ಪೆರಾಜೆ-ಮಾಣಿ ಮಠಃ18.8.2013, ಆದಿತ್ಯವಾರ

ಇಂದು ಸಾಗರ ಮಂಡಲದ ಐದು ವಲಯ- ಸಾಗರ ನಗರ ಪೂರ್ವ – ಪಶ್ಚಿಮ, ಇಕ್ಕೇರಿ, ಕೊಗೋಡು ಮತ್ತು ಗೋಳಗೋಡು ವಲಯಗಳ ಗುರುಭಿಕ್ಷಾಸೇವೆ ನಡೆಯಿತು. ಶ್ರೀಗುರುಕರಾರ್ಚಿತ ಶ್ರೀರಾಮಾದಿ ದೇವರುಗಳ ಪೂಜೆಯ ಬಳಿಕ ಮಾತೆಯರಿಂದ ಕುಂಕುಮಾರ್ಚನೆ ನಡೆಯಿತು. ಸಾಗರ ವಲಯಗಳ ಪರವಾಗಿ ಸಾಗರ ನಗರ ಪೂರ್ವದ ಶ್ರೀ ಶೇಷಗಿರಿ ಶ್ರೀಗುರುಗಳಿಗೆ ಭಿಕ್ಷಾಸೇವೆ ನಿರ್ವಹಿಸಿದರು. ನಂತರ ನಡೆದ ವಲಯಗಳ ಸಭೆಯಲ್ಲಿ ಐದು ವಲಯದವರು ವಲಯಗಳ ಆಗುಹೋಗುಗಳನ್ನು ಶ್ರೀಪೀಠದ ಮುಂದೆ ಇಟ್ಟರು. ಇಂದು ಒಪ್ಪಕ್ಕ ಸಮಾವೇಶ(ಕನ್ಯಾಸಂಸ್ಕಾರ) ನಡೆಯಿತು.  ಉಪ್ಪಿನಂಗಡಿ ಮಂಡಲದಿಂದ – 317, ಮುಳ್ಳೇರಿಯಾ ಮಂಡಲದಿಂದ -179, ಮಂಗಳೂರು- 250, ಸಾಗರ ಮತ್ತು ಇತರ ಮಂಡಲಗಳು -53  ಒಟ್ಟು 799 ಕನ್ಯೆಯರು ಸಮಾವೇಶದಲ್ಲಿ ಭಾಗವಹಿಸಿದ್ದರು. ಸಂಪನ್ಮೂಲ ವ್ಯಕ್ತಿಗಳಾಗಿ ಶ್ರೀಮತಿ ಸುಧಾ ಹೆಗಡೆ, ಶ್ರೀ ಸತ್ಯನಾರಾಯಣ ಶರ್ಮಾ, ಶ್ರೀ ಶಾಮ ಪ್ರಸಾದ, ಶ್ರೀಮತಿ ರಶ್ಮಿ ಇವರುಗಳು ವಿದ್ಯಾರ್ಥಿನಿಯರಿಗೆ ಮಾಹಿತಿಗಳನ್ನು ಕೊಟ್ಟರು. ಶ್ರೀ ಅರಗ ಜ್ಞಾನೇಂದ್ರ, ಶ್ರೀಮಠದ ಸರ್ವ ಪದಾಧಿಕಾರಿಗಳು, ಶಿಷ್ಯರು ಶ್ರೀಗುರುಗಳಿಂದ ಆಶೀರ್ವಾದ ಪಡೆದರು.

ಯಾಗಶಾಲೆಯಿಂದಃ

ಇಂದು 18 ಕನ್ಯೆಯರಿಗೆ ಕನ್ಯಾಸಂಸ್ಕಾರ ಕಾರ್ಯಕ್ರಮ ನಡೆಯಿತು. ಆಂಜನೇಯ ಹವನಗಳು, ಬಾಲಗಣಪತಿ ಹೋಮ, ಧಾರಣಾ ಸರಸ್ವತಿ ಹೋಮಗಳು, ಪುರುಷಸೂಕ್ತ ಹೋಮ, ಸೀತಾಕಲ್ಯಾಣೋತ್ಸವ, ಗುರುಪರಂಪರಾಪೂಜೆ, ಶುಕ್ರಾರ್ಕದಶಾ ಸಂಧಿಶಾಂತಿ.

ಪಾದಪೂಜೆಃ ವಲಯದಿಂದ  ಶ್ರೀಪಾದ ಸಾಗರ ನಗರ ಪಶ್ಚಿಮ, ಶ್ರೀ ಆರ್ ಜಿ ಹೆಗಡೆ ಇಕ್ಕೇರಿ, ಶ್ರೀ ದೇವೇಂದ್ರ ಭಟ್ ಗೋಳಗೋಡು, ಶ್ರೀಶೇಷಗಿರಿಯಪ್ಪ ಕೋಗೋಡು.

ವೈಯಕ್ತಿಕಃ ಶ್ರೀ ಮುದ್ರಜೆ ಗೋವಿಂದ ಭಟ್, ಶ್ರೀ ಸುಬ್ಬಣ್ಣ ಭಟ್ ಕಾಂತಿಲ, ಜಿ ವಿ ರಾಮಚಂದ್ರ, ಪ್ರೊ. ಸುರೇಶ್ ದೇಲಂಪಾಡಿ, ಶ್ರೀಮತಿ ವನಮಾಲಾ ಭಟ್

~

ಸಾಂಸ್ಕೃತಿಕ ಕಾರ್ಯಕ್ರಮಃ

ಇಂದು ಶ್ರೀಪೂರ್ಣಚಂದ್ರ ಯಕ್ಷಗಾನ ಮಂಡಳಿ, ಕೊಂಡದಕುಳಿ, ಕುಂಭಾಶಿ ಇವರಿಂದ “ಚೂಡಾಮಣಿ” ಪ್ರಸಂಗದ ಯಕ್ಷಗಾನ ಬಯಲಾಟ ನಡೆಯಿತು.

~
ಸಂಧ್ಯಾಕಾರ್ಯಕ್ರಮ:
ಉಪನೀತರಾದವರು ಸಾಯಂಸಂಧ್ಯೆಯಲ್ಲಿ ಸಂಧ್ಯಾವಂದನೆಯನ್ನು ಹಾಗೂ ಮಾತೆಯರು ಶ್ರೀರಾಮತಾರಕ ಮಂತ್ರಜಪ ಮಾಡಿದರು. ಶ್ರೀಕರಾರ್ಚಿತ ರಾಮಾದಿ ದೇವರುಗಳ ಪೂಜೆಯ ಬಳಿಕ ಮಹಿಳೆಯರಿಂದ ಭಜನೆ ನಡೆಯಿತು.

~

ಶ್ರೀಶ್ರೀ ಆಶೀರ್ವಚನಃ

~

Facebook Comments