LIVE Channel

ಇತ್ತೀಚಿನ ಪ್ರತಿಕ್ರಿಯೆಗಳು

Newsletter

4- ಅಗೋಸ್ತು-2013: ವಿಜಯ ಚಾತುರ್ಮಾಸ್ಯ: ಬಾಯಾರು ಮತ್ತು ಉಡುಪಿ ವಲಯದವರ ಗುರುಭಿಕ್ಷಾ ಸೇವೆ

Author: ; Published On: ಸೋಮವಾರ, ಆಗಸ್ತು 5th, 2013;

Switch to language: ಕನ್ನಡ | English | हिंदी         Shortlink:

ಪೆರಾಜೆ-ಮಾಣಿ ಮಠಃ 4-08-2013, ಆದಿತ್ಯವಾರ

ವಿಜಯ ಚಾತುರ್ಮಾಸ್ಯದ ಇಂದಿನ ದಿನದ ಗುರುಭಿಕ್ಷಾ ಸೇವೆ ಬಾಯಾರು ಮತ್ತು ಉಡುಪಿ ವಲಯದಿಂದ  ನಡೆಯಿತು.  ಶ್ರೀಗುರುಗಳ  ಶ್ರೀಕರಗಳಿಂದ  ಶ್ರೀದೇವರ  ಪೂಜೆಗಳು  ನೆರವೇರಿದವು.  ನಂತರ  ಮಹಿಳೆಯರಿಂದ  ಕುಂಕುಮಾರ್ಚನೆ  ನಡೆಯಿತು. ಈ ದಿನದ ಭಿಕ್ಷಾ ಸೇವೆಯನ್ನು ವಲಯದ ವತಿಯಿಂದ ಶ್ರೀ ರಾಮಚಂದ್ರ ಭಟ್, ಬಾಯಾರು ವಲಯದವರು ನೆರವೇರಿಸಿದರು. ಈ ದಿನ “ಗುರಿಕ್ಕಾರರ ಸಮಾವೇಶ” ನಡೆಯಿತು. ರಾಮಚಂದ್ರಾಪುರ ಮಂಡಲ,ಸಾಗರ ಮಂಡಲ, ಸಿದ್ದಾಪುರ ಮಂಡಲ,ಕುಮಟಾ ಮಂಡಲ, ಹೊನ್ನಾವರ ಮಂಡಲ, ಮಂಗಳೂರು ಮಂಡಲ, ಮುಳ್ಳೇರಿಯಾ ಮಂಡಲ, ಉಪ್ಪಿನಂಗಡಿ ಮಂಡಲ, ಬೆಂಗಳೂರು ಮಂಡಲ, ಭಾರತ ಮಂಡಲದಿಂದ  ನೂರಾರು ಗುರಿಕ್ಕಾರರು ಭಾಗವಹಿಸಿದ್ದರು.

‘ಒಪ್ಪಣ್ಣ ನೆರೆಕರೆ ಪ್ರತಿಷ್ಠಾನ‘ದಿಂದ ಹವ್ಯಕ ಭಾಷೆಯ ಪ್ರಕಟಣೆಯಾದ  “ಅಟ್ಟಿನಳಗೆ” ಎಂಬ ಪುಸ್ತಕ ಮತ್ತು ಡಾ. ಆರ್ ಗಣೇಶರಿಂದ ಪುತ್ತೂರಿನಲ್ಲಿ ನಡೆದ ಅಷ್ಟಾವಧಾನ ಕಾರ್ಯಕ್ರಮದ ಮುದ್ರಿತ ಸಿ. ಡಿ ಶ್ರೀಗುರುಗಳ  ಕರಗಳಿಂದ  ಲೋಕರ್ಪಣೆಗೊಂಡಿತು.   ಶ್ರೀವಿನಯಚಂದ್ರ ಆಳ್ವ(ಅಧ್ಯಕ್ಷರು, ವಿಟ್ಲ, ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ), ಶ್ರೀ ಬಲರಾಮ ಆಚಾರ್ಯ(ಜಿ ಎಲ್ ಜ್ಯುವೆಲ್ಲರ್ಸ್, ಪುತ್ತೂರು), ಶ್ರೀ ರಮಾನಾಥ ವಿಟ್ಲ(ಮಾಜಿ ಅಧ್ಯಕ್ಷರು ಗ್ರಾಮ ಪಂಚಾಯತ್ ವಿಟ್ಲ), ಶ್ರೀ ಮಹಾಬಲೇಶ್ವರ ಭಟ್ ಎಡಕ್ಕಾನ ರಶ್ಯಾ, ಶ್ರೀಮತಿ ಅನುಪಮಾ ಮೂಡಂಬೈಲು (ನ್ಯಾಯಾಧೀಶರು ಕುಂದಾಪುರ) ಸಭೆಯಲ್ಲಿ ಉಪಸ್ಥಿತರಿದ್ದರು.

~

ಯಾಗಶಾಲೆಯಿಂದಃ

ಆಂಜನೇಯನಿಗೆ ಸೀಯಾಳಾಭಿಷೇಕ, ಭಿಕ್ಷಾಂಗ ಆಂಜನೇಯ ಹವನ, ಆಂಜನೇಯ ಹವನಗಳು ಸೇವೆ, ಆದಿತ್ಯ ಹೃದಯ ಹವನ, ಅರುಣ ಹವನ, ನವಗ್ರಹ ಶಾಂತಿ, ಹನೂಪತ್ಪಂಚರತ್ನ ಹವನ, ಗೋಪೂಜೆ, ಗೋತುಲಾಭಾರ, ಶ್ರೀ ರಾಮ ಪೂಜೆ,  ಶ್ರೀರಾಮತಾರಕ ಯಜ್ಞ, ಯಜುರ್ವೇದ ಪಾರಾಯಣ ನಡೆಯಿತು.

ಸಾಂಸ್ಕೃತಿಕ ಕಾರ್ಯಕ್ರಮ:

ಭಕ್ತಿ ಸಂಗೀತ ಕಾರ್ಯಕ್ರಮದಲ್ಲಿ, ವಿದುಷಿ ಉಮಾ ಉದಯಶಂಕರ (ಸರಿಗಮ ಭಾರತೀ ಸಂಗೀತ ಕಲಾಶಾಲೆ, ಉಡುಪಿ)ಮೃದಂಗದಲ್ಲಿ ಶ್ರೀ ನಿಕ್ಷಿತ್ ಪುತ್ತೂರು ಸಹಕರಿಸಿದ್ದರು.
ಮಂಗಳಾ ಮ್ಯಾಜಿಕ್ ವರ್ಲ್ಡ್ ನ ಕು. ಅಪೂರ್ವಾ ಮಳಿ ಮತ್ತು ಕು. ಅಂಜನಾ ಮಳಿಯವರ ಜಾದೂ ಪ್ರದರ್ಶನ ನಡೆಯಿತು. ತಮ್ಮ ಹೆತ್ತವರಾದ ಶ್ರೀ ರಾಜೇಶ್ ಮಳಿ ಮತ್ತು ಶುಭಾ ರಾಜ್ ಜೊತೆಯಲ್ಲಿ ಪುಟಾಣಿ ಮಕ್ಕಳು ಜನಮನ ರಂಜಿಸಿದರು.
ನಂತರ ನಡೆದ ಏಕವ್ಯಕ್ತಿ ಯಕ್ಷಗಾನ ದಲ್ಲಿ ಕು. ಪ್ರಣವ ಕೆ ವಿ “ಹನುಮ ವಿಜಯ”ವನ್ನು ಪ್ರಸ್ತುತ ಪಡಿಸಿದರು. ಭಾಗವತರು ಶ್ರೀಮತಿ ಲಕ್ಷ್ಮೀ ವಿ ಜಿ ಭಟ್ ಮತ್ತು ಶ್ರೀ ಮುರಳಿಶಾಸ್ತ್ರೀ ತೆಂಕಬೈಲು, ಚೆಂಡೆ ಶ್ರೀ ರಾಮ ಪ್ರಸಾದ್ ವದ್ವ, ಮದ್ದಳೆ ಶ್ರೀ ಅವಿನಾಶ್, ಚಕ್ರತಾಳ ಅಭಿಷೇಕ್, ನಿರ್ದೇಶನ ಶ್ರೀ ಸಬ್ಬಣಕೋಡಿ ರಾಮ ಭಟ್.

ಭರತನಾಟ್ಯ ಕಾರ್ಯಕ್ರಮವಾದ ನೃತ್ಯಸಂಗಮದಲ್ಲಿ ಭರತನಾಟ್ಯ ವಿದುಷಿ ವಿದ್ಯಾಶ್ರೀ ರಾಧಾಕೃಷ್ಣ ಮತ್ತು ಬಳಗದವರಿಂದ ಕಾರ್ಯಕ್ರಮವಿತ್ತು. ಇವರು ಗಾನನೃತ್ಯ ಅಕಾಡಮಿ ಯ ನಿರ್ದೇಶಕರು.
ಕಲಾವಿದರಿಗೆ ಶ್ರೀ ಶ್ಯಾಮ ಭಟ್ ಬೇರ್ಕಡವು, ಶ್ರೀ ಶಿವರಾಮ ಕಜೆ, ಶ್ರೀ ನಾರಾಯಣ ಭಟ್ ಹಾರಕರೆ ಸ್ಮರಣಿಕೆ ಹಾಗೂ ಪ್ರಶಸ್ತಿಗಳನ್ನು ನೀಡಿದರು.

~
ಸಂಧ್ಯಾಕಾರ್ಯಕ್ರಮ:
ಉಪನೀತರಾದವರು ಸಾಯಂಸಂಧ್ಯೆಯಲ್ಲಿ ಸಂಧ್ಯಾವಂದನೆಯನ್ನು ಹಾಗೂ ಮಾತೆಯರು ಶ್ರೀರಾಮತಾರಕ ಮಂತ್ರಜಪ ಮಾಡಿದರು. ಶ್ರೀಕರಾರ್ಚಿತ ರಾಮಾದಿ ದೇವರುಗಳ ಪೂಜೆಯ ಬಳಿಕ ಮಹಿಳೆಯರಿಂದ ಭಜನೆ ನಡೆಯಿತು.

~

ಶ್ರೀಶ್ರೀ ಆಶೀರ್ವಚನಃ

[audio:Chaturmasya2013/2013-08-04-Gurikkarara-Samavesha.mp3]

Leave a Reply

Highslide for Wordpress Plugin