ಪೆರಾಜೆ-ಮಾಣಿ ಮಠಃ20.8.2013, ಮಂಗಳವಾರ.

ಇಂದು ಮಾತೃಸಮಾವೇಶ. ಮಾತೃಶಾಖಾ ವತಿಯಿಂದ ಸರ್ವಸೇವೆ ನಡೆಯಿತು.  ಈಶ್ವರೀ ಶ್ಯಾಮ ಭಟ್ ಬೇರ್ಕಡವು ದಂಪತಿ ಭಿಕ್ಷಾಂಗ ಕಾರ್ಯಕ್ರಮಗಳನ್ನು ನೆರವೇರಿಸಿದರು. ಎರಡು ಸಾವಿರಕ್ಕೂ ಮಿಕ್ಕಿ ಮಾತೆಯರು ಇಂದಿನ ಸಮಾವೇಶದಲ್ಲಿ ಪಾಲ್ಗೊಂಡರು. ಶ್ರೀಗುರುಗಳ ರಾಮಾದಿ ದೇವರುಗಳ ಪೂಜೆಯ ಬಳಿಕ 510 ಮಹಿಳೆಯರಿಂದ ಕುಂಕುಮಾರ್ಚನೆ ನಡೆಯಿತು. ನಂತರ ನಡೆದ ಕಾರ್ಯಕ್ರಮದಲ್ಲಿ ಶ್ರೀಗುರುಗಳು ಅಮ್ಮಂದಿರ ದಿನವನ್ನು ಗೀತಗಾಯನ, ಚಿತ್ರ, ವ್ಯಾಖ್ಯಾನಗಳ ಮೂಲಕ ಗೌರವದ ಕವಚವನ್ನು ತೊಡಿಸಿ ಮಾತೆಯರ ಮಹತ್ತನ್ನು ತಿಳಿಸಿ ಹೇಳಿದರು.

~

ಯಾಗ ಶಾಲೆಯಿಂದಃ

ಆಂಜನೇಯ ಹವನ, ಮಹಾಗಣಪತಿ ಹವನ, ನವಗ್ರಹ ಶಾಂತಿ, ಬೃಹಸ್ಪತಿ ಶಾಂತಿ, ನೂತನ ಉಪಾಕರ್ಮ, ಉತ್ಸರ್ಜನ ಉಪಾಕರ್ಮ, ಆಂಜನೇಯನಿಗೆ ಸೀಯಾಳಾಭಿಷೇಕ, ಶ್ರೀರಾಮ ಪೂಜೆ, ಶ್ರೀರಾಮತಾರಕ ಯಜ್ಞ, ಗೋಪೂಜೆ, ಗೋತುಲಾಭಾರಗಳು ನಡೆದವು.

~

ಸಾಂಸ್ಕೃತಿಕ ಕಾರ್ಯಕ್ರಮಃ

ಶ್ರೀ ಮುರಳೀಧರ ಶಾಸ್ತ್ರೀ ಮೂಡಂಬೈಲು ಇವರಿಂದ ಕರ್ನಾಟಕ ಶಾಸ್ತ್ರೀಯ ಗಾಯನ ನಡೆಯಿತು. ಶ್ರೀ ಪ್ರಭಾಕರ ಕುಂಜೂರು ವಯಲಿನ್ ನಲ್ಲಿ ಹಾಗೂ ಶ್ರೀ ಕಾಂಚನ ವಸಂತಕೃಷ್ಣ ಮೃದಂಗದಲ್ಲಿ ಸಹಕರಿಸಿದರು. ನಂತರ ನಡೆದ ಭರತನಾಟ್ಯ ಕಾರ್ಯಕ್ರಮದಲ್ಲಿ ಕು. ಅಯನಾ ರಮಣ್ ಳಿಂದ ಮನಮೋಹಕ ನೃತ್ಯಪ್ರದರ್ಶನ ನಡೆಯಿತು.

~
ಸಂಧ್ಯಾಕಾರ್ಯಕ್ರಮ:
ಉಪನೀತರಾದವರು ಸಾಯಂಸಂಧ್ಯೆಯಲ್ಲಿ ಸಂಧ್ಯಾವಂದನೆಯನ್ನು ಹಾಗೂ ಮಾತೆಯರು ಶ್ರೀರಾಮತಾರಕ ಮಂತ್ರಜಪ ಮಾಡಿದರು. ಶ್ರೀಕರಾರ್ಚಿತ ರಾಮಾದಿ ದೇವರುಗಳ ಪೂಜೆಯ ಬಳಿಕ ಮಹಿಳೆಯರಿಂದ ಭಜನೆ ನಡೆಯಿತು.

~

ಶ್ರೀಶ್ರೀ ಆಶೀರ್ವಚನಃ
ಮಾತೃ ಸಮಾವೇಶ ಕಾಂಡ-1
[audio:Chaturmasya2013/matru samavesha 1khanda.mp3]
ಮಾತೃ ಸಮಾವೇಶ ಕಾಂಡ-2
[audio:Chaturmasya2013/matru samavesha 2khanda.mp3]
~

Facebook Comments