LIVE Channel

ಇತ್ತೀಚಿನ ಪ್ರತಿಕ್ರಿಯೆಗಳು

Newsletter

17-04-2016: ಮುಳಿಯಾರು ಉಚಿತ ವೈದ್ಯಕೀಯ ಶಿಬಿರ – Report

Author: ; Published On: ರವಿವಾರ, ಏಪ್ರಿಲ್ 24th, 2016;

Switch to language: ಕನ್ನಡ | English | हिंदी         Shortlink:

ಶ್ರೀರಾಮಚಂದ್ರಾಪುರ ಮಠ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿಗ್ದರ್ಶನದಲ್ಲಿರುವ ಮುಳ್ಳೇರ್ಯ ಹವ್ಯಕ ಮಂಡಲ ವ್ಯಾಪ್ತಿಯ ಚಂದ್ರಗಿರಿ ವಲಯದ ನೇತೃತ್ವದಲ್ಲಿ ಹಿಂದೂ ಐಕ್ಯವೇದಿ ಮುಳಿಯಾರು ಪಂಚಾಯತ್ ಸಮಿತಿ, ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ – ಮುಳಿಯಾರು ವಲಯ ಇವುಗಳ ಸಹಯೋಗದಲ್ಲಿ ಶ್ರೀ ಭಾರತೀ ನೇತ್ರ ಚಿಕಿತ್ಸಾಲಯ ಮುಜಂಗಾವು, ಗೋಗಂಗಾ ಪಂಚಗವ್ಯ ಚಿಕಿತ್ಸಾಲಯ ಪೆರಿಯ, ರಮೇಶ್ ಕ್ಲಿನಿಕಲ್ ಲ್ಯಾಬ್ ಕಾಸರಗೋಡು ಇವರಿಂದ ಉಚಿತ ನೇತ್ರ ತಪಾಸಣಾ ಶಿಬಿರ, ಪಂಚಗವ್ಯ ಚಿಕಿತ್ಸೆ, ರಕ್ತಗುಂಪು ನಿರ್ಣಯ ಮತ್ತು ಮಧುಮೇಹ ತಪಾಸಣಾ ಶಿಬಿರವು ಬೋವಿಕ್ಕಾನದ ಡಾ. ಕೆ. ಯಂ. ಕೆ ಭಟ್ ಅವರ ಉದನೇಶ್ ಕ್ಲಿನಿಕ್ ನಲ್ಲಿ ಜರಗಿತು.

ಡಾ.ಕೆ. ಯಂ. ಕೆ ಭಟ್ ಮತ್ತು ಸ್ವಾಶ್ರಯ ಟ್ರಷ್ಟ್ ಚೆಯರ್ಮೆನ್ ಬಾಲನ್ ಮುಂಡಕ್ಕೈ, ಜ್ಯೋತಿ ಬೆಳಗಿಸಿ ಕಾರ್ಯಕ್ರಮ ಉದ್ಘಾಟನೆ ಮಾಡಿದರು.
ಹಿಂದೂ ಐಕ್ಯವೇದಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ರಾಜನ್ ಮುಳಿಯಾರು ಅವರು ಪ್ರಾಸ್ಥಾವಿಕ ನುಡಿಗಳನ್ನಾಡಿದರು.
ಚಂದ್ರಗಿರಿ ಹವ್ಯಕ ವಲಯ ಆರೋಗ್ಯ ಪ್ರಧಾನ ಡಾ.ಶಿವಕುಮಾರ್ ಅಡ್ಕ ಅವರು ಸ್ವಾಗತ ಭಾಷಣ ಮಾಡಿದರು. ಶ್ರೀಮತಿ ಸವಿತಾ ಎ. ಶೆಟ್ಟಿ, ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ – ಮುಳಿಯಾರು ವಲಯದ ಮೇಲ್ವಿಚಾರಕಿ, ಜಯಲಕ್ಷ್ಮಿ ಸಿದ್ದನಕೆರೆ, ಕುಂಜಿಕೃಷ್ಣನ್ ಅಮ್ಮಂಗೋಡು ಅವರು ಸುಭಾಶಂಸನಾ ಭಾಷಣ ಮಾಡಿದರು. ಶ್ರೀ ವಾಮನ ಆಚಾರ್ಯ ಅವರು ಧನ್ಯವಾದಗಳನ್ನಿತ್ತರು. ಶಿಬಿರದಲ್ಲಿ ಗವ್ಯಚಿಕಿತ್ಸಾ ವಿಭಾಗದಲ್ಲಿ ಡಾ.ದಿವ್ಯಾ ಮತ್ತು ನೇತ್ರ ತಪಾಸಣಾ ವಿಭಾಗದಲ್ಲಿ ಡಾ.ಪ್ರಶಾಂತ ಕುಮಾರ ಸಹಕರಿಸಿದರು.

ಮಂಡಲ ಆರೋಗ್ಯಪ್ರಧಾನ ಶ್ರೀ ಏತಡ್ಕ ರಮೇಶ್ ಕಾರ್ಯಕ್ರಮ ನಿರೂಪಣೆ ಮಾಡಿದರು. ಮಂಡಲ ಪ್ರಸಾರ ಪ್ರಧಾನ ಗೋವಿಂದಬಳ್ಳಮೂಲೆ ಪ್ರಾರ್ಥನೆ ಮತ್ತು ಶಿಬಿರ ಸಂಯೋಜನೆ ಮಾಡಿದರು. ಮುಳಿಯಾರು ಗ್ರಾಮದ ವಿವಿಧ ಕುಗ್ರಾಮಗಳಿಂದ ಶಿಬಿರಕ್ಕೆ ಬಂದ ನೂರರುವತ್ತು ಜನ ಚಿಕಿತ್ಸೆಯನ್ನು ಸದುಪಯೋಗಪಡಿಸಿಕೊಂಡು ಮುಕ್ತ ಕಂಠದಿಂದ ಶಿಬಿರದ ವ್ಯವಸ್ಥೆಯನ್ನು ಶ್ಲಾಘಿಸಿದರು. ಈ ಸಂದರ್ಭದಲ್ಲಿ ಗವ್ಯೋತ್ಪನ್ನಗಳ ವಿತರಣಾ ವ್ಯವಸ್ಥೆಯನ್ನು ಸಜ್ಜುಗೊಳಿಸಲಾಯಿತು.

ಸಚಿತ್ರ ವರದಿ: ಗೋವಿಂದ ಭಟ್ ಬಳ್ಳಮೂಲೆ

Leave a Reply

Highslide for Wordpress Plugin