ಗೋವು ಪ್ರೀತಿಯಿಂದ ಕೊಡುವ ವಸ್ತುಗಳನ್ನು ಬಳಸಿ, ಗೋಹತ್ಯೆಯಿಂದ ಸಿಗುವ ವಸ್ತುಗಳನ್ನು ತ್ಯಜಿಸಿ
ಶ್ರೀಶ್ರೀರಾಘವೇಶ್ವರಭಾರತೀ ಸ್ವಾಮಿಗಳ ಚಾತುರ್ಮಾಸ್ಯ ಸಂದೇಶ

ಬೆಂಗಳೂರು : ನಮ್ಮ ನಗುವಿನ ಹಿಂದೆ ಬೇರೆಯವರ ಅಳುವಿರಬಾರದು, ಬದುಕುವ ಹಕ್ಕು ಮನುಷ್ಯನಿಗೆ ಮಾತ್ರವಲ್ಲ, ಪ್ರಾಣಿಗಳಿಗೂ ಇದೆ. ಗೋವು ಪ್ರೀತಿಯಿಂದ ಕೊಡುವ ವಸ್ತುಗಳನ್ನು ಬಳಸಿ, ಗೋವಿನ ನೋವಿನಿಂದ, ಗೋಹತ್ಯೆಯಿಂದ ಸಿಗುವ ವಸ್ತುಗಳನ್ನು ತ್ಯಜಿಸಿ ಎಂದು ಶ್ರೀರಾಮಚಂದ್ರಾಪುರಮಠದ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಹೇಳಿದರು.
ಶ್ರೀರಾಮಚಂದ್ರಾಪುರಮಠದ ಬೆಂಗಳೂರಿನ ಶಾಖಾಮಠದಲ್ಲಿ ನಡೆಯುತ್ತಿರುವ ಗೋಚಾತುರ್ಮಾಸ್ಯದ ಗೋಸಂದೇಶ ಸಭೆಯಲ್ಲಿ ಸಾನ್ನಿಧ್ಯವಹಿಸಿ ಗೋಹತ್ಯೆಯಲ್ಲಿ ನಮ್ಮ ಪಾಲೆಷ್ಟು? ಗೊತ್ತಿದ್ದೋ ಗೊತ್ತಿಲ್ಲದೆಯೋ ದೇಶದಲ್ಲಿ ನಡೆಯುವ ಗೋಹತ್ಯೆಯನ್ನು ನಾವು ಪ್ರೋತ್ಸಾಹಿಸುತ್ತಿದ್ದೇವೆಯೇ? ಎಂಬ ವಿಷಯದ ಕುರಿತು ಮಾತನಾಡಿದ ಶ್ರೀಗಳು, ಗೋವಿನ ಚರ್ಮ, ಕೊಬ್ಬು,ರಕ್ತ, ಮೂಳೆಗಳನ್ನು ಬಳಸಿದರೂ ಪ್ರತ್ಯಕ್ಷವಾಗಿ ಅಲ್ಲದಿದ್ದರೂ ಪರೋಕ್ಷವಾಗಿ ಗೋಹತ್ಯೆಯನ್ನು ಬೆಂಬಲಿಸಿದಂತಾಗುತ್ತದೆ. ಗೋಹತ್ಯೆಗೆ ಕಾರಣವಾಗುವ ವಸ್ತುಗಳನ್ನು ಬಳಸಿದರೆ ಗೋಹತ್ಯೆಯ ಪಾಪ ಆ ವಸ್ತುಗಳನ್ನು ಬಳಸಿದವರಿಗೂ ಬರುತ್ತದೆ ಎಂದು ಹೇಳಿದರು.

ಗೋವಿನ ಕೊಬ್ಬನ್ನು ಸವರಿದ ಗುಂಡುಗಳನ್ನು ವಿರೋಧಿಸಿ ಅಂದು ಸ್ವಾತಂತ್ರ ಸಂಗ್ರಾಮ ಆರಂಭವಾಯಿತು. ಗೋವಿನ ಕೊಬ್ಬಿರುವ ಗುಂಡನ್ನು ಬಾಯಲ್ಲಿ ಕಚ್ಚಲಾರೆ ಎಂದು ಧೀರೋದಾತ್ತವಾಗಿ ಪ್ರಾಣಾರ್ಪಣೆ ಮಾಡಿದ ಮಂಗಲಪಾಂಡೆಯಂತವರು ಜನಿಸಿದ ನಮ್ಮದೇಶದಲ್ಲಿ ಇಂದು ನಾವೇನನ್ನು ಮಾಡುತ್ತಿದ್ದೇವೆ ಎಂದು ಪ್ರಶ್ನಿಸಿದ ಶ್ರೀಗಳು, ಗೋವಿನ ಚರ್ಮದಿಂದ ಮಾಡಿದ ಚೀಲ,ಶೂ,ಪರ್ಸ್,ಬೆಲ್ಟುಗಳು, ಗೊವಿನ ಕೊಬ್ಬನ್ನು ಬಳಸಿರುವ ಬೇಕರಿ ಪದಾರ್ಥಗಳು, ಸೊಪು, ಲಿಫ್ಟಿಕ್ ಮುಂತಾದ ಸೌಂದರ್ಯವರ್ಧಕಗಳು ಮುಂತಾದವುಗಳನ್ನು ತ್ಯಜಿಸಲು ಕರೆನೀಡಿದರು.
ಶ್ರೀರಾಮಕೃಷ್ಣಾಶ್ರಮದ ಪೂಜ್ಯ ಸ್ವಾತ್ಮಾರಾಮಾನಂದಜಿ ಸಂತಸಂದೇಶ ನೀಡಿ, ಗೋವಿನ ಕುರಿತಾಗಿ ರಾಮಕೃಷ್ಣಪರಮಹಂಸರ ಮಾತುಗಳನ್ನು ಹಂಚಿಕೊಂಡು, ಗೋವನ್ನು ಕಡಿದು ತಿಂದರೆ ತಾಯಿಯನ್ನು ತಿಂದ ಹಾಗಾಗುವುದಿಲ್ಲವೆ ಎಂದು ಪ್ರಶ್ನಿಸಿದರು. ಗೋಸಂರಕ್ಷಣೆಯಲ್ಲಿ ಶ್ರೀರಾಮಚಂದ್ರಾಪುರ ಮಠದ ಕಾರ್ಯ ಶ್ಲಾಘನೀಯ, ಎಲ್ಲರೂ ಸೇರಿ ಗೋವನ್ನು ರಕ್ಷಿಸೋಣ ಎಂದರು.

ಗೋಸೇವೆಯಲ್ಲಿ ತೊಡಗಿಸಿಕೊಂಡಿರುವ ಪ್ರಯಾಗದ ಕಮಲನಾಥ ತ್ರಿಪಾಠಿ ಹಾಗೂ ಕೃಷ್ಣಮೂರ್ತಿ ಅವರುಗಳಿಗೆ ಪೂಜ್ಯ ಶ್ರೀಗಳು ಗೋಸೇವಾ ಪುರಸ್ಕಾರವನ್ನು ಅನುಗ್ರಹಿಸಿದರು. ಶ್ರೀಭಾರತೀಪ್ರಕಾಶನವು ಹೊರತಂದ ಕೈಲಾಸ ಯಂತ್ರ ಪುಸ್ತಕವನ್ನು ರಾಘವೇಶ್ವರ ಶ್ರೀಗಳು ಹಾಗೂ ಸಾಧನಾಪಂಚಕ ಪ್ರವಚನಮಾಲಿಕೆಯ ದೃಶ್ಯ ಮುದ್ರಿಕೆಯನ್ನು ಪೂಜ್ಯ ಸ್ವಾತ್ಮಾರಾಮಾನಂದಜಿ ಲೋಕಾರ್ಪಣೆ ಮಾಡಿದರು. ವೃತ್ತಿಪರರಿಗೆ ವಿಶೇಷಕಾರ್ಯಾಗಾರವನ್ನು ಹಂಬಿಕೊಳ್ಳಲಾಗಿತ್ತು, ವಿವಿಧ ವೃತ್ತಿಯ, ನಾನಾ ಕಂಪನಿಗಳ ನೂರಾರು ವೃತ್ತಿನಿರತರು, ಸ್ವ ಉದ್ಯೋಗಿಗಳು ಭಾಗವಹಿಸಿದ್ದರು. ಪಾದುಕಾ ಪೂಜೆ ನೆರವೇರಿಸಿದ ಭಂಡಾರಿ ಸಮಾಜದವರಿಗೆ ಶ್ರೀಗಳು ವ್ಯಾಸಮಂತ್ರಾಕ್ಷತೆಯನ್ನು ಅನುಗ್ರಹಿಸಿದರು. ಸಭಾಕಾರ್ಯಕ್ರಮದ ನಂತರ ಕಲಾರಾಮ ವೇದಿಕೆಯಲ್ಲಿ ಮನೋರಮಾ ಭಟ್ ಹಾಗು ಸಂಗಡಿಗರಿಂದ ಸಂಗೀತ ಕಾರ್ಯಕ್ರಮ ನಡೆಯಿತು.

ಗೋಸೇವಾಪುರಸ್ಕೃತರ ಜೊತೆ ಆಗಮಿಸಿದ ಪ್ರಯಾಗದ ಗೋಪ್ರೇಮಿಗಳು ಹಾಗೂ ಲೋಕಾರ್ಪಣೆಯಾದ ಪುಸ್ತಕದ ಲೇಖಕರಾದ ಹಿತ್ತಲಳ್ಳಿ ಸೂರ್ಯನಾರಾಯಣ ಭಟ್ ಶ್ರೀಗಳಿಂದ ಆಶೀರ್ವಾದ ಪಡೆದರು. ಶ್ರೀಮಠದ ಪದಾಧಿಕಾರಿಗಳು, ಭಂಡಾರಿ ಸಮಾಜದ ಪ್ರಮುಖರು, ವಿವಿಧ ಭಾಗಗಳ ಶಿಷ್ಯ ಭಕ್ತರು ಉಪಸ್ಥಿತರಿದ್ದರು. ಎಂದಿನಂತೆ ಶ್ರೀಕರಾರ್ಚಿತ ಪೂಜೆ, ಕಾಮಧೇನು ಹವನ, ಮಾತೆಯರಿಂದ ಕುಂಕುಮಾರ್ಚನೆ, ಆದಿತ್ಯಹೃದಯ ಪಠಣ, ಫಲಸಮರ್ಪಣೆ, ಮಂತ್ರಾಕ್ಷತೆ ಹಾಗೂ ಸಾಧನಾಪಂಚಕ ಪ್ರವಚನ ನಡೆಯಿತು.
ಗೋಹತ್ಯೆಯಲ್ಲಿ ನಮ್ಮ ಪಾಲೆಷ್ಟು? ಗೊತ್ತಿದ್ದೋ ಗೊತ್ತಿಲ್ಲದೆಯೋ ದೇಶದಲ್ಲಿ ನಡೆಯುವ ಗೋಹತ್ಯೆಯನ್ನು ನಾವು ಪ್ರೋತ್ಸಾಹಿಸುತ್ತಿದ್ದೇವೆಯೇ? ಗೋವಿನ ಚರ್ಮದಿಂದ ಮಾಡಿದ ಚೀಲ, ಶೂ, ಪರ್ಸ್, ಬೆಲ್ಟುಗಳು, ಗೊವಿನ ಕೊಬ್ಬನ್ನು ಬಳಸಿರುವ ಬೇಕರಿ ಪದಾರ್ಥಗಳು, ಸೊಪು, ಲಿಫ್ಟಿಕ್ ಮುಂತಾದ ಸೌಂದರ್ಯವರ್ಧಕಗಳು ಇತ್ಯಾದಿಗಳನ್ನು ತ್ಯಜಿಸಿ. – ಶ್ರೀಶ್ರೀರಾಘವೇಶ್ವರಭಾರತೀ ಸ್ವಾಮಿಗಳು, ಶ್ರೀರಾಮಚಂದ್ರಾಪುರಮಠ

• ಶ್ರೀರಾಮಕೃಷ್ಣಾಶ್ರಮದ ಪೂಜ್ಯ ಸ್ವಾತ್ಮಾರಾಮಾನಂದಜಿ ಉಪಸ್ಥಿತಿ.
• ಭಂಡಾರಿ ಸಮಾಜದವರಿಂದ ಪಾದುಕಾ ಪೂಜೆ ನೆರವೇರಿತು.
• ಪ್ರಯಾಗದ ಕಮಲನಾಥ ತ್ರಿಪಾಠಿ ಹಾಗೂ ಕೃಷ್ಣಮೂರ್ತಿ ಅವರುಗಳಿಗೆ ಗೋಸೇವಾಪುರಸ್ಕಾರ.

ಪಾದುಕಾ ಪೂಜೆ ನೆರವೇರಿಸಿದ ಭಂಡಾರಿ ಸಮಾಜದವರಿಗೆ ಶ್ರೀಗಳು ವ್ಯಾಸಮಂತ್ರಾಕ್ಷತೆಯನ್ನು ಅನುಗ್ರಹಿಸಿದರು.
ಗೋಸೇವೆಯಲ್ಲಿ ತೊಡಗಿಸಿಕೊಂಡಿರುವ ಪ್ರಯಾಗದ ಕಮಲನಾಥ ತ್ರಿಪಾಠಿ ಅವರಿಗೆ ಪೂಜ್ಯ ಶ್ರೀಗಳು ಗೋಸೇವಾ ಪುರಸ್ಕಾರವನ್ನು ಅನುಗ್ರಹಿಸಿದರು
ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಶ್ರೀರಾಮಕೃಷ್ಣಾಶ್ರಮದ ಪೂಜ್ಯ ಸ್ವಾತ್ಮಾರಾಮಾನಂದಜಿ ಅವರಿಗೆ ಸ್ಮರಣಿಕೆಯನ್ನು ನೀಡಿದರು.

28.08.2016 ರ ಕಾರ್ಯಕ್ರಮ:

  • ಬೆಳಗ್ಗೆ 7.00 : ಕಾಮಧೇನು ಹವನ
  • ಬೆಳಗ್ಗೆ 9.00: ಕುಂಕುಮಾರ್ಚನೆ
  • ಬೆಳಗ್ಗೆ 10.00 : ಶ್ರೀಕರಾರ್ಚಿತದೇವತಾಪೂಜೆ
  • ಬೆಳಗ್ಗೆ 11.30 : ಆದಿತ್ಯಹೃದಯ ಪಠಣ
  • ಮದ್ಯಾಹ್ನ 12.00 : ಫಲಸಮರ್ಪಣೆ, ಮಂತ್ರಾಕ್ಷತೆ ಅನುಗ್ರಹ
  • ಅಪರಾಹ್ನ 3.00-6.00 : ಗೋಕಥಾ
  • ಸೂರ್ಯಾಸ್ತ ಸಮಯಕ್ಕೆ ಶ್ರೀಕರಾರ್ಚಿತದೇವತಾಪೂಜೆ
  • ರಾತ್ರಿ 8.00 : ಶ್ರೀಸಂಸ್ಥಾನದವರಿಂದ ‘ಸಾಧನಾಪಂಚಕ’ ಪ್ರವಚನ
Facebook Comments