ಕುಮಟಾ, 05-01-2014:

ಕಳೆದೆರಡು ದಶಕಗಳಿಂದ ಸಮಾಜದ ಉನ್ನತಿಗಾಗಿ ಹಗಲಿರುಳು ಶ್ರಮಿಸುತ್ತಿರುವ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾ ಸ್ವಾಮಿಗಳವರ ತೇಜೋವಧೆಗೆ ನಡೆಯುತ್ತಿರುವ ಷಡ್ಯಂತ್ರದ ಕುರಿತು ಜನಜಾಗೃತಿಗಾಗಿ ಕುಮಟಾದ ಗಿಬ್ ಹೈಸ್ಕೂಲಿನ ರಾಜೇಂದ್ರ ಪ್ರಸಾದ್ ಸಭಾಭವನದಲ್ಲಿ ಗುರುಭಕ್ತ ಸಮಾವೇಶವು ಜರುಗಿತು. ಸುಮಾರು ಐದು ಸಾವಿರಕ್ಕೂ ಹೆಚ್ಚು ಸೇರಿದ ಗುರುಭಕ್ತರ ಸಮ್ಮುಖದಲ್ಿ ಶ್ರೀಮಠದ ಭಾರತೀ ಪ್ರಕಾಶನದ ಸಂಚಾಲಕ-ಕಾರ್ಯದರ್ಶಿಗಳಾದ ವಿದ್ವಾನ್ ಜಗದೀಶ ಶರ್ಮಾ,  ಪ್ರಖ್ಯಾತ ವಾಗ್ಮಿ ಶ್ರೀ ಚಕ್ರವರ್ತಿ ಸೂಲಿಬೆಲೆ, ಶ್ರೀಕೃಷ್ಣ ಉಪಾಧ್ಯಾಯರು, ಮಾಜಿ ಶಾಸಕ ಶ್ರೀ ದಿನಕರ ಶೆಟ್ಟರು, ಗೋಕರ್ಣದ ವೇ.ಮೂ ಶಿತಿಕಂಠ ಹಿರೇ, ಮುಕ್ರಿ ಸಮಾಜದ ಎನ್.ಆರ್. ಮುಕ್ರಿ, ಶ್ರೀ ವಿನೋದ್ ಪ್ರಭು, ಆರ್. ಎಸ್. ಭಾಗ್ವತ್ ಹಾಗೂ ಸಮಾಜದ ಹಲವು ಹಿರಿಯರು ಉಪಸ್ಥಿತರಿದ್ದರು.

ದಿಕ್ಸೂಚಿ ಭಾಷಣ ಮಾಡಿದ ಶ್ರೀ ಚಕ್ರವರ್ತಿ ಸೂಲಿಬೆಲೆ ಇವರು “ಬ್ರಾಹ್ಮಣರು ದಲಿತಸಮಾಜದ ಜೊತೆ ಗುರುತಿಸಿಕೊಳ್ಳಬೇಕು, ಪ್ರಿತಿಸಬೇಕು  ಎಂದು ನಾವೆಲ್ಲಾ ಹೇಳುವುದನ್ನು  ಮಾಡಿ ತೋರಿಸಿದ ಸಂತ  ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು. ಕೆಕ್ಕಾರಿನಲ್ಲಿ  ಶ್ರೀಗಳನ್ನು  ಪೋಲೀಸರು ಬಂಧಿಸಲು ಬಂದಾಗ – ಶ್ರೀ ಗಳನ್ನು ಬಂಧಿಸುವುದಾರೆ ನಮ್ಮ ಶವದ ಮೇಲೆ  ನಡೆದುಕೊಂಡು ಹೋಗಿ – ಎಂದು ಶ್ರೀಗಳ ಬೆಂಬಲಕ್ಕೆ ನಿಂತ ಭಕ್ತರ ಪ್ರೀತಿ ಸುಮ್ಮನೇ  ಸಾಧ್ಯವೇ? ಸಂತರ ಮೇಲೆ ಆರೋಪ ಮಾಡುವುದು ಇಂದು ನಿನ್ನೆಯದಲ್ಲ, ನಾನು ಅನೇಕ ಸಂತರನ್ನು ನೋಡಿದ್ದೇನೆ, ದೇಶದಾದ್ಯಂತ ಇದು ನಡೆಯುತ್ತಿದೆ. ಅದರಲ್ಲೂ ಒಂದು ಹೆಣ್ಣಿನ ಮೂಲಕ ಸಂತರನ್ನು ಪೀಡಿಸುವುದು ಅತ್ಯಂತ ಕೆಟ್ಟದು.  ಎಷ್ಟೋ ಸಂತರ ಮೇಲೆ ಬ೦ದ ಆರೋಪ ಸುಳ್ಳು ಎಂದು ತಿಳಿದ ಮೇಲೆ ಇಡೀ ಸಮಾಜ ಕುಣಿದಿದೆ. ಈ ಆಘಾತ ಬರೀ ಹವ್ಯಕ ಸಮಾಜ ಮೇಲೆ  ಅಲ್ಲ. ಇಡೀ   ಹಿಂದೂ ಧರ್ಮದ ಮೇಲೆ. ರಾಘವೇಶ್ವರ ಶ್ರೀಗಳು ಕಷ್ಟದಲ್ಲಿದ್ದಾಗ ನಾವೆಲ್ಲಾ ಇಂದು ಅವರ ಬೆಂಬಲಕ್ಕೆ ನಿ೦ತಿದ್ದೇವೆ. ಕೇವಲ ನಾನು ಮಾತ್ರ ಅಲ್ಲ, ಶ್ರೀ ಗಳ ಬೆಂಬಲಕ್ಕೆ ನನ್ನಂಥ ಲಕ್ಷಾಂತರ ತರುಣರಿದ್ದಾರೆ. ಸಾಗರದಲ್ಲಿ ಗುರು ಭಕ್ತ ಸಮಾವೇಶಕ್ಕೆ ಹೋಗಿದ್ದಕ್ಕೆ ಕೆಲವರು ಫೋನ್ ಮಾಡಿ, ನೀನು ಒಳ್ಳೆ ಹೆಸರು ಮಾಡಿದ್ದೀಯ, ಶ್ರೀ ಗಳ ಪರವಾಗಿ ನಿಂತರೆ ಜನಪ್ರಿಯತೆ ಕಡಿಮೆಯಾಗುತ್ತದೆ ಎಂದು. ಗುರುಗಳ ಪರವಾಗಿ, ಧರ್ಮದ ಪರವಾಗಿ ಕೆಲಸ ಮಾಡಿಯೇ ಮಾಡುತ್ತೇನೆ” ಎಂದರು.
Facebook Comments