ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ:

ನಾವು ಬಿಟ್ಟರೂ ಅದು ಬಿಡದು..ಬದುಕಿನಲ್ಲಿ ಒಮ್ಮೊಮ್ಮೆ ಅನುಭವಕ್ಕೆ ಬರುವ ಸಂಗತಿಯಿದು..ಬೇಡದ ಅದೆಷ್ಟೋ ಸಂಗತಿಗಳನ್ನ ನಾವು ಬಿಡ್ತೇವೆ. ಅದು ನಮ್ಮನ್ನ ಬಿಡೋದೇ ಇಲ್ಲ. ವ್ಯಸನದ ಹಾಗೆ…

13 ನೇ ದಿನ ಅಪ್ಪನ ಅಪರಾದ ಕೃಯೆಯನ್ನ ಭರತ ಪೂರೈಸಿದ್ದಾನೆ…೧೪ ನೆಯ ದಿನದ ಪ್ರಾರ್ಥಕಾಲ ಎದ್ದು ಆಸೀನನಾಗಿದ್ದಾನೆ…ಆ ಸಮಯದಲ್ಲಿ ರಾಜಕತೃಗಳು ಬಂದು ಭರತನನ್ನು ಸುತ್ತುವರಿದನು..ಅವರು ರಾಜನಿಗೆ ಮಾರ್ಗದರ್ಶನ ಮಾಡುವವರು…ಅಂತಹ ರಾಜನಿಗೆ ಸಮೀಪದವರು..ಸಚಿವರು ..ಸುತ್ತುವರೆದು ಹೇಳಿದ್ದೇನು ಅಂದ್ರೆ , ರಾಮನನ್ನು ಕಾಡಿಗೆ ಕಳಿಸಿ..ದಶರತ ಸ್ವರ್ಗವನ್ನೇರಿಯಾಗಿದೆ…ಮತ್ಯಾರು ಇಲ್ಲ ಈಗ ಇಂದು ನೀನು ನಮಗೆ ರಾಜನಾಗು ..ಕೂಡ್ಲೆ ಭರತ ನನಗದು ಬೇಡ..ನಾನು ರಾಜ್ಯವನ್ನು ಬಯಸಲಿಲ್ಲ..ನಾನು ಈ ಕುಂತಂತ್ರದಲ್ಲಿ ಭಾಗಿಯಾಗಿಲ್ಲ..ಅವಾಗ ರಾಜ ಕತೃಗಳು ಈ ಕುತಂತಂತ್ರದಲ್ಲಿ ನೀನು ಭಾಗಿ‌ಆಗಿಲ್ಲ ಅದು ತಾನಾಗೇ ಬಂದಿದೆ ನಿನಗದು ತಗೊಂಡ್ರೆ ಅಪರಾಧವಿಲ್ಲ. ಯಕಂದ್ರೆ ರಾಜ್ಯದಲ್ಲಿ ರಾಜ ಇಲ್ವೋ ಅಲ್ಲಿ ವಾಸ ಮಾಡ್ಬಾರ್ದು…ರಾಜಾನ್ ಪ್ರಥಮಾಮ್ ವಿಂದ್ಯೆ..ಮೊಟ್ಟ ಮೊದಲು ರಾಜ ಬೇಕು. ರಾಜ ಇದ್ರೆ ಪತ್ನಿ. ಈಗ ಮದ್ವೆ ಮಾಡ್ಕೊಬೇಕಾದ್ರೆ ರಾಜ ಇದ್ದಾಗ ಮದ್ವೆ ಮಾಡ್ಕೋಬೇಕು. ಮತ್ತೆ ಸಂಪತ್ತು..ಮೊದಲು ದೊರೆ, ಮತ್ತೆ ಪತ್ನಿ , ಮತ್ತೆ ಸಂಪತ್ತು. ಹೀಗಿರುವಾಗ ಅನಾಯಕವಾದ ರಾಜ್ಯ ಹೇಗಿರ್ಲಿಕೆ ಸಾಧ್ಯ . ರಾಮನಂತೂ ಯಾವ ಕಾರಣಕ್ಕೂ ರಾಜ್ಯವನ್ನೊಪ್ಪದೇ ಕಾಡಿಗೆ ಹೊರಟೋಗಿದ್ದಾನೆ…ಬೇರೆ ದಾರಿ ಇಲ್ಲ..ಈ ಅಭಿಷೇಕಕ್ಕೆ ಬೇಕಾದೆಲ್ಲವನ್ನು ಸಿದ್ಧತೆ ಮಾಡಿಕೊಂಡಿದ್ದಾರೆ…ರಾಜನಾಗು ಅಂತ ಹೇಳ್ತಿದ್ದಾರೆ..ಪರೀಕ್ಷೆ… ಯಾಕೆ ಪರೀಕ್ಷೆ ಅಂದ್ರೆ ತಾನೇನು ಪ್ರಯತ್ನ ಮಾಡಿಲ್ಲ..ನನಗೆ ಬಂದಿದೆ ರಾಜ್ಯ ..ಬೇರೆ ಗತಿ ಇಲ್ಲ..ಅಣ್ಣ ಕಾಡಿಗೆ ಹೋಗಾಗಿದೆ…ರಾಜ್ಯ ಅನಾತವಾಗ್ತದೆ ಅಂತಾದ್ರು ಭರತ ಸ್ವೀಕರಿಸಲೇಬೇಕಾಗಿದೆ..

ಭರತ ಏನು ಮಾಡಿದ ಅಂದ್ರೆ ಸಿದ್ಧತೆ ಮಾಡಿದ ಅಭಿಷೇಕದ ಸಾಮಗ್ರಿಗಳಿಗೆ ಒಂದು ಪ್ರದಕ್ಷಿಣೆ ಬಂದನಂತೆ…ರಾಮನ ಸಭಿಷೇಕಕ್ಕೆ ಸಿದ್ಧ ಮಾಡಿದಂತಹ ಶ್ವೇತಛತ್ರವೋ ಇತ್ಯಾದಿ ಇತ್ಯಾದ ಇವುಗಳಿಗೆ ಪ್ರದಕ್ಷಿಣೆ ಬರ್ತಾನೆ…ಬಂದು ಎಲ್ಲಾ ರಾಜಕತೃಗಳಿಗೆ ಹೀಗೆಂದ ….

ಏನಂದ ಅಂದ್ರೆ ನಮ್ಮ ಕುಲದಲ್ಲಿ ದೊಡ್ಡವನು ರಾಜನಾಗಬೇಕು.. ಇದು ಉಚಿತ…ರಾಮನು ರಾಜನಾಗಲಿ ಅಂತ ಹೇಳಿ..ರಾಮನಿಗೆ ಆಗಬೇಕಾಗಿರುವುದನ್ನ ನನಗೆ ಕಟ್ಟಬೇಡಿ…ನಮ್ಮಣ್ಣ ರಾಮ ಸವನು ರಾಜನಸಗ್ತಾನೆ…ನಾನು ಕಾಡಿಗೆ ಹೋಗುತ್ತೆನೆ…

೧೪ ವರ್ಷದ ವನವಾಸವನ್ನು ನಾನು ಮಾಡೂತ್ತೇನೆ. ಅಣ್ಣನ ಪರವಾಗಿ. ಈಗ ಆಗಬೇಕಾಗಿರುವುದು ಏನು ಎಂದರೆ ಸೇನೆ ಸಿದ್ದವಾಗಲಿ. ಸೇನೆ ಏಕಪ್ಪ ಸಿದ್ದವಾಗಬೇಕು ಎಂದರೆ ರಾಮನನ್ನು ಕಾಣಲು ಯಾವರಾಜ್ಯದ ಮೇಲೆ ದಂಡೆತ್ತಿ ಹೋಗಲು, ಅಣ್ಣನ ನಿರ್ಣಯದ ಮೇಲೆ ದಂಡೆತ್ತಿ ಹೋಗಲು ಅಂದರೆ ತಾನು ಮಾತ್ರವಲ್ಲ, ಎಲ್ಲರು ಹೋಗಿ ರಾಮನ ಹತ್ತಿರ ಕೇಳಿಕೊಳ್ಳಲು. ಯಾಕೆಂದರೆ ನಾನು ಒಬ್ಬ ಹೋಗಿ ಕೇಳಿಕೊಂಡರೆ ತಮ್ಮ, ಸಣ್ಣವನು. ನನ್ನನ್ನ ಒಪ್ಪಿಸಿ, ಗಧರಿಸಿ ಬಿಟ್ಟಾನು ಅನ್ನುವ ಕಾರಣಕ್ಕೆ ಎಲ್ಲರು ಒಟ್ಟಾಗಿ ಹೋಗಿ ರಾಮನನ್ನು ಅಯೋಧ್ಯೆಗೆ ಬರಲು ಒತ್ತಾಯಿಸಬೇಕು ಅನ್ನುವ ತಾಯರಿಯ ಅಂಗವಾಗಿ ಚತುರಂಗ ಸೈನ್ಯವು ಸಿದ್ಧವಾಗಲಿ.

ನೀವೇನು ಪಟ್ಟಾಭಿಷೇಕದ ಸಿದ್ದತೆಯನ್ನು ಮಾಡೀದ್ದೀರಿ ಇದು ಬೇಕಾಗುತ್ತದೆ, ಇರಲಿ, ಇದನ್ನು ತಗೊಂಡೇ ಹೋಗೋಣ. ಅಲ್ಲೇ ಮಾಡಿಬಿಟ್ಟರಾಯಿತು, ಸಂಧರ್ಭ ಬಂದರೆ. ಇಂತಲ್ಲೇ ಮಾಡಬೇಕೆಂದಿಲ್ಲ ಪಟ್ಟಾಭಿಷೇಕವನ್ನ. ಬರೋದ್ರೊಳಗಡೆ ಮನಸು ಬದಾಯಿಸಿಕೊಂಡರೆ ಕಷ್ಟ. ಎಲ್ಲಾ ಸೇರಿ ವತ್ತಾಯಿಸಿ ಒಪ್ಪಿಸಿ ಅಲ್ಲಿಯೇ ಅಭಿಷೇಕ ಮಾದಿಬಿಡೋದು ರಾಮನಿಗೆ. ಹಾಗಾಗಿ ಅಭಿಷೇಕದ ಸಾಮಗ್ರಿಗಳನ್ನು ಮುಂದಿಟ್ಟುಕೊಂಡು ರಾಮನಿಗಾಗಿ ನಾನು ಕಾಡಿಗೆ ಹೋಗುತ್ತೇನೆ. ಯಜ್ಞ ಶಾಲೆಯಿಂದ ಅಗ್ನಿಯನ್ನು ಅಗ್ನಿಹೋತ್ರ ಗೃಹಕ್ಕೆ ತರುವಂತೆ ನಾನು ರಾಮನನ್ನು ಕಾಡಿನಿಂದ ನಾಡಿಗೆ ಕರೆತರುತ್ತೇನೆ. ಅಗ್ನಿ ಅದು ಯಜ್ಞಶಾಲೆಯಲ್ಲಿ ಇರುವುದು ಅಪರಾದವಲ್ಲ, ಆಮೇಲೆ ಅಗ್ನಿಹೋತ್ರ ಗೃಹಕ್ಕೆ ಬರಬೇಕು ಮರಳಿ. ಹಾಗಾಗಿ ರಾಮಾಗ್ನಿಯನ್ನು, ರಾಮಪರಂಜ್ಯೋತಿಯನ್ನು ನಾನು ಮರಳೀ ನಾಡಿಗೆ ತರುತ್ತೇನೆ. ತಾಯಿಗೂ ಒಂದು ಮಾತನ್ನ ಹೇಳದೇಹೋದರೆ ಸಮಾದಾನವಿಲ್ಲ. ಈ ನನ್ನ ಮಾತೃಗಂಧಿನಿಯನ್ನು, ಮಾತೃಗಂಧಿನಿ ಅಂದರೆ ಯಾಯಿಗೆ ತಾಯಿಯ ಸೆಂಟ್ (ಸುಗಂಧ) ಹಾಕಿದಂತೆ. ತಾಯಿಯಲ್ಲ. ಕೆಲವುಸಲ ಏನು ಎಂದರೆ ಗಂದದ ಹಾರ ಅಂತ ಇರುತ್ತದೆ ಅಂಗಡಿಯಲ್ಲಿ ಯಾವುದೋ ಮರದ ಚಕ್ಕೆ ಅದರ ಗಂದದ ಹಾರದ ಹಾಗೆ ಮಾಡಿ ಸ್ವಲ್ಪ ಗಂದದ ಸಂಟ್ ಹಾಕಿಬಿಟ್ಟರೆ ಗಂದದ ಹಾರವೇ ಆಗಿಹೋಯ್ತು ಅದು. ಶ್ರೀಗಂಧವನ್ನೇ ತಂದು ಮಾಡುವುದಾದರೆ ಖರ್ಚು ಎಷ್ಟಾಗುತ್ತದೆ? ಗಂದದ ಹಾರ ಅಂತ ಬರ್ತದಲ್ಲ ಈಗ ತಂದು ತಂದು ಹಾಕುತ್ತರೆ ಅದು ಯಾವುದೋ ಮರದ್ದು, ಅದಕ್ಕೆ ಅಪ್ಪ-ಅಮ್ಮ ಇಲ್ಲ, ಯವುದು ಅಂತ ಗೊತ್ತಿಲ್ಲ. ಹೀಗೆ ತಾಯಿ ಇವಳು ಅಂತ. ಇವಳು ತಾಯಿಯಲ್ಲ, ಬರೇ ಒಂದು ತಾಯಿಯ ಪರಿಮಳ ಹಕಿಕೊಂಡು, ಓಡಾಡಿಕೊಂಡು ಇದಾಳೆ. ಹಾಗೆ ಮಾತೃಗಂಧಿನಿ ಅವಳು. ಇವಳ ಇಚ್ಛೆಯನ್ನು ನಾನು ಪೂರೈಸುವುದಿಲ್ಲ. ಇವಳ ಇಚ್ಛೆ ನಾನು ನಡೆಯೋಕೆ ಬಿಡುವುದಿಲ್ಲ. ಹಾಗಾಗಿ ನಾನು ಕಾಡಿನಲ್ಲಿ ವಾಸ ಮಾಡುತ್ತೇನೆ. ರಾಮ ದೊರೆಯಾಗುತ್ತಾನೆ. ಅದಕ್ಕೆ ಬರಿಯ ಮಾತಲ್ಲ ಭರತನದ್ದು, ಕೃತಿಯಲ್ಲಿ ಮಾಡಿ ತೋರಿಸುತ್ತನೆ. ಅವನ ಮನಸ್ಸಿನಲ್ಲಿ ಯೋಜನೆಗಳಿವೆ. ಶಿಲ್ಪಿಗಳು ಮಾರ್ಗವನ್ನು ಸಿದ್ದಗೊಳಿಸಲಿ. ಕುಷಲರಾದ ಶಿಲ್ಪಿಗಳು ಇಲ್ಲಿಂದ ಗಂಗಾನದಿಯವರೆಗೆ ಸುಪ್ರಶಸ್ತವಾದ ಮಾರ್ಗವನ್ನು ಸಿದ್ದಗೊಳಿಸಿರಿ. ಅದೇಕೆಂದರೆ ರಾಮ, ಲಕ್ಷ್ಮಣ, ಸೀತೆ ಅವರೇ ಮೂರುನಾಲ್ಕು ಜನ ಹೋಗುವುದಾದರೆ ಅದೇದಾರಿ ಸಾಕು. ಈಗ ಚತುರಂಗ ಸೈನ್ಯ ಹೋಗುವುದಾದರೆ ಅದಕ್ಕೆ ಪ್ರಶಸ್ಥವಾದ ವಿಶಾಲವಾದ ಮಾರ್ಗ ಬೇಕು. ಚತುರಂಗ ಸೈನ್ಯ ಮಾತ್ರವಲ್ಲ ಯರ್ಯಾರೋ ಬರುವವರಿದ್ದಾರೆ. ಅಯೋಧ್ಯೆಗೆ ಅಯೋಧೆಯೇ ಬರುವುದಿದೆ. ಹಾಗಾಗಿ ಸರಿಯಾದ ದಾರಿ ಬೇಕಾಗುತ್ತದೆ.

ಶಿಲ್ಪಿಗಳು ಸಮ-ವಿಷಮಗಳನ್ನು ಗಮನಿಸಿ ಏರು-ತಗ್ಗುಗಳಿದ್ದರೆ ಸಮಗೊಳಿಸಿ ಸರಿಯಾದ ಪಥ, ಷಟ್ಪಥ ಹಾಗೆ ಸುಪ್ರಶಸ್ಥವಾದ ಮಾರ್ಗವನ್ನ ಗಂಗಾನದಿಯ ಒರೆಗೆ ಸಿದ್ಧಗೊಳಿಸಲು ಶಿಲ್ಪಿಗಳು ಹೊರಡಲಿ.

ಹಾಗೆಯೇ ರಕ್ಷಕರು ರಕ್ಷಣಾ ವಿಭಾಗದವರು ಅವರು ಮೊದಲು ಹೋಗಲಿ. ಯಾಕೆಂದರೆ ಎಲ್ಲಿ ದಾರಿ ದುರ್ಗಮ, ಎಲ್ಲಿ ದಾರಿ ಇಲ್ಲ, ಎಲ್ಲಿ ಉಂಟು ಎಲ್ಲಿ ಇಲ್ಲ ಎಂದು ತಿಳಿಯಲು ರಕ್ಷಣಾ ವಿಭಾಗದವರು ಮುಂದೆ ಹೋಗಲಿ. ಎಂದಾಗ ಅಲ್ಲಿ ಸೇರಿದ ಜನಸ್ತೋಮ ತಲೆದೂಗಿದರಂತೆ.

ಏನಾದರೂ ನೀನು ರಾಜ್ಯ ತಗೆದುಕೊಳ್ಳೋದಿಲ್ವಾ ಹಾಗಾದರೆ , ಪರೀಕ್ಷೆಗಳು ರಾಮ ಬೇಕೋ? ರಾಜ್ಯ ಬೇಕೋ!? ಒಂದು ಸಲ ಮೇಲಿಂದ ,ಕೆಳಗಿಂದ ಎಲ್ಲೆಲ್ಲಿಂದಲೋ ಪರೀಕ್ಷೆಗಳು ಬರ್ತದೆ..ಆದರೆ ಆತನ ಮನಸ್ಸು ದೃಡ. ಅಲ್ಲಿ ನೆರೆದ ಜನ ಭರತನಿಗೆ ಹೇಳಿದರಂತೆ ಇಂತಹಾ ಮಾತಾಡುವ ನಿನಗೆ ಲಕ್ಷ್ಮಿ ಒಲಿದು ಬರಲಿ. ನಿನಗೆ ಒಳ್ಳೆದಾಗಲಿ ಅನ್ನುವ ಆಶೀರ್ವಾದವದು…ದೊಡ್ಡಣ್ಣನಿಗೇ ರಾಜ್ಯ ಸಿಗಬೇಕೇಂದು ನೀನು ಕಂಕಣ ಬದ್ಧನಾಗಿದ್ದೀಯಲ್ಲ…ನಿನ್ನಗೆ ಲಕ್ಷ್ಮಿ ಒಲಿದು ಬರಲಿ..ಎಂದು ಹೇಳುವಾಗಲೇ ಅವರೆಲ್ಲರ ಕಣ್ಣಲ್ಲಿ ನೀರು ತುಂಬಿತು…ಲೋಕವು ಭರತನಿಗೆ ಹೇಳಿದ್ದು ಮಹಾಲಕ್ಷ್ಮಿ ಯೇ ಒಲಿದು ಬರಲಿ ನಜನಗೆ ಎಂದು ಹೇಳಿತಂತೆ…ಈ ಮಾತನ್ನು ನಾವಹ ನೆನಪಿಸಿದುದು ವರಮಹಾಲಕ್ಷ್ಮಿ ಹಬ್ಬದ ದಿನ..

ನಿಜವಾಗಿಯೂ ಪ್ರಾರಂಭವಾಯಿತು ಮಾರ್ಗ ನಿರ್ಮಾಣದ ಕಾರ್ಯ ಯಾರೆಲಗಲಾ ಆ ಕಾರ್ಯಕ್ಕೆ ಹೊರಟರು ಅಂದ್ರೆ ನೆಲವನ್ನು ಬಲಗಲವರು ,ಸೂತ್ರಕರ್ಮವಿಶಾರದರು , ನೆಲವನಗನಜ ಅಗೆಯುವವರು, ಯಂತ್ರವನ್ನು ನಿರ್ಮಾಣ ಮಾಡುವವರು , ನೌಕೆ ನಿರ್ಮಾಣ ಮಾಡುವವರು , ಸುಪರ್ ವೈಸರ್ಸ್, ಕಾರು , ಅಂದ್ರೆ ಪ್ರಧಾನ ಶಿಲ್ಪಿಗಳು ರಥ ಮಾಡುವವರು ,ಕ್ಷಿಪಣಿ ಮಾಡುವವರು , ದೂರಕ್ಕೆ ಎಸೆಯುವ ಯಂತ್ರಗಳು ಅವುಗಳು ಬೇಕಾಗುತ್ತದೆ.ಯಾವುದಾದರೂ ಆಪತ್ತು ಬಂದ್ರೆ ಬೇಕಾಗುತ್ತದೆ..ಕಲ್ಲನ್ನ ದೂರದವರೆಗೆ ಎಸೆಯಲು ಬರಬೇಕು .ಅಂತಹ ಯಂತ್ರ…ಬಡಗಿಗಳು , ಮರಗಳನ್ನ ಕಡೆಯುವಂತವರು , ಬಾವಿ ಮಾಡುಔರು ,ಸುದಾಕಾರಕು ಅಂದ್ರೆ ಸುಣ್ಣ … ಬಿದಿರಿನ ಕೆಲಸ ಮಾಡುವವರು..ಇನ್ನು ಕೆಲವರು ನೋಡುವವರು ..ಇದೂ ಬೆಕಾಗ್ತದೆ..ಇದು ಮಾಡುವವರು ನೋಡುಔರು ಆಗ್ಬಾರ್ದು ..ನೋಡುವವರು ಮಾಡುವವರಾಗ್ಬಾರ್ದು. ಇದಿಷ್ಟು ಮುಂದೆ ಹೋಗಬೇಕಾಗಿದ್ದ ಸಮೂಹಗಳು..ಹಿಂದೆ ಬರುಔರು ಇನ್ನೂ ಇದ್ದಾರೆ..ಅವರಿಗೆಲ್ಲಾ ಬಾರಿ ಖುಷಿ. ನಾವೆಲ್ಲಾ ರಾಮನ ಹುಡುಕಲು ಹೋಗುವವರು , ರಾಮ ಬರ್ತಾನೆ ನಮ್ಮದೂ ಸೇವೆ ಇದೆ ಅದರಲ್ಲಿ ಅಂತ. ನಾವು ಮಾಡಿದ ರಸ್ತೆಯಲ್ಲಿ ರಾಮ ಬರ್ತಾನೆ ಹೀಗೆ ಒಂದು ಒಳ್ಳೆಯ ಕೆಲಸಕ್ಕೆ ಹೊರಟಾಗ ಆಗುವ ಸಂತೋಷವೇ ಬೇರೆ ಅದು ಒಳ್ಳೆಯ ಕೆಲಸ ಮಾಡಿದವರಿಗೆ ಮಾತ್ರ ಗೊತ್ತಿರುತ್ತದೆ. ಅದಿಲ್ಲದೆ ಇದ್ರೆ ಗೊತ್ತಾಗುದೇ ಇಲ್ಲ ಅದು ಏನು ಅಂತ . ಕೇಡುಗರಿಗೆ ಒಳ್ಳೆಯ ಕೆಲಸದಲ್ಲಿರುವ ತೃಪ್ತಿ ಗೊತ್ತಾಗುವುದೇ ಇಲ್ಲ.

ಹಾಗೆ ಪ್ರಜೆಗಳಿಗೆಲ್ಲಾ ತುಂಬಾ ಹರ್ಷವಾಯಿತು ಮದುವೆಗೆ ಹೊರಟಾಗೆ ಹೊರಟಿತು ಕೆಲಸದವರ ಸಮೂಹ. ಎಲ್ಲರಿಗೂ ರಾಮ ಕಾರ್ಯ ಮಾಡುವ ಹುಮ್ಮಸ್ಸು ಎಲ್ಲರಿಗೂ ಇದೆ. ಉಕ್ಕಿ ಬಂದ್ರು ಸಮುದ್ರದ ಹಾಗೆ ಕಾರ್ಯಕರ್ತರ ಸಮೂಹ ಎದ್ದು ಹೊರಟಿತಪ್ಪ ಅಯೋಧೆಯಿಂದ ಆಕಡೆಗೆ ಗಂಗೆಯ ಕಡೆಗೆ . ತಮ್ಮ ತಮ್ಮ ಗುಂಪುಗಳನ್ನು ಮಾಡಿಕೊಂಡು ರಸ್ತೆಯ ಕೆಲಸಗಾರರು ಉಪಕರಣಗಳನ್ನು ತೆಗೆದುಕೊಂಡು ಹೊರಟರು. ಹಾರೆ ,ಕತ್ತಿ , ಗುದ್ದಲಿ ತಗೊಂಡು ರಸ್ತೆ ಮಾಡ ತೊಡಗಿದರು . ಮೋಟು ಮರಗಳು ,ಬಳ್ಳಿಗಳು ,ದೊಡ್ಡ ದೊಡ್ಡ ಕಲ್ಲುಗಳನ್ನು ತೆಗೆದು ದಾರಿ ಮಾಡಲು ಹೊರಟರು. ಬರೀ ಮರ ಕಡಿದುದು ಮಾತ್ರವಲ್ಲ .ಮರ ಇಲ್ಲದಲ್ಲಿ ಮರ ನೆಟ್ಟರು. ಈಗಿನ ಕಾಲಕ್ಕೂ ಆಗಿನ ಕಾಲಕ್ಕೂ ಇರುವ ವ್ಯತ್ಯಾಸ.

ಹೀಗೆ ದಾರಿ ಮಾಡುತ್ತಾ ಪೊದೆ ತೆಗದು ಕಿತ್ತು ದಾತಿ ಮಾಡ್ತಾ , ಇನ್ನು ಕೆಲವರು ಗುಂಡಿ ಮುಚ್ಚಿದರು..ಅಂದ್ರೆ ತಗ್ಗು ಎತ್ತರಗಳನ್ನು ಸರಿ ಮಾಡಿದುದು. ಮತ್ತೆ ಒಡೆಯುವುದನ್ನ ಒಡೆದರಂತೆ , ಸೀಳುವುದನ್ನೆಲ್ಲಾ ಸೀಳಿದರಂತೆ. ಮಾಡಬೇಕದನಗನ ಮಾತ್ರ ಮಾಡಿದ್ರು..ಕಂಡ ಕಂಡಲ್ಲಿ ಹಾಳುಮಾಡುತ್ತಿರಲಿಲ್ಲ.ಸೇತುವೆಗಳನ್ನು ಕಟ್ಟಿದರು ,ಕೆಲವು ಕಡೆ ಸುರಂಗ ಮಾರ್ಗ ಮಾಡಿದರು. ಜಲಾಶಯಗಳನ್ನು ಮಾಡಿದರು . ನೀರೇ ಇಲಗಲದ ಪ್ರದೇಶಗಳಲ್ಲಿ ಬಾವಿಗಳನ್ನು ತೋಡಿ ಕಟ್ಟಿದರು . ಹಾಗೇ ಭರತ ಬರುವ ದಾರಿಯಲ್ಲಿ ಸುಣ್ಣ ಬಳಿದರು ,ಹೂ ಬಿಟ್ಟ ಮರಗಳ ದಾರಿ ಹುಡುಕಿ, ಎಲ್ಲಿ ಪಕ್ಷಿಗಳಿದ್ದರು ಅಲ್ಲೇ ದಾರಿಗಳನ್ನು ಮಾಡಿದರು..ಪತಾಕೆಗಳನ್ನು ಕಟ್ಟಿದರು ದಾರಿಗಳಲ್ಲಿ .ರಾಮನಿಗಾಗಿ ಏರಿಸಿದರು ಪತಾಕೆ , ದಾರಿಗೆ ಚಂದನದ ನೀರನ್ನು ಎರೆಚಿದರು . ರಾಮ ಮಾರ್ಗಕ್ಕೆ ಹೂಗಳನ್ನು ಚೆಲ್ಲಿದರು ..ಅ ದಾರಿ ಸುರ ಮಾರ್ಗದಂತೆ ಕಂಗೊಳಿಸಿತು. ರಮಣೀಯವಾದ ಪ್ರದೇಶಗಳಲ್ಲಿ ಶಿಬಿರಗಳು ಎರ್ಪಟ್ಟಿತು.

ಯೋಗ್ಯ ಕಾರ್ಯಕ್ಕಾಗಿ ಯೋಗ್ಯರನ್ನೇ ಆರಿಸಿಕೊಂಡು ಗಂಗಾ ನದಿಯವರೆಗೆ ಮಾರ್ಗಗಳಾಯಿತು.
ಕಾಲವನ್ನು ಆಯ್ಕೆ ಮಾಡಿಕೊಂಡು ಶಿಭಿರಗಳನ್ನು ಏರ್ಪಡಿಸುತ್ತಾರೆ. ಸಮಾಲೋಚನೆಗಳು, ವಿಶ್ರಾಮಕ್ಕಾಗಿ ಸ್ಥಳಗಳನ್ನು ಕಲ್ಪಿಸಲಾಯಿತು. ಶಿಭಿರಗಳನ್ನು ಉಪ್ಪರಿಗೆಗಳು ಬರುವ ಹಾಗೆ ತಯಾರು ಮಾಡುತ್ತಿದ್ದರು. ನಾವು ತುಂಬಾ ಮುಂದುವರಿದಿದ್ದೇವೆ ಎಂದುಕೊಂಡಿದ್ದೇವೆ, ಆದರೆ ಉಪ್ಪರಿಗೆ ಇರುವಂತಹ ಟೆಂಟ್ ಇನ್ನೂ ಬಂದಿಲ್ಲ. ಆ ಕಾಲದಲ್ಲಿ ಇದನ್ನು ನೋಡಬಹುದಾಗಿತ್ತು.ಎತ್ತರ ಎತ್ತರದ ಮಹಡಿಗಳು ಬರುವ ಹಾಗೆ ಮಾಡೀ ಜಗಲಿಗಳನ್ನಿ ಮಾಡಿ ಅಮರಾವತಿಯನ್ನು ಹೋಲುವಂತೆ ಮಾಡಿದರು. ಹೀಗೆ ಗಂಗಾತೀರದವರೆಗೆ ಮಾರ್ಗ ನಿರ್ಮಾಣವಾಯಿತು. ಹೀಗೆ ರಸ್ತೆಯು ಗಗನದಂತೆ ಶೋಭಿಸಿತು. ಅಂದರೆ ಅಲ್ಲಿ ಶಿಭಿರಗನ್ನು ಮಾಡಿದ್ದಾರೆ, ಹೋ ಚೆಲ್ಲಿದ್ದರೆ, ಪತಾಕೆ ಏರಿಸಿದ್ದಾರೆ, ಸುಗಂದಬರಿತವಾದ ಚಂದನವನ್ನು ಚೆಲ್ಲಿದ್ದಾರೆ. ಅಗಲವಾದ ರಸ್ತೆ ಆಗಸವನ್ನು ಹೋಲಿದರೆ ಅಲ್ಲಿ ಮಾಡೀದ ಅಲಂಕಾರಗಳು ನಕ್ಷತ್ರಗಳನ್ನು ಹೋಲುತ್ತಿದ್ದವು. ಅಯೋಧ್ಯೆಯಿಂದ ಗಂಗಾತೀರದವರೆಗೆ ಮಾರ್ಗನಿರ್ಮಾಣವಾಯಿತು. ಆದರೆ ವರ್ಷಾನುಗಟ್ಟಲೆ ತೆಗ್ದುಕೊಂಡಿಲ್ಲ. ಇವತ್ತಿನಕಾಲದಲ್ಲಿ ಮಾಡಿದ್ದಾರೆ ವನವಾಸವೇ ಮುಗಿದು ಹೋಗುತ್ತಿತ್ತು.ಆದರೆ ಇಲ್ಲಿ ಕೆಲವುದಿನಗಳಲ್ಲಿ ಮಾರ್ಗಗಳು ಸಿದ್ದವಾಯಿತು.

ಇತ್ತ ಅಯೋಧ್ಯೆಕಡೆಗೆ ಅಪರಕ್ರಿಯೆಗಳು ಎಲ್ಲ ಮುಗಿದು ಹೋಗಿದೆ. ನಿತ್ಯಬದುಕು ಪ್ರಾರಂಭವಾಗಿದೆ. ಭರತ ಏಳುವ ಹೊತ್ತಿಗೆ ಸ್ತುತಿ ಮಾಡಿದರಂತೆ. ಅವರು ಪಾಪ ಅವರ ಉದ್ಯೋಗ ಮಾಡುತ್ತಿದ್ದರು. ದಶರಥನಿಗೆ ವರ್ಷಾನುಗಟ್ಟಲೆ ಸ್ತುತಿ ಮಾಡಿ ಈ ವಂದುದಿನ ಮಾಡದೇ ಹೋದರೆ ಏನೋ ಕಳೇದುಕೊಂಡಹಾಗಾಗುತ್ತದೆ. ಹಾಗಾಗಿ ಅವರ ಉದ್ಯೋಗ ಅವರು ಮಾಡಿದರು. ಈಗ ನಿತ್ಯ ಸಂದ್ಯಾವಂದನೆ ಮಾಡಲು ಶುರುಮಾಡಿ ಒಂದು ದಿನ ಮಾಡದೇ ಇದ್ದರೆ ಸಮಾದಾನವೇ ಕೆಟ್ಟು ಹೋಗುತ್ತದೆ. ಾದಕ್ಕಾಗೆ ಮಾಡುವುದಿಲ್ಲ ಕೆಲವರು. ಶಂಖ ಊದುವವರು ಶಂಖ ಊದಿದರು. ಆ ಮಂಗಳ ಘೋಶ ಮುಗಿಲು ಮುಟ್ಟಿದವು. ಇದು ರಾಜನನ್ನ ಸಕಾಲಕ್ಕೆ ಏಳಿಸುವ ಪರಿ. ಆದರೆ ಭರತನಿಗೆ ಇಷ್ಟವಾಗಲಿಲ್ಲ. ಅಷ್ಟು ಬಗೆಯ ನಾದಗಳು ಎದೆಯನ್ನು ಬಂದು ಸೂಜಿಯಿಂದ ತಿವಿದಹಾಗಾಯಿತು. ಸಾವಿರಾರು ಬಾಣಗಳು ಒಟ್ಟಿಗೆ ಬಂದು ನುಗ್ಗಿದ ಹಾಗೆ ಆಯಿತು. ಯಾಕೆಂದರೆ ನಾನು ದೊರೆಯಲ್ಲ.

ಯಾವುದು ನಮ್ಮದಲ್ಲವೋ ಅದು ನಮ್ಮದಲ್ಲ ಎಂಬ ಪ್ರಜ್ಞೆ ಇದ್ದರೆ ಯಾವ ಪರೀಕ್ಷೆಗಳನ್ನು ಎದುರಿಸಬಹುದು. ರಾಮನಂತು ತನ್ನದು ತನ್ನದಲ್ಲ ಎನ್ನುವವನು, ಭರತನೂ ಅದೇ ಜಾತಿಯವನೆ. ಅವನಿಗೆ ಸಂದಿದೆ ರಾಜ್ಯ ನನ್ನದಲ್ಲ ಎನ್ನೋ ತೀರ್ಮಾನ. ನೋಡು ಶತೃಘ್ನ ಕೈಕೇಯಿ ಮಾಡಿದ ಪಾಪವನ್ನು. ರಾಮ ಕಾಡಿಗೆ ಹೋಗಿ, ದಶರಥ ಸ್ವರ್ಗವನ್ನೇರಿ ರಾಜ್ಯ ಅನಾಥವಾಗಿದೆ. ಈಗ ಇಂತಹಾ ಪರಿಸ್ತಿತಿಯನ್ನು ನೋಡು. ಸುಳಿಯಲ್ಲಿ ಸಿಕ್ಕಿಕೊಂಡ ಅಯೋಧ್ಯೆಯನ್ನಿ ನೋಡು. ಇದಕ್ಕೆಲ್ಲ ಕೈಕೇಯಿಯೇ ಕಾರಣ. ಒಡೆಯ ಕಾಡಿಗೆ ಹೊದ್ದರಿಂದ ನಮಗಾದ ಪರಿಸ್ಥಿತಿಯನ್ನು ನೋಡು.

ಅತ್ತ ಆಸ್ಥಾನವನ್ನು ವಸಿಷ್ಠರು ಆಗಮನ ಮಾಡಿದರು. ಸಭೆಹೇಗಿತ್ತು ಎಂದರೆ ಸ್ವರ್ಣಸಭೆ ಅದು. ಮಣಿರತ್ನ ಸಮಾನವಾಗಿತ್ತು. ಅವರದ್ದೇ ಆದ ಪೀಠ ಇದೆ. ರಾಜಗುರುಪೀಠ ಏರಿ ಕುಳಿತು, ದೋತನನ್ನು ಕರೆದು ಅಪ್ಪಣೆ ಮಾಡುತ್ತಾರೆ. ಬ್ರಾಹ್ಮಣರು, ಕ್ಷತ್ರಿಯರು, ವೈಶ್ಯರು, ಅಮಾತ್ಯರು, ಎಲ್ಲರೂ ಸಭೆಗೆ ಬರಲು ಆದೇಶಿಸಿದರು. ಸಾಮಾನ್ಯ ಪ್ರಜೆಗಳನ್ನೂ ಕರೆದರು. ಭರತ ಶತೃಘ್ನ ಸುಮಂತ್ರ ಎಲ್ಲರೂ ಬರಲೀ ಎಂದು ಅಪ್ಪಣೆಯಾಯಿತು. ಪ್ರಜೆಗಳೆಲ್ಲಾ ಬಂದರು. ಭರತನೂ ಬಂದ. ಪ್ರಜೆಗಳೆಲ್ಲಾ ಗೌರವ ಕೊಡುತ್ತಾ ಇದ್ದಾರೆ. ಆದರೆ ಭರತನಿಗೆ ಅದು ಬೇಡ. ದಶರಥ ಇದ್ದಾಗ ಯಾವ ಶೋಭೆ ಇತ್ತೋ ಈಗ ಭರತನಿಂದದ ಶೋಭೆ ಬಂತು. ಪೂರ್ಣಚಂದ್ರನು ರಾತ್ರಿಯನ್ನು ವೀಕ್ಷಿಸುವಂತೆ ಭರತನು ಸಭೆಯನ್ನು ವೀಕ್ಷಿಸುತ್ತಾನೆ. ವಸಿಷ್ಠರು ರಾಜನ ಮಂತ್ರಿಗಳು, ಸೇನೆ ಪ್ರಜೆಗಳನ್ನು ಅವಲೋಕಿಸುತ್ತ ಭರತನಿಗೆ ಹೇಳಿದರು, ರಜ್ಯವನ್ನು ದೊರೆ ನಿನಗೆ ಕೊಟ್ಟೂ ಹೋಗಿದ್ದಾನೆ. ರಾಮನು ನಿನಗೆ ಕೊಟ್ಟ ರಾಜ್ಯವಿದು. ಇದಕ್ಕೆ ಯಾವ ಅಡ್ಡಿಇಲ್ಲ. ಹಾಗಾಗಿ ಪಟ್ಟಾಭಿಷೇಕ ಮಾಡಿಕೊಳ್ಳಬೇಕು. ಆಕ್ಷಣ ಶೋಖಸಾಗರದಲ್ಲಿ ಮಿಂದೆದ್ದಂತಾಯಿತು ಭರತನಿಗೆ. ಸಭಾ ಮಧ್ಯದಲ್ಲಿ ಗಧ್ಗದ ಧ್ವನಿಯಲ್ಲಿ ರೋಧಿಸಿದ. ಭರತ ಗುರುಗಳನ್ನು ಅಕ್ಷೇಪಿಸಿದರು.. ಗುರುಗಳನ್ನು ಆಕ್ಷೇಪಿಸುವಂತಿಲ್ಲ ಆದರೆ ಭರತ ಸಂಪೂರ್ಣವಾಗಿ ರಾಮನನ್ನು ನಂಬಿದ್ದನು.. ಗುರುಗಳೇ ನಾನು ರಾಜ್ಯ ಧಾರಣೆ ಮಾಡಲೋ? ಸಾಧ್ಯವಾಗದು. ಇದ್ಯಾವುದೂ ನನ್ನದಲ್ಲ ನನಗೆ ರಾಮ ಮಾತ್ರ .. ರಾಮ ಮಾತ್ರವೇ ರೊರೆ…ಭರತನ ಮಾತನ್ನು ಕೇಳಿ ಎಲ್ಲರೂ ರೋಧಿಸಿದರಂತೆ. ಕಣ್ಣು ಮುಚ್ಚಿ ರಾಮನನ್ನು ಪ್ರಾರ್ಥಿಸಿದಂತೆ ಭರತ ..ನನಗೆ ಶಕ್ತಿ ಕೊಡು..ಗುರುಗಳ ಮನಸ್ಸನ್ನು ಬದಲು ಮಾಡು. ಹಾಗೆಯೇ ಎಲ್ಲಾ ಪ್ರಜೆಗಳು ಮನಸಾ ರಾಮನನ್ನು ಪ್ರಾರ್ಥಿಸುತ್ತಾರೆ.
ಮುಂದೆ ಸುಮಂತ್ರನನ್ನು ಕರೆದು ನನಗೆ ರಥವನ್ನು ಸಿದ್ಧ ಮಾಡು ಎಂದನು, ಸಿದ್ಧ ಪಡಿಸಿದನು. ಅಯೋಧ್ಯೆಗೆ ಅಯೋಧ್ಯೆಯೇ ಸಿದ್ಧಗೊಂಡಿತು.. ಯಾವ ಜಾತಿ , ಮತ , ಮೇಲು , ಕೀಳು ಇಲ್ಲದೆ ಹೊರಡುವ ಸಿದ್ಧತೆ ಮಾಡಿಕೊಂಡರು. ಬೆಳಗಾಯಿತು ಹೊರಟ ಭರತ ಅವನ ಮುಂದೆ ಮಂತ್ರಿಗಳು, ಗುರುಗಳು, ಪುರೋಹಿತರು ಮುಂದೆ ರಥಗಳಲ್ಲಿ ಸಾಗಿದರು. ೯೦೦೦ ಆನೆಗಳು, ಲಕ್ಷ ಕುದುರೆಗಳು, 60,000 ರಥಗಳು, ಮುಂದೆ ಕೈಕೇಯಿ , ನಡುವೆ ಸುಮಿತ್ರೆ, ಹಿಂದೆ ಕೌಸಲ್ಯಾ ಹೀಗೆ ರಾಜ ಮಾತೆಯರು ಹೊರಟರು. ಯಾರು ಕಾಡಿಗೆ ಅಟ್ಟಿದರೋ ರಾಮನನ್ನು ಅವರೇ ಮುಂದೆ ಹೋಗುವಂತಾಯಿತು. ಎಲ್ಲರೂ ಸಂತೋಷದಿಂದ ರಾಮನ ಕಥೆಗಳನ್ನು ಹೇಳುತ್ತಾ, ದೊಡ್ಡ ಗುಂಪು ಹೊರಟಿದೆ. ಸೂಚನೆ ಬಂದವರು , ಸೂಚನೆ ಬಾರದವರು ಎಲ್ಲರೂ ಹೊರಟರು ರಾಮನ ಕಾಣಲು. ಅಲ್ಲಿ ಪ್ರತಿಷ್ಟೆಗಳು ಇರಲಿಲ್ಲ. ದೊಡ್ಡ ಜ್ಞಾನಿಗಳು ಎಲ್ಲರೂ ರಾಮನ ಕಡೆಗೆ ಹೊರಟರು. ವೈದ್ಯರು , ಧೂಪಗಳನ್ನು ಹಾಕುವವರು , ಮಡಕೆ ಮಾಡುವವರು , ಪೋಷಕರು , ಸ್ತ್ರೀ ಜೀವಿಗಳು, ಅಂಬಿಗರು , ಬ್ರಾಹ್ಮಣೋತ್ತಮರು ಎತ್ತಿನ ಬಂಡಿಯಲ್ಲಿ ಹೊರಟರು. ಅಂತೂ ರಾಮ ಹೊರಟ ಮೇಲೆ ಮತ್ತೆ ರಾಮನ ಕಡೆಗೆ ಹೋಗುವ ಸಲುವಾಗಿ ಎಲ್ಲಾ ಪ್ರಜೆಗಳು ಸ್ನಾನ ಮಾಡಿ , ಬಟ್ಟೆಯನ್ನು ತೊಟ್ಟು ಅಲಂಕಾರ ಮಾಡಿಕೊಂಡುಒಟ್ಟಾಗಿ ಅಯೋಧ್ಯೆ ಯಿಂದ ಗಂಗಾತೀರದ ಕಡೆಗೆ ಸೇನೆ ತಲುಪಿತು. ಗುಹ ಇರುವಲ್ಲಿಯ ತನಕ ಸೇನೆ ತಲುಪುತ್ತದೆ. ಈಗ ಪ್ರಶ್ನೆ… ಕಂಡ ಗುಹನು ಹೇಗೇ ವಿಚಾರಿಸಬಹುದು..! ಗುಹ ಒಪ್ಪದೆ ಭರತಮುಂದೆ ಹೋಗಲು ಸಾಧ್ಯವಿಲ್ಲ. ಗುಹ ಖಂಡಿತವಾಗಿಯೂ ಶಂಖಿಸಬಹುದು. ಏಕೆಂದರೆ ಗುಹನಿಗೆ ರಾಮನೇ ಸರ್ವಸ್ವ ..ಹೇಗೆ ಗುಹನನ್ನು ಮನವರಿಕೆ ಮಾಡ್ತಾನೆ ಎಂಬುದನ್ನು ನಾಳೆ ಅವಲೋಕಿಸೋಣ.

ಪ್ರವಚನವನ್ನು ಇಲ್ಲಿ ಕೇಳಿರಿ:

ಪ್ರವಚನವನ್ನು ನೋಡಲು:

Facebook Comments