ಪೆರಾಜೆ-ಮಾಣಿ ಮಠಃ 23.7.2013 ಮಂಗಳವಾರ

ಶ್ರೀಗುರುಗಳು ಚಾತುರ್ಮಾಸ್ಯದ ವ್ರತ ಸ್ವೀಕಾರ ಮಾಡಿದ ಮರುದಿನ ಶ್ರೀಪರಿವಾರದ ದಿನ. ಶ್ರೀಪರಿವಾರದ ಬಂಧುಗಳು ತಮ್ಮ ನಿತ್ಯಸೇವೆಯ ಜೊತೆಗೆ ಶ್ರೀಗುರುಗಳ ವಿಶೇಷ ಸೇವೆಯಲ್ಲಿ ಭಾಗಿಗಳಾಗುವ ದಿನ. ಈ ದಿನದ ಕಾರ್ಯಕ್ರಮದಲ್ಲಿ ಗುರುಸೇವಾ ಧುರಂಧರ ವೇದಮೂರ್ತಿ ಉಂಚಗೇರಿ ಸುಬ್ರಹ್ಮಣ್ಯ ಶಿವರಾಮಶಾಸ್ತ್ರಿ ದಂಪತಿಗಳನ್ನು ಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳವರು ಸನ್ಮಾನಿಸಿದರು.

ಈ ಕಾರ್ಯಕ್ರಮದಲ್ಲಿ ಹಟ್ಟಿಯಂಗಡಿ ಶ್ರೀಸಿದ್ಧಿವಿನಾಯಕ ದೇವಸ್ಥಾನದ ಧರ್ಮದರ್ಶಿ ವೇ.ಮೂ. ರಾಮಚಂದ್ರ ಭಟ್ ಹಟ್ಟಿಯಂಗಡಿ, ಶ್ರೀಪರಿವಾರದ ಎಲ್ಲಾ ಸದಸ್ಯರುಗಳು, ಅವರ ಕುಟುಂಬದವರು, ಶ್ರೀಪೀಠದ ಶಿಷ್ಯರು ಭಾಗವಹಿಸಿದ್ದರು.

ಯಾಗಶಾಲೆಯಿಂದಃ
ಆಂಜನೇಯ ಹವನ, ಆಂಜನೇಯನಿಗೆ ಸೀಯಾಳಾಭಿಷೇಕ,  ಗೋತುಲಾಭಾರ, ಗೋಪೂಜೆ, ಶ್ರೀರಾಮಪೂಜೆ, ರಾಮ ತಾರಕ ಯಜ್ಞ, ಸ್ವಯಂವರಪಾರ್ವತಿ ಪೂಜೆಗಳು ನಡೆದವು.

ಸಾಂಸ್ಕೃತಿಕ ಕಾರ್ಯಕ್ರಮಃ
ಶ್ರೀಮತಿ ಅಶ್ವಿನಿ ಪಿ ಆರ್ ರವರಿಂದ ಕರ್ನಾಟಕ ಸಂಗೀತ ಕಾರ್ಯಕ್ರಮ ನಡೆಯಿತು. ವಯಲಿನ್ ನಲ್ಲಿ ಶ್ರೀ ಬಾಲರಾಜ್ ಕಾಸರಗೋಡು ಮತ್ತು ಮೃದಂಗದಲ್ಲಿ ಶ್ರೀ ಮುರಳೀಕೃಷ್ಣ ಕುಕ್ಕಿಲ ಸಹಕರಿಸಿದ್ದರು.

~

ಸಂಧ್ಯಾಕಾರ್ಯಕ್ರಮ:
ಉಪನೀತರಾದವರು ಸಾಯಂಸಂಧ್ಯೆಯಲ್ಲಿ  ಸಂಧ್ಯಾವಂದನೆಯನ್ನು ಹಾಗೂ ಮಾತೆಯರು ಶ್ರೀರಾಮತಾರಕ ಮಂತ್ರಜಪ ಮಾಡಿದರು. ಶ್ರೀಕರಾರ್ಚಿತ ರಾಮಾದಿ ದೇವರುಗಳ ಪೂಜೆಯ ಬಳಿಕ ಮಹಿಳೆಯರಿಂದ ಭಜನೆ ನಡೆಯಿತು.

~*~

ವಿಜಯ ಚಾತುರ್ಮಾಸ್ಯದ ಅಂಗವಾಗಿ ಶ್ರೀಗುರುಪರಿವಾರದವರಿಂದ ನಡೆದ ಶ್ರೀಗುರುಭಿಕ್ಷಾ ಸೇವೆಯ ಕೆಲವು ಫೋಟೋಗಳು

Facebook Comments Box