ಗೋಕರ್ಣ: ಸಾತ್ವಿಕತೆ ದೈವೀಗುಣ. ಇದು ಲೋಕೋಪಕಾರಕ. ಆದರೆ ಕಾಲದ ಮಹಿಮೆಯಿಂದಲೋ ಅಥವಾ ವ್ಯಕ್ತಿಯ ಪೂರ್ವದೋಷಗಳಿಂದಲೋ ಒಮ್ಮೊಮ್ಮೆ ಸಾತ್ವಿಕ ಕುಲದಲ್ಲಿ ಹುಟ್ಟಿದ ವ್ಯಕ್ತಿಗಳೂ ಆಸುರೀ ಸ್ವಭಾವವನ್ನು ಹೊಂದಿ ಲೋಕಕಂಟಕರಾಗಿ ಪರಿವರ್ತನೆ ಹೊಂದುವುದುಂಟು. ವಿಷ್ಣುವಿನ ಅಂತರಂಗಭಕ್ತರಾಗಿದ್ದೂ ತಮ್ಮ ಅಪರಾಧದಿಂದ ಶಾಪಗ್ರಸ್ತರಾಗಿ ಭೂಮಿಗೆ ಬಿದ್ದು ರಾವಣ, ಕುಂಭಕರ್ಣರಾಗಿ ಜನಿಸಿದ ಜಯವಿಜಯರೇ ಇದಕ್ಕೆ ಉದಾಹರಣೆ. ತಂದೆ ಪರಮತಪಸ್ವಿಯಾದ ವಿಶ್ರವಸ್. ಅಣ್ಣ ಮಾನವನಾಗಿ ಹುಟ್ಟಿಯೂ ತನ್ನ ಸಾಧನೆಯಿಂದ ದೈವತ್ವವನ್ನು ಪಡೆದು ಲೋಕಪಾಲಸ್ಥಾನವನ್ನು ಗಳಿಸಿದ ವೇದಪ್ರತಿಪಾದ್ಯನಾದ ಕುಬೇರ. ಆದರೂ ಇದೇ ವಿಶ್ರವಸ್ಸಿನಲ್ಲಿ ಜನಿಸಿದ ರಾವಣ, ಕುಂಭಕರ್ಣರು ಮಾತ್ರ ಇಂತಹ ವಂಶದಲ್ಲಿ ಇಂತಹವರೂ ಹುಟ್ಟಲು ಸಾಧ್ಯವೇ ಎಂಬ ವಿಸ್ಮಯಕ್ಕೆ ಕಾರಣರಾದರು. ತಾತ ಸುಮಾಲಿಯ ರಾಕ್ಷಸಕುಲದ ಔನ್ನತ್ಯವನ್ನು ಲೋಕದಲ್ಲಿ ಪುನಃಪ್ರತಿಷ್ಠಾಪಿಸುವ ಕುಟಿಲಧ್ಯೇಯದ ಕಾರಸ್ಥಾನದ ಫಲವಿದು ಎಂದು ಪರಮಪೂಜ್ಯ ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀ ಶ್ರೀರಾಘವೇಶ್ವರಭಾರತೀ ಶ್ರೀಗಳು ಹೇಳಿದ್ದಾರೆ.

ಗೋಕರ್ಣದ ಸನಿಹದ ಅಶೋಕೆಯಲ್ಲಿ ಚಾತುರ್ಮಾಸ್ಯದ ನಿಮಿತ್ತ ಆಯೋಜಿತವಾದ ಶ್ರೀರಾಮಕಥಾ ಪ್ರವಚನವನ್ನು ನೀಡುತ್ತಿದ್ದ ಪೂಜ್ಯಶ್ರೀಗಳು, ತಂದೆಯಾದ ಸುಮಾಲಿಯು ಮಗಳು ಕೈಕಸಿಯನ್ನು ತನ್ನ ಉದ್ದೇಶಕ್ಕೆ ದಾಳವನ್ನಾಗಿ ಬಳಸಿದ. ನವನಿಧೀಶನಾಗಿ ಪುಷ್ಪಕವಿಮಾನದಲ್ಲಿ ಸಂಚರಿಸುತ್ತಿದ್ದ ಕುಬೇರನನ್ನು ಕಂಡು ಅಸೂಯಾಪರನಾಗಿ ತಾನೂ ಇಂತಹ ಸಂತಾನವನ್ನು ಪಡೆಯಬೇಕೆಂದು ಬಯಸಿ ವಿಶ್ರವಸ್ಸಿನ ಬಳಿಗೆ ಕೆಟ್ಟಕಾಲದಲ್ಲಿ ಮಗಳನ್ನು ಕಳುಹಿಸಿದ. ಇದರ ಫಲವಾಗಿಯೇ ಇಂತಹ ವಿಶ್ವಪೀಡಕರ ಉದಯವಾಯಿತು. ಕುಬೇರನಂತಹ ಸದ್ಗುಣಿಯನ್ನು ಬಯಸದೆ ಅವನ ತಂದೆಯನ್ನು ವರನನ್ನಾಗಿ ವರಿಸಿದ್ದಕ್ಕೆ ಸುಮಾಲಿಯ ಮಹತ್ವಾಕಾಂಕ್ಷೆ ಕಾರಣ. ತಂದೆಯ ಮೇಲಿನ ಗೌರವದಿಂದ ಕೈಕಸಿಯೂ ಅದನ್ನು ವಿರೋಧಿಸದೆ ಮನಸ್ಸಿದ್ದೋ ಇಲ್ಲದೆಯೋ ವಿಶ್ರವಸ್ಸನ್ನು ಸಂತಾನಕ್ಕಾಗಿ ಪ್ರಾರ್ಥಿಸಿ ಅದರಲ್ಲಿ ಸಫಲಳೂ ಆದಳು. ಆದರೆ ಅವಳು ಇಚ್ಛಿಸಿದ ಸಮಯ ಅತ್ಯಂತ ಕೆಟ್ಟದಾಗಿದ್ದರಿಂದ ತನ್ನಲ್ಲಿ ಹುಟ್ಟುವ ಮಕ್ಕಳು ಅತ್ಯಂತ ಕ್ರೂರಿಗಳಾಗಿ ಲೋಕಪೀಡಕರಾಗುತ್ತಾರೆಂದು ತಿಳಿದ ಮೇಲೆ ಒಳ್ಳೆಯ ಸಂತಾನ ಬೇಕೆಂದು ಪುನಃ ಪ್ರಾರ್ಥಿಸಿ ಧರ್ಮಾತ್ಮನಾದ ವಿಭೀಷಣನು ಮಗನಾಗಿ ಜನಿಸುವ ವರವನ್ನು ಪಡೆದಳು. ಘೋರವಾದ ಘಟನೆಯೊಂದು ನಡೆಯುವಾಗ ಪ್ರಕೃತಿಯಲ್ಲಿ ಅನಪೇಕ್ಷಿತವಾದ ಬದಲಾವಣೆಗಳು ತೋರಿಬರುವಂತೆ ರಾವಣ, ಕುಂಭಕರ್ಣರು ಹುಟ್ಟುವಾಗಲೇ ಎಲ್ಲ ಅಶುಭಶಕುನಗಳು ತೋರಿದ್ದವು. ರಾವಣ ಕೇವಲ ರಾಕ್ಷಸನಲ್ಲ, ಸಮಸ್ತ ರಾಕ್ಷಸೀಸ್ವಭಾವಕ್ಕೇ ಆತ ಉದಾಹರಣೆ. ನಮ್ಮ ಹೃದಯದಲ್ಲಿನ ರಾಕ್ಷಸ ದೂರಾಗಿ ದೈವೀಸಂಪತ್ತು ಪ್ರಕಾಶಿಸಲು ರಾಮನ ಆಗಮನವಾಗಬೇಕು ಎಂದೂ ಹೇಳಿದ ಪೂಜ್ಯಶ್ರೀಗಳು ಚಾತುರ್ಮಾಸ್ಯದ ಈ ರಾಮಕಥೆಯು ಈ ಜೀವದೇವಸಂಗಮಗಳಿಗೆ ದ್ವಾರವಾಗಲಿ ಎಂದೂ ಆಶಿಸಿದರು.

ಶ್ರೀಪಾದ ಭಟ್ಟ, ಸಂಧ್ಯಾ ಭಟ್ಟ, ವಸುಧಾ ಶರ್ಮಾ, ಪ್ರೊ.ಶಂಭು ಭಟ್ಟ ಇವರ ಸುಮಧುರ ಗಾಯನ ಹಾಗೂ ಗೋಪಾಲಕೃಷ್ಣ ಹೆಗಡೆಯವರ ತಬಲಾ, ನರಸಿಂಹ ಮೂರ್ತಿಯವರ ಮೃದಂಗ, ಪ್ರಕಾಶ ಕಲ್ಲರೆಮನೆಯವರ ವೇಣುವಾದನ ಇಂದಿನ ಮುಖ್ಯ ಆಕರ್ಷಣೆಗಳಲ್ಲಿ ಒಂದಾಗಿತ್ತು. ವಿದ್ವಾನ್ ಜಗದೀಶ ಶರ್ಮಾರವರ ನಿರ್ದೇಶನದಲ್ಲಿ ಆಯೋಜಿತವಾದ ರಾವಣ ಜನನ ರೂಪಕವು ತುಂಬ ರೋಚಕವಾಗಿ ಮೂಡಿಬಂದು ಸಭ್ಯರನ್ನು ಅಕ್ಷರಶಃ ಅದ್ಭುತದ ಕಡಲಲ್ಲಿ ಮುಳುಗಿಸಿತು. ಗಣಪತಿ ನೀರ್ನಳ್ಳಿಯವರ ಆಶುಚಿತ್ರದ ಜೊತೆ ಮರಳುಚಿತ್ರಕಲಾವಿದ ಶ್ರೀ ರಾಘವೇಂದ್ರ ಹೆಗಡೆಯವರು ಆಶುಚಿತ್ರವನ್ನು ರಚಿಸುವ ಮೂಲಕ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು. ಮುಂಬಯಿಯ ದೊಂಬಿವಲಿ ವಲಯದಿಂದ ಇಂದಿನ ಶ್ರೀಗುರುದೇವತಾಸೇವೆಯು ಸಂಪನ್ನಗೊಂಡಿತು. ಪೂಜ್ಯಶ್ರೀಗಳು ಆಶೀರ್ವಚನಮಂತ್ರಾಕ್ಷತೆಯನ್ನು ಅನುಗ್ರಹಿಸಿದರು. ಎಂದಿನಂತೆ ಶ್ರೀಮಠದ ವಿವಿಧ ಯೋಜನೆಗಳಿಗೆ ಶಿಷ್ಯರಿಂದ ದೇಣಿಗೆಯು ಸಮರ್ಪಿತವಾಯಿತು. ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನಡೆಯಿತು. ಶ್ರೀಸವಾರಿಯ ವ್ಯವಸ್ಥಾಪಕ ಶ್ರೀ ರಾಘವೇಂದ್ರ ಮಧ್ಯಸ್ಥರು ನಿರ್ವಹಿಸಿದರು.

UÉÆÃPÀtð. ¸ÁwéPÀvÉ zÉÊ«ÃUÀÄt.EzÀÄ ¯ÉÆÃPÉÆÃ¥ÀPÁgÀPÀ.DzÀgÉ PÁ®zÀ ªÀÄ»ªÉĬÄAzÀ¯ÉÆà CxÀªÁ ªÀåQÛAiÀÄ ¥ÀƪÀðzÉÆõÀUÀ½AzÀ¯ÉÆà MªÉÆäªÉÄä ¸ÁwéPÀPÀÄ®zÀ°è ºÀÄnÖzÀ ªÀåQÛUÀ¼ÀÆ D¸ÀÄjøÀé¨sÁªÀªÀ£ÀÄß ºÉÆA¢ ¯ÉÆÃPÀPÀAlPÀgÁV ¥ÀjªÀvÀð£ÉºÉÆAzÀĪÀÅzÀÄAlÄ.«µÀÄÚ«£À CAvÀgÀAUÀ¨sÀPÀÛgÁVzÀÆÝ vÀªÀÄä C¥ÀgÁzsÀ¢AzÀ ±Á¥ÀUÀæ¸ÀÛÀgÁV ¨sÀÆ«ÄUÉ ©zÀÄÝ gÁªÀt,PÀÄA¨sÀPÀtðgÁV d¤¹zÀ dAiÀÄ«dAiÀÄgÉà EzÀPÉÌ GzÁºÀgÀuÉ.vÀAzÉ ¥ÀgÀªÀÄvÀ¥À¹éAiÀiÁzÀ «±ÀæªÀ¸ï.CtÚ ªÀiÁ£ÀªÀ£ÁV ºÀÄnÖAiÀÄÆ vÀ£Àß ¸ÁzsÀ£É¬ÄAzÀ zÉʪÀvÀéªÀ£ÀÄß ¥ÀqÉzÀÄ ¯ÉÆÃPÀ¥Á®¸ÁÜ£ÀªÀ£ÀÄß UÀ½¹zÀ ªÉÃzÀ¥Àæw¥ÁzÀå£ÁzÀ PÀĨÉÃgÀ.DzÀgÀÆ EzÉà «±ÀæªÀ¹ì£À°è d¤¹zÀ gÁªÀt,PÀÄA¨sÀPÀtðgÀÄ ªÀiÁvÀæ EAvÀºÀ ªÀA±ÀzÀ°è EAvÀºÀªÀgÀÆ ºÀÄlÖ®Ä ¸ÁzsÀåªÉà JA§ «¸ÀäAiÀÄPÉÌ PÁgÀtgÁzÀgÀÄ.vÁvÀ ¸ÀĪÀiÁ°AiÀÄ gÁPÀë¸ÀPÀÄ®zÀ O£ÀßvÀåªÀ£ÀÄß ¯ÉÆÃPÀzÀ°è ¥ÀÄ£ÀB¥ÀæwµÁצ¸ÀĪÀ PÀÄn®zsÉåÃAiÀÄzÀ PÁgÀ¸ÁÜ£ÀzÀ ¥sÀ®«zÀÄ. JAzÀÄ ¥ÀgÀªÀÄ¥ÀÆdå ²æà ²æêÀÄzÁæWÀªÉñÀégÀ ¨sÁgÀwà ²æÃUÀ¼ÀÄ ºÉýzÁÝgÉ. UÉÆÃPÀtðzÀ ¸À¤ºÀzÀ C±ÉÆÃPÉAiÀÄ°è ZÁvÀĪÀiÁð¸ÀåzÀ ¤«ÄvÀÛ DAiÉÆÃfvÀªÁzÀ “²æÃgÁªÀÄPÀxÁ”¥ÀæªÀZÀ£ÀªÀ£ÀÄß ¤ÃqÀÄwÛzÀÝ ¥ÀÆdå²æÃUÀ¼ÀÄ vÀAzÉAiÀiÁzÀ ¸ÀĪÀiÁ°AiÀÄÄ ªÀÄUÀ¼ÀÄ PÉÊPÀ¹AiÀÄ£ÀÄß vÀ£Àß GzÉÝñÀÀPÉÌ zÁ¼ÀªÀ£ÁßV §¼À¹zÀ.£ÀªÀ¤¢üñÀ£ÁV ¥ÀĵÀàPÀ«ªÀiÁ£ÀzÀ°è ¸ÀAZÀj¸ÀÄwÛzÀÝ PÀĨÉÃgÀ£À£ÀÄß PÀAqÀÄ C¸ÀÆAiÀiÁ¥ÀgÀ£ÁV vÁ£ÀÆ EAvÀºÀ ¸ÀAvÁ£ÀªÀ£ÀÄß ¥ÀqÉAiÀĨÉÃPÉAzÀÄ §AiÀĹ «±ÀæªÀ¹ì£À §½UÉ PÉlÖPÁ®zÀ°è ªÀÄUÀ¼À£ÀÄß PÀ¼ÀÄ»¹zÀ. EzÀgÀ ¥sÀ®ªÁVAiÉÄà EAvÀºÀ «±Àé¦ÃqÀPÀgÀ GzÀAiÀĪÁ¬ÄvÀÄ.PÀĨÉÃgÀ£ÀAvÀºÀ ¸ÀzÀÄÎtÂAiÀÄ£ÀÄß §AiÀĸÀzÉ CªÀ£À vÀAzÉAiÀÄ£ÀÄß ªÀgÀ£À£ÁßV ªÀj¹zÀÝPÉÌ ¸ÀĪÀiÁ°AiÀÄ ªÀĺÀvÁéPÁAPÉë PÁgÀt.vÀAzÉAiÀÄ ªÉÄð£À UËgÀªÀ¢AzÀ PÉÊPÀ¹AiÀÄÆ CzÀ£ÀÄß «gÉÆâü¸ÀzÉ ªÀÄ£À¹ìzÉÆÝà E®èzÉAiÉÆà «±ÀæªÀ¸Àì£ÀÄß ¸ÀAvÁ£ÀPÁÌV ¥Áæyð¹ CzÀgÀ°è¸À¥sÀ®¼ÀÆ DzÀ¼ÀÄ.DzÀgÉ CªÀ¼ÀÄ EaÒ¹zÀ ¸ÀªÀÄAiÀÄ CvÀåAvÀ PÉlÖzÁVzÀÝjAzÀ vÀ£Àß°è ºÀÄlÄÖªÀ ªÀÄPÀ̼ÀÄ CvÀåAvÀ PÀÆæjUÀ¼ÁV ¯ÉÆÃPÀ¦ÃqÀPÀgÁUÀÄvÁÛgÉAzÀÄ w½zÀ ªÉÄÃ¯É M¼ÉîAiÀÄ ¸ÀAvÁ£À ¨ÉÃPÉAzÀÄ ¥ÀÄ£ÀB ¥Áæyð¹ zsÀªÀiÁðvÀä£ÁzÀ «©üõÀt£ÀÄ ªÀÄUÀ£ÁV d¤¸ÀĪÀ ªÀgÀªÀ£ÀÄß ¥ÀqÉzÀ¼ÀÄ. WÉÆÃgÀªÁzÀ WÀl£ÉAiÉÆAzÀÄ £ÀqÉAiÀÄĪÁUÀ ¥ÀæPÀÈwAiÀÄ°è C£À¥ÉÃQëvÀªÁzÀ §zÀ¯ÁªÀuÉUÀ¼ÀÄ vÉÆÃj§gÀĪÀAvÉ gÁªÀt PÀÄA¨sÀPÀtðgÀÄ ºÀÄlÄÖªÁUÀ¯Éà J®è C±ÀĨsÀ±ÀPÀÄ£ÀUÀ¼ÀÄ vÉÆÃjzÀݪÀÅ.gÁªÀt PÉêÀ® gÁPÀë¸À£À®è, ¸ÀªÀĸÀÛgÁPÀë¹Ã¸Àé¨sÁªÀPÉÌà DvÀ GzÁºÀgÀuÉ. £ÀªÀÄä ºÀÈzÀAiÀÄzÀ°è£À gÁPÀë¸À zÀÆgÁV zÉʫøÀA¥ÀvÀÄÛ ¥ÀæPÁ²¸À®Ä gÁªÀÄ£À DUÀªÀÄ£ÀªÁUÀ¨ÉÃPÀÄ JAzÀÆ ºÉýzÀ ¥ÀÆdå²æÃUÀ¼ÀÄ ZÁvÀĪÀiÁð¸ÀåzÀ F gÁªÀÄPÀxÉAiÀÄÄ F fêÀzÉêÀ¸ÀAUÀªÀÄUÀ½UÉ zÁégÀªÁUÀ° JAzÀÆ D²¹zÀgÀÄ.²æÃ¥ÁzÀ ¨sÀlÖ,¸ÀAzsÁå ¨sÀlÖ,ªÀ¸ÀÄzsÁ ±ÀªÀiÁð,¥ÉÆæ.±ÀA¨sÀÄ ¨sÀlÖ EªÀgÀ ¸ÀĪÀÄzsÀÄgÀ UÁAiÀÄ£À ºÁUÀÆ UÉÆÃ¥Á®PÀȵÀÚ ºÉUÀqÉAiÀĪÀgÀ vÀ§¯Á,£ÀgÀ¹AºÀ ªÀÄÆwðAiÀĪÀgÀ ªÀÄÈzÀAUÀ,¥ÀæPÁ±À PÀ®ègɪÀÄ£ÉAiÀĪÀgÀ ªÉÃtĪÁzÀ£À EA¢£À ªÀÄÄRå DPÀµÀðtÉUÀ¼À°è MAzÁVvÀÄÛ.«zÁé£ï dUÀ¢Ã±À ±ÀªÀiÁðgÀªÀgÀ ¤zÉÃð±À£ÀzÀ°è DAiÉÆÃfvÀªÁzÀ “gÁªÀtd£À£À” gÀÆ¥ÀPÀªÀÅ vÀÄA§ gÉÆÃZÀPÀªÁV ªÀÄÆr§AzÀÄ ¸À¨sÀågÀ£ÀÄß CPÀëgÀ±ÀB CzÀÄãvÀzÀPÀqÀ®°è ªÀÄļÀÄV¹vÀÄ.UÀt¥Àw ¤Ã£Àð½îAiÀĪÀgÀ D±ÀÄavÀæzÀ eÉÆvÉ “ªÀÄgÀ¼ÀIJ®à” PÀ¯Á«zÀ ²æà gÁWÀªÉÃAzÀæ ºÉUÀqÉAiÀĪÀgÀÄ D±ÀÄavÀæªÀ£ÀÄß gÀa¸ÀĪÀ ªÀÄÆ®PÀ vÀªÀÄä ¥Àæw¨sÉAiÀÄ£ÀÄß ¥ÀæzÀ²ð¹zÀgÀÄ. ªÀÄÄA§¬ÄAiÀÄ zÉÆA©ªÀ° ªÀ®AiÀÄ¢AzÀ EA¢£À ²æÃUÀÄgÀÄzÉêÀvÁ¸ÉêÉAiÀÄÄ ¸ÀA¥À£ÀßUÉÆArvÀÄ.¥ÀÆdå²æÃUÀ¼ÀÄ D²ÃªÀðZÀ£ÀªÀÄAvÁæPÀëvÉAiÀÄ£ÀÄß C£ÀÄUÀ滹zÀgÀÄ.JA¢£ÀAvÉ ²æêÀÄoÀzÀ ««zsÀAiÉÆÃd£ÉUÀ½UÉ ²µÀåjAzÀ zÉÃtÂUÉAiÀÄÄ ¸ÀªÀĦðvÀªÁ¬ÄvÀÄ.«zÁåyðUÀ½UÉ ¥Àæw¨sÁ¥ÀÄgÀ¸ÁÌgÀ £ÀqɬÄvÀÄ.²æøÀªÁjAiÀÄ ªÀåªÀ¸ÁÜ¥ÀPÀ ²æà gÁWÀªÉÃAzÀæ ªÀÄzsÀå¸ÀÜgÀÄ ¤ªÀð»¹zÀgÀÄ.ಗೋಕರ್ಣ. ಸಾತ್ವಿಕತೆ ದೈವೀಗುಣ. ಇದು ಲೋಕೋಪಕಾರಕ.ಆದರೆ ಕಾಲದ ಮಹಿಮೆಯಿಂದಲೋ ಅಥವಾ ವ್ಯಕ್ತಿಯ ಪೂರ್ವದೋಷಗಳಿಂದಲೋ ಒಮ್ಮೊಮ್ಮೆ ಸಾತ್ವಿಕಕುಲದಲ್ಲಿ ಹುಟ್ಟಿದ ವ್ಯಕ್ತಿಗಳೂ ಆಸುರೀಸ್ವಭಾವವನ್ನು ಹೊಂದಿ ಲೋಕಕಂಟಕರಾಗಿ ಪರಿವರ್ತನೆಹೊಂದುವುದುಂಟು. ವಿಷ್ಣುವಿನ ಅಂತರಂಗಭಕ್ತರಾಗಿದ್ದೂ ತಮ್ಮ ಅಪರಾಧದಿಂದ ಶಾಪಗ್ರಸ್ತರಾಗಿ ಭೂಮಿಗೆ ಬಿದ್ದು ರಾವಣ, ಕುಂಭಕರ್ಣರಾಗಿ ಜನಿಸಿದ ಜಯವಿಜಯರೇ ಇದಕ್ಕೆ ಉದಾಹರಣೆ.ತಂದೆ ಪರಮತಪಸ್ವಿಯಾದ ವಿಶ್ರವಸ್. ಅಣ್ಣ ಮಾನವನಾಗಿ ಹುಟ್ಟಿಯೂ ತನ್ನ ಸಾಧನೆಯಿಂದ ದೈವತ್ವವನ್ನು ಪಡೆದು ಲೋಕಪಾಲಸ್ಥಾನವನ್ನು ಗಳಿಸಿದ ವೇದಪ್ರತಿಪಾದ್ಯನಾದ ಕುಬೇರ. ಆದರೂ ಇದೇ ವಿಶ್ರವಸ್ಸಿನಲ್ಲಿ ಜನಿಸಿದ ರಾವಣ, ಕುಂಭಕರ್ಣರು ಮಾತ್ರ ಇಂತಹ ವಂಶದಲ್ಲಿ ಇಂತಹವರೂ ಹುಟ್ಟಲು ಸಾಧ್ಯವೇ ಎಂಬ ವಿಸ್ಮಯಕ್ಕೆ ಕಾರಣರಾದರು. ತಾತ ಸುಮಾಲಿಯ ರಾಕ್ಷಸಕುಲದ ಔನ್ನತ್ಯವನ್ನು ಲೋಕದಲ್ಲಿ ಪುನಃಪ್ರತಿಷ್ಠಾಪಿಸುವ ಕುಟಿಲಧ್ಯೇಯದ ಕಾರಸ್ಥಾನದ ಫಲವಿದು. ಎಂದು ಪರಮಪೂಜ್ಯ ಶ್ರೀ ಶ್ರೀಮದ್ರಾಘವೇಶ್ವರ ಭಾರತೀ ಶ್ರೀಗಳು ಹೇಳಿದ್ದಾರೆ.

Facebook Comments