ಸಹನೆ ಎಂದರೆ ದೌರ್ಬಲ್ಯವಲ್ಲ,ಅದು ಒಂದು ಸಾಮರ್ಥ್ಯ – ಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳು
ಸಹನೆ ಎಂದರೆ ದೌರ್ಬಲ್ಯವಲ್ಲ, ಸಹನೆ ಅಂದರೆ ಕ್ಷಮತೆ ಎಂಬ ಅರ್ಥ ಇದೆ. ಅದು ಒಂದು ಸಾಮರ್ಥ್ಯ ಎಂದು ಶ್ರೀರಾಮಚಂದ್ರಾಪುರಮಠದ ಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಹೇಳಿದರು.
ಗಿರಿನಗರದ ಶ್ರೀರಾಮಾಶ್ರಮದಲ್ಲಿ ನೆಡೆಯುತ್ತಿರುವ ಛಾತ್ರಚಾತುರ್ಮಾಸ್ಯದ ಧರ್ಮಸಭೆಯಲ್ಲಿ ಇಂದು ವಿಜ್ನಾನ ಕ್ಷೇತ್ರದಲ್ಲಿ ರಾಷ್ಟೀಯಮಟ್ಟದ ಸಾಧನೆ ಮಾಡಿದ ಮಹೇಶ್ ಕೆ ಇವರಿಗೆ ಛಾತ್ರಪುರಸ್ಕಾರನೀಡಿ ಮಾತನಾಡಿದ ಶ್ರೀಗಳು, ರಾಮನೊಳಗಿನ ರಾಮತ್ವ ಹೊರಗೆ ಬರಲು ಅವನಿಗೆ ಬಂದ ಕಷ್ಟಗಳೇ ಕಾರಣ, ಮಹಾನ್ ವ್ಯಕ್ತಿಗಳಿಗೆ ಕಷ್ಟಗಳು ಬಂದರೆ ಅಂತ್ಯದಲ್ಲಿ ಲೋಕಕ್ಕೆ ಮಂಗಲವಾಗುತ್ತದೆ. ಅವರು ಅಗ್ನಿಪರೀಕ್ಷೆಗಳನ್ನು ಎದುರಿಸಿ ಯಶಸ್ಸನ್ನುಗಳಿಸಿದ್ದರಿಂದಲೇ ಅವರಿಗೆ ಮಹಾತ್ಮರು ಎಂಬ ಹೆಸರು ಬಂದದ್ದು, ಜೀವನದಲ್ಲಿ ಬಂದಿದ್ದನ್ನು ಎದುರಿಸಲು ಕಲಿಯಬೇಕು, ಶ್ರೇಷ್ಟರಿಗೆ ಬಂದ ಕಷ್ಟಗಳು ಅವರನ್ನು ಇನ್ನೂ ಶ್ರೇಷ್ಠರನ್ನಾಗಿಸುತ್ತದೆ. ಬಂಗಾರಕ್ಕೆ ಶಾಖ ಕೊಟ್ಟಷ್ಟು ಅದು ಅಪರಂಜಿ ಆಗುತ್ತದೆ ಎಂದು ಅಭಿಪ್ರಾಯಪಟ್ಟರು.
ಉಪ್ಪಿನಂಗಡಿ ಮಂಡಲದ ಭಕ್ತರಿಂದ ಸರ್ವಸೇವೆ ನೆಡೆಯಿತು, ನಂತರ ಶ್ರೀಗಳ ದಿವ್ಯಸಾನ್ನಿಧ್ಯದಲ್ಲಿ ನೆಡೆದ ಸಭೆಯಲ್ಲಿ ಶ್ರೀಭಾರತೀ ಪ್ರಕಾಶನವು ಹೊರತಂದಿರುವ ಗರುಡ ಎಂಬ ಪುಸ್ತಕದ ಆಂಗ್ಲ ಆವೃತ್ತಿಯನ್ನು ಪುರಸ್ಕೃತ ವಿಧ್ಯಾರ್ಥಿ ಮಹೇಶ್ ಲೋಕಾರ್ಪಣಗೊಳಿಸಿದರು,
Leave a Reply