ಶ್ರೀ ರಾಮಾಶ್ರಮ, ಬೆಂಗಳೂರು 07-08-2015,ಶುಕ್ರವಾರ 

ಬೆಳಗ್ಗೆ:

ಶ್ರೀಕರಾರ್ಚಿತ ಶ್ರೀದೇವರುಗಳ ಪೂಜೆಯ ಸಂಪನ್ನವಾಯಿತು.
~

ಸರ್ವಸೇವೆ:
ಬಿ. ಎಸ್. ಗಣೇಶ ಮತ್ತು ಮನೆಯವರು, ಬ್ಯಾಕೋಡು, ಸಾಗರ ಶಿವಮೊಗ್ಗ

~

ಪಾದುಕಾ ಪೂಜೆ:
ಹಾಲಕ್ಕಿ ಸಮಾಜ
~

ಯಾಗ ಶಾಲೆ:

ಮಹಾ ಮೃತ್ಯುಂಜಯ ಹೋಮ :  ಶ್ರೀ ಕೆ,ಪಿ ಅಮ್ಮನಕಲ್ಲು

~

ಧರ್ಮಸಭೆ:

ತಾಯಿಯಲ್ಲಿ ತನ್ನ ಮಗುವನ್ನು ಮುದ್ದು ಮಾಡುವ ತಾಯ್ತನದ ಜೊತೆಗೆ ತಿದ್ದುವ ತಾಯ್ತನವೂ ಇರಬೇಕು. ತಾಯಿ ಮಗನ ದೋಷದ ವಿಚಾರದಲ್ಲಿ ನಿಷ್ಕರುಣಿಯಾಗಬೇಕಾಗುತ್ತದೆ. ದಂಡನೆಯೂ ತಾಯ್ತನದ ಅಂಶಗಳಲ್ಲೊಂದು ಎಂದು ಶ್ರೀರಾಮಚಂದ್ರಾಪುರಮಠದ ರಾಘವೇಶ್ವರಭಾರತೀಸ್ವಾಮೀಜಿ ಹೇಳಿದರು.

ಗಿರಿನಗರದ ರಾಮಾಶ್ರಮದಲ್ಲಿ ನಡೆಯುತ್ತಿರುವ ಛಾತ್ರಚಾತುರ್ಮಾಸ್ಯದ ಧರ್ಮಸಭೆಯಲ್ಲಿ ಶ್ರೀಭಾರತೀಪ್ರಕಾಶನದ ವತಿಯಿಂದ ಪ್ರಕಟವಾದ ‘ಅಹಲ್ಯಾಬಾಯಿ ಹೋಳ್ಕರ್’ ಆಂಗ್ಲ ಕೃತಿಯ ಲೋಕಾರ್ಪಣ ಸಮಾರಂಭದಲ್ಲಿ ಅವರು ಆಶೀರ್ವಚನ ನೀಡಿದರು.

ದಂಡನೆ ಯಾವಾಗ, ಹೇಗೆ ಎಂಬ ಪರಿಜ್ಞಾನ ತಾಯಿಗಿರಬೇಕು. ಮಗುವಿನ ಜೀವನಕ್ಕೆ ಒಳಿತಾಗುವಂತೆ ದಂಡನೆ ಮಾಡಬೇಕಾಗುತ್ತದೆ. ಆಗ ಮಾತ್ರ ಅವನ ಜೀವನ ಚೆನ್ನಾಗುತ್ತದೆ ಎಂದು ನುಡಿದÀರು.

ಭಗವಂತನ ಅನುಗ್ರಹದಲ್ಲಿ ಎರಡು ಬಗೆ. ಒಂದು ಅನುಗ್ರಹವಾದರೆ, ಇನ್ನೊಂದು ನಿಗ್ರಹ. ಈ ನಿಗ್ರಹ ಕೂಡ ಬದುಕಿನ ಔನ್ನತ್ಯಕ್ಕೆ ಕಾರಣವಾಗುತ್ತದೆ. ಹಾಗಾಗಿ ನಿಗ್ರಹವೂ ಅನುಗ್ರಹವೇ. ಇಂತಹ ನಿಗ್ರಹದ ಮೂಲಕ ಮಗನಿಗೆ ಪಾಠ ಹೇಳಲು ಮುಂದಾದ, ತನ್ಮೂಲಕ ಇಡೀ ರಾಜ್ಯಕ್ಕೆ ಉತ್ತಮ ಸಂದೇಶ ಕೊಟ್ಟವಳು ಅಹಲ್ಯಾಬಾಯಿ ಹೋಳ್ಕರ್ ಎಂದು ಅಭಿಪ್ರಾಯಪಟ್ಟರು.

ಎಸ್‍ಎಸ್‍ಎಲ್‍ಸಿಯಲ್ಲಿ ರ್ಯಾಂಕ್ ಪಡೆದ ಗಣೇಶ ಕೃಷ್ಣ ಹೆಗಡೆ ಇವರಿಗೆ ಛಾತ್ರಪುರಸ್ಕಾರ ನೀಡಲಾಯಿತು. ಅಹಲ್ಯಾಬಾಯಿ ಹೋಳ್ಕರ್ ಹೊತ್ತಿಗೆಯ ಲೇಖಕಿ ಡಾ.ಸುವರ್ಣಿನೀ ರಾವ್ ಕೊಣಲೆ ಹಾಗೂ ಅನುವಾದ ಕೆ.ವೇಣುಗೋಪಾಲ್ ಮಾತನಾಡಿದರು. ಹಾಲಕ್ಕಿ ಸಮಾಜದವರು ಸೇವೆ ಸಮರ್ಪಿಸಿದರು.

ಶ್ರೀಮಠದ ಸಿಇಒ ಕೆ.ಜಿ ಭಟ್, ಪ್ರಕಾಶನದ ಕಾರ್ಯದರ್ಶಿ ವಿದ್ವಾನ್ ಜಗದೀಶ ಶರ್ಮಾ, ಸಾಹಿತಿ ಗಜಾನನ ಶರ್ಮಾ, ಡಾ.ರವಿಶಂಕರ್ ಪೆರವಾಜೆ, ಸವಾರಿ ವ್ಯವಸ್ಥಾಪಕ ರಾಘವೇಂದ್ರ ಮಧ್ಯಸ್ಥ, ಶಾನುಬೋಗ ಅರವಿಂದಶರ್ಮಾ, ವಿದ್ವಾನ್ ಶಿವರಾಮ ಅಗ್ನಿಹೋತ್ರಿ, ಶ್ರೀಮತಿ ಅಖೀಲಾ ಹೆಗಡೆ ಉಪಸ್ಥಿತರಿದ್ದರು. ಕುಮಾರಿ ಇಂದಿರಾ ಶ್ರದ್ಧಾ ನಿರೂಪಿಸಿದರು.

ಶ್ರೀಭಾರತೀಪ್ರಕಾಶನದಿಂದ ಅಹಲ್ಯಾಬಾಯಿ ಹೋಳ್ಕರ್ ಆಂಗ್ಲ ಕೃತಿ ಬಿಡುಗಡೆ
ದೊಡ್ಡ ಸಾಧನೆಗೈದ ಗಣೇಶ ಕೃಷ್ಣ ಹೆಗಡೆಗೆ ಛಾತ್ರಪುರಸ್ಕಾರ ಪ್ರದಾನ

English Summary:

Sri Sri expressed that a mother must be unemotional towards the mistakes of her child. Punishing is also a part of motherhood. But she must be knowing when and why to Punish. Punishment should be in such a way that it should make child’s life better. Even restraint is also a grace of God.  This helps to improve our way of life. By teaching to her son with the same kind of restraint, Ahalyabayi Holkar conveyed a great message to the society

VideoLink:Watch Video
Audio Link: Download

Chatra Puraskara to Ganesh Krishna Hegde

Chatra Puraskara to Ganesh Krishna Hegde

Ahalyabayi Holkar book launch

Ahalyabayi Holkar book launch

Sri Sri..

Sri Sri..

Facebook Comments