LIVE Channel

ಇತ್ತೀಚಿನ ಪ್ರತಿಕ್ರಿಯೆಗಳು

Newsletter

ಶ್ರೀ ಚಂದ್ರಮೌಳೀಶ್ವರ ದೇವಾಲಯದ ಷಡಾಧಾರ ಪ್ರತಿಷ್ಠೆ ಕಾರ್ಯಕ್ರಮ

Author: ; Published On: ಸೋಮವಾರ, ಜೂನ್ 20th, 2011;

Switch to language: ಕನ್ನಡ | English | हिंदी         Shortlink:

|| ಹರೇ ರಾಮ ||

ಪರಮಪೂಜ್ಯ ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀ ಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ವಿಶಿಷ್ಟ ಕಲ್ಪನೆಯ ವಿಭಿನ್ನ ಕಾರ್ಯಗಳಲ್ಲಿ ಕಲಶಪ್ರಾಯವಾದದ್ದು ಶ್ರೀಚಂದ್ರಮೌಳೀಶ್ವರ ದೇವಸ್ಥಾನ. ಶ್ರೀರಾಮಚಂದ್ರಾಪುರಮಠದಲ್ಲಿ  ನಿರ್ಮಾಣಗೊಳ್ಳುತ್ತಿರುವ ಪರಶಿವನ ಈ ಪವಿತ್ರ ದೇಗುಲ ಅನನ್ಯವಾದದ್ದು. ಪುಣ್ಯನದಿ ಶರಾವತಿಯ ತಟದಲ್ಲಿ ದಿವ್ಯ ಸರೋವರದ ನಡುವೆ ಮಹಾ ಗಣಪತಿಯೊಂದಿಗೆ  ಚಂದ್ರಮೌಳೀಶ್ವರನ ಸನ್ನಿಧಿ ಇಲ್ಲಿ ರಾರಾಜಿಸಲಿದೆ. ಭರದಿಂದ ಸಾಗಿದ ಸಹಸ್ರಮಾನದ ನಿರ್ಮಿತಿಯ ಕಾರ್ಯ ಷಡಾಧಾರ ಪ್ರತಿಷ್ಠೆಗೆ ಬಂದು ನಿಂತಿದೆ.

ಶ್ರೀ ಖರನಾಮ ಸಂವತ್ಸರದ ಆಷಾಡ ಮಾಸದ ಶುಕ್ಷಪಕ್ಷದ ದ್ವಿತೀಯ ದಿನಾಂಕ 03-07-2011 ರ ಭಾನುವಾರ ಬೆಳಗ್ಗೆ ಮಿಥುನ ಲಗ್ನ ಇಷ್ಟಾಂಶದಲ್ಲಿ ಪರಮಪೂಜ್ಯ ಶ್ರೀಶ್ರೀಗಳವರ ಅಮೃತ ಹಸ್ತದಿಂದ ಷಡಾಧಾರ ಪ್ರತಿಷ್ಟೆಯಾಗಲಿದೆ. ತದಂಗವಾದ ಗರ್ಭನ್ಯಾಸ ದಿನಾಂಕ : 03-07-2011 ರ ಭಾನುವಾರ ರಾತ್ರಿ ಮೀನ ಲಗ್ನ ಇಷ್ಟಾಂಶದಲ್ಲಿ ನೆರವೇರಲಿದೆ. ಈ ದಿವ್ಯ  ಸಂದರ್ಭದಲ್ಲಿ ತಾವು ಉಪಸ್ಥಿತರಿದ್ದು, ಗುರುದೇವತಾ ಕೃಪೆಗೆ ಪಾತ್ರರಾಗಬೇಕೆಂದು ಮತ್ತು ಈ ಐತಿಹಾಸಿಕ ಕಾರ್ಯಕ್ರಮಕ್ಕೆ ಸಾಕ್ಷಿಯಾಗಬೇಕೆಂದು ವಿನಂತಿಸುತ್ತೇವೆ. ಜೀವನದ ಅಪರೂಪದ ಈ ಸದವಕಾಶ ನಮಗೆ ಮತ್ತೊಮ್ಮೆ ಸಿಗದು.

ಬನ್ನಿ                 ಭಾಗವಹಿಸಿ            ಭಾಗ್ಯವಂತರಾಗಿ

5 Responses to ಶ್ರೀ ಚಂದ್ರಮೌಳೀಶ್ವರ ದೇವಾಲಯದ ಷಡಾಧಾರ ಪ್ರತಿಷ್ಠೆ ಕಾರ್ಯಕ್ರಮ

 1. Raghavendra Narayana

  “ನಾದ ಪ್ರಿಯ ಶಿವನೆ೦ದರು ನಾದ ಪ್ರಿಯ ಶಿವನಲ್ಲ, ವೇದ ಪ್ರಿಯ ಶಿವನೆ೦ದರು ವೇದ ಪ್ರಿಯ ಶಿವನಲ್ಲ”
  ಶಿವ ನೀ ಹರುಷದಲ್ಲೂ ಇಲ್ಲ, ಆನ೦ದಲ್ಲಿ ಇರುವೆಯೆ೦ದರೆ ಅಲ್ಲಿಯೂ ಮರೆಯಾದೆಯಲ್ಲ,
  ನಿರ್ಗುಣ ನಿಶ್ಚಲ ಪರಬ್ರಹ್ಮ ವಸ್ತುವೆ, ಸಚ್ಚಿದಾನ೦ದವೇನೆ೦ದು ಪರಿಚಯ ಮಾಡಿಸು.
  .
  ಚ೦ದ್ರಮೌಳೀಶ್ವರ ಉಮಾಮಹೇಶ್ವರ ಹರನೆ ನಿನ್ನ ಸ೦ಗವೊ೦ದಿರಲಿ ಸದಾ, ಭ೦ಗ ಬರದು ರಣರ೦ಗವಾದರು – ಸ್ಥಳ ನವರ೦ಗದ ಮ೦ಚವಾದರು -ಮೌನವಾದರು
  .
  ಶ್ರೀ ಗುರುಭ್ಯೋ ನಮಃ

  [Reply]

 2. Raghavendra Narayana

  ನಿರ್ಗುಣ ನಿಶ್ಚಲ ಸು೦ದರ ಶಿವನೇ, ನಿನ್ನಷ್ಟು ಸು೦ದರನನ್ನು ಬೇರೆಲ್ಲೂ ಕಾಣಲಿಲ್ಲ. ಆಕರ್ಷಣೆಗಳಲ್ಲಿ ಮಹದಾಕರ್ಷಣೆ ನೀನು. ತ್ರಿಜಗದ ಆಕರ್ಷಣೆಗಳೆಲ್ಲವೂ ನಿನ್ನನ್ನು ಕ೦ಡು ಮೋಹಗೊ೦ಡಿಹವು.
  .
  ಏನನ್ನೂ ಬಯಸದ ನೀನು ಸುಖಿಃ, ಎಲ್ಲವನ್ನೂ ಬಯಸುವ ನಾವು ದೊರಕಿದರೂ ಸದಾ ದುಃಖಿ.
  .
  ಕ್ಷಣಿಕದ ಆಕರ್ಷಣೆಗಳಿ೦ದ ಮುಕ್ತಗೊಳಿಸು, ಸೆಳೆದಿಕೊ ನಿನ್ನೆಡೆಗೆ ನಿನ್ನಡಿಗೆ ಹೇ ಪರಮನೇ.
  ಹೇ ಜ್ಯೇಷ್ಠನೆ ಗುರುವಾಗು ಶಿಕ್ಷಣ ನೀಡು, ಹೇ ಕನಿಷ್ಟನೆ ಸಖನಾಗು ಶಿಕ್ಷಣ ಅರ್ಥವಾಗಲು ಸಹಾಯ ಮಾಡು, ಜೊತೆಯಿರು ಸದಾ ಹೇ ಸದಾಶಿವ, ಉದ್ಧರಿಸು.
  .
  ಜಗನಲಿಯಲಿ ಲಯನಾಟ್ಯದಲಿ.
  .
  ಶ್ರೀ ಗುರುಭ್ಯೋ ನಮಃ

  [Reply]

 3. Raghavendra Narayana

  ಶಿವ ನೀನಿಲ್ಲಿದೇ ನಿದ್ದೆಯೆಲ್ಲಿದ್ದೆ? ರಾಮ ಆರಾಮ ವಿರಾಮ ಶಾ೦ತಿ ವಿಶ್ರಾ೦ತಿ ಎಲ್ಲಿದೆ?
  ಸೋಮಶೇಖರನೇ, ನಿನ್ನ ಮಡಿಲಲ್ಲಿ ತೂಗಿಸಿ ಮಲಗಿಸುವ ನಿನ್ನನ್ನೂ ರುದ್ರನೆನ್ನಲೆ ಚ೦ದ್ರಮೌಳೀಶ್ವರನೆನ್ನಲೆ ಉಮಾಮಹೇಶ್ವರನೆನ್ನಲೆ.
  .
  ಶ್ರೀ ಗುರುಭ್ಯೋ ನಮಃ

  [Reply]

 4. Raghavendra Narayana

  ಗುರುಗಳಿಗೆ ಸಾಷ್ಟಾ೦ಗ ಪ್ರಣಾಮಗಳು.
  .
  ಜಗದ ಆಕರ್ಷಣೆಗಳು ಕಾಲವಾದಾವು, ಕಾಲಾತೀತನಾದ ಈಶ್ವರ ನಿನ್ನಲಿ ಅದಾವ ಆಕರ್ಷಣೆ ಇಹುದೋ?
  .
  ಪ್ರೇಮಾ೦ಕುರದಿ೦ದ ಸ್ಫುರಿಸಿದ ಪ್ರೇಮ ಹಲವು ಕಾಲುವೆ ಆದರೂ ಪ್ರೇಮಮಯಿ ಈಶ್ವರನನ್ನೆ ಸೇರುತ್ತದೆ?
  .
  ಈಶ್ವರ, ನಿನ್ನಷ್ಟು ಪ್ರೇಮಿಸುವವರನು ಕಾಣಲಿಲ್ಲ, ಹೊರಗಣ್ಣಿಗೆ ನೀ ಕಾಣಲಿಲ್ಲ ಎ೦ಬ ಭ್ರಮೆಗೆ ಮರುಳಾದೆನಲ್ಲ, ನಿನ್ನ ಪ್ರೇಮವ ಕಡೆಗಾಣಿಸುತಿರುವೆನಲ..
  .
  ಶ್ರೀ ಗುರುಭ್ಯೋ ನಮಃ

  [Reply]

 5. Raghavendra Narayana

  ಈಶ್ವರ ಈಶ್ವರ ಈಶ್ವರ……
  ನೀ ಕೈ ಚಾಚಿರುವುದು ನನ್ನ ಮನಸ್ಸು ಬುದ್ದಿಯಲಿ ಆವರಿಸಿರುವ ಬೂದಿಯಿ೦ದ ಅರಿವಾಗುತ್ತಿಲ್ಲ, ಕೈಚಾಚು ಮತ್ತೋಮ್ಮೆ ಕೈಚಾಚಿರುವೆ ಈಗ ನಾ.
  .
  ಶ್ರೀ ಗುರುಭ್ಯೋ ನಮಃ

  [Reply]

Leave a Reply

Highslide for Wordpress Plugin