“ಗುರುಪದ” Android App ಲೋಕಾರ್ಪಣೆ – 06/12/2015

 

ಪೂಜ್ಯ ಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಅನುದಿನ ಅನು ಕಾಲ ಪೂಜಿಸುವುದು, ಧ್ಯಾನಿಸುವುದು ಆ ರಾಮನನ್ನು . ಪ್ರತಿ ನಿತ್ಯ ಅವಿಚ್ಛಿನ್ನ ವಾಗಿ ವಾಲ್ಮೀಕಿ ರಾಮಾಯಣದ ಪಾರಾಯಣ ಮಾಡುವ ಅವರ ಭಾವ-ಮಾತು ಎಲ್ಲವೂ ರಾಮನ ಸುತ್ತವೇ . ಅಂತಹ ಮಾತುಗಳನ್ನು ಕೇಳುವ , ಅನುಭವಿಸುವ ಮತ್ತು ಅನುಸರಿಸುವ ಭಾಗ್ಯ ಇರುವುದು ನಮ್ಮೆಲ್ಲರ ಸುಕೃತ.

ಆದರೆ ಅದೇ ಸಮಯಕ್ಕೆ ನಾವು ಒಪ್ಪಿಕೊಳ್ಳಲೇ ಬೇಕಾದ್ದು ಇದು ಧಾವಂತದ ಬದುಕು . ಶ್ರೀಗಳ ಅಂತಹ ಲೋಕಮಾನ್ಯವಾದ ಮಾತುಗಳನ್ನು ಕೇಳಲು ದಿನ ನಿತ್ಯ ಶ್ರೀಗಳು ಇರುವಲ್ಲಿಗೆ ಹೋಗುವುದು ಕಾರ್ಯಸಾಧ್ಯವಾಗದ ಮಾತು . ಹಾಗಂತ ಶ್ರೀಗಳ ಅಮೃತ ನುಡಿ ಯನ್ನು ಕಳೆದು ಕೊಳ್ಳಲು ಸಾದ್ಯವೇ..??
ಖಂಡಿತ ಇಲ್ಲ ..! ಇಂತಹ ಸಮಸ್ಯೆ ಯನ್ನು ಹೋಗಲಾಡಿಸಲೆಂದೇ, ಶ್ರೀಗಳ ಭಕ್ತರು, ಶ್ರೀಗಳ ಮಾತುಗಳ ಚಿಕ್ಕ ಚಿಕ್ಕ ತುಣುಕುಗಳುಳ್ಳ ವೀಡಿಯೊ ಮತ್ತು ಅಮೃತ ನುಡಿಗಳನ್ನು ಒಳಗೊಂಡ Android ಅಪ್ ಅನ್ನು ಲೋಕಾರ್ಪಣ ಗೊಳಿಸುತ್ತಿದ್ದಾರೆ . ಇದೇ ಬರುವ ೨೦೧೫ ಡಿಸೆಂಬರ್ ೬ ರ ಭಾನುವಾರ ಶ್ರೀಗಳ ಸಾನ್ನಿಧ್ಯದಲ್ಲಿ ಗಿರಿನಗರದ ಶ್ರೀ ರಾಮಾಶ್ರಮದ ಪುಣ್ಯ ಪರಿಸರದಲ್ಲಿ “ಗುರುಪದ” Android App ಲೋಕಾರ್ಪಣ ಗೋಳ್ಳಲಿಕ್ಕಿದೆ . ತಾವೆಲ್ಲರೂ ದಯವಿಟ್ಟು ಬನ್ನಿ , ಮಾತ್ರವಲ್ಲ , ತಮ್ಮ ಮತ್ತು ತಮ್ಮವರ Android ಫೋನ್ ಗಳಲ್ಲೂ ಶ್ರೀ ಗುರುಗಳ ಅಮೃತ ವಾಣಿ ಮೊಳಗುವಂತಾಗಲಿ

ಇಲ್ಲ ಅಲ್ಲಿಗೇ ನಿಲ್ಲಲಿಲ್ಲ ರಾಘವಾನುಗ್ರಹ! ಇನ್ನೂ ಇದೆ . ಅವತ್ತು ಇನ್ನೊಂದು ಕಾರ್ಯಕ್ರಮ ಅದು ರಾಮ ತಾರಕ ಹವನ . ಅಂದು ರಾಮ ತಾರಕವನ್ನು ಅನು ದಿನ ಪಠಿಸುವ ಸ್ನೇಹಿತರಿಂದ ರಾಮ ತಾರಕ ಹವನ ಆಯೋಜಿತ ಆಗಿದೆ . ರಾಮನ ವಿಷಯವನ್ನ ಕೇಳುವ , ನಾವೆಲ್ಲರೂ ಒಟ್ಟಾಗಿ ರಾಮನನ್ನು ಪೂಜಿಸುವ ಅವಕಾಶವನ್ನು ಕಳೆದು ಕೊಳ್ಳಲು ನಮಗ್ಯಾರಿಗೆ ಹೇಗೆ ತಾನೇ ಮನಸ್ಸು ಬಂದೀತು . ನಾವೆಲ್ಲರೂ ನಮ್ಮವರೊಂದಿಗೆ ಸೇರಿ ರಾಮನಿಗಾಗಿ ಆ ದಿನವನ್ನೇ ಮೀಸಲಿಡೋಣ ಅಲ್ಲವೇ!!!

ನಮಸ್ಕಾರಗಳೊಂದಿಗೆ
ಅಂತರ್ಜಾಲ ವಿಭಾಗ

IMG-20151204-WA0003

Facebook Comments