ಪೆರಾಜೆ-ಮಾಣಿ ಮಠಃ13.8.2013, ಮಂಗಳವಾರ

ಇಂದು ಶ್ರೀ ಲಕ್ಷ್ಮೀನಾರಾಯಣ ಪ್ರಸಾದ ಪಕಳಕುಂಜ ಮತ್ತು ಕುಟುಂಬದವರ ಗುರುಭಿಕ್ಷಾಸೇವೆ ನಡೆಯಿತು. ಶ್ರೀಗುರುಗಳಿಂದ ಶ್ರೀರಾಮಾದಿ ದೇವರುಗಳ ಪೂಜಾಕಾರ್ಯಗಳು ನಡೆದು ಮಾತೆಯರಿಂದ ಕುಂಕುಮಾರ್ಚನೆ ನಡೆಯಿತು. ಪಕಳಕುಂಜ ಕುಟುಂಬಿಕರು ಶ್ರೀಗುರುಗಳಿಂದ ಅನುಗ್ರಹ ಮಂತ್ರಾಕ್ಷತೆಯನ್ನು ಪಡೆದರು.

~

ಯಾಗಶಾಲೆಯಿಂದಃ

ಭಿಕ್ಷಾಂಗ ಆಂಜನೇಯ ಹವನ, ಆಂಜನೇಯನಿಗೆ ಸೀಯಾಳಾಭಿಷೇಕ, ಕುಜ ಶಾಂತಿ, ಮಂಗಳಗೌರೀ ವ್ರತ, ಗೋಪೂಜೆ, ಗೋತುಲಾಭಾರ, ಶ್ರೀರಾಮಪೂಜೆ, ಶ್ರೀರಾಮತಾರಕಯಜ್ಞ ನಡೆಯಿತು.

ಪಾದಪೂಜೆಃ ಶ್ರೀ ವೆಂಕಟಕೃಷ್ಣ ಭಟ್ ಗೋಳಿತ್ತಡ್ಕ ಕಾಸರಗೋಡು
~
ಸಂಧ್ಯಾಕಾರ್ಯಕ್ರಮ:
ಉಪನೀತರಾದವರು ಸಾಯಂಸಂಧ್ಯೆಯಲ್ಲಿ ಸಂಧ್ಯಾವಂದನೆಯನ್ನು ಹಾಗೂ ಮಾತೆಯರು ಶ್ರೀರಾಮತಾರಕ ಮಂತ್ರಜಪ ಮಾಡಿದರು. ಶ್ರೀಕರಾರ್ಚಿತ ರಾಮಾದಿ ದೇವರುಗಳ ಪೂಜೆಯ ಬಳಿಕ ಮಹಿಳೆಯರಿಂದ ಭಜನೆ ನಡೆಯಿತು.

~

ರಾಮಕಥೆಃ

ಶ್ರೀಗುರುಗಳು ಶ್ರೀರಾಮನಿಗೆ, ಹನುಮನಿಗೆ ಪುಷ್ಪನಮನ ಸಲ್ಲಿಸಿ ಇಂದಿನ ರಾಮಕಥೆಯನ್ನು ಪ್ರಾರಂಭಿಸಿದರು. ಕೋಟಿ ಕೋಟಿ ಕಪಿಗಳ ಗುಂಪಿನಲ್ಲಿ ಶ್ರೀರಾಮನಿಗೆ ನಂಬಿಕೆ ಇದ್ದುದು ಹನುಮಂತನ ಮೇಲೆ ಮಾತ್ರವೇ. ನಂಬಿಕೆ ಮನುಷ್ಯನಿಗೆ ಬಹಳ ಮುಖ್ಯ. ಭಕ್ತ ದೇವರನ್ನು ನಂಬುತ್ತಾನೆ ಆದರೆ ಭಗವಂತನ ನಂಬಿಕೆ ಭಕ್ತನ ಮೇಲೆ ಇರುವ ಇಂಥಾ ಘಟನೆ ಬೇರೆ ಎಲ್ಲಿಯೂ ಕಾಣದು. ರಾಮನ ಅಣತಿಯಂತೆ ಕಪಿಗಳ ದಂಡು ತಮ್ಮ ತಮ್ಮ ನಾಯಕರೊಡನೆ ನಾಲ್ಕು ದೆಸೆಗಳಿಗೂ ಸೀತೆಯನ್ನರಸಿ ಹೊರಟರು. ಕಾಡು,ಗುಡ್ಡ, ಮರುಭೂಮಿಗಳಲ್ಲೆಲ್ಲ ಹುಡುಕಿ ಸೋತರು. ಸುಗ್ರೀವಾಜ್ಞೆಯಲ್ಲಿ ದಕ್ಷಿಣದಿಕ್ಕಿಗೆ ಹೊರಟ ಅಂಗದನ ನೇತೃತ್ವದ ತಂಡ ಸ್ವಯಂಪ್ರಭೆಯ ದೊಡ್ಡ ಗುಹೆಯ ಬಾಗಿಲಿಗೆ ಮುಟ್ಟಿ, ಆ ಕತ್ತಲೆಯ ಗುಹೆಯನ್ನು  ತಿಳಿಯದೆ  ಪ್ರವೇಶಿಸಿದಾಗ  ಇವರ  ಅನ್ವೇಷಣೆಯನ್ನು  ತಿಳಿದ  ಸ್ವಯಂಪ್ರಭೆ  ಎಲ್ಲರನ್ನೂ ಬೆಳಕಿರುವ ಸಮುದ್ರದ ದಂಡೆಗೆ ತಲುಪಿಸುವ ಕಥಾ ಭಾಗವನ್ನು ಶ್ರೀಗುರುಗಳು ಪ್ರವಚನದಲ್ಲಿ ಶಿಷ್ಯಕೋಟಿಗೆ ವಿವರಿಸಿದರು.  ಜೈ ಜೈ ರಾಮಕಥಾದೊಂದಿಗೆ ಇಂದಿನ ರಾಮಕಥೆ ಪರ್ಯವಸಾನವಾಯಿತು. ಇಂದಿನ ದಿನದ ಪ್ರಾಯೋಜಕರು ಶ್ರೀರಾಮಚಂದ್ರ ಪದ್ಯಾಣ ಕುಟುಂಬದವರು. ಶ್ರೀ ಎ ಪಿ ಸದಾಶಿವ ಮರಿಕೆ ಇಂದಿನ ಸಹಪ್ರಾಯೋಜಕರಾಗಿದ್ದರು.

~

Facebook Comments