ಪೆರಾಜೆ-ಮಾಣಿ ಮಠಃ9.8.2013, ಶುಕ್ರವಾರ

ಇಂದು ಬದಿಯಡ್ಕ, ನೀರ್ಚಾಲು ಹಾಗೂ ಎಣ್ಮಕಜೆ ವಲಯದವರಿಂದ ಗುರುಭಿಕ್ಷಾಸೇವೆ ನಡೆಯಿತು. ಶ್ರೀಕರಾರ್ಚಿತ ಶ್ರೀದೇವರುಗಳ ಪೂಜೆಯ ಬಳಿಕ ಮಾತೆಯರಿಂದ ಕುಂಕುಮಾರ್ಚನೆ ನಡೆಯಿತು.  ನಂತರ ನಡೆದ ವಲಯಸಭೆಯಲ್ಲಿ ಮೂರೂ ವಲಯಗಳ ಆಗುಹೋಗುಗಳನ್ನು ಶ್ರೀಪೀಠದ ಮುಂದಿರಿಸಿ, ವಲಯಗಳಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.  ಶ್ರೀ ಕೆ ನರಸಿಂಹ  ಭಟ್(ಸಹಾಯಕ ಮಹಾಪ್ರಭಂಧಕರು, ಸ್ಟೇಟ್ ಬ್ಯಾಂಕ್ ಮೈಸೂರು, ಕಾರವಾರ), ಶ್ರೀ ಚಿದಂಬರ ಎಸ್ ಎಚ್ ಸಾಗರ, ಶ್ರೀ ಜಮದಗ್ನಿ ಖಂಡಿಗೆ ಇಂಗ್ಲೆಂಡ್, ಶ್ರೀ ವಸಂತಕುಮಾರ ಪೆರ್ಲ(ಆಕಾಶವಾಣಿ ಮಂಗಳೂರು), ಶ್ರೀ ಮುರಳೀಧರ ಪ್ರಭು ಕುಮಟಾ, ಶ್ರೀ ದೇವಶ್ರವ ಶರ್ಮಾ ಗೋಕರ್ಣ, ಶ್ರೀ ಅಕಳಂಕ ಪೈ ಉಡುಪಿ, ಶ್ರೀ ಸಂಜಯ್ ದೇಶ್ ಮುಖ್ ಪೂನಾ, ಶ್ರೀ ಮಠದ ಪದಾಧಿಕಾರಿಗಳು, ಸರ್ವ ಶಿಷ್ಯರು ಶ್ರೀಗುರುಗಳ ಅನುಗ್ರಹ ಮಂತ್ರಾಕ್ಷತೆಯನ್ನು ಪಡೆದರು.
~

ಯಾಗಶಾಲೆಯಿಂದಃ

ಭಿಕ್ಷಾಂಗ ಆಂಜನೇಯ ಹವನ, ಸೇವಾರೂಪದ ಆಂಜನೇಯ ಹವನಗಳು, ಆಂಜನೇಯನಿಗೆ ಸೀಯಾಳಾಭಿಷೇಕ, ಶುಕ್ರಾರ್ಕದಶಾ ಶಾಂತಿ, ಗುರುಪರಂಪರಾಪೂಜೆ, ಸಂಜೀವಿನೀ ರುದ್ರ ಹವನ, ಧರಣೀಹವನ, ಬಾಲಾಸರಸ್ವತೀಹವನ, ಗೋಪೂಜೆ, ಗೋತುಲಾಭಾರ, ಶ್ರೀರಾಮತಾರಕ ಯಜ್ಞ, ಶ್ರೀರಾಮಪೂಜೆ ನಡೆದವು.

~

ಸಾಂಸ್ಕೃತಿಕ ಕಾರ್ಯಕ್ರಮಃ

ಇಂದು ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ, ಕು. ಅಪೇಕ್ಷಾ ಕೆ ಇವರಿಂದ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನಡೆಯಿತು. ವಯಲಿನ್ ನಲ್ಲಿ ಶ್ರೀಮತಿ ಜ್ಯೋತಿಲಕ್ಷ್ಮೀ ಅಮೈ ಹಾಗೂ ಮೃದಂಗದಲ್ಲಿ ಶ್ರೀ ಪ್ರಸನ್ನ ಎಸ್ ಭಟ್ ಬಲ್ನಾಡು ಸಹಕರಿಸಿದರು.

ವೇಣುವಾದನದಲ್ಲಿ ಸಿ. ಶ್ರೀಕರ ಶಾಸ್ತ್ರೀಯವರ ಕೊಳಲಿಗೆ ಶ್ರೀ ಪ್ರಸನ್ನ ಎಸ್ ಭಟ್ ರ ಮೃದಂಗದ ಸಹಕಾರವಿತ್ತು. ನಂತರ ನಡೆದ ಭರತನಾಟ್ಯ ಕಾರ್ಯಕ್ರಮದಲ್ಲಿ, ಕು. ಅವನೀಶ ದರ್ಭೆ ಕಾರ್ಯಕ್ರಮ ನಡೆಸಿ ಕೊಟ್ಟರು. ಕಲಾವಿದರಿಗೆ ಶ್ರೀ ಶ್ಯಾಮಪ್ರಸಾದ ಶಾಸ್ತ್ರೀ, ಶ್ರೀ ಪಿ ಈಶ್ವರ ಭಟ್ ಹಾಗೂ ಶ್ರೀ ಗೋವಿಂದ ಭಟ್ ಮುದ್ರಜೆ ಸ್ಮರಣಿಕೆ ಹಾಗೂ ಪ್ರಶಸ್ತಿಗಳನ್ನು ಕೊಟ್ಟರು. ಶ್ರೀ ವಿ ಜಿ ಭಟ್, ಶ್ರೀ ಶಂಕರಪ್ರಸಾದ ಕಾಟುಕುಕ್ಕೆ ಹಾಗೂ ಶ್ರೀ ಶಿವರಾಮಕಜೆಯವರು ಕಾರ್ಯಕ್ರಮ ನಿರೂಪಿಸಿದರು.

~
ಸಂಧ್ಯಾಕಾರ್ಯಕ್ರಮ:
ಉಪನೀತರಾದವರು ಸಾಯಂಸಂಧ್ಯೆಯಲ್ಲಿ ಸಂಧ್ಯಾವಂದನೆಯನ್ನು ಹಾಗೂ ಮಾತೆಯರು ಶ್ರೀರಾಮತಾರಕ ಮಂತ್ರಜಪ ಮಾಡಿದರು. ಶ್ರೀಕರಾರ್ಚಿತ ರಾಮಾದಿ ದೇವರುಗಳ ಪೂಜೆಯ ಬಳಿಕ ಮಹಿಳೆಯರಿಂದ ಭಜನೆ ನಡೆಯಿತು.

~*~

Facebook Comments