ಶ್ರೀ ರಾಮಾಶ್ರಮ, ಬೆಂಗಳೂರು 2/09/2 015

ಬೆಳಗ್ಗೆ:

ಶ್ರೀಕರಾರ್ಚಿತ ಶ್ರೀದೇವರುಗಳ ಪೂಜೆ ಸಂಪನ್ನವಾಯಿತು.
~
ಭಜನೆ:
ಸಾಮೂಹಿಕ ಕುಂಕುಮಾರ್ಚನೆ ಹಾಗೂ ಹನುಮಾನ ಚಾಲೀಸ್ ಪಠಣ.
~
ಛಾತ್ರಪುರಸ್ಕಾರ : ಸಂಗೀತ,ಕೊಳಲು ಮುಂತಾದ ವಿಭಾಗಗಳಲ್ಲಿ ಉತ್ತಮ ಸಾಧನೆಗೈದ ವಿದ್ಯಾರ್ಥಿನಿ ಕಲಾಧರೀ ಭವಾನೀ

~
ಲೋಕಾರ್ಪಣೆ: : ಶ್ರೀಭಾರತೀಪ್ರಕಾಶನದಿಂದ ಪ್ರಕಟವಾದ, ಡಾ.ಗಜಾನನ ಶರ್ಮಾ ಬರೆದ ‘ಮಕ್ಕಳ ರಾಜ್ಯವ ಕಟ್ಟಿಕೊಡು’ ಕವನ ಸಂಕಲನ ಪುಸ್ತಕ

~
ಸರ್ವಸೇವೆ : ಸಾಗರ ಮಂಡಲಾಂತರ್ಗತ ಕ್ಯಾಸನೂರು, ಇಕ್ಕೇರಿ, ಕೆಳದಿ ಹಾಗೂ ಉಳವಿ ವಲಯಗಳಿಂದ ಸರ್ವಸೇವೆ ನಡೆಯಿತು.
~
ಧರ್ಮಸಭೆ :
ಗಿರಿನಗರದ ಶ್ರೀರಾಮಾಶ್ರಮದಲ್ಲಿ ನಡೆಯುತ್ತಿರುವ ಶ್ರೀರಾಘವೇಶ್ವರ ಭಾರತೀಶ್ರೀಗಳ ಛಾತ್ರಛಾತುರ್ಮಾಸ್ಯದ ಮೂವತ್ತನಾಲ್ಕನೇ ದಿನವಾದ ಬುಧವಾರ ಸಾಗರ ಮಂಡಲಾಂತರ್ಗತ ಕ್ಯಾಸನೂರು, ಇಕ್ಕೇರಿ, ಕೆಳದಿ ಹಾಗೂ ಉಳವಿ ವಲಯಗಳಿಂದ ಸರ್ವಸೇವೆ ನಡೆಯಿತು.
ನಂತರ ನಡೆದ ಧರ್ಮಸಭೆಯಲ್ಲಿ ಶ್ರೀಭಾರತೀಪ್ರಕಾಶನದಿಂದ ಪ್ರಕಟವಾದ, ಮಕ್ಕಳ ಕಥೆಗಳು’ ಪುಸ್ತಕ ಲೋಕಾರ್ಪಣೆಗೊಂಡಿತು. ಸಂಗೀತ,ಕೊಳಲು ಮುಂತಾದ ವಿಭಾಗಗಳಲ್ಲಿ ಉತ್ತಮ ಸಾಧನೆಗೈದ ವಿದ್ಯಾರ್ಥಿನಿ ಕಲಾಧರೀ ಭವಾನೀ ಇವರಿಗೆ ಛಾತ್ರಪುರಸ್ಕಾರ ನೀಡಲಾಯಿತು. ಮಹಾಮಂಡಲದ ಸೇವಾ ಪ್ರಧಾನ ಮಹೇಶ ಚಟ್ನಳ್ಳಿ, ಪ್ರಸಾರ ಪ್ರಧಾನ ರಮೇಶ ಹೆಗಡೆ ಗುಂಡೂಮನೆ, ಸಾಗರ ಮಂಡಲದ ಕಾರ್ಯದರ್ಶೀ ಮುರುಳಿ, ಛಾತ್ರ ಚಾತುರ್ಮಾಸ್ಯ ಸಮಿತಿ ಅಧ್ಯಕ್ಷ ಯು.ಎಸ್.ಜಿ ಭಟ್ ಉಪಸ್ಥಿತರಿದ್ದರು. ಕೊರಿಕ್ಕಾರ್ ಸಹೋದರಿಯರಾದ ಪೂಜಾ ಮತ್ತು ಪ್ರಿಯಾಂಕಾ ನಿರೂಪಿಸಿದರು.

Audio:

Download: Link

Facebook Comments