ಹಳೇ ಮನೆ ಚನ್ನಾಗಿದ್ದರೂ ಕೂಡಾ ಹೊಸಮನೆ ನಿರ್ಮಿಸುವಾಗ ಹಳೆಮನೆಯನ್ನು ಕೆಡವುತ್ತಾರೆ ಹೊಸತನ್ನು ಹಳೆಯದಕ್ಕಿಂತ ಸುಂದರವಾಗಿ ನಿರ್ಮಿಸುತ್ತಾರೆ.
ಹಾಗೆಯೇ ನಮ್ಮ ಸಂಘಟನೆಗೆ ಹೊಸ ರೂಪವನ್ನು ಕೊಟ್ಟು ಮೊದಲಿಗಿಂತಲೂ ಸುಂದರವಾಗಿ ಕಟ್ಟುವ ಉದ್ದೇಶ ದಿಂದ ಮಂಡಲಗಳನ್ನು ರಚನೆಮಾಡುತ್ತಿದ್ದೇವೆ ಎಂದು ಕುಮಟಾದಲ್ಲಿ ಮಂಡಲ ಕಾರ್ಯಾಲಯ ಉದ್ಘಾಟನಾ ಸಂದರ್ಭದಲ್ಲಿ ಶ್ರೀ ಶ್ರೀ ರಾಘವೇಶ್ವರ ಭಾರತೀ ಸ್ವಾಮಿಗಳವರು ನುಡಿದರು.
ಸುಮಾರು ಎಂಟುಸಾವಿರ ಕಾರ್ಯಕರ್ತರನ್ನು ನಮ್ಮ ಹವ್ಯಕ ಮಹಾಮಂಡಲ ಹೊಂದಿರುತ್ತದೆ.
ಮೊದಲಿಗಿಂತಲೂ ಸುಲಭವಾಗಿ ಸಮಾಜದ ಪ್ರತಿಯೊಬ್ಬ ವ್ಯಕ್ತಿ, ಮನೆ,ಮನಗಳನ್ನು ಮುಟ್ಟಲು ಇದರಿಂದ ಸಾಧ್ಯವಾಗುತ್ತದೆ.
ಪ್ರತಿ ಐದು ಮನೆಗಳಿಗೆ ಒಬ್ಬ ಶ್ರೀಕಾರ್ಯಕರ್ತ,
ಪ್ರತಿ ಇಪ್ಪತ್ತೈದು ಮನೆಗಳಿಗೆ ಒಬ್ಬ ಗುರಿಕಾರ,
ಇನ್ನೂರೈವತ್ತು ಮನೆಗಳಿಗೊಂದು ವಲಯ,
ಎರಡುಸಾವಿರದ ಐದುನೂರು ಮನೆಗಳಿಗೊಂದು ಮಂಡಲ ಹೀಗೆ ಎಲ್ಲಮಂಡಲಗಳು ಸೇರಿ ಹವ್ಯಕ ಮಹಾಮಂಡಲ ಎಂದು ಶ್ರೀಗಳು ತಮ್ಮ ಆಶೀರ್ವಚನದಲ್ಲಿ
ಮಂಡಲದ ವಿಸ್ತಾರತೆಯನ್ನು ವಿವರಿಸಿದರು..
Leave a Reply