ಇಂದಿನ ಆಶೀರ್ವಚನ
~
ಮತ್ತದೇ ಪ್ರಶ್ನೆ : ನಾನೇಕೆ ಹೀಗೆ?

ದೇವರು ನಿನಗೆ ಕೊಟ್ಟಿದ್ದು ನಿನಗಾಗಿ ಅಲ್ಲ, ಅದು ಉಳಿದವರಿಗಾಗಿ..

ಏನು ಹೇಳುತ್ತೇವೆಯೋ ಅದನ್ನು ಆದಷ್ಟು ಸಕಾರಾತ್ಮಕವಾಗಿ ಹೇಳಬೇಕು..
ನಾವು ಆಡುವ ಮಾತು ನಮ್ಮ ಸಂಪತ್ತಿಗೂ ಕಾರಣವಾಗಬಹುದು, ನಮ್ಮ ಆಪತ್ತಿಗೂ ಕಾರಣವಾಗಬಹುದು. ನಮ್ಮನ್ನು ನಾವೆ ಹೇಗೆ ಅಭಿವ್ಯಕ್ತಪಡಿಸಿಕೊಳ್ಳುತ್ತೇವೆ ಎನ್ನುವುದು ತುಂಬ ಮುಖ್ಯ.

ನನ್ನ ಅಭಿಪ್ರಾಯ ಸರಿ ಇದೆಯಾ, ಸತ್ಯ ಇದೆಯಾ ಅಂತ ನಮ್ಮಷ್ಟಕ್ಕೇ ನಾವೇ ಖಾತ್ರಿ ಪಡಿಸಿಕೊಳ್ಳಬೇಕು.

ಹೇಳಬೇಕಾದ್ದನ್ನು ನಾವೇ ಹೇಳಬೇಕಾ ಎಂಬ ಪ್ರಶ್ನೆ. ನಾವು ಹೇಳುವ ಸ್ಥಾನದಲ್ಲಿ ಇದ್ದೇವಾ ಎಂದು ಯೋಚಿಸಬೇಕು…

ನಾವೇ ಹೇಳಬೇಕು ಅಂತಾದರೆ ಈಗಲೇ ಹೇಳಬೇಕಾ ಎಂಬ ಪ್ರಶ್ನೆ?? ಪರಿಸ್ಥಿತಿ ನೋಡಿ ಹೇಳಬೇಕು.. ವಾತಾವರಣ ಬಿಸಿ ಇದ್ದಾಗ ಹೇಳಿದರೆ ದುಷ್ಪರಿಣಾಮ ಉಂಟಾಗಬಹುದು..

ಈಗಲೇ ಹೇಳಬೇಕು ಅಂತಾದರೆ ಹೀಗೆ ಹೇಳಬೇಕಾ ಎಂಬ ಪ್ರಶ್ನೆ, ನೇರವಾಗಿ ಹೇಳಬೇಕಾ? ಸ್ವಲ್ಪ ನಯವಾಗಿ ಹೇಳಬಹುದಾ?

ನಾವು ಹೇಗೆ ಹೇಳುತ್ತೇವೆ ಎನ್ನುವುದರ ಮೇಲೆ ಕೇಳಿಸಿಕೊಳ್ಳುವವರ ಸ್ಪಂದನೆ ಅವಲಂಬಿತವಾಗಿರುತ್ತದೆ.

ಹೇಳುವ ಮಾತನ್ನೇ ಸಕಾರಾತ್ಮಕವಾಗಿ ಹೇಳಬೇಕು, ಹೇಗೆ ಹೇಳಿದರೆ ಮನಸ್ಸಿಗೆ ಹಿತವನ್ನುಂಟು ಮಾಡಬಹುದೋ ಹಾಗೆ ಹೇಳಬೇಕು..

ಸತ್ಯ ಹೇಳಬೇಕು ಎಂದು ಶಾಸ್ತ್ರ ಹೇಳುತ್ತದೆ, ಆದರೆ ನೋವಾಗವುಂತೆ ಹೇಳು ಅಂತ ಶಾಸ್ತ್ರ ಹೇಳುವುದಿಲ್ಲ…

ಪ್ರಿಯವಾಗುವಂತೆ ಸತ್ಯವನ್ನು ಹೇಳು ಎಂದು ಶಾಸ್ತ್ರಗಳು ಹೇಳಿವೆ.
ಅಪ್ರಿಯವಾಗಿ ಹೇಳಿದಾಗ ಮುಂದಾಗುವ ಪರಿಣಾಮಕ್ಕೆ ಸಿಧ್ದರಿರಬೇಕು..

ನಾನು ಕೇಳುವ ಸ್ಥಾನದಲ್ಲಿ ನನಗೆ ಹೇಗೆ ಅನಿಸುತ್ತದೆ ಎಂದು ಆಲೋಚಿಸಿ ಮಾತನ್ನು ಹೇಳಬೇಕು..

ನಮ್ಮ ಸುತ್ತಲೂ ಇರುವವರಿಗೆ ಸಂತೋಷವಾಗುವಂತೆ ನಮ್ಮನ್ನು ನಾವು ಅಭಿವ್ಯಕ್ತಿಸಿಕೊಂಡರೆ ಸಮಾಜದಲ್ಲಿ ನಾವು ಒಂದಾಗಿ ಬಾಳಬಹುದು..

ನಿಸ್ವಾರ್ಥವಾಗಿ, ಬೇರೆಯವರಿಗೋಸ್ಕರ ಬದುಕಬೇಕು..
ನಿನಗೆ ಏನು ಬಂದಿದೆಯೋ ಅದನ್ನು ಇನ್ನೊಬ್ಬರಿಗೆ ಕೊಡದೆ ಉಪಯೋಗಿಸಿದರೆ ನೀನು ಕಳ್ಳ ಎಂದು ಗೀತೆ ಹೇಳುತ್ತದೆ..

ನಿಮ್ಮ ಬಳಿ ಇರುವ ವಸ್ತುವನ್ನು ಇನ್ನೊಬ್ಬರೊಂದಿಗೆ ಹಂಚಿಕೊಂಡರೆ ಆನಂದ ಇಮ್ಮಡಿಯಾಗುತ್ತದೆ.

ನಾವು ಯಾರಿಗಾದರೂ ಒಳ್ಳೇ ಮಾಡಿದರೆ, ಬೇರೆಯವರು ನಮಗೆ ಒಳ್ಳೇದು ಮಾಡುತ್ತಾರೆ..
ನಮ್ಮ ವಾತಾವರಣವನ್ನು ಒಳಿತು ಮಾಡಿಕೊಳ್ಳುವುದು ನಮ್ಮ ಕೈಯಲ್ಲಿದೆ.

ನಮ್ಮಲ್ಲಿರುವ ಬೇಡದ್ದನ್ನು ಹೊರಹಾಕ್ತಾ ಇದ್ರೆ ವಾತಾವರಣ ಹಾಳಾಗುತ್ತದೆ.. ಅದರ ಬದಲು ಪರಿಮಳ ಸೂಸಿದರೆ ವಾತಾವರಣ ಆಹ್ಲಾದಕರವಾಗಿರುತ್ತದೆ..
ಕೆಡುಕನ್ನು ನಮ್ಮೊಳಗೆ ಜೀರ್ಣಿಸಿಕೊಳ್ಳಬೇಕು..

ಇಂದಿನ ಸಂದೇಶ:
ನಿನ್ನಲ್ಲಿರುವ ಸಂಪತ್ತನ್ನು ಬೇರೆಯವರಿಗೆ ಹಂಚು..

ನಿನ್ನ ಸುತ್ತಮುತ್ತಲಿನವರು ಸಂತೋಷಗೊಳ್ಳುವ ರೀತಿಯಲ್ಲಿ ನಿನ್ನನ್ನು ನೀನು ಅಭಿವ್ಯಕ್ತಗೊಳಿಸು.. SRI_1664

SRI_1669

SRI_1671

Health card from Mahamandala in Assosciation with IISHA DIAGNOSTICS

Health card from Mahamandala in Assosciation with IISHA DIAGNOSTICS

SRI_1686

Audio:

Download: Link

Video:

Facebook Comments Box