ಪೆರಾಜೆ-ಮಾಣಿ ಮಠಃ19.8.2013, ಸೋಮವಾರ

ಇಂದು ಸಾಗರ ಮಂಡಲದ ಕೆಳದಿ, ಆವಿನಹಳ್ಳಿ, ಕ್ಯಾಸನೂರು, ಮರಗುಡಿ, ಉಳವಿ ವಲಯಗಳ ಗುರುಭಿಕ್ಷಾಸೇವೆ ನಡೆಯಿತು. ಶ್ರೀಗುರುಗಳು ಶ್ರೀರಾಮಾದಿ ದೇವರುಗಳ ಪೂಜೆಯನ್ನು ಮಾಡಿದ ಬಳಿಕ ಮಾತೆಯರಿಂದ ಕುಂಕುಮಾರ್ಚನೆ ನಡೆಯಿತು. ವಲಯಗಳ ಪರವಾಗಿ ಶ್ರೀ ಗಣಪತಿ ಬಿ ಆರ್ ಬಂದಗದ್ದೆ ಕೆಳದಿ ವಲಯದವರು ಗುರುಭಿಕ್ಷಾ ಸೇವೆ ನಡೆಸಿದರು. ಐದು ವಲಯಗಳ ವಲಯ ಸಭೆಯಲ್ಲಿ ವಲಯಗಳ ಆಗುಹೋಗುಗಳನ್ನು ಶ್ರೀಪೀಠದ ಮುಂದಿಟ್ಟರು. ಮಾಜಿ ಮುಖ್ಯಮಂತ್ರಿ ಶ್ರೀ ಡಿ ವಿ ಸದಾನಂದ ಗೌಡ, ಮಾಜಿ ಶಾಸಕಿ ಶ್ರೀಮತಿ ಮಲ್ಲಿಕಾ ಪ್ರಸಾದ್, ಕ್ಯಾಂಪ್ಕೋ ನಿರ್ದೇಶಕ ಶ್ರೀ ಸಂಜೀವ ಮಠಂದೂರು ಶ್ರೀಗುರುಗಳಿಂದ ಆಶೀರ್ವಾದ ಪಡೆದರು.

~

ಯಾಗಶಾಲೆಃ

ಗಣಪತಿ ಹೋಮ, ಮೃತ್ಯುಂಜಯ ತ್ರ್ಯಂಬಕಶಾಂತಿ, ಆಂಜನೇಯ ಸಹಿತ ನವಗ್ರಹ ಶಾಂತಿ, ಆಂಜನೇಯ ಹವನ, ಮಹಾಗಣಪತಿ ನವಗ್ರಹ ಕುಜರಾಹು ಸಂಧಿಶಾಂತಿ, ಋತುಶಾಂತಿ ಹವನ, ಆಂಜನೇಯನಿಗೆ ಸೀಯಾಳಾಭಿಷೇಕ, ಶ್ರೀರಾಮಪೂಜೆ, ಶ್ರೀರಾಮತಾರಕಹವನ, ಗೋಪೂಜೆ, ಗೋತುಲಾಭಾರ ನಡೆದವು.

ಪಾದಪೂಜೆಃ ಶ್ರೀ ಕೇಶವ ನಂದೋಡಿ, ಶ್ರೀ ಸೀತಾರಾಮ ಎಚ್ ಕೆ, ಶ್ರೀ ಬಿ ಎಮ್ ಗಣಪತಿ ಕರ್ಕಿ ಕೊಪ್ಪ, ಎಚ್ ಜಿ ಲಕ್ಷ್ಮೀನಾರಾಯಣ ಭಟ್ ಹೊರಬೈಲು

ವೈಯಕ್ತಿಕಃ ಕಾವೇರಿಕಾನ ಶಿವಪ್ರಸಾದ, ನಟರಾಜ ಬಡೆಕ್ಕಿಲ

~

ಸಾಂಸ್ಕೃತಿಕ ಕಾರ್ಯಕ್ರಮಃ

ವಿದುಷಿ ಶೈಲಜಾ ಶಿವಶಂಕರ್ (ನಿರ್ದೇಶಕಿ, ಕಲಾನಿಧಿ ನೃತ್ಯನಿಲಯ, ಸುರತ್ಕಲ್) ಮತ್ತು ಬಳಗದವರಿಂದ ಭರತನಾಟ್ಯ ಪ್ರದರ್ಶನ ನಡೆಯಿತು. ನೃತ್ಯದಲ್ಲಿ ಶ್ರೀರಕ್ಷಾ ಕೆ, ಶ್ರೀಕರಿ ಕೆ, ಸಂಹಿತಾ, ಶೃತಿ, ತಪಸ್ಯಾ, ಪ್ರತಿಷ್ಠಿ ಭಾಗವಹಿಸಿದರು. ನಟುವಾಂಗದಲ್ಲಿ ಶ್ರೀಮತಿ ಶೈಲಜಾ ಶಿವಶಂಕರ್, ವೀಣೆಯಲ್ಲಿ ವಿದುಷಿ ಅರುಣಾಕುಮಾರಿ, ಮೃದಂಗದಲ್ಲಿ ವಿದ್ವಾನ್ ಮನೋಹರ ರಾವ್ ಮಂಗಳೂರು, ಕೊಳಲು ವಿದ್ವಾನ್ ರಾಹುಲ್ ಕಣ್ಣೂರು, ಹಾಡುಗಾರಿಕೆಯಲ್ಲಿ ಕು.ವಿಶಾಖಾ ಮಂಗಳೂರು ಹಾಗೂ ವಿದುಷಿ ಅರುಣಾಕುಮಾರಿ ಸಹಕರಿಸಿದರು. ನಂತರ ನಡೆದ ಹರಿಕಥಾ ಕಾರ್ಯಕ್ರಮದಲ್ಲಿ, ಹರಿದಾಸ ಗಣಪತಿ ಹೆಗಡೆ ಹಡಿನಬಾಳು ಹೊನ್ನಾವರ ಇವರಿಂದ ಸುಂದರಕಾಂಡದ ಹರಿಕಥೆ ನಡೆಯಿತು. ಹಾರ್ಮೋನಿಯಂ ನಲ್ಲಿ ಶ್ರೀ ವಿ ಎಸ್ ಭಟ್ಟ ನವಿಲುಗೋನ, ತಬಲಾದಲ್ಲಿ ಶ್ರೀ ಗಜಾನನ ಯಾಜಿ ಹೊನ್ನಾವರ ಸಹಕರಿಸಿದರು. ಕಲಾವಿದರಿಗೆ ಶ್ರೀಮತಿ ಈಶ್ವರಿ ಬೇರ್ಕಡವು ಹಾಗೂ ಶ್ರೀ ಕೆ ಟಿ ವೆಂಕಟೇಶ್ ನೂಜಿ ಸ್ಮರಣಿಕೆ ಹಾಗೂ ಪ್ರಶಸ್ತಿ ಪತ್ರ ನೀಡಿದರು. ಶ್ರೀ ಶಿವರಾಮ ಕಜೆ, ಶ್ರೀ ಶಂಕರಪ್ರಸಾದ ಕಾಟುಕುಕ್ಕೆ ಹಾಗೂ ಶ್ರೀ ಪ್ರಸನ್ನ ಎಸ್ ಭಟ್ ಕಾರ್ಯಕ್ರಮ ನಿರ್ವಹಿಸಿದರು.
~
ಸಂಧ್ಯಾಕಾರ್ಯಕ್ರಮ:
ಉಪನೀತರಾದವರು ಸಾಯಂಸಂಧ್ಯೆಯಲ್ಲಿ ಸಂಧ್ಯಾವಂದನೆಯನ್ನು ಹಾಗೂ ಮಾತೆಯರು ಶ್ರೀರಾಮತಾರಕ ಮಂತ್ರಜಪ ಮಾಡಿದರು. ಶ್ರೀಕರಾರ್ಚಿತ ರಾಮಾದಿ ದೇವರುಗಳ ಪೂಜೆಯ ಬಳಿಕ ಮಹಿಳೆಯರಿಂದ ಭಜನೆ ನಡೆಯಿತು.

~
ಶ್ರೀಶ್ರೀ ಆಶೀರ್ವಚನಃ

~

Facebook Comments