ಪೆರಾಜೆ-ಮಾಣಿ ಮಠಃ 6.9.2013, ಶುಕ್ರವಾರ

ಇಂದು ಕೇರಳ ವಲಯದ ಗುರುಭಿಕ್ಷಾಸೇವೆ ನಡೆಯಿತು. ಶ್ರೀಕರಾರ್ಚಿತ ಪೂಜೆಯ ಬಳಿಕ ಮಾತೆಯರು ಕುಂಕುಮಾರ್ಚನೆ ನಡೆಸಿದರು. ಕೇರಳ ವಲಯದ ಪರವಾಗಿ ಶ್ರೀ ಶಂಕರ ಭಟ್ ಭಿಕ್ಷಾಕಾರ್ಯವನ್ನು ನೆರವೇರಿಸಿದರು.

~

ಯಾಗಶಾಲೆಯಿಂದಃ

ಗಣಪತಿ ಹವನಗಳು(೩), ನವಗ್ರಹ ಶಾಂತಿ, ಪಂಚಮಾರಿಷ್ಟ ಶಾಂತಿ, ರಾಹು ಶಾಂತಿ,  ಸರ್ಪ ಸಂಸ್ಕಾರ, ಸರ್ಪ ಸೂಕ್ತಹವನ, ಸುಬ್ರಹ್ಮಣ್ಯಪೂಜೆ, ಭಿಕ್ಷಾಂಗ ಆಂಜನೇಯ ಹವನ, ಅಷ್ಟವಟು ಆರಾಧನೆ, ಅಶ್ಲೇಷ ಬಲಿ, ಪಂಚಬಾಣೇಶಿ ಹವನ, ದುರ್ಗಾ ಪೂಜೆ, ಸುದರ್ಶನ ಹವನ(ಆವಾಹನೆ, ಉಚ್ಛಾಟನೆ ಸಹಿತ), ಶ್ರೀರಾಮಪೂಜೆ, ಶ್ರೀರಾಮತಾರಕಯಜ್ಞ, ಗೋಪೂಜೆ, ಆಂಜನೇಯನಿಗೆ ಸೀಯಾಳಾಭಿಷೇಕಗಳು ನಡೆದವು.

ಪಾದಪೂಜೆಃ ಶ್ರೀ ಸೀತಾರಾಮ ಭಟ್ಟ ಪಾದೇಕಲ್ಲು, ಶ್ರೀ ರಾಮಕೃಷ್ಣ ಅಜಕೂಡ್ಲು ಕಣ್ಣೂರು, ಶ್ರೀ ರಾಮಚಂದ್ರ ಶಾಸ್ತ್ರೀ ಆಚಳ್ಳಿ ಮನೆ, ಶ್ರೀ ದಡ್ಡು ಗಣಪತಿ ಭಟ್ ವೇಣೂರು.

~

ಸಂಧ್ಯಾಕಾರ್ಯಕ್ರಮ:
ಉಪನೀತರಾದವರು ಸಾಯಂಸಂಧ್ಯೆಯಲ್ಲಿ ಸಂಧ್ಯಾವಂದನೆಯನ್ನು ಹಾಗೂ ಮಾತೆಯರು ಶ್ರೀರಾಮತಾರಕ ಮಂತ್ರಜಪ ಮಾಡಿದರು. ಶ್ರೀಕರಾರ್ಚಿತ ರಾಮಾದಿ ದೇವರುಗಳ ಪೂಜೆಯ ಬಳಿಕ ಮಹಿಳೆಯರಿಂದ ಭಜನೆ ನಡೆಯಿತು.

~

ರಾಮಕಥೆಃ

ಶ್ರೀರಾಮನಿಗೆ, ಹನುಮನಿಗೆ ಪುಷ್ಪನಮನ ಸಲ್ಲಿಸಿ ಇಂದಿನ ರಾಮಕಥೆಯನ್ನು ಶ್ರೀಗುರುಗಳು ಪ್ರಾರಂಭಿಸಿದರು. ರಾವಣನ ಅರಮನೆಯಲ್ಲಿ ಸೀತೆಯನ್ನು ಹುಡುಕುತ್ತಿರುವ ಹನುಮ ಪುಷ್ಪಕವಿಮಾನವನ್ನು ಕಾಣುತ್ತಾನೆ. ಅದರ ವೈಭವವನ್ನು ಕಾಣುತ್ತಾನೆ. ನಂತರ ಒಂದು ಪರಿಸರದಲ್ಲಿ ಸಾವಿರಾರು ಸ್ತ್ರೀಯರನ್ನು ಕಾಣುತ್ತಾನೆ.  ನಂತರ ಒಂದು ಕೋಣೆಯಲ್ಲಿ ರಾವಣನನ್ನು ನೋಡಿದ.  ರಾವಣನ ಬಳಿಯಲ್ಲಿದ್ದ ಸುಮಂಗಲೆಯನ್ನು ಸೀತೆಯೆಂದು ನೆನೆದು ಕ್ಷಣಕಾಲ ಹಿಗ್ಗಿ ನಲಿದ ಹನುಮ. ಸ್ವಲ್ಪ ಸಮಯದ ನಂತರ ಈಕೆ ಸೀತೆಯಲ್ಲವೆಂಬ ಸತ್ಯವನ್ನು ಕಂಡುಕೊಳ್ಳುತ್ತಾನೆ.  ವಿಶಾಲಸಾಗರ ಹಾರಿದ ಹನುಮ ವಿಷಾಧಸಾಗರದಲ್ಲಿ ಮುಳುಗಿದ ಎಂದು ಶ್ರೀಗುರುಗಳು ರಾಮಕಥೆಯನ್ನು ವಿವರಿಸುತ್ತ ಇಂದಿನ ರಾಮಕಥೆಗೆ ವಿರಾಮ ನೀಡಿದರು. ರಾಮಕಥಾ ಕಲಾವಿದರ ತಂಡ ರಾವಣ ಅಣ್ಣನಾದ ಕುಬೇರನಿಂದ ಮೋಸದಲ್ಲಿ ವಶಪಡಿಸಿದ ಪುಷ್ಪಕವಿಮಾನದ ಕಥೆಯ ಅವತರಣಿಕೆ ಮಾಡಿತು. ಜೈ ಜೈ ರಾಮಕಥಾದೊಂದಿಗೆ ಇಂದಿನ ರಾಮಕಥೆ ಮುಕ್ತಾಯವಾಯಿತು. ಇಂದಿನ ರಾಮಕಥೆಯ ಪ್ರಾಯೋಜಕರು ಶ್ರೀ ಪುರುಷೋತ್ತಮ ಮಡಿಕೇರಿ, ಶ್ರೀ ಹಿರಣ್ಯ ಗಣಪತಿ ಭಟ್. ಸಹಪ್ರಾಯೋಜಕರು ಶ್ರೀ ವೆಂಕಟಕೃಷ್ಣ ಪುತ್ತೂರು, ಶ್ರೀ ಪ್ರಸನ್ನ ಎನ್ ಭಟ್ ಬಲ್ನಾಡು, ಶ್ರೀ ಶಾಂತಾರಾಮ ಕಾಂಚನ, ಡಾ. ರಾಮಚಂದ್ರ ಭಟ್ ಹಾರಕರೆ ಚೊಕ್ಕಾಡಿ.

~

Facebook Comments