ಹವ್ಯಕಮಹಾಮಂಡಲ

ಸಿಂಗಾಪುರ ಹವ್ಯಕವಲಯ ಉದ್ಘಾಟನೆ

ದಿನಾಂಕ : ೨೫-೦೬-೨೦೧೪  ಬೆಂಗಳೂರು

ತಾಯ್ನಾಡು ಬಿಟ್ಟು ಉದ್ಯೋಗ ನಿಮಿತ್ತ ದೂರದ ಯಾವುದೇ ದೇಶದಲ್ಲಿದ್ದರೂ ಮೂಲದ ಸಂಪರ್ಕವನ್ನು ಕಡಿದುಕೊಳ್ಳಬಾರದು. ದೂರದ ಸಿಂಗಾಪುರದಲ್ಲಿದ್ದರೂ ಶ್ರೀಮಠದ ನಿತ್ಯ ನೆನೆಯುವಂತಾಗಲು ಸಿಂಗಾಪುರ ಹವ್ಯಕವಲಯವನ್ನು ರಚಿಸಲಾಗುತ್ತಿದೆ. ನೀವು ಎಲ್ಲಿದ್ದರೂ ನಮ್ಮವರೇ,  ಅಲ್ಲಿದ್ದುಕೊಂಡೇ ನಮ್ಮ ಸಂಸ್ಕೃತಿಯನ್ನು ಉಳಿಸಿಕೊಳ್ಳಿ ಹಾಗೂ   ಊರಿಗೆ ಬಂದಾಗ ಶ್ರೀಗುರುಪೀಠವನ್ನು ಭೇಟಿಯಾಗಿ ಆಶೀರ್ವಾದ ಪಡೆದುಕೊಳ್ಳಿ ಎಂದು ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳು ಸಿಂಗಾಪುರದ ಹವ್ಯಕಸಮಾಜ ಬಾಂಧವರಿಗೆ ಕರೆ ನೀಡಿದರು. ಜೂನ್ ೨೫ ರಂದು ಗಿರಿನಗರದ ಶ್ರೀರಾಮಾಶ್ರಮದಲ್ಲಿ ದೀಪ ಬೆಳಗಿಸಿ ಸಿಂಗಾಪುರ ಹವ್ಯಕವಲಯವನ್ನು ಉದ್ಘಾಟಿಸಿ ಅವರು ವಿದೇಶದಲ್ಲಿ ಸಮಾಜಸಂಘಟನೆಗೆ ಹೊಸದಿಕ್ಕನ್ನು ನೀಡಿದರು.  ಶ್ರೀಮಠದ ಸಂಪ್ರದಾಯದಂತೆ ಶಂಖನಾದ, ಗುರುವಂದನೆ, ಫಲಸಮರ್ಪಣೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು.

ಸ್ಕೈಪ್ ತಂತ್ರಜ್ಞಾನದ  ಮುಖಾಂತರ ಬೆಂಗಳೂರು ಹಾಗೂ ಸಿಂಗಾಪುರಗಳು ನೇರಸಂಪರ್ಕವನ್ನು ಹೊಂದಿಕೊಂಡು ಈ ಕಾರ್ಯಕ್ರಮ ವಿಶಿಷ್ಠವಾಗಿ ಮೂಡಿಬಂತು. ಶ್ರೀಶ್ರೀಗಳವರ ಮಾರ್ಗದರ್ಶನವನ್ನು ನೇರವಾಗಿ ಟಿವಿಪರದೆಯಲ್ಲಿ ಸಿಂಗಾಪುರದ ಶಿಷ್ಯರು ಪಡೆದು ಧನ್ಯರಾದರು. ಅಲ್ಲಿನ ಶಿಷ್ಯರ ಪರಿಚಯ, ಅವರ ಪ್ರಶ್ನೆಗಳನ್ನು ಶ್ರೀಶ್ರೀಗಳವರು ಬೆಂಗಳೂರಿನಲ್ಲಿದ್ದುಕೊಂಡೇ ಟಿವಿಪರದೆಯಲ್ಲಿ ವೀಕ್ಷಿಸಿದರು.

ಕನ್ನಡಪ್ರಭ ಪತ್ರಿಕೆಯ ಪ್ರಧಾನಸಂಪಾದಕರಾದ ಶ್ರೀವಿಶ್ವೇಶ್ವರಭಟ್ಟ ದಂಪತಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದು ಶುಭಹಾರೈಸಿದರು. ಹವ್ಯಕಮಹಾಮಂಡಲದ ಅಧ್ಯಕ್ಷರಾದ ಡಾ.ವೈ.ವಿ.ಕೃಷ್ಣಮೂರ್ತಿಯವರು ಪ್ರಾಸ್ತಾವಿಕನುಡಿಗಳನ್ನು ಆಡಿದರು. ಉಪಾಧ್ಯಕ್ಷರಾದ ಡಾ.ಸೀತಾರಾಮಪ್ರಸಾದ ಹಾಗೂ ಕೋಶಾಧ್ಯಕ್ಷರಾದ ರಾಮಚಂದ್ರ ಭಟ್ಟ ಜೆಡ್ಡು ಉಪಸ್ಥಿತರಿದ್ದರು. ಶ್ರೀಸಂಸ್ಥಾನದ ಅಂತರ್ಜಾಲ ಕಾರ್ಯದರ್ಶಿಗಳಾದ ಕುಮಾರಿ ಅಶ್ವಿನಿ, ಸಂತೋಷ ಕೆರೆಕೈಯವರು ಹಾಗೂ ಆದಿತ್ಯ ಸಹಕರಿಸಿದರು.

Facebook Comments Box