ಗುರುಪೂರ್ಣಿಮೆಯ ದಿನ ನಡೆದ ಕಾರ್ಯಕ್ರಮಗಳುಃ

ಪೆರಾಜೆ-ಮಾಣಿ ಮಠಃ 22.7.2013 ಸೋಮವಾರ

“ಚಾತುರ್ಮಾಸ್ಯದ ಕಾಲ ಸತತವಾಗಿ ವರ್ಷಧಾರೆ ಸುರಿಯುತ್ತಿದೆ.  ಜೀವಸಂಕುಲವು ಮಾರ್ಗವನ್ನೆಲ್ಲಾ ವ್ಯಾಪಿಸಿರುವ ಈ ಕಾಲ ಸಂಚಾರಯೋಗ್ಯವಲ್ಲ. ಅದರಲ್ಲಿಯೂ ವಿಶೇಷವಾಗಿ ಯತಿಗಳಿಗೆ ನಿರಂತರವಾಗಿ ವಸತಿ ಮಾಡತಕ್ಕಂತ ಕಾಲ. ಹಾಗಾಗಿ ಈ ಬಾರಿಯ ಚಾತುರ್ಮಾಸ್ಯದ ವ್ರತವನ್ನು ಶ್ರೀ ಮಠದ ನಿಷ್ಠ ಶಿಷ್ಯಭಕ್ತರೆಂದು ಪ್ರಾಪ್ತವಾಗತಕ್ಕಂತಹ ಮಂಗಳೂರು ಹೋಬಳಿಯ ಪೆರಾಜೆಯ ಶ್ರೀರಾಮಚಂದ್ರಾಪುರ ಮಠದಲ್ಲಿ ನಿಮಗೆ ಯಾರಿಗೂ ಯಾವ ಬಾಧಕವೂ ಆಗದಿದ್ದರೆ  ಕೈಗೊಳ್ಳಬೇಕು ಎಂಬ ನಿಶ್ಚಯವನ್ನು ಶ್ರೀಪೀಠ ಮಾಡಿದೆ.” ಪರಮ ಪೂಜ್ಯ ಶ್ರೀಗುರುಗಳು ಈ ಮಾತುಗಳನ್ನು ಹೇಳುತ್ತಾ ವಿಜಯ ಸಂವತ್ಸರದ ಚಾತುರ್ಮಾಸ್ಯ ವ್ರತವನ್ನು ಕೈಗೊಂಡರು. ದೇವತೆಗಳಿಗೆ ಋಷಿಗಳಿಗೆ ಪೂಜೆಗಳನ್ನು ಮಾಡಿ  ವ್ಯಾಸ ಪೂಜಾ  ನೆರವೇರಿಸಿದರು.

ನಂತರ ನಡೆದ ಧರ್ಮಸಭೆಯಲ್ಲಿ, ಹಾರಕರೆ ನಾರಾಯಣ ಭಟ್ ದಂಪತಿಗಳು ಸಭಾಪೂಜೆ ಮಾಡಿದರು.

ವ್ಯಾಸಪೂಜೆ

ವ್ಯಾಸಪೂಜೆ

ಶ್ರೀ ಮಠದ ಸಮ್ಮುಖ ಸರ್ವಾಧಿಕಾರಿಯಾಗಿ ಟಿ  ಮಡಿಯಾಲ್, ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಕೆ ಜಿ ಭಟ್, ವಿವಿಧ ಸಂಘಟನೆಗಳ ಕಾರ್ಯದರ್ಶಿಗಳಾದ ಗಣಪತಿ ಹೆಗಡೆ, ರಾಘವೇಂದ್ರ ಮಧ್ಯಸ್ಥ, ಎಮ್. ಎನ್ ಭಟ್ ಮದ್ಗುಣಿ, ರಾಮಚಂದ್ರ ಭಟ್ ಕೆಕ್ಕಾರು, ಕೃಷ್ಣಮೂರ್ತಿ ಮುಗಲೋಡಿ, ರಾಮಚಂದ್ರ ಜೋಯ್ಸ್, ವಿದ್ವಾನ್ ಸತ್ಯನಾರಾಯಣ ಶರ್ಮಾ, ಸಿ ಹೆಚ್. ಎಸ್ ಭಟ್, ಕೆ ಟಿ ವೆಂಕಟೇಶ್ವರ ಭಟ್ ನೂಜಿ, ಆರ್ ಎಸ್ ಹೆಗಡೆ ಹರಗಿ, ಡಾ. ಶಾರದಾ ಜಯಗೋವಿಂದ, ವಿದ್ವಾನ್ ಜಗದೀಶ ಶರ್ಮಾ, ಗೋವಿಂದರಾಜ್, ಕೆ. ಪಿ.ಎಡಪ್ಪಾಡಿ, ಅಶ್ವಿನಿ ಭಟ್ ಉಡುಚೆ, ಕೆ. ಪಿ. ಬೆಂಗಳೂರು, ಎಮ್. ವಿ. ಹೆಗಡೆ ಮುತ್ತಿಗೆ, ಬಾಲಸುಬ್ರಹ್ಮಣ್ಯ, ಜಿ. ಟಿ. ದಿವಾಕರ, ಹರ್ಷ ಮಹಾಬಲ, ಮಹಾಮಂಡಲ ಅಧ್ಯಕ್ಷ ಡಾ.ವೈ. ವಿ. ಕೃಷ್ಣಮೂರ್ತಿ, ಮೂಲಮಠ ಪುನರ್ನಿರ್ಮಾಣ ಸಮಿತಿ ಅಧ್ಯಕ್ಷ ಎಮ್. ಕೆ. ಹೆಗಡೆ, ಪುನರ್ವಸು ಸಮಿತಿ ಅಧ್ಯಕ್ಷ ಪ್ರಕಾಶ್ ಮಳಲಗದ್ದೆ ಮತ್ತು ಮಂಡಲದ ಪದಾಧಿಕಾರಿಗಳಿಗೆ ಶ್ರೀಗುರುಗಳಿಂದ ರಾಯಸ ನೀಡಲಾಯಿತು.

ನಂತರ ವಿದ್ವಾಂಸ ಹಿರಣ್ಯ ವೆಂಕಟೇಶ್ವರ ಭಟ್ ರವರು “ಗುರುಪರಂಪರಾ ನಮನ” ಎಂಬ ವಿಷಯದ ಬಗ್ಗೆ ಮಾತನಾಡಿದರು. ನಮ್ಮ ಅವಿಚ್ಛಿನ್ನ ಪರಂಪರೆಯ ವೈಶಿಷ್ಟ್ಯಗಳು, ನಮ್ಮ ಗುರುಪರಂಪರೆಯ ಮಹತ್ವವನ್ನು ಶ್ರೀಪೀಠದ ಶಿಷ್ಯರಿಗೆ ತಿಳಿಸಿದರು. ವಿದ್ವಾನ್ ಜಗದೀಶ ಶರ್ಮರು ಕಾರ್ಯಕ್ರಮ ನಿರೂಪಿಸಿದರು.  ಶ್ರೀಮತಿ ಉಷಾ ಅಗರ್ ವಾಲ್ ಕೋಲ್ಕತ್ತಾ, ಶ್ರೀ ಪವನ್ ಸೇಠ್ ದಂಪತಿಗಳು ಮುಂಬೈ, ಮಹಾವೀರ್ ಸೋನಿಕಾ ದಂಪತಿಗಳು ಬೆಂಗಳೂರು, ವಾಣಿಜ್ಯ ತೆರಿಗೆ ಪಶ್ಚಿಮವಲಯ ಆಡಿಟ್ ವಿಭಾಗದ ಡಿ ಸಿ ಶ್ರೀಮತಿ ಸುಲೋಚನಾ ಹಾಗೂ ಶ್ರೀ ಮಠದ ಶಿಷ್ಯವರ್ಗ ಈ ಸಂದರ್ಭದಲ್ಲಿ ಹಾಜರಿದ್ದರು.

~

ಯಾಗ ಶಾಲೆಯಿಂದ:
ಗುರುಪೂರ್ಣಿಮೆಯ ಶುಭಸಂದರ್ಭದಲ್ಲಿ ಪುರೋಹಿತ ಶ್ರೀ ಮಿತ್ತೂರು ಗೋಪಾಲಕೃಷ್ಣ ಭಟ್ ರ ನೇತೃತ್ವದಲ್ಲಿ ಗಣಪತಿ ಹೋಮ, ಆದಿತ್ಯಾದಿ ನವಗ್ರಹ ಶಾಂತಿ, ರಾಮತಾರಕ ಹವನ, ಆಂಜನೇಯ ಹವನ ನಡೆಯಿತು. ಹತ್ತು ಜನ ವೈದಿಕರು ಈ ಕಾರ್ಯದಲ್ಲಿ ಸಹಕರಿಸಿದರು. ಗೋಮಾತೆಗೆ ತುಲಾಭಾರ, ಗೋಪೂಜೆಗಳು ನಡೆದು ಇದರೊಂದಿಗೆ ಮಹಾಗಣಪತಿ ಕಲ್ಪೋಕ್ತ ಪೂಜೆ, ಆಂಜನೇಯ ಕಲ್ಪೋಕ್ತ ಪೂಜೆ, ಸಪರಿವಾರ ಶ್ರೀರಾಮಕಲ್ಪೋಕ್ತ ಪೂಜೆ ನೆರವೇರಿತು. ಆಂಜನೇಯನಿಗೆ ಸೀಯಳಾಭಿಷೇಕ ಸೇವೆಯೂ ನಡೆಯಿತು. ನಂತರ ಶ್ರೀರಾಮತಾರಕ ಜಪ ಯಜ್ಞ ಪ್ರಾರಂಭವಾಯಿತು. ಈ ಯಜ್ಞದ ಪೂರ್ಣಾಹುತಿ 18.9.2013 ರಂದು ನಡೆಯುವುದು.
ಈ ಎಲ್ಲ ವೈದಿಕ ಕಾರ್ಯಕ್ರಮಗಳಿಗೂ ಮುನ್ನಾದಿನ ಸಪ್ತಶುದ್ಧಿ, ಮಂಟಪ ಸಂಸ್ಕಾರ, ಪುಣ್ಯಾಹವಾಚನೆ, ಉದಕಶಾಂತಿಜಪ, ರಾಕ್ಷೋಘ್ನ ಕಲಶ ಜಪ, ಪ್ರೋಕ್ಷಣೆಯಾಗಿ ಮಂಟಪ ಪ್ರವೇಶ ಕಾರ್ಯಕ್ರಮಗಳು ಜರುಗಿದ್ದವು.

ಸೂಃ ರಾಮತಾರಕ ಜಪವನ್ನು ಮಾಡಿ ಯಜ್ಞವೇದಿಕೆಯ ಬಳಿಯ ಕಾರ್ಯಾಲಯದಲ್ಲಿ ಸಂಖ್ಯಾನೋಂದಣಿ ಮಾಡಬೇಕೆಂದು ಯಾಗಶಾಲೆಯ ಸಮಿತಿಯಿಂದ ಹೇಳಿಕೆ ಕೊಟ್ಟಿರುತ್ತಾರೆ.
(ಒಂದು ಕಡೆ ಕುಳಿತು ಮಾಡಿದ ಜಪದ ಸಂಖ್ಯೆಗಳನ್ನಷ್ಟೇ ಕೊಡಬೇಕು)

~
ಸಾಂಸ್ಕೃತಿಕ ಕಾರ್ಯಕ್ರಮ:
ವಿಜಯ ಚಾತುರ್ಮಾಸ್ಯದ ಸಂದರ್ಭದ ದಿನಗಳಲ್ಲಿ ಹಲವು ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಗುರುಪೂರ್ಣಿಮೆಯ ದಿನದಂದೇ ಕಾರ್ಯಕ್ರಮಕ್ಕೆ ಶ್ರೀಗುರುಗಳ ಅಮೃತಹಸ್ತದಿಂದ ದೀಪ ಬೆಳಗಿಸಿ ಚಾಲನೆ ದೊರೆಯಿತು. ಕುಮಾರಿ ಚೈತ್ರಿಕಾರವರ ಹಾಡುಗಾರಿಕೆಗೆ ಅರುಣಾಕುಮಾರಿಯವರ ವೀಣಾವಾದನ ಮತ್ತು ಶ್ರೀ ಪ್ರಸನ್ನ ಎಸ್ ಬಲ್ನಾಡು ರವರ ಮೃದಂಗ ವಾದನದ ಸಹಕಾರವಿತ್ತು.

~*~

Facebook Comments