ಶ್ರೀ ರಾಮಾಶ್ರಮ, ಬೆಂಗಳೂರು 22/09/2015

ಬೆಳಗ್ಗೆ:

ಶ್ರೀಕರಾರ್ಚಿತ ಶ್ರೀದೇವರುಗಳ ಪೂಜೆ ಸಂಪನ್ನವಾಯಿತು.
~
ಭಜನೆ:
ಸಾಮೂಹಿಕ ಕುಂಕುಮಾರ್ಚನೆ ಹಾಗೂ ಹನುಮಾನ ಚಾಲೀಸ್ ಪಠಣ.
~
ಛಾತ್ರಪುರಸ್ಕಾರ : ಅತ್ಯುನ್ನತ ಸಾಧನೆ ಮಾಡಿದ ನಿಶಾಂತ ಶಾಸ್ತ್ರಿ

~
ಲೋಕಾರ್ಪಣೆ: : ಭಾರತೀಪ್ರಕಾಶನ ಹೊರತಂದಿರುವ ಕಥಾಸರಿತ್ಸಾಗರ ಪುಸ್ತಕ ಬಿಡುಗಡೆಗೊಂಡಿತು
~
ಸರ್ವಸೇವೆ : ಉಪ್ಪಿನಂಗಡಿ ಮಂಡಲದ ಕಬಕ, ಮಾಣಿ, ಪುತ್ತೂರು ವಲಯಗಳಿಂದ ಸರ್ವ ಸೇವೆ ನಡೆಯಿತು.
~
ಉಪಸ್ಥಿತಿ :ಛಾತ್ರಚಾತುರ್ಮಾಸ್ಯ ಸಮಿತಿ ಅಧ್ಯಕ್ಷ ಯು.ಎಸ್.ಜಿ ಭಟ್, ಮಹಾಮಂಡಲದ ಅಧ್ಯಕ್ಷ ವೈ.ವಿ ಕೃಷ್ಣಮೂರ್ತಿ, ಹಾರೆಕೆರೆ ನಾರಾಯಣ ಭಟ್, ಮಾತೃ ಪ್ರಧಾನೆ ಈಶ್ವರೀ ಬೇರ್ಕಡವು, ಸಿಇಒ ಕೆ.ಜಿ ಭಟ್
~
ನಿರೂಪಣೆ : ಚೈತ್ರಾ ಬೈಪದವು ಹಾಗೂ ವಿನೀತ ನಾರಾಯಣ್
~
ಆಶೀರ್ವಚನ
ಇಂದಿನ ಆಶೀರ್ವಚನ
~
ಮತ್ತದೇ ಪ್ರಶ್ನೆ : ನಾನೇಕೆ ಹೀಗೆ??

ತನಗೇ ಇಲ್ಲದ್ದನ್ನು ಬೇರೆಯವರಿಗೆ ಹಂಚಲಿಕ್ಕೆ ತುಂಬ ಯೋಗ್ಯತೆ ಬೇಕು. ಅದು ಯಾಕಾಗಿ ಅಂದರೆ ತನ್ನ ಜೊತೆಗಿರುವವರ ಬದುಕನ್ನು ಹಸುನಾಗಿಸಬೇಕು, ಮನಸ್ಸಿನ್ನಲ್ಲಿ ಉಲ್ಲಾಸ ಉಂಟುಮಾಡಬೇಕು.

ಎದುರಿಗಿರುವವರ ಸಂತೋಷಕ್ಕಾಗಿ ತನ್ನಲ್ಲಿ ಇಲ್ಲದ ಸಂತೋಷ,ದುಃಖವನ್ನು ರಂಗದ ಮೇಲೆ ಕೊಡುತ್ತಿರುತ್ತಾನೆ ಕಲಾವಿದ.

ನಮ್ಮಲ್ಲಿ ಇಲ್ಲದಿರುವುದನ್ನು ಬೇರೆಯವರಿಗೆ ಕೊಟ್ಟರೆ ಅದರಿಂದಾಗುವ ಆನಂದವೇ ಬೇರೆ..

ಇರುವುದನ್ನೂ ಹಂಚು, ಇಲ್ಲದಿರುವುದನ್ನು ಹಂಚು..ಬದುಕನ್ನು ಸಾರ್ಥಕ ಪಡಿಸಿಕೊ..
ಕಟ್ಟಿಟ್ಟ ಕೂಡಿಟ್ಟ ಸಂಪತ್ತು ಬೆಳೆಯುವುದಿಲ್ಲ… ಒಳ್ಳೆಯ ಕೆಲಸಕ್ಕೆ ಬಳಸಿದ ಸಂಪತ್ತು ವೃದ್ಧಿಯಾಗುತ್ತದೆ.

ಬಾವಿಯ ನೀರನ್ನು ಉಪಯೋಗಿಸ್ತಾ ಇರಬೇಕು… ನೀರನ್ನು ಉಪಯೋಗಿಸಿಲ್ಲ ಅಂದ ಮಾತ್ರಕ್ಕೆ ಬಾವಿಯ ನೀರಿನ ಪ್ರಮಾಣ ಜಾಸ್ತಿ ಆಗುವುದಿಲ್ಲ..
ಬದಲಿಗೆ ಒಂದು ಕೊಡ ನೀರು ಖರ್ಚು ಮಾಡಿದರೆ ಬಾವಿಯಲ್ಲಿ ಒಂದು ಕೊಡ ನೀರು ಉತ್ಪತ್ತಿಯಾಗುತ್ತದೆ.

ನಾನೇಕೆ ಹೀಗೆ ಅಂದರೆ ನಮ್ಮಲ್ಲಿರುವುದನ್ನು ಒಳ್ಳೇಯ ಕೆಲಸಕ್ಕೆ ವಿನಿಯೋಗಿಸಿದೇ ಇರುವುದು..

ಒಣಗಿದ ಎಲೆ ಕೆಳಗೆ ಬಿದ್ದರೆ ಮಾತ್ರ ಹೊಸ ಚಿಗುರು ಬರಲು ಸಾಧ್ಯ..
ನಮ್ಮಲ್ಲಿರುವ ಜ್ಞಾನವನ್ನು ಇನ್ನೊಬ್ಬರಿಗೆ ಹಂಚಿದರೆ ಇಬ್ಬರಿಗೂ ಜ್ಞಾನವೃದ್ಧಿ.. ಜೀವನದಲ್ಲಿ ಇರುವ ಸಂಪತ್ತು ವಿನಿಯೋಗವಾಗಲಿ, ಜೀವನದಲ್ಲಿ ಒಳ್ಳೇಯ ಹರಿವು ಇರಲಿ..

Photos:


Audio:

Download: Link

Video:

Facebook Comments