ಪೆರಾಜೆ-ಮಾಣಿ ಮಠ: 25-07-2013

ಮಾಣಿ ಮಠದಲ್ಲಿ ವಿಜಯ ಚಾತುರ್ಮಾಸ್ಯದ ನಾಲ್ಕನೇ ದಿನ ಡಾ||ಭೀಮೇಶ್ವರ ಜೋಷಿ, ಧರ್ಮಕರ್ತರು, ಶ್ರೀಕ್ಷೇತ್ರ ಹೊರನಾಡು– ಇವರಿಂದ ಸರ್ವಸೇವೆ ನಡೆಯಿತು. ಶ್ರೀಮಠದ ಪದಾಧಿಕಾರಿಗಳು, ಶ್ರೀಮತಿ ಉಷಾ ಅಗರ್ ವಾಲ್, ಅಲ್ಕಾ ಪಟೇಲ್ ಉಪಸ್ಥಿತರಿದ್ದರು.

ಚಾತುರ್ಮಾಸ್ಯದ ಈ ವಿಶೇಷ ದಿನದಂದು ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನದ ಧರ್ಮಕತೃಗಳಾದ ಶ್ರೀ ಭೀಮೇಶ್ವರ ಜೋಷಿ ಹಾಗೂ ಕುಟುಂಬದವರು ಶ್ರೀ ಗುರುಭಿಕ್ಷಾ ಸೇವೆಯನ್ನು ಸಲ್ಲಿಸಿದರು.
ಆಶಾಡ ಬಹುಳ ತದಿಗೆಯ ಈ ದಿನ ಶಿಷ್ಯ-ಭಕ್ತರೆಲ್ಲರ ಭಾಗ್ಯೋದಯದ ದಿನ, ಅದು ಶ್ರೀ ಗುರುಗಳ ವರ್ದಂತ್ಯೋತ್ಸವ. ಸಮಾಜದ ಉತ್ತಾನಕ್ಕಾಗಿ ರಾಘವೇಶ್ವರ ಭಾರತಿಗಳು ಅವತರಿಸಿದ ಪುಣ್ಯ ದಿನ. ಇದರ ಅಂಗವಾಗಿ ಅನೇಕ ಪೂಜಾಸೇವಗಳು ನೇರವೇರಿದವು. ಮಹಿಳಾ ಭಕ್ತರು ಸಭಾಂಗಣದ ಹಾದಿಯನ್ನು ಪುಷ್ಪಗಳಿಂದ ಅಲಂಕರಿಸಿ, ಶ್ರೀಗಳು ಆಗಮಿಸುವಾಗ ಪೂರ್ಣಕುಂಭ ಸಮೇತ ಸ್ವಾಗತ ಗೈದರು. ಸಭೆಯಲ್ಲಿ 38 ದೀಪಗಳನ್ನು ಪರಿವಾರದಚವರು ಹಾಗೂ ಗಣ್ಯಾತಿಥಿಗಳು ಬೆಳಗುವುದರ ಮೂಲಕ ಸಭಾಕಾರ್ಯಕ್ರಮ ಪ್ರಾರಂಭವಾಯಿತು.

ಇಂದು ಬಂದ ಭಕ್ತಾದಿಗಳಲ್ಲಿ, ಉತ್ತರಖಾಂಡದ ಪ್ರವಾಹದಿಂದ ಬದುಕುಳಿದು, ಸುರಕ್ಷಿತವಾಗಿ ಹಿಂದಿರುಗಿದ “ದಂಬೆ ಗೋವಿಂದ ಶಾಸ್ತ್ರಿ” ಅವರೂ ಸೇರಿದ್ದರು.
ತೀರ್ಥಯಾತ್ರೆಗೆಂದು ಕೇದಾರನಾಥ ದೇವರ ದರ್ಶನಕ್ಕೆ ಹೋಗಿದ್ದ ಇವರು, ಗಂಗಾ ಪ್ರವಾಹದ ಆವರಿಸಿದಾಗ ಮನದಲ್ಲಿ ಗುರುವನ್ನು ಅನನ್ಯವಾಗಿ ನೆನೆದು ಬದುಕುಳಿದು ಹಿಂದಿರುಗಿದರೆ ಪಾದಪೂಜಾ ಸೇವೆಯನ್ನು ನೆಡೆಸುವುದಾಗಿ ಹರಕೆ ಹೊತ್ತರು. ಅಷ್ಟೊಂದು ಭೀಕರ ಘಟನೆಗಳ ನಡುವೆಯೂ, ಇವರಿಗೆ ಯಾವುದೇ ಹಾನಿಯಾಗದೇ ಸುರಕ್ಷಿತವಾಗಿ ಮರಳಿ ಬಂದಿದ್ದು ಗುರುಗಳ ಅನುಗ್ರಹದ ಫಲವೇ ಸರಿ. ಹರಸಿಕೊಂಡಂತೆ, ಈ ಸುದಿನದಂದು ಪಾದಪೂಜಾ ಸೇವೆಗೈದು ಗುರುಗಳ ಪೂರ್ಣಾನುಗ್ರಹ ಪಡೆದರು.
ವಿವಿಧ ಸಭಾಕಾರ್ಯಗಳ ನಂತರ ಶ್ರೀಗಳು ಅನುಗ್ರಹ ಆಶೀರ್ವಚನವನ್ನಿತ್ತರು.
~
ಶ್ರೀಶ್ರೀ ಆಶೀರ್ವಚನಃ
[audio: Chaturmasya2013/2013-07-25-Sri Vardhanti.mp3]
~

ಯಾಗಶಾಲೆಯಿಂದಃ

ಆಂಜನೇಯನಿಗೆ ಸೀಯಾಳಾಭಿಷೇಕ, ಆಂಜನೇಯ ಹವನ, ನವಗ್ರಹ ಶಾಂತಿಪೂರ್ವಕ ಆಂಜನೇಯ ಹವನ, ಸುಂದರಕಾಂಡ ಪಾರಾಯಣ, ಗೋತುಲಾಭಾರ, ಗೋಪೂಜೆ, ಶ್ರೀರಾಮಪೂಜೆ, ಶ್ರೀರಾಮತಾರಕಯಜ್ಞ.
ಪಾದಪೂಜೆಃ ಶ್ರೀ ದಂಬೆ ಗೋವಿಂದ ಶಾಸ್ತ್ರೀ ಕನ್ಯಾನ, ಜಿ .ವಿ ಹೆಗಡೆ ಸಿದ್ಧಾಪುರ, ಗೋಪಾಲಕೃಷ್ಣ ಭದ್ರಾವತಿ, ಅಲ್ಕಾ ಪಟೇಲ್

~

ಸಾಂಸ್ಕೃತಿಕ ಕಾರ್ಯಕ್ರಮಃ

ಕರ್ನಾಟಕ ಸಂಗೀತ ಕಾರ್ಯಕ್ರಮವನ್ನು ಕು. ಸ್ವಾತಿಶ್ರೀ ನೆಹರೂ ನಗರ ನಡೆಸಿಕೊಟ್ಟರು. ವಯಲಿನ್ ನಲ್ಲಿ ಶ್ರೀಮತಿ ಜ್ಯೋತಿ ಅಮೈ ಹಾಗೂ ಮೃದಂಗದಲ್ಲಿ ಶ್ರೀ ಪ್ರಸನ್ನ ಎಸ್ ಬಲ್ನಾಡು ಸಹಕರಿಸಿದರು. ಕಲಾವಿದರಿಗೆ ಸ್ಮರಣಿಕೆ ಹಾಗೂ ಪ್ರಮಾಣಪತ್ರಗಳನ್ನಿತ್ತು ಗೌರವಿಸಲಾಯಿತು.
~
ಸಂಧ್ಯಾಕಾರ್ಯಕ್ರಮ:
ಉಪನೀತರಾದವರು ಸಾಯಂಸಂಧ್ಯೆಯಲ್ಲಿ ಸಂಧ್ಯಾವಂದನೆಯನ್ನು ಹಾಗೂ ಮಾತೆಯರು ಶ್ರೀರಾಮತಾರಕ ಮಂತ್ರಜಪ ಮಾಡಿದರು. ಶ್ರೀಕರಾರ್ಚಿತ ರಾಮಾದಿ ದೇವರುಗಳ ಪೂಜೆಯ ಬಳಿಕ ಮಹಿಳೆಯರಿಂದ ಭಜನೆ ನಡೆಯಿತು.

~*~

Facebook Comments