅಲ್ಲಿ ಇಟ್ಟಿದ್ದಾರೆ, ಈ ವಾಯುಸುತ ಹನುಮಂತನನ್ನು ಕಳುಹಿಸು ಎಂಬುದಾಗಿ ಸುಶೇಣ ಹೇಳ್ತಾನೆ. 
ಹೇಳುತ್ತಿದ್ದ ಹಾಗೇ ಮಹಾಮಾರುತ ಬೀಸಿತು ಅಲ್ಲಿ. ಒಟ್ಟಿಗೆ ಮೋಡ ಮತ್ತು ಮಿಂಚು. ಸಮುದ್ರದ ಜಲರಾಶಿ ಅಸ್ತವ್ಯಸ್ತ ಆಗ್ತಾ ಇದೆ, ಭೂಮಿ ನಡುಗುತ್ತಾ ಇದೆ,  ಆ ಗಾಳಿ ಓಡುವಾಗ, ಸಮುದ್ರ ಮಧ್ಯದ ದ್ವೀಪಗಳಲ್ಲಿ ಇದ್ದಷ್ಟೂ ಮನೆಗಳು ಬುಡಸಮೇತ ಬಿದ್ದವು ಮತ್ತು ಒಂದು ಗಿಡವನ್ನೂ ಇಡಲಿಲ್ಲ. ಲಂಕೆಯಲ್ಲೂ ಅನೇಕ ಕೊಂಬೆಗಳು ಬಿದ್ದವು, ಗಿಡಗಳು ಮುರಿದು ಬಿದ್ದವು. ಸಮುದ್ರದಲ್ಲಿರುವ ಜಲಜಂತುಗಳು ಸಮುದ್ರದ ಕಡೆಗೆ ಓಡಿದವಂತೆ ಇದ್ದಕ್ಕಿದ್ದಂತೆ. ಏನಾಯಿತು ಎಂದು ಎಲ್ಲರೂ ನೋಡುತ್ತಿದ್ದಾಗ, ಅಗ್ನಿದೇವನಂತೆ ಹೊಳೆಯುವ ಗರುಡ, ಗರುಡನು ಆ ಕಡೆಗೇ ಬರ್ತಾ ಇದ್ದಾನೆ. ಗರುಡನನ್ನು ಕಪಿಗಳು ಕಂಡ್ರು, ಹಾಗೇ ರಾಮ ಲಕ್ಷ್ಮಣರನ್ನು ಸುತ್ತಿದ್ದ ಹಾವುಗಳೂ ಗರುಡನನ್ನು ಕಂಡ್ರು.  ಹೋ! ಗರುಡನನ್ನು ಕಂಡಿದ್ದೇ ಕಂಡಿದ್ದು ನಾಗಗಳೆಲ್ಲವೂ ಪಲಾಯನ ಮಾಡಿದ್ರು. ಬಾಣವಾಗಿ  ರಾಮ ಲಕ್ಷ್ಮಣರನ್ನು ಬಂಧಿಸಿದ್ದ ಸರ್ಪಗಳು ಪಲಾಯನ ಮಾಡಿದವು. ರಾಮ ಲಕ್ಷ್ಮಣರು ಇರುವಲ್ಲಿಗೆ ಗರುಡ ಬಂದಾಗ ಅವರು ಅವನನ್ನು ಬರಮಾಡಿಕೊಳ್ತಾ ಇದ್ದಾರೆ. ಗರುಡ ತನ್ನ ದಿವ್ಯ ಕೈಗಳಿಂದ ರಾಮ ಲಕ್ಷ್ಮಣರ ಮುಖವನ್ನು ನೇವರಿಸುತ್ತಾನೆ. ಮುಟ್ಟುತ್ತಿದ್ದಂತೇ  ಏನಾಶ್ಚರ್ಯ ಅಂದ್ರೆ ಅವರ ಗಾಯಗಳೆಲ್ಲವೂ ಮಾಯ. ಯಾಕೆಂದ್ರೆ ಸರ್ಪಗಳು ಏನೇ ಮಾಡಿದ್ರೂ ಅದಕ್ಕೆ ಗರುಡ ಔಷಧ. ಗರುಡ ಪಂಚಾಕ್ಷರಿ ಮಂತ್ರದಿಮ್ದ ಜಪ ಮಾಡಿ ತುಪ್ಪವನ್ನೊ ಅಥವಾ ದ್ರವ್ಯವನ್ನು ಸೇವನೆ ಮಾಡಿದ್ರೆ ವಿಷವನ್ನು ದೂರಮಾಡ್ತದೆ. ಶಕ್ತಿ ಆ ಮಂತ್ರಕ್ಕೆ ಇದೆ. ರಾಮ ಲಕ್ಷ್ಮಣರ ಶರೀರ ಪುನಃ ಮೊದಲಿನ ಬಣ್ಣಕ್ಕೇ ಬಂದವು. ಕೆಲವು ಸಂಗತಿಗಳೂ ಇಮ್ಮಡಿಯಾದವು. ತೇಜಸ್ಸು, ವೀರತ್ವ, ಬಲ, ಓಜಸ್ಸು, ಉತ್ಸಾಹ ಇಮ್ಮಡಿ ಆದವು. ಪ್ರದರ್ಶನ ಇಮ್ಮಡಿ ಆಯ್ತು. ಪ್ರದರ್ಶನ ಅಂದ್ರೆ ವಿಶೇಷ ಗುಣ – ಕೆಲವೊಂದು ಸಲ ಕಣ್ಣಿಂದ ನೋಡ್ತೇವೆ ಕೆಲವು ಊಹೆ ಮಾಡ್ತವೆ. ಆದರೆ ಕೆಲವೊಂದು ಸಂಗತಿಗಳನ್ನು ನಾವು ದರ್ಶನ ಮಾಡಬೇಕು. ಅದೊಂದು ವಿಶೇಷವಾಗಿರುವಂತಹ ನೇತ್ರ. ಅದಕ್ಕೆ ಪ್ರದರ್ಶನ ಅಂತ ಹೆಸರು. ಬುದ್ಧಿ, ಸ್ಮೃತಿ ಎಲ್ಲವೂ ಇಮ್ಮಡಿ ಆದವು.  ಇಬ್ಬರನ್ನೂ ಎಬ್ಬಿಸಿ ತಬ್ಬಿಕೊಂಡನು ಗರುಡ. 
ರಾಮನು ಗರುಡನಿಗೆ ಹೇಳಿದನು, ನಿನ್ನ ಕಾರಣದಿಂದಾಗಿ, ರಾವಣನ ಪುತ್ರ ಇಂದ್ರಜಿತುವಿಂದ ಉಂಟಾದ ಮಹಾಸಂಗ್ರಾಮವನ್ನು ನಾವು ದಾಟಿದೆವು. ಯಾರು ನೀನು, ನಿನ್ನನ್ನು ನೋಡಿದಾಗ ನನಗೆ ಯಾಕೆ ಪ್ರೀತಿ ಬರುತ್ತಿದೆ, ಹೃದಯಕ್ಕೆ ಇನ್ನಿಲ್ಲದ ಪ್ರಸನ್ನತೆಯಾಗುತ್ತಿದೆ. ತಂದೆ ದಶರಥನನ್ನು ಕಂಡಾಗ, ತಾತ ಅಜನನ್ನು ಕಂಡಾಗ ಬರುವ ಭಾವ ನಿನ್ನನ್ನು ನೋಡಿದಾಗ ನನಗೆ ಬರ್ತಿದೆ. ದಿವ್ಯಪುರುಷನೇ ನೀನು ಯಾರು ಎಂದು ರಾಮ ಕೇಳಿದಾಗ, ಹರುಷದಿಂದ ಅತ್ತನು ಗರುಡ. “ನಾನು ನಿನ್ನ ಸಖ, ನಿನಗೆ ಅಷ್ಟು ಹತ್ತಿರದವನು ನಾನು, ನಿನಗೆ ಎಷ್ಟು ಹತ್ತಿರ ನಾನು ಅಂದರೆ, ನಿನ್ನ ಪ್ರಾಣ ನಾನು” ಎಂದನು ಗರುಡ. ಅದು ತತ್ವಶಾಸ್ತ್ರದ ದೃಷ್ಟಿಯಿಂದ, ಪ್ರಾಣತತ್ವ. ಗರುಡ ಅಂದರೂ, ಹನುಮಂತ ಎಂದರೆ ಪ್ರಾಣತತ್ವ. ಮುಂದುವರೆಸಿ ಹೇಳಿದನು ಗರುಡ, “ನಿನಗೆ ಲಕ್ಷ್ಮಣ ಹೇಗೋ, ಹಾಗೇ ನಾನು. ಒಳಗಡೆ ಅಲ್ಲ, ಹೊರಗಡೆ ಸಂಚರಿಸುವ ಪ್ರಾಣತತ್ವ ನಾನು. ನನ್ನನ್ನು ಗರುಡ ಅಂತ ಕರೀತಾರೆ. ಕರ್ತವ್ಯದ ಕರೆಗೆ, ಓಡಿ ಬಂದೆನು. ನಾಗಬಂಧ ಬಿಡಿಸಲಾರದ್ದು, ಹಾಗೇ ನಮ್ಮಿಬ್ಬರ ಬಂಧವೂ ಬಿಡಿಸಲಾರದ್ದು. ಈ ನಾಗಪಾಶಬಂಧವನ್ನು ಬಿಡಿಸಲಿಕ್ಕೆ ಅಸುರರಿಂದ, ಸುರರಿಂದ, ಗಂಧರ್ವರಿಂದ, ಇಂದ್ರನಿಂದ ಸಾಧ್ಯವಿಲ್ಲ. ಇದಕ್ಕೆ ಪರಿಹಾರವಿಲ್ಲ. ಆದರೆ, ನಾನು ಬಂದರೆ ಇವರು ಇರುವುದಿಲ್ಲ. ನಿನ್ನ ಭಾಗ್ಯ ಈ ನಾಗಗಳಿಗೇನು ಗೊತ್ತು…! ಲಕ್ಷ್ಮಣನಿಗೆ ಏನಾಗಿಲ್ಲ ನೋಡು. ರಾಮ ದುಃಖಿಸುತ್ತಿದ್ದನು ಲಕ್ಷ್ಮಣನ ಕುರಿತು. ನನಗೆ ಸುದ್ದಿ ಬಂತು, ಹಾಗೆ ಓಡಿ ಬಂದೆ. ನಮ್ಮ ಸ್ನೇಹಧರ್ಮವಿದೆ. ರಾಕ್ಷಸರು ಮೋಸಗಾರರು. ನಾವು ಎಚ್ಚರವಾಗಿರಬೇಕು. ನಿಮಗೆ ಸರಳತೆಯೇ ಶಕ್ತಿ. ರಾಕ್ಷಸರು ನಿತ್ಯ ವಕ್ರರು. ಎಂದು ಹೇಳಿ ಗರುಡ, ಹೋಗಿ ಬರಲಾ ಎಂದನು. ಯುದ್ಧ ಮುಗಿಯುವಾಗ ನೀನು ಯಾರು, ನಾನು ಯಾರು ಎಂದು ತಿಳಿಯುತ್ತದೆ. ರಾಕ್ಷಸರನ್ನು ಸಂಹಾರಮಾಡಿ, ರಾವಣನನ್ನು ಸಂಹರಿಸಿ, ಸೀತೆಯನ್ನು ಮರಳಿ ಪಡೆದುಕೊಳ್ಳುವಿಯಂತೆ ಎಂದು ಹೇಳಿ ಗರುಡನು ತನ್ನ ಸ್ವಸ್ಥಾನಕ್ಕೆ ಹೊರಟನು. ಅದಕ್ಕಿಂತ ಮೊದಲು, ರಾಮನಿಗೊಂದು ಸಲ ಪ್ರದಕ್ಷಿಣೆ ಮಾಡಿ, ಆಕಾಶವನ್ನೇರಿ ಹೊರಟು ಹೋದನು. ಇದು ನಾಗಪಾಶಮೋಕ್ಷ. 
ಹೀಗೆ ರಾಮಲಕ್ಷ್ಮಣರು ಇಮ್ಮಡಿ ತೇಜಸ್ಸಿನಿಂದ ನಿಂತಿದ್ದಾರೆ. ಈ ವಾನರರ ಹರ್ಷಾಚರಣೆ ಶುರುವಾಯಿತು. ರಾಮಲಕ್ಷ್ಮಣರ ನೋವನ್ನು ನೋಡಿ, ಭಾರೀ ಸೋತಿದ್ದರು ಕಪಿಗಳು. ಈಗ, ಸಿಂಹನಾದವನ್ನು ಮಾಡಿ, ತಮ್ಮ ತಮ್ಮ ಬಾಲವನ್ನು ಅಲ್ಲಾಡಿಸಿದರು. ಭಾವಗಳನ್ನು ಬಾಲದಿಂದ ವ್ಯಕ್ತಪಡಿಸಿದರು. ಭೇರಿಗಳನ್ನು ಬಡಿದರು. ಮೃದಂಗ, ಶಂಖವನ್ನು ಊದಿದರು. ಕೂಗಿದರು, ಭುಜತಟ್ಟಿಕೊಂಡರು, ಚಪ್ಪಾಳೆ ತಟ್ಟಿದರು. ಆಮೇಲೆ ಮರಗಳನ್ನು ಕಿತ್ತರು. ಲಕ್ಷೋಪಲಕ್ಷ ಕಪಿಗಳು ಯುದ್ಧಕ್ಕೆ ಸಿದ್ಧರಾದರು. ನೇರವಾಗಿ ಲಂಕೆಯ ದ್ವಾರಗಳ ಬಳಿ ತೆರಳಿದರು. ಲಂಕೆಗೆ ಲಂಕೆಯೇ ನಡುಗುವಂತೆ ಕೂಗಿದರು ವಾನರರು. ಅಲ್ಲಿ ಲಂಕೆಯಲ್ಲಿ ಹರ್ಷದ ಸಭೆಯಲ್ಲಿ ಕೂತಿದಾನೆ ರಾವಣನು. ಅವನಿಗೆ ಭಯಂಕರ ಶಬ್ದ ಕೇಳಿತಂತೆ. ಯುದ್ಧಾರಂಭದ ಶಬ್ದ ಕೇಳಿತಂತೆ. ವಾನರರಿಗೆ ಸಂತಸವಾದಂತಿದೆ. ಸಮುದ್ರವೇ ಕ್ಷೋಭೆಗೊಳ್ಳುವಂತಹ ಶಬ್ದ. ರಾಮಲಕ್ಷ್ಮಣರು ಹತರಾಗಿದ್ದಾರೆ ಎಂದು ಡಂಗುರ ಮಾಡಿ ಆಗಿದೆ ಲಂಕೆಯಲ್ಲಿ. ಈಗೇನಾಯಿತು..? ಶಂಕೆ…! ಏನಿದು, ಮತ್ತೆ ಯಾರು ಬಂದರು ಎಂದು ರಾಕ್ಷಸ ಸೈನಿಕರ ಕರೆದು, ಬೇಗ ಹೋಗಿ ನೋಡಿ ಎಂದ. ಸೈನಿಕರು ಕೋಟೆ ಹತ್ತಿ ನೋಡಿದಾಗ, ಇಡೀ ಕಪಿಸೈನ್ಯ ಬಂದು ನಿಂತಿದೆ. ಸುಗ್ರೀವ ಮುಂಚೂಣಿಯಲ್ಲಿದ್ದಾನೆ. ರಾಮಲಕ್ಷ್ಮಣರು  ಕಂಡರು. ಒಂದು ಗಾಯದ ಗುರುತಿಲ್ಲ… ! ರಾಮಲಕ್ಷ್ಮಣರ ಕಂಡ ರಾಕ್ಷಸರು ಕುಸಿದರು. ಹೇಗೆ ಇದೆಲ್ಲ ಎನ್ನುವುದು ಅರ್ಥವಾಗಲಿಲ್ಲ ಅವರಿಗೆ.
ಕೋಟೆಯೊಳಗೆ ರಾವಣನಲ್ಲಿಗೆ ಬಂದು, ರಾಮಲಕ್ಷ್ಮಣರು ಯುದ್ಧಕ್ಕೆ ಸಿದ್ಧರಾಗಿ ನಿಂತಿದ್ದಾರೆ.  ಅಲ್ಲಿ ಹೇಗೆ ನೋಡಿದ್ದರೋ ಹಾಗೇ ವಿವರಿಸಿದರು ಸೈನಿಕರು. ಈ ವಿಷಯ ಕೇಳಿ, ರಾವಣ ದೊಪ್ಪನೆ ಕುಸಿದನು. ಹೇಗೆ ಸಾಧ್ಯ ಇದು ಎಂದು ತಿಳಿಯಲಿಲ್ಲ ರಾವಣನಿಗೆ. ಆತನಿಗೆ ಗೊತ್ತಿರುವ ಹಾಗೆ, ನಾಗಪಾಶಬಂಧಕ್ಕೆ ಪರಿಹಾರವಿಲ್ಲ. ರಾಮಲಕ್ಷ್ಮಣರು ಎದ್ದು ಬಂದಿದ್ದು ಹೇಗೆ ಎಂದು ಅರ್ಥವಾಗಲಿಲ್ಲ. ಚಿಂತೆ ಹಾಗೂ ಶೋಕಗಳು ರಾವಣನನ್ನಾವರಿಸಿದವು. ಮುಖಬಾಡಿತು. ಆ ಸರ್ಪಗಳಿಗೆ ವರವಿದೆ, ಅಂಥಹ ಸರ್ಪಗಳು. ಅಂತಹ ಅಸ್ತ್ರಬಂಧವನ್ನು  ಮಾಡಿದ ಬಳಿಕವೂ ಅವರು ಎದ್ದು ಬಂದರೆಂದರೆ, ನನಗೆ ಸಂಶಯ. ನಮ್ಮ ಇನ್ಯಾವ ಉಪಾಯಗಳೂ, ರಾಕ್ಷಸರೂ, ಆಯುಧಗಳೂ ಸರಿಸಾಟಿಯಲ್ಲ ಅವರಿಗೆ. ನನ್ನ ಸಾಮರ್ಥ್ಯ, ಶಕ್ತಿ ಇವುಗಳೆಲ್ಲವೂ ಸಂಶಯಗ್ರಸ್ಥ. ಈವರೆಗೆ ನಾಗಪಾಶಬಂಧ ಆದಲ್ಲಿ ಜೀವಹೋಗಿದೆ. ಆದರೆ ಇದೇನು….? ಎಂದು ರಾವಣನು ಸಂಪೂರ್ಣವಾಗಿ ಚಿಂತಾಕ್ರಾಂತನಾಗಿ ಆಸನದಲ್ಲಿ ಕುಸಿದನು. ಮುಂದೇನಾಯಿತು…? ಮುಂದಿನ ಪ್ರವಚನದಲ್ಲಿ ಕೇಳೋಣ…
#ವಿಷ್ಣುಗುಪ್ತ_ವಿಶ್ವವಿದ್ಯಾಪೀಠ #DhaaraRamayan#ಧಾರಾ_ರಾಮಾಯಣ ಪ್ರವಚನಮಾಲಿಕೆಯ 137 ನೇ ದಿನದ ಅಕ್ಷರರೂಪ :

ಪ್ರವಚನವನ್ನು ಇಲ್ಲಿ ಕೇಳಿರಿ:

ಪ್ರವಚನವನ್ನು ನೋಡಲು:

Facebook Comments Box