15-ಡಿಸೆಂಬರ್, 2013: ಕುಂಬಳೆ, ಕಾಸರಗೋಡು:
ಶ್ರೀರಾಮಚಂದ್ರಾಪುರಮಠದ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಸೇವಾಯೋಜನೆಯಲ್ಲೊಳಗೊಂಡ ಮಾತೃವಿಭಾಗದ ಮಾಸಿಕ ಸಭೆ ಹಾಗೂ ಕುಂಕುಮಾರ್ಚನೆಯು ಕುಂಬಳೆಯ ಡಾ|ಡಿ.ಪಿ.ಭಟ್ಟರ ಮನೆ “ಅಶ್ವಿನಿ”ಯಲ್ಲಿ ಜರುಗಿತು. ಲಲಿತಾಸಹಸ್ರನಾಮ ಪೂರ್ವಕ ಕುಂಕುಮಾರ್ಚನೆ, ಶ್ರೀರಾಮ ಭಜನೆ, ರಾಮನಾಮ ಸ್ಮರಣೆಗಳು  ನಡೆದ ಈ ಕಾರ್ಯಕ್ರಮದಲ್ಲಿ 25ಕ್ಕೂ ಹೆಚ್ಹು ಮಾತೆಯರು ಪಾಲ್ಗೊಂಡರು.

ಸಭಾಕಾರ್ಯಕ್ರಮದಲ್ಲಿ ಶ್ರೀಗಳವರ ಬಿಂದು-ಸಿಂಧು, ಮುಷ್ಟಿ ಭಿಕ್ಷೆ ಯೋಜನೆಗಳ ಬಗ್ಗೆ, ಸಮಾಜ-ಸುಕ್ಷೇಮದ ಬಗೆಗೆ ಮಾತೃವಿಭಾಗದ ವಲಯ ಅಧ್ಯಕ್ಷೆ ಶ್ರೀಮತಿ ಪದ್ಮಾವತಿ ಡಿ.ಪಿ.ಭಟ್  ಮಾತನಾಡಿದರು.
ಅದಲ್ಲದೆ, ಡಿಸೆಂಬರ್ 25 ರಿಂದ ಐದು ದಿನಗಳ ಕಾಲ ಪುತ್ತೂರು ಕಾಂಚನದಲ್ಲಿ ಪರಮಪೂಜ್ಯ ಶ್ರೀಶ್ರೀರಾಘವೇಶ್ವರ ಭಾರತಿಯವರಿಂದ ನೆರವೇರಲ್ಪಡುವ ಮಕ್ಕಳಿಗಾಗಿ ಸಮರ ಸನ್ನಾಹ – ಮಕ್ಕಳಿಗಾಗಿ ರಾಮಕಥೆ – ಕಾರ್ಯಕ್ರಮದ ಆಮಂತ್ರಣವನ್ನು ಎಲ್ಲರಿಗೂ ವಿತರಿಸಿದರು.

ಕಾರ್ಯಕ್ರಮದಲ್ಲಿ ನಿವೃತ್ತ ಅಧ್ಯಾಪಕ ಕೋಡಿಮೂಲೆ ಮಹಾಲಿಂಗಭಟ್, ಕೋಂಗೋಟ್ ಗಣಪತಿಭಟ್, ಡಾ||ಡಿ.ಪಿ.ಭಟ್, ಮೊದಲಾದ ಮಹನೀಯರು ಉಪಸ್ಥಿತರಿದ್ದರು.
ರಾಮಮಂಗಲದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.

ವರದಿ: ವಿಜಯಾ ಸುಬ್ರಹ್ಮಣ್ಯ, ಕುಂಬಳೆ.
(Ph:೦8547214125)

ಫೋಟೋ: ಶಿವಕುಮಾರಿ, ಕುಂಚಿನಡ್ಕ

ಫೋಟೋ: ಶಿವಕುಮಾರಿ, ಕುಂಚಿನಡ್ಕ

Facebook Comments