ಪೆರಾಜೆ-ಮಾಣಿಃ 24.7.2013, ಬುಧವಾರ.

ವಿಜಯ ಚಾತುರ್ಮಾಸ್ಯದ ಮೂರನೇ ದಿನದ ಗುರುಭಿಕ್ಷಾ ಸೇವೆಯನ್ನು ನಡೆಸಿಕೊಟ್ಟವರು ಮಾಣಿ, ಕಬಕ ಮತ್ತು ಉಪ್ಪಿನಂಗಡಿ ವಲಯದವರು. ಬೆಳಗ್ಗೆ ಶ್ರೀಕರಾರ್ಚಿತ ಶ್ರೀದೇವರುಗಳ ಪೂಜೆ, ಮಹಿಳೆಯರಿಂದ ಕುಂಕುಮಾರ್ಚನೆ ನಡೆದು ನಂತರ ಮೂರು ವಲಯಗಳ “ವಲಯ ಸಭೆ” ಜರುಗಿತು. ವಲಯದ ಆಗುಹೋಗುಗಳ ಪಟ್ಟಿ ಪೀಠದ ಮುಂದಿರಿಸಿ, ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಮಹಾಸಭೆಯಲ್ಲಿ ಮಾಣಿ, ಕಬಕ ಮತ್ತು ಉಪ್ಪಿನಂಗಡಿ ವಲಯಗಳ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಶ್ರೀಗುರುಗಳು ಆಶೀರ್ವದಿಸಿದರು. ಸಭೆಯಲ್ಲಿ ಕಾರ್ತಿಕ್ ಕಶ್ಯಪ್ ಐ.ಪಿ.ಎಸ್, ದೆಹಲಿ ಹಾಗೂ ಮಂಗಳೂರು ಮಹಾನಗರಪಾಲಿಕೆಯ ಮಾಜಿ ನಗರಸಭಾ ಅಧ್ಯಕ್ಷರಾದ ಶ್ರೀ ಶಂಕರ್ ದಂಪತಿಗಳು ಉಪಸ್ಥಿತರಿದ್ದರು. ಶ್ರೀಮಠದ ಸರ್ವ ಪದಾಧಿಕಾರಿಗಳು, ಮಂಡಲದ ಪ್ರಮುಖರು, ಚಾತುರ್ಮಾಸ್ಯ ಸೇವಾ ಸಮಿತಿಯ ಸದಸ್ಯರುಗಳು ಸಭೆಯಲ್ಲಿ ಹಾಜರಿದ್ದರು.

~
ಯಾಗ ಶಾಲೆಯಿಂದ:
ಆಂಜನೇಯನಿಗೆ ಸೀಯಾಳಾಭಿಷೇಕ, ಆಂಜನೇಹ ಹವನ, ಗೋತುಲಾಭಾರ, ಗೋಪೂಜೆ, ಶ್ರೀರಾಮಪೂಜೆ, ಶ್ರೀರಾಮತಾರಕ ಯಜ್ಞ ನಡೆಯಿತು.

~

ಸಾಂಸ್ಕೃತಿಕ ಕಾರ್ಯಕ್ರಮ:
ಕುಮಾರಿ ಅಕ್ಷತಾ ಕೊಂಕೋಡಿಯವರಿಂದ ಭಕ್ತಿ-ಭಾವ ಸಮರ್ಪಣೆಯ ಮೂಲಕ ಭಕ್ತಿಗೀತೆಗಳ ಕಾರ್ಯಕ್ರಮ ಜರುಗಿತು. ನಂತರ ಕು.ಸಿಂಧೂ ಭಟ್ ಹಾಗೂ ಕು. ಮಧು ಭಟ್, ಅನಂತಾಡಿ ಸಹೋದರಿಯರಿಂದ ಕೊಳಲು ವಾದನ ಕಾರ್ಯಕ್ರಮ ನಡೆಯಿತು. ಕಲಾವಿದರಿಗೆ ಸ್ಮರಣಿಕೆ ಹಾಗೂ ಪ್ರಮಾಣಪತ್ರ ಕೊಟ್ಟು ಗೌರವಿಸಲಾಯಿತು.

~
ಸಂಧ್ಯಾಕಾರ್ಯಕ್ರಮ:
ಉಪನೀತರಾದವರು ಸಾಯಂಸಂಧ್ಯೆಯಲ್ಲಿ ಸಂಧ್ಯಾವಂದನೆಯನ್ನು ಹಾಗೂ ಮಾತೆಯರು ಶ್ರೀರಾಮತಾರಕ ಮಂತ್ರಜಪ ಮಾಡಿದರು. ಶ್ರೀಕರಾರ್ಚಿತ ರಾಮಾದಿ ದೇವರುಗಳ ಪೂಜೆಯ ಬಳಿಕ ಮಹಿಳೆಯರಿಂದ ಭಜನೆ ನಡೆಯಿತು.

~

ಶ್ರೀಶ್ರೀ ಆಶೀರ್ವಚನಃ

[audio: Chaturmasya2013/2013–7-24-Anjaneya.mp3]
Facebook Comments