ವಿರಾಟ್ ಪೂಜೆ – ಶಿವರಾಮ ಸ೦ಗಮ – ಎರಡು ಕರುಣಾ ವಸ್ತುಗಳಿ೦ದ ಸಾಗರ ತು೦ಬಿ ಹರಿದೀತು, ಕರುಣಾ ಸುನಾಮಿ ಎಲ್ಲರ ಎದೆಯೊಳಗೆ.
.
ಶಿವನೆ ಜಗದ ಆತ್ಮ ನಿಲ್ಲೊಳಗಿದೆ, ನಿನ್ನ ಬಳಿ ಬ೦ದರೆ ಆತ್ಮದ ಬಳಿ ಬ೦ದ೦ತೆ, ನಿನ್ನ ಬಳಿ ಇದ್ದರೆ ಆನ೦ದದ ಅಭಿಷೇಕ, ಆತ್ಮಾನ೦ದಕ್ಕೆ ಸಮವು೦ಟೆ, ಶಿವನೆ ನಾ ನಿನ್ನ ಬಳಿ ಇದ್ದರೆ – ನೀ ಎನ್ನ ಬಳಿ ಇದ್ದರೆ – ಜಗವೆಲ್ಲವೂ ಸಮ – ಆ ಸಮತ್ವವೆ ಧ್ಯಾನ, ಅದುವೆ ನಮ್ಮ ಧ್ಯಾನ. ಶಿವನೆ ಆಲಿ೦ಗಿಸು. ಜಗ ಆನ೦ದಿಸಲಿ ಒ೦ದು ಕ್ಷಣ ನಿನ್ನ ಸಹವಾಸದಿ೦ದ.
.
ಶ್ರೀ ಗುರುಭ್ಯೋ ನಮಃ
ಗುರುಕೃಪೆಯೊಂದಿರಲಿ….. ಸಹಸ್ರಮಾನಗಳ ಅತ್ಯಪೂರ್ವಕ್ಷಣಕ್ಕೆ ಸಾಕ್ಷಿಯಾಗೋಣ…..ಮಂಗಳಮಯವಾದ, ಈ ಅದ್ಭುತ ಕಾರ್ಯಕ್ರಮದಲ್ಲಿ ಭಾಗಿಗಳಾಗಿ ನಮ್ಮಾತ್ಮದೊಂದಿಗೆ , ಪರಮಾತ್ಮನೊಂದಿಗೆ ಬದುಕಲು ಕಲಿಯುವ….
March 22, 2011 at 8:08 AM

March 23, 2011 at 7:47 AM
ಎಲ್ಲರೂ ಬನ್ನಿ, ಎಲ್ಲವಾ ತನ್ನಿ, ಎಲ್ಲರಾ ಕರೆ ತನ್ನಿ..
ನೈಜದೆಡೆಗೆ ಬನ್ನಿ, ನಿಮ್ಮೆಡೆಗೆ ಬನ್ನಿ, ಶಿವನೆಡೆಗೆ ಬನ್ನಿ, ಶ೦ಕರಾಚಾರ್ಯರೆಡೆಗೆ ಬನ್ನಿ, ನಿಮ್ಮಾತ್ಮದೆಡೆಗೆ ಬನ್ನಿ, ಪರಮಾತ್ಮನೆಡೆಗೆ ಬನ್ನಿ,
ಬನ್ನಿ ಬನ್ನಿ ರಾಮನ ಸ೦ಸಾರವ ನೋಡ ಬನ್ನಿ, ಹನುಮನುದಿಸಿದ ಸ್ಥಳದಲಿ ರಾಮ ಕಾದಿರುವ, ಬನ್ನಿ ನೋಡ ಬನ್ನಿ, ಹನುಮನ ರಾಮ ಭಜನೆಯ ಕೇಳ ಬನ್ನಿ..
ಬನ್ನಿ ಅಲ್ಲಿಲ್ಲ ಬ೦ಧನ, ಅಲ್ಲಿಲ್ಲ ರೋದನ, ಕೇವಲ ಆನ೦ದ ನರ್ತನ, ಪೂರ್ಣಿಮೆ ಇಲ್ಲದೆಯು ಅಲೆಗಳ ಕುಣಿತ, ಓ೦ಕಾರದ ಮೊರೆತ..
ಬನ್ನಿ ಸಹಸ್ರ ಸಹಸ್ರ ಸ೦ಖ್ಯೆಯಲಿ, ಸಹಸ್ರ ಸಹಸ್ರ ರುದ್ರರನು ಹೇಳಬನ್ನಿ ಕೇಳಬನ್ನಿ ನೋಡಬನ್ನಿ ಅನುಭವಿಸಬನ್ನಿ.. ಬನ್ನಿ ನಿಮ್ಮಾತ್ಮವ ತನ್ನಿ..
.
ಶ್ರೀ ಗುರುಭ್ಯೋ ನಮಃ
March 23, 2011 at 11:00 AM
ವಿರಾಟ್ ಪುರುಷನ ವಿಶೇಷ ಪೂಜೆಯೂ , ವಿಶೇಷ ಪೂಜೆಯ ವಿರಾಟ್ ಸ್ವರೂಪವೂ ಆಗಿರುವ ಈ ಮಧುರ ಕ್ಷಣಗಳು
ನಮ್ಮ ಜೀವಿತಾವಧಿಯಲ್ಲಿ ಒದಗಿರುವ ಅಮೃತ ಘಳಿಗೆಗಳು. ನೋಡುವುದಕ್ಕೇ ಅತ್ಯಂತ ದುರ್ಲಭವಾಗಿರುವ ಈ
ಪುಣ್ಯತಮ ಕಾರ್ಯಕ್ರಮಗಳಲ್ಲಿ ಸಹಭಾಗಿಗಳಾಗುವ ಸುಯೋಗ ದಯ ಪಾಲಿಸಿರುವ ನಮ್ಮ ಶ್ರೀ ಸಂಸ್ಥಾನಕ್ಕೆ
ಕೋಟಿ ಕೋಟಿ ಸಷ್ಟಾಂಗ ಪ್ರಣಾಮಗಳು. ಪೂರ್ವ ಪುಣ್ಯ ವಿಶೇಷದಿಂದ ಮಾತ್ರ ಲಭ್ಯವಾಗುವ ಈ
ಶುಭಾವಸರವನ್ನು ಯಾರೂ ಕಳೆದುಕೊಳ್ಳ ಬಾರದಾಗಿ ವಿನಂತಿ. ಮನೆ ಬಾಗಿಲ ಬಳಿ ಬಂದ ಗಂಗೆಯಲ್ಲಿ
ಮಿಂದು ಪಾವನ ರಾಗೋಣ….ಸಹಸ್ರ ಸಹಸ್ರ ಸಂಖೆಯಲ್ಲಿ ಭಾಗವಹಿಸಿ ಕೃತ ಕೃತ್ಯರಾಗೋಣ.
March 24, 2011 at 9:26 AM
॥ ಹರೇ ರಾಮ ॥
ಇಂತಹ ಶುಭ ಘಳಿಗೆಗಾಗಿ ಕಾಯುತ್ತಿರುವ….
ಶ್ರೀ ಗುರುಭ್ಯೋ ನಮಃ
March 24, 2011 at 11:57 AM
ಗುರುಚರಣಗಳಿಗೆ ಅನಂತ ಪ್ರಣಾಮಗಳು.
ಗುರುಕೃಪೆಯೊಂದಿರಲಿ….. ಸಹಸ್ರಮಾನಗಳ ಅತ್ಯಪೂರ್ವಕ್ಷಣಕ್ಕೆ ಸಾಕ್ಷಿಯಾಗೋಣ…..ಮಂಗಳಮಯವಾದ, ಈ ಅದ್ಭುತ ಕಾರ್ಯಕ್ರಮದಲ್ಲಿ ಭಾಗಿಗಳಾಗಿ ನಮ್ಮಾತ್ಮದೊಂದಿಗೆ , ಪರಮಾತ್ಮನೊಂದಿಗೆ ಬದುಕಲು ಕಲಿಯುವ….