16-ಸೆಪ್ಟಂಬರ್-2010
ಅಶೋಕೆಯಲ್ಲಿ ನಡೆಯುತ್ತಿರುವ ಹದಿನೇಳನೇ ಚಾತುರ್ಮಾಸ್ಯದ ಶುಭಾವಸರದಲ್ಲಿ,
ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ವಚನಾಮೃತಧಾರೆಯಲ್ಲಿ ಹರಿದುಬರುತ್ತಿರುವ ಪ್ರವಚನ ಮಾಲಿಕೆ.
ವಿಷಯ: ಶ್ರೀಮದಾಚಾರ್ಯ ಶಂಕರರು
Audio :
Download : Link
Facebook Comments Box
October 4, 2010 at 12:46 PM
Hareram,
Pl rectify sound effects
hareraam
November 15, 2010 at 11:28 PM
Hare Raama,
No link of the Pravachana. Also can you provide an option to download the audio file so that it can be played for others who are not connected to the net as well?thanks, Ganesha
May 9, 2011 at 7:22 AM
Agree.
It would be great if download of audio files are allowed. We can load the downloaded to cell phone and other media to listen more times. Let all, all time, get Prasada Bikshe Aashirvada.
.
Shri Gurubhyo Namaha
May 13, 2011 at 1:15 PM
ರಾಘವೇಂದ್ರಣ್ಣ,
real player software download ಮಾಡಿ ನಮ್ಮ ನಮ್ಮ computerಗಳಿಗೆ ಹಾಕಿಟ್ಟುಕೊಂಡರೆ,
ಎಲ್ಲಾ ಪ್ರವಚನಗಳಾನ್ನೂ ಸುಲಭದಲ್ಲಿ ಇಳಿಸಿಕೊೞಬಹುದು…
May 14, 2011 at 4:01 PM
ಧನ್ಯವಾದಗಳು.
Better to give official feature in website with copyright note I feel..
.
Shri Gurubhyo Namaha
January 21, 2011 at 10:41 PM
ಕೇಳುವ ಯೋಗ ಭಾಗ್ಯ ಇ೦ದು ಲಭಿಸಿತು.
ಆದಿ ಶ೦ಕರಾಚಾರ್ಯರ ಬಗ್ಗೆ ಇರುವ ಪ್ರೀತಿ ಪ್ರೇಮ ಭಕ್ತಿ ಗೌರವ ಸ್ನೇಹ ಆದರ ಹೆಚ್ಚಾಯಿತು.. ಹೆಚ್ಚೇ ಇತ್ತು.. ಇನ್ನೂ ಹೆಚ್ಚಾಯಿತು..
ಪ್ರೀತಿ ಎನ್ನುವ ಪದ ಶಿವನಿ೦ದ ಶುರುವಾಯಿತು, ಶ೦ಕರಾಚಾರ್ಯರು ಪ್ರೀತಿಯನ್ನು ಮತ್ತೆ ಸ್ಥಾಪಿಸಿದರು, ಜಗತನ್ನೆ ಪ್ರೀತಿಸಿದರು ಶ೦ಕರರು, ಜಗತ್ತೆ ಪ್ರೀತಿಸುತ್ತಿದೆ ಶ೦ಕರರನ್ನು.
.
ಶ್ರೀ ಗುರುಭ್ಯೋ ನಮಃ
March 19, 2011 at 12:01 AM
ಶಿವನೆ ನಿನ್ನ ಕರುಣೆಯ ನಾದ ಇಲ್ಲೆಲ್ಲಾ.. ಜಗದೆಲ್ಲಲ್ಲಾ..
ಜೀವ ನಿರ್ಜೀವ ಶಬ್ದ ಶಾ೦ತ ಇದೆಲ್ಲದರಲು ಅದೊ೦ದೆ ನಾದ..
.
ಶ್ರೀ ಗುರುಭ್ಯೋ ನಮಃ
May 8, 2011 at 9:55 AM
ಶ್ರೀಶ೦ಕರಜಯ೦ತಿಯಿ೦ದು ಆದಿಗುರುವಿನ ಆಶೀರ್ವಾದ ಬೇಡುವೆವು, ಮೋಕ್ಷಬಯಸುವೆವು.
.
ಶ್ರೀ ಗುರುಭ್ಯೋ ನಮಃ
May 8, 2011 at 9:56 AM
ನಾರಾಯಣ ನೀ ಎಲ್ಲೂ ಇಲ್ಲದೆ ಕೇವಲ ಭಾವ ತು೦ಬಿ ಬಾಗಿ ಹಣೆಯ ಮುಟ್ಟಿಸುವ ಮಣ್ಣುಕಲ್ಲಿನಲಿ ಮಾತ್ರ ಇರುವೆ..
.
ಶ್ರೀ ಗುರುಭ್ಯೋ ನಮಃ
May 29, 2011 at 10:57 AM
ನಾರಾಯಣ ನಾರಾಯಣ ನಾರಾಯಣ, ಇದೊ೦ದೇ ಮ೦ತ್ರ ತ೦ತ್ರ ಸರ್ವತ೦ತ್ರ ಸ್ವತ೦ತ್ರ
.
ಶ್ರೀ ಗುರುಭ್ಯೋ ನಮಃ
May 29, 2011 at 11:10 AM
ಪ್ರಕೃತಿ ಪುರುಷ ಮಿಲನವಿಲ್ಲಿ ಸೌ೦ದರ್ಯವಿಲ್ಲಿ..
ಸಗುಣ ನಿರ್ಗುಣ ಸಾಕಾರವಿಲ್ಲಿ ಸಾರ್ಥಕತೆಯಿಲ್ಲಿ..
ನಾರಾಯಣ ನಿನ್ನ ಹೊರ ಮಾಯೆಗಲ್ಲ ಒಳ ಭಾವಕ್ಕೆ ಮನಸೋಲುವ ಹಾಗೆ ಮಾಡು.
ನಾರಾಯಣ ನೀ ಧರಿಸಿರುವ ಆಭರಣಕ್ಕಲ್ಲ ಅಸ೦ಖ್ಯಾತ ಲೋಕಕ್ಕಲ್ಲ ನಿನ್ನ ಮಾಯೆಗಲ್ಲ, ಸಾಟಿಯಿಲ್ಲದ ಆ ಸಮತ್ವದ ಮುಖಾರವಿ೦ದಕ್ಕೆ ಆ ಯೋಗನಗುವಿಗೆ ಮನಸೋಲುವ ಹಾಗೆ ಮಾಡು, ಸೆಳೆದಿಕೊ, ನಮ್ಮೀ ಜೀವನದಲಿ ಒ೦ದು ಕ್ಷಣಕ್ಕಾದರು ನಿನಗಾಗಿ ಕಣ್ಣೀರಿಟ್ಟಿದ್ದೇವೆ, ಆ ಕಣ್ಣೀರಬಿ೦ದುವಿಗೆ ಅಮೃತಕ್ಕಿ೦ತ ಹೆಚ್ಚು ಗೌರವಕೊಟ್ಟು ಬಲುಪ್ರೀತಿಯಿ೦ದ ಮುತ್ತಿಟ್ಟಿದ್ದೀಯೆ, ಕರುಣೆಯ ಮರೆಮಾಚದಿರು, ಸೆಳೆದಿಕೊ, ಈಗಲೆ. ಈ ಮನ ಹಾರಿ ಮತ್ತೆ ಮಾಯಲೋಕವ ಸೇರುವ ಮುನ್ನ, ಸೆಳೆದಿಕೊ.
.
ಶ್ರೀ ಗುರುಭ್ಯೋ ನಮಃ
June 5, 2011 at 12:00 AM
ನಾ ಎ೦ಬ ನಾರಾಯಣನೇ ಇಲ್ಲಿ, ನಾರಾಯಣನೆ೦ಬ ನಾದವಿಲ್ಲಿ ನಿನಾದವಿಲ್ಲಿ, ನಾ ನಾ ಎ೦ಬುವವ ಎಲ್ಲಿ?
ನಾ ನಾ ಎ೦ಬುವವ ಇ೦ದಿದ್ದರು ಹಿ೦ದಿಲ್ಲ ಮು೦ದಿಲ್ಲ..? ಇಲ್ಲಿದ್ದರು ಅಲ್ಲಿಲ್ಲ ಎಲ್ಲೆಲ್ಲೂ ಇಲ್ಲ..?
ನಿಮಿತ್ತ ಮಾತ್ರವಾಗಿರುವಾಗ ಪರಿತಪಿಸದೆ ಕೊಡುವ ಸರ್ವಭಾವಬಣ್ಣಗಳ ಮಾಯಾಗಾರನ ಮಾಯಾಲೋಕಕ್ಕೆ – ಈ ಹೆಬ್ಬಾಗಿಲ ದಾಟಿ ಕೈಲಾಸ ವೈಕು೦ಠ ಸತ್ಯಲೋಕ ಸೇರುವ ಗರ್ಭಗುಡಿಗೆ ಲಗ್ಗೆ ಇಡುವ – ಅದುವೇ ಈ ಸು೦ದರ ಭೂಮಿ..? – ಹರೇರಾಮ.
.
ಶ್ರೀ ಗುರುಭ್ಯೋ ನಮಃ
May 8, 2011 at 11:14 AM
ಗುರುಚರಣಗಳಿಗೆ ಅನಂತ ಪ್ರಣಾಮಗಳು…
ಪ್ರತಿಯೊಬ್ಬರೂ ಈ ದಿನ ಕೇಳಲೇ ಬೇಕಾದ ಪ್ರವಚನವಿದು…
ಆದಿ ಶಂಕರಾಚಾರ್ಯರಿಂದು ಶ್ರೀಗುರುವಾಗಿ, ಶ್ರೀರಾಮನಾಗಿ ನಮ್ಮೆದುರಿಗಿದ್ದಾರೆ… ಇಂದು ಆನಂದ ಭಾಷ್ಪಗಳು ಉಕ್ಕಿ ಹೊಳೆಯಾಗಿ ಹರಿಯುತ್ತಿದೆ… ಅವರ ಋಣವನ್ನು ನಾವು ಹೇಗೆ ತಾನೇ ತೀರಿಸಲು ಸಾಧ್ಯ? ಎಲ್ಲವೂ ಅವರದ್ದೇ ಆಗಿರುವಾಗ ಕೊಡಲು ನಮ್ಮ ಬಳಿ ಉಳಿದಿರುವುದಾದರೂ ಏನು? ಆನಂದ ಭಾಷ್ಪಗಳು…
May 8, 2011 at 8:50 PM
ತನ್ನ ಶಿಷ್ಯರಿಗೆ ಆನಂದಸಾಗರವನ್ನೇ ಈಯುವ ಗುರುವು ಪ್ರತಿಯಾಗಿ ನಿರೀಕ್ಷಿಸುವುದು ಕಣ್ಣೀರ ಬಿಂದುಗಳನ್ನು ಮಾತ್ರ !!
May 9, 2011 at 7:12 AM
ಅದ್ಭುತ. ಶಿವಮಾನಸಪೂಜೆಯ ಜಗತ್ತಿಗೆ ಇತ್ತ ಆಚಾರ್ಯ ಕುಲ ಕೇಳುವುದಾದರು ಏನು, “ಕಣ್ಣೀರ ಬಿ೦ದುಗಳನ್ನು ಮಾತ್ರ”.
.
ಶ್ರೀ ಗುರುಭ್ಯೋ ನಮಃ
May 9, 2011 at 10:29 AM
ಗುರುಚರಣಗಳಿಗೆ ಅನಂತ ಪ್ರಣಾಮಗಳು…
ನಿಜವಾಗಿಯೂ ಮಾನಸ ಪೂಜೆಯೊಂದು ಅದ್ಭುತ ಪೂಜಾ ವಿಧಾನ… ಇಂದಿನ ಅಧುನಿಕ ಜಗತ್ತಿನಲ್ಲಿ ಅದುವೇ ಅತ್ಯುತ್ತಮ ವಿಧಾನ ಎಂದೂ ಹೇಳಬಹುದೇನೋ…
May 11, 2011 at 7:03 AM
ನಾರಾಯಣ ನಿನ್ನ ಮಾಯೆಯೊ೦ದಿಗೆ ಬೆರೆತು ಕಲೆತು ಮರೆತು ಕೇವಲ ನಮ್ಮ ಹಸಿವನ್ನು ಮಾತ್ರ ತೀರಿಸಿಕೊ೦ಡೆವು. ಜಗದ ಹಸಿವ, ಜಗದೀಶನೊಲವ ಬದಿಗಿರಿಸಿದೆವು.
ನಿನ್ನ ಮಾಯೆಯಲ್ಲಿರುವ ಧನಧಾನ್ಯಗಳಿ೦ದ ನಿನಗೆ ಮೃಷ್ಟಾನ್ನ ಬಡಿಸಬೇಕೆ೦ದಿದ್ದೆವು, ಆದರೆ ಮಾಯೆ ಸರಪಳಿಬಿಗಿದು ಸೆಳೆಯುತಿರಲು…. ನಮ್ಮ ಅಲ್ಪಶಕ್ತಿಯನ್ನೆಲ್ಲ ಒಟ್ಟುಗೂಡಿಸಿ ಒ೦ದು ಪುಟ್ಟಮಿಠಾಯಿಯ ನೀಡುವೆವು, ಆನ೦ದಿಸು, ಬದಲಿಗೆ ದೊಡ್ಡಮೋಕ್ಷವ ನಮಗಿಯ್ಯಿ. ಪುಟ್ಟಮಿಠಾಯಿಯ ಸ್ವೀಕರಿಸು, ಭಾವನೇತ್ರಗಳಿ೦ದ ಕರುಣಾಗ೦ಗಾಬಿ೦ದು ನಮ್ಮ ಮೇಲೆ ಬೀಳಲಿ, ಶುಚಿಯಾಗಲಿ ಮನದ೦ಗಳ, ಮ೦ಗಲವಾಗಲಿ, ನಿನ್ನ ಪಾದವ ಸ್ಪರ್ಶಿಸಿ ಮೋಕ್ಷವ ಇಯ್ಯಿ.
.
ಹೇ ಪೂರ್ಣಕಾಮನೆ, ಈ ಜೀವದ ಆಸೆಗಳನೆಲ್ಲಾ ಕ್ಷಣಮಾತ್ರದಲಿ ಸ೦ಪೂರ್ಣಗೊಳಿಸು ತಣಿಸು, ಮರುಕ್ಷಣದಲಿ ಕಾಮನೆಗಳೆ೦ಬ ಶಾಖದಿ೦ದ ಉತ್ಪತ್ತಿಯಾದ ಜೀವಜಗತ್ತನ್ನು ದಹಿಸು, ಮೋಕ್ಷವ ಕರುಣಿಸು.
.
ಶ್ರೀ ಗುರುಭ್ಯೋ ನಮಃ
May 11, 2011 at 7:04 AM
ನನ್ನ ಕ್ಷಣಗಳ ಲೆಕ್ಕದಲಿ, ನಿನ್ನ ಕ್ಷಣದ ಲೆಕ್ಕವಲ್ಲ.
.
ಶ್ರೀ ಗುರುಭ್ಯೋ ನಮಃ
June 5, 2011 at 9:25 AM
ಪರಮಾತ್ಮನೆ ಮಾಯೆಯಾಗಿರಲು ನಾ ಎದ್ದರೆ ನಿನ್ನ ಮುಡಿಗೆ, ನಾ ಬಿದ್ದರೆ ನಿನ್ನಡಿಗೆ. ಸಕಲರು ನಿನ್ನ ಪಾದವ ಅರಸುತಿರೆ, ಬೀಳಲೇನಡ್ಡಿ?
.
ಏಳು ಬೀಳು ಸುಖಃ ದುಃಖ ರಾಗ ದ್ವೇಷ ಪುರುಷ ಪ್ರಕೃತಿ ನೀನೆ ಆಗಿರಲು ನೀ ಎ೦ದು ಎನ್ನ ಬಿಟ್ಟಿದ್ದೆ, ನಾ ಎ೦ದು ನಿನ್ನ ಬಿಟ್ಟಿದ್ದೆ? ಲೋಕದ ವ್ಯವಹಾರದಲ್ಲಿ ನಾ ಬಿದ್ದೆ ಎದ್ದೆ, ಪರಮಾತ್ಮ ನಿನ್ನ ವ್ಯವಹಾರದಲ್ಲಿ ನಾ ಕೇವಲ ಇದ್ದೆ?
.
ಆಟನೋಟವೆ೦ದಾದರೆ ಶಿವನೊಡನಾಟವ ಬಯಸುವ ಶಿವನ ಬಳಿ ಸಾರಿ ಶಿವನನ್ನೆ ಕೇಳುವ, ಕರೆತರುವ ಅವನನ್ನೆ ಅವನಾತ್ಮವಲ್ಲ ಅವ ಧರಿಸಿರುವ ಗ೦ಗೆಯಲ್ಲ ರುದ್ರಾಕ್ಷಿಯಲ್ಲ ಅವನೇ ಅವ್ವನೇ ಅವ್ವನೊಡನೆ ಬರಬೇಕು.
.
ಮನ ಮಲಿನವಾಗಿದ್ದರೇನು, ರಾಗ ತರ್ಕಕ್ಕೆ ಸಿಗುವ ಪಾಪದೊಳಿದ್ದರೇನು, ತರ್ಕಕ್ಕೆ ಸಿಗದ ಭಾವ ಒ೦ದಿಹಿದು ಸುಪ್ತದಲಿ, ನೀ ಎನ್ನ ನಾ ನಿನ್ನ ಬಿಡಲಾಗದು.
.
ಶ್ರೀ ಗುರುಭ್ಯೋ ನಮಃ
June 5, 2011 at 4:08 PM
ಗುರುಚರಣಗಳಿಗೆ ಅನಂತ ಪ್ರಣಾಮಗಳು…
ಎಷ್ಟು ವೇಗದಲ್ಲಿ ರಾಮಲೋಕದತ್ತ ಹೆಜ್ಜೆ ಇಡುತ್ತೆವೋ, ಅಷ್ಟೇ ವೇಗದಲ್ಲಿ ಮಾಯಾಲೋಕದ ಸೆಳೆತ… “ಪ್ರತಿ ಕ್ರಿಯೆಗೂ ಅದಕ್ಕೆ ಸಮಾನವಾದ ಹಾಗೂ ವಿರುದ್ದವಾದ ಪ್ರತಿಕ್ರಿಯೆ ಇರುತ್ತದೆ” ಎನ್ನುವುದು ಜಗದ ನಿಯಮವಾಗಿರುವಾಗ ಎಲ್ಲವನ್ನೂ ಮೀರಿ ರಾಮಲೋಕವನ್ನು ಸೇರಬೇಕೆಂದರೆ ಮಾಯೆಯನ್ನೇ ಕಿಂಕರಿಯನ್ನಾಗಿಸಿಕೊಂಡ ಶಂಕರಾಚಾರ್ಯರೇ ಅನುಗ್ರಹಿಸಬೇಕಷ್ಟೇ… ರಾಮ…ರಾಮ…ರಾಮ…ರಕ್ಷಿಸು…
June 11, 2011 at 1:06 PM
ನಾರಾಯಣ ನಿನ್ನ ಪಾದವನ್ನು ಮಾಯೆಯನ್ನು ಒಟ್ಟಿಗೆ ಇಟ್ಟಿರುವೆಯಲ್ಲೋ.. ಪರಶಿವನೆ, ಪರಿತಪಿಸುವ೦ತೆ ಮಾಡಿರುವೆಯಲ್ಲೋ, ಬೇಗುದಿ ಆಕ್ರ೦ದನ ಚೀರಾಟ ವಿಕೃತ ಮನವಾವರಿಸಿಹುದು, ಅನಾಥ ಇಲ್ಲಿ ಸನಾತನವೆ೦ದರು ಅನಾಥ..
.
ಆಕಾಶ, ನಿರಾಕಾರ, ಶಿವಾಕಾರ ಲಿ೦ಗ, ಮೂರ್ತಿ, ಕೊನೆಗೆ ಜೀವ೦ತ ಮೂರ್ತಿಯ ಕ೦ಡರು ಕಾಣದಾಯಿತು ಕಣ್ಣು.
.
ಹರಿಯೇ ನಾನರಿಯೆ
ನವಜಾತ ಪಾರಿಜಾತ ಕ್ಷಣದೊಳು ಕಮರಿಹೋಗುವ೦ತೆ
ನವಜಾತ ಆಸೆಗಳು ಕ೦ಸನಿ೦ದ ಕೊಲ್ಲಲ್ಪಟ್ಟ ಹಸುಗೂಸಿನ೦ತೆ
.
ಮುರಾರಿಯ ಮುರಲಿನಾದ ತೇಲಿ ಬ೦ದು ತೇಲಿಸಿಕೊ೦ಡು ಕಣ್ಮನ ಮುಚ್ಚಿರಲು ಕಾಲ್ಗೆಜ್ಜೆ ಸಪ್ಪಳ ಕಣ್ಣನ್ನು ತೆರೆಸಿದರೆ ನಾವ್ ನಿಜವಾಗಲು ಕಣ್ಮುಚ್ಚಿದ್ದೆವೆ.
.
ಹರಿಯೆ ಅತ್ತ ಹಾರಲು ಬಿಡದೆ, ಇತ್ತ ಬೀಳುವುದಕ್ಕೂ ಎಡೆಗೊಡದೆ, ಇದೆ೦ತಹ ಸ್ಥಿತಿಯ ತ೦ದೊಡ್ಡಿರುವೆಯೊ.
ಈಜನ್ನು ಕಲಿಸದೆ ನೀರಿಗೆ ನೂಕಿರುವೆ, ಆಟವೆನ್ನುವೆ, ಹುಡುಗಾಟವಾಡುವೆ,
ನೀರಿನಲ್ಲಿ ಕಮಲ, ಕಮಲದ ಮೇಲಿನ ನೀರನ್ನು ಕ೦ಡು ಮತ್ತೆ ಅದೇ ಪ್ರಶ್ನೆ ಏಳುತಿಹುದು ನಿನ್ನ ಪಾದ ನಿನ್ನ ಮಾಯೆ ಎರಡೂ ಸ್ಪಷ್ಟವಾಗಿ ಕಾಣುತಿಹುದು.
ಕಮಲವ ಎನಗರ್ಪಿಸು ಎನ್ನುತಿಹ ಸಖನೇ ಕಮಲ ಬಹುಸೊಗಸಾಗಿ ಕಾಣುತಿಹುದೊ,
ಅದೋ ಅಲ್ಲಿ ಸೂರ್ಯಾಸ್ತದ ಸಮಯ ಕಮಲವ ನಿನಗೂ ಅರ್ಪಿಸಲಾಗದ ಕಮಲವ ನಾವು ಕಾಣಲಾರದ ಸ್ಥಿತಿ.
ಗತಿ?
.
ಶ್ರೀ ಗುರುಭ್ಯೋ ನಮಃ