ಪೆರಾಜೆ-ಮಾಣಿ ಮಠಃ5.8.2013, ಸೋಮವಾರ

ಇಂದು ಬೆಳ್ಳಾರೆ, ಚೊಕ್ಕಾಡಿ ಮತ್ತು ಪಂಜ ವಲಯದವರ ಗುರುಭಿಕ್ಷಾ ಸೇವೆ ನಡೆಯಿತು. ಶ್ರೀದೇವರುಗಳ ಪೂಜೆಗಳು ನಡೆದ ಮೇಲೆ ಮಹಿಳೆಯರಿಂದ ಕುಂಕುಮಾರ್ಚನೆ ನಡೆಯಿತು. ಬೆಳ್ಳಾರೆ, ಚೊಕ್ಕಾಡಿ ಹಾಗೂ ಪಂಜ ವಲಯದವರ “ವಲಯ ಸಭೆ”ಯಲ್ಲಿ ವಲಯಗಳ ವಿಷಯಗಳನ್ನು ಶ್ರೀಪೀಠದ ಮುಂದಿಟ್ಟರು. ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.  ಶ್ರೀ ಬಿ ಜೆ ಶರ್ಮಾ ಬೆಂಗಳೂರು, ಡಾ.ರಾಮಯ್ಯ ಭಟ್ ಸೆಟ್ಟಿಹಿತ್ಲು, ಎಸ್ ಎಮ್ ಪ್ರಸಾದ ಮುನಿಯಂಗಳ, ಪಿ ಜಿ ಜಗನ್ನಿವಾಸ ರಾವ್, ಬಿ ಗಣಪತಿ ಗಿರಿನಗರ ಬೆಂಗಳೂರು, ಶ್ರೀ ವಿನಯಕುಮಾರ್ ಸೊರಕೆ (ನಗರಾಭಿವೃದ್ಧಿ ಸಚಿವರು, ಕರ್ನಾಟಕ ಸರಕಾರ), ಶ್ರೀಮತಿ ಶಕುಂತಲಾ ಶೆಟ್ಟಿ (ಶಾಸಕರು, ಪುತ್ತೂರು), ಬಿ ನಿತ್ಯಾನಂದ ಶೆಟ್ಟಿ ಪುತ್ತೂರು, ಶ್ರೀ ಪ್ರವೀಣ್ ಚಂದ್ರ ಆಳ್ವ(ಅಧ್ಯಕ್ಷರು, ಕೋಟಿ ಚೆನ್ನಯ ಜೋಡುಕರೆ ಕಂಬಳ ಸಮಿತಿ ಹಾಗೂ ಅಧ್ಯಕ್ಷರು, ಪುತ್ತೂರು ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್), ಶ್ರೀ ಬೆಟ್ಟ ಈಶ್ವರ ಭಟ್ ವಕೀಲರು ಪುತ್ತೂರು ಶ್ರೀ ಗುರುಗಳಿಂದ ಆಶೀರ್ವಾದವನ್ನು ಪಡೆದುಕೊಂಡರು.

~

ಯಾಗಶಾಲೆಯಿಂದಃ

ಭಿಕ್ಷಾಂಗ ಆಂಜನೇಯ ಹವನ, ಆಂಜನೇಯನಿಗೆ ಸೀಯಾಳಾಭಿಷೇಕ, ನವಚಂಡೀ ಹವನ, ಗೋಪೂಜೆ, ಗೋತುಲಾಭಾರ, ಶ್ರೀ ರಾಮ ಪೂಜೆ,  ಶ್ರೀರಾಮತಾರಕ ಯಜ್ಞ, ಯಜುರ್ವೇದ ಪಾರಾಯಣ ನಡೆಯಿತು.

~

ಸಾಂಸ್ಕೃತಿಕ ಕಾರ್ಯಕ್ರಮಃ

ಕು. ಸಾಯಿಸುಬ್ರಹ್ಮಣ್ಯ ಹಾಗೂ ಕು. ಸಾಯಿಲಕ್ಷ್ಮೀಯವರಿಂದ ಸಂಗೀತ ಸೇವೆ ನಡೆಯಿತು. ಶ್ರೀಮತಿ ಜ್ಯೋತಿಲಕ್ಷ್ಮೀ ಅಮೈ ವಯಲಿನ್ ನಲ್ಲಿ ಹಾಗೂ ಶ್ರೀ ಪ್ರಸನ್ನ ಎನ್ ಭಟ್ ಮೃದಂಗದಲ್ಲಿ ಸಹಕರಿಸಿದರು. ನಂತರ ವಿದುಷಿ ಅರುಣಾ ಕೆ ಎಸ್ ಭಟ್ ಅಮೈ ಅವರಿಂದ ಕರ್ನಾಟಕ ಶಾಸ್ತ್ರೀಯ ಗಾಯನ ನಡೆಯಿತು. ವಯಲಿನ್ ನಲ್ಲಿ ಶ್ರೀಮತಿ ಜ್ಯೋತಿಲಕ್ಷ್ಮೀ ಅಮೈ ಹಾಗೂ ಮೃದಂಗದಲ್ಲಿ ಶ್ರೀ ಸುನಾದ ಕೃಷ್ಣ ಅಮೈ ಸಹಕರಿಸಿದರು.

ಭಕ್ತಿಲಹರಿ ಕಾರ್ಯಕ್ರಮ ಶ್ರೀರಾಮಭಟ್ ಬಲ್ನಾಡು ಬಳಗ ನಡೆಸಿಕೊಟ್ಟರು. ತಬಲದಲ್ಲಿ ಶ್ರೀ ಸುಹಾಸ್ ಹೆಬ್ಬಾರ್, ವೀಣೆಯಲ್ಲಿ ಅರುಣಾಕುಮಾರಿ ಮಣಿಪಾಲ, ಮೃದಂಗದಲ್ಲಿ ಶ್ರೀ ಪ್ರಸನ್ನ ಎಸ್ ಬಲ್ನಾಡು ನಡೆಸಿದರು. ಇದರ ನಂತರ ಮೂಡಿ ಬಂದ ತಾಳ-ಲಯ-ವೈಭವದಲ್ಲಿ, ವೀಣೆಯಲ್ಲಿ ಅರುಣಾಕುಮಾರಿ ಮಣಿಪಾಲ, ಮೃದಂಗದಲ್ಲಿ ಶ್ರೀ ಪ್ರಸನ್ನ ಎನ್ ಭಟ್ ಬಲ್ನಾಡು, ಮೋರ್ಸಿಂಗ್ ನಲ್ಲಿ ಶ್ರೀ ಬಾಲಕೃಷ್ಣ ಭಟ್, ತಬಲದಲ್ಲಿ ಶ್ರೀ ಸುಹಾಸ್ ಹೆಬ್ಬಾರ್, ಕೊನೆಗೋಲು ಶ್ರೀ ಸುನಾದ ಕೃಷ್ಣ, ಚೆಂಡೆ ಶ್ರೀ ಜಗನ್ನಿವಾಸ ರಾವ್, ತಾಳ ಸಹಕಾರ ಕು. ಚೈತ್ರಿಕಾ

ಈ ಕಾರ್ಯಕ್ರಮದ ಕಲಾವಿದರಿಗೆ ಶ್ರೀ ಬಂಗಾರಡ್ಕ ಜನಾರ್ಧನ ಭಟ್, ಡಾ. ವೈ ವಿ ಕೃಷ್ಣಮೂರ್ತಿ ಹಾಗೂ ಸೇರಾಜೆ ಸುಬ್ರಹ್ಮಣ್ಯ ಭಟ್ ಪ್ರಶಸ್ತಿ ಹಾಗೂ ಸ್ಮರಣಿಕೆಗಳನ್ನು ನೀಡಿದರು.

~
ಸಂಧ್ಯಾಕಾರ್ಯಕ್ರಮ:
ಉಪನೀತರಾದವರು ಸಾಯಂಸಂಧ್ಯೆಯಲ್ಲಿ ಸಂಧ್ಯಾವಂದನೆಯನ್ನು ಹಾಗೂ ಮಾತೆಯರು ಶ್ರೀರಾಮತಾರಕ ಮಂತ್ರಜಪ ಮಾಡಿದರು. ಶ್ರೀಕರಾರ್ಚಿತ ರಾಮಾದಿ ದೇವರುಗಳ ಪೂಜೆಯ ಬಳಿಕ ಮಹಿಳೆಯರಿಂದ ಭಜನೆ ನಡೆಯಿತು.

~

ಶ್ರೀಶ್ರೀ ಆಶೀರ್ವಚನಃ

Facebook Comments