ಪೆರಾಜೆ-ಮಾಣಿ ಮಠಃ 26.8.2013, ಸೋಮವಾರ

ಇಂದು ಹೊನ್ನಾವರ ಮಂಡಲದ ಹೊನ್ನಾವರ, ಹೊಸಾಕುಳಿ, ಕಡ್ಳೆ ಹಾಗೂ ಕರ್ಕಿ ವಲಯಗಳ ಗುರುಭಿಕ್ಷಾಸೇವೆ ನಡೆಯಿತು. ಶ್ರೀ ಗುರುಗಳು ಶ್ರೀಕರಾರ್ಚಿತ ದೇವರುಗಳ ಪೂಜೆ ಮಾಡಿದ ಬಳಿಕ ಮಾತೆಯರಿಂದ ಕುಂಕುಮಾರ್ಚನೆ ನಡೆಯಿತು. ಶ್ರೀ ಗೋವಿಂದ ಗಣಪತಿ ಜೋಶಿ ಕರ್ಕಿ ವಲಯದವರು ಗುರುಭಿಕ್ಷಾ ಸೇವೆಯನ್ನು ವಲಯಗಳ ಪರವಾಗಿ ನೆರವೇರಿಸಿದರು. ಶ್ರೀ ಪ್ರಮೋದ್ ರೈ ಪೂರ್ವ ಆಡಳಿತ ನಿರ್ದೇಶಕರು ಕಾಂಪ್ಕೋ, ಶ್ರೀ ಮಠದ ಪದಾಧಿಕಾರಿಗಳು, ಶಿಷ್ಯವರ್ಗ ಶ್ರೀಗುರುಗಳಿಂದ ಆಶೀರ್ವಾದ ಪಡೆದುಕೊಂಡರು.

~

ಯಾಗಶಾಲೆಯಿಂದಃ

ಭಿಕ್ಷಾಂಗ ಆಂಜನೇಯ ಹವನ, ಧರಣೀಹವನ, ದ್ವಾದಶಾರಾಧನೆ, ಗಣಪತಿಹವನ ಸಹಿತ ಕುಜರಾಹು ದಶಾ ಸಂಧಿಶಾಂತಿ, ಗಣಪತಿ ಹವನ ಸಹಿತ ರಾಹುಬೃಹಸ್ಪತಿ ದಶಾ ಸಂಧಿಶಾಂತಿ, ಶ್ರೀರಾಮಪೂಜೆ, ಶ್ರೀರಾಮತಾರಕಯಜ್ಞ, ಆಂಜನೇಯನಿಗೆ ಸೀಯಾಳಾಭಿಷೇಕ, ಗೋಪೂಜೆಗಳು ನಡೆದವು.

ಪಾದಪೂಜೆಃ ಶ್ರೀ ಸಿದ್ಧಿವಿನಾಯಕ ದೇವಸ್ಥಾನ ಕೊಳಗದ್ದೆ ಹೊನ್ನಾವರ, ಶ್ರೀ ಈಶ್ವರ ಅವಧಾನಿ ಗುಣವಂತೆ ಹೊನ್ನಾವರ, ಶ್ರೀಮತಿ ಗೀತಾ ಮಂಜಪ್ಪ ಬೆಂಗಳೂರು, ಶ್ರೀ ಸುಬ್ರಹ್ಮಣ್ಯ ರಾಮ ಹೆಗಡೆ ಹೊನ್ನಾವರ, ಶ್ರೀ ರಮೇಶ ಈಶ್ವರ ಭಟ್ಟ ಕಡ್ಳೆ ವಲಯ, ಶ್ರೀ ಸದಾನಂದ ಗಜಾನನ ಹೆಗಡೆ ಹೊಸಕುಳಿ, ವೈಯಕ್ತಿಕಃ ಶ್ರೀ ಬಳ್ಳ ಸುಬ್ರಹ್ಮಣ್ಯ ಭಟ್ ಮತ್ತು ಸಹೋದರರು ಕಾಸರಗೋಡು.

~

ಸಾಂಸ್ಕೃತಿಕ ಕಾರ್ಯಕ್ರಮಃ

ಹರಿಕಥಾ ಶ್ರವಣದಲ್ಲಿ ಪ್ರಸಂಗ ‘ಚೂಡಾಮಣೀ’ ಶ್ರೀ ಈಶ್ವರದಾಸ ಕೊತ್ತೇಸರ (ಶ್ರೀ ಭದ್ರಗಿರಿ ಅಚ್ಯುತದಾಸರ ಶಿಷ್ಯರು), ಯಲ್ಲಾಪುರ ಇವರು ಹರಿಕಥಾನಕವನ್ನು ನಡೆಸಿಕೊಟ್ಟರು.

~
ಸಂಧ್ಯಾಕಾರ್ಯಕ್ರಮ:
ಉಪನೀತರಾದವರು ಸಾಯಂಸಂಧ್ಯೆಯಲ್ಲಿ ಸಂಧ್ಯಾವಂದನೆಯನ್ನು ಹಾಗೂ ಮಾತೆಯರು ಶ್ರೀರಾಮತಾರಕ ಮಂತ್ರಜಪ ಮಾಡಿದರು. ಶ್ರೀಕರಾರ್ಚಿತ ರಾಮಾದಿ ದೇವರುಗಳ ಪೂಜೆಯ ಬಳಿಕ ಮಹಿಳೆಯರಿಂದ ಭಜನೆ ನಡೆಯಿತು.

~*~

Facebook Comments