ಪೆರಾಜೆ-ಮಾಣಿ ಮಠಃ 25.8.2013, ಆದಿತ್ಯವಾರ

ಇಂದು ಹೊನ್ನಾವರ-ಭಾರತ ಮಂಡಲದ ಗೇರುಸೊಪ್ಪ, ಅಪ್ಸರಕೊಂಡ, ಧಾರವಾಡ, ಹುಬ್ಬಳ್ಳಿ ಹಾಗೂ ಹಾವೇರಿ ವಲಯಗಳ ಗುರುಭಿಕ್ಷಾಸೇವೆ ನಡೆಯಿತು. ಶ್ರೀಗುರುಗಳ ಶ್ರೀರಾಮಾದಿ ದೇವರುಗಳ ಪೂಜೆಯ ಬಳಿಕ ಮಾತೆಯರಿಂದ ಕುಂಕುಮಾರ್ಚನೆ ನಡೆಯಿತು. ಶ್ರೀ ಪುರಂದರ ಹೆಗಡೆ ಹುಬ್ಬಳ್ಳಿ ಇಂದಿನ ಸೇವಾಕರ್ತೃತ್ವವನ್ನು ವಹಿಸಿದ್ದರು.

~

ಯಾಗಶಾಲೆಯಿಂದಃ

ಭಿಕ್ಷಾಂಗ ಆಂಜನೇಯ ಹವನ, ಸೇವಾರ್ಥ ಆಂಜನೇಯ ಹವನ, ಆಂಜನೇಯನಿಗೆ ಸೀಯಾಳಾಭಿಷೇಕ, ಸೀತಾಕಲ್ಯಾಣೋತ್ಸವ, ರಾಮಾಯಣ ಪಾರಾಯಣ, ವಿದ್ಯಾಗಣಪತಿ ಹವನ, ಗಣಪತಿ ಹವನ ಸಹಿತ ಲಕ್ಷ್ಮೀನಾರಾಯಣ ಹೃದಯ ಹವನ(೧೦ ಪಾರಾಯಣ, ೧ ಹೋಮ), ಶುಕ್ರಾರ್ಕ ದಶಾ ಸಂಧಿಶಾಂತಿ( ಗಣಪತಿ ಹವನ, ನವಗ್ರಹ ಶಾಂತಿ ಸಹಿತ), ಶ್ರೀರಾಮಪೂಜೆ, ಶ್ರೀರಾಮತಾರಕಯಜ್ಞ, ಗೋಪೂಜೆ, ರಾತ್ರಿಗೆ ಭಗಲಾಮುಖೀ ಹವನಗಳು ನಡೆದವು.

ಪಾದಪೂಜೆಃ ಶ್ರೀ ಡೆಂಬಳ ಗೋಪಾಲಕೃಷ್ಣ ಭಟ್ಟ ಸಂಪ್ಯ, ಡಾ.ಹರ್ಷರಾಜ್ ಬಿ ಸಿ ರೋಡ್, ಶ್ರೀ ನರಸಿಂಹಪ್ರಸಾದ ದರ್ಭೆ, ಶ್ರೀ ಶಂಭು ಮಂಜುನಾಥ ಹೆಗಡೆ ಅಪ್ಸರಕೊಂಡ, ಶ್ರೀ ರಾಮಚಂದ್ರ ಹೆಗಡೆ ಗೇರುಸೊಪ್ಪ, ಶ್ರೀ ಗಜಾನನ ಗಣಪತಿ ಹೆಗಡೆ ಅಪ್ಸರಕೊಂಡ.

~

ಸಾಂಸ್ಕೃತಿಕ ಕಾರ್ಯಕ್ರಮಃ

ತಾಳಮದ್ದಳೆ “ಶರಸೇತು” ಕಲಾವಿದರು ಉಡುವೆಕೋಡಿ, ಸೇರಾಜೆ, ಯಾಜಿ. ಭಾಗವತರು  ಶ್ರೀ ರಮೇಶ್ ಭಟ್, ಚೆಂಡೆ ಜಗನ್ನಿವಾಸ ರಾವ್, ಮದ್ದಳೆ ವದ್ವ ಸಹಕರಿಸಿದರು.
~
ಸಂಧ್ಯಾಕಾರ್ಯಕ್ರಮ:
ಉಪನೀತರಾದವರು ಸಾಯಂಸಂಧ್ಯೆಯಲ್ಲಿ ಸಂಧ್ಯಾವಂದನೆಯನ್ನು ಹಾಗೂ ಮಾತೆಯರು ಶ್ರೀರಾಮತಾರಕ ಮಂತ್ರಜಪ ಮಾಡಿದರು. ಶ್ರೀಕರಾರ್ಚಿತ ರಾಮಾದಿ ದೇವರುಗಳ ಪೂಜೆಯ ಬಳಿಕ ಮಹಿಳೆಯರಿಂದ ಭಜನೆ ನಡೆಯಿತು.

~*~

Facebook Comments