ಮಹಾಪುರುಷರ ನಡೆನುಡಿಗೆ ಸಾಮಾನ್ಯರ ಲೆಕ್ಕಾಚಾರಕ್ಕೂ ಮೀರಿದ ಅರ್ಥವ್ಯಾಪ್ತಿಯಿರುತ್ತದೆ.
ಸಾಮಾನ್ಯರಿಗೂ ಮಹಾತ್ಮರಿಗೂ ಇರುವ ವ್ಯತ್ಯಾಸವೇ ಅದು.

ರಾಮಲಕ್ಷ್ಮಣರನ್ನು ವಿಶ್ವಾಮಿತ್ರರು ಕರೆತರುವಾಗ ಇದ್ದ ಲೆಕ್ಕಾಚಾರ ಯಜ್ಞರಕ್ಷಣೆಯಾಗಬೇಕು, ರಾಕ್ಷಸರನ್ನು ಶಿಕ್ಷಿಸಬೇಕು. ಹಾಗಿದ್ದರೆ ಯಾಗ ಮುಗಿದಮೇಲೆ ಅವರಬ್ಬರು ಮರಳಬೇಕಿತ್ತಲ್ಲ, ಆದರೆ ಹಾಗಾಗಲಿಲ್ಲ.
ವಿಶ್ವಾಮಿತ್ರರ ಬಳಿಸಾರಿ ಕಿಂಕರರು ನಾವು ಆಜ್ಞಾಪಿಸಿ. ನಿಮ್ಮ ಯಾವ ಅಪ್ಪಣೆ ಪಾಲಿಸಬೇಕು ಎಂದು ವಿನಮ್ರವಾಗಿ ಕೇಳಿದಾಗ ವಿಶ್ವಾಮಿತ್ರರೊಡಗೂಡಿ ಅಲ್ಲಿಯ ಸಮಸ್ತ ಋಷಿಗಳೆಂದರು ಮಿಥಿಲಾಧಿಪತಿ ಜನಕನ ಮನೆಯಲ್ಲಿ ಯಜ್ಞ ನಡೆಯುತ್ತಿದೆ. ನಾವು ಹೊರಟಿರುವೆವು ನೀವಿಬ್ಬರೂ ಬರುವಿರಂತೆ. ಅಲ್ಲಿ ಅದ್ಭುತವಾದ ಅಳೆಯಲಸಾಧ್ಯವಾದ ಶಕ್ತಿಯಿರುವ ಧನುರತ್ನವಿದೆ ಅದನ್ನು ನೋಡಬಹುದು ಎಂದರು. ಹೊರಟರು ರಾಮಲಕ್ಷ್ಮಣರು ವಿಶ್ವಾಮಿತ್ರರ ಹಿಂಬಾಲಿಸಿ.

ವಿಶ್ವಾಮಿತ್ರರು ರಾಮನನ್ನ ಕರೆತಂದಿದ್ದರ ಹಿಂದೆ ಎರಡು ಮಹದುದ್ದೇಶವಿದೆ. ವಿದ್ಯಾಭ್ಯಾಸವನ್ನು ನೀಡಿ
ಮುಂದಿನ ಮಹಾಯುದ್ಧಗಳಿಗೆ ರಾಮನನ್ನು ಸಜ್ಜುಗೊಳಿಸುವುದು ಹಾಗೂ ರಾಮಾವತಾರದ ಸಾರ್ಥಕತೆಗೆ ನಿಮಿತ್ತವನ್ನು ನೀಡುವುದು

ಪ್ರವಚನವನ್ನು ಇಲ್ಲಿ ಕೇಳಿರಿ :

ಪ್ರವಚನವನ್ನು ನೋಡಲು :

Facebook Comments