LIVE Channel

ಇತ್ತೀಚಿನ ಪ್ರತಿಕ್ರಿಯೆಗಳು

Newsletter

22-Jun-2016 : ಇಮಾಮಿ ಸಂಸ್ಥೆಯ ‘ಬ್ಯುಸಿನೆಸ್ – ದ ಇಮಾಮಿ ವೇ’ ಪುಸ್ತಕ ಲೋಕಾರ್ಪಣೆ

Author: ; Published On: ಬುಧವಾರ, ಜೂನ್ 22nd, 2016;

Switch to language: ಕನ್ನಡ | English | हिंदी         Shortlink:

ಕೋಲ್ಕತಾ: ಇಮಾಮಿ ಸಮೂಹ ಸಂಸ್ಥೆಯ ಸಂಸ್ಥಾಪಕರಾದ ಆರ್. ಎಸ್. ಅಗರವಾಲ್ ಮತ್ತು ಆರ್ ಎಸ್ ಗೊಯೆಂಕಾರವರು ಬರೆದ, ಹಾರ್ಪರ್ ಕಾಲಿನ್ಸ್ ಸಂಸ್ಥೆ ಪ್ರಕಟಿಸಿದ ‘ಬ್ಯುಸಿನೆಸ್ – ದ ಇಮಾಮಿ ವೇ’ ಪುಸ್ತಕದ ಲೋಕಾರ್ಪಣೆ ಕಾರ್ಯಕ್ರಮವು ಕೋಲ್ಕತಾದ ‘ದ ಒಬೆರಾಯ್’ ಹೋಟೇಲ್ನಲ್ಲಿ ನಡೆಯಿತು. ಪಶ್ಚಿಮ ಬಂಗಾಳದ ರಾಜ್ಯಪಾಲರಾದ ಗೌರವಾನ್ವಿತ ಕೇಸರಿನಾಥ್ ತ್ರಿಪಾಠಿಯವರು ಪುಸ್ತಕ ಲೋಕಾರ್ಪಣೆಗೊಳಿಸಿದರು.

ಸಮಾರಂಭದಲ್ಲಿ ದಿವ್ಯಸಾನ್ನಿಧ್ಯವಹಿಸಿದ್ದ ಶ್ರೀರಾಮಚಂದ್ರಾಪುರಮಠದ ಶ್ರೀ ಶ್ರೀ ರಾಘವೇಶ್ವರ ಭಾರತೀ ಶ್ರೀಗಳು ಆಶೀರ್ವಚನದಲ್ಲಿ, ಈರ್ವರು ಗೆಳೆಯರು ಎಪ್ಪತ್ತರ ದಶಕದಲ್ಲಿ ಆರಂಭಿಸಿದ ಇಮಾಮಿ ಸಂಸ್ಥೆ ಇಂದು ಹೆಮ್ಮರವಾಗಿ ಬೆಳೆದಿದೆ. ಅಗರವಾಲ್ ಮತ್ತು ಗೊಯೆಂಕಾರವರು ತಮ್ಮ ಸಾಧನೆಯಿಂದ ಇಮಾಮಿಯೆಂಬ ಸಂಸ್ಥೆಯನ್ನು ಶೋಧನೆ ಮಾಡಿದ್ದು ಮಾತ್ರವಲ್ಲದೆ, ಪುಸ್ತಕ ರಚಿಸುವುದರ ಮೂಲಕ ಯುವ ಉದ್ಯಮಿಗಳಿಗೆ ಬೋಧನೆಯನ್ನು ಮಾಡಿದ್ದಾರೆ. ಈ ಪುಸ್ತಕ ಯುವ ಉದ್ಯಮಿಗಳಿಗೆ ಮಾರ್ಗದರ್ಶಿಕೈಪಿಡಿಯಾಗಲಿ ಎಂದು ಹಾರೈಸಿದರು.

ಕಾರ್ಯಕ್ರಮದಲ್ಲಿ ಲೇಖಕರಾದ ಆರ್. ಎಸ್. ಅಗರವಾಲ್ ಮತ್ತು ಆರ್ ಎಸ್ ಗೊಯೆಂಕಾ, ಬಂಧನ್ ಬ್ಯಾಂಕ್ ಎಂ.ಡಿ ಹಾಗೂ ಸಿ ಇ ಒ ಚಂದ್ರಶೇಖರ್ ಘೋಷ್, ನಟ ಮತ್ತು ಆಡ್ ಗುರು ಅಲೇಖ್ ಪದಂಸೀ, ಬರಹಗಾರ ಬಗ್ಸ್ ಭಾರ್ಗವ ಕೃಷ್ಣ ಉಪಸ್ಥಿತರಿದ್ದರು.

Business The Emani Way - Book Release

Business The Emani Way – Book Release

 

Leave a Reply

Highslide for Wordpress Plugin