ಗೋ ಸಂರಕ್ಷಣೆ ಮತ್ತು ಗೋರಕ್ಷಕರ ವಿಚಾರ ಇಂದು ಸುದ್ದಿಯ ಕೇಂದ್ರಬಿಂದು. ಗೋರಕ್ಷಕರ ಹೆಸರಿನಲ್ಲಿ ದುಷ್ಕರ್ಮಿಗಳು ನಡೆಸುತ್ತಿರುವ ದುಷ್ಕ್ರತ್ಯಗಳಿಂದಾಗಿ ನೈಜ ಗೋರಕ್ಷಕರಿಗೆ ತೊಂದರೆಯಾಗುತ್ತಿದೆ. ಹೀಗಾಗಿ ಗೋಸಂರಕ್ಷಣೆ ಮತ್ತು ಗೋರಕ್ಷಕರ ವಿಚಾರದಲ್ಲಿ ಸೂಕ್ತ ನಿಯಮ ಕಾನೂನು ರಚನೆಯಾಗಬೇಕಾಗದ್ದು ಇಂದಿನ ಅವಶ್ಯ ಎನ್ನುತ್ತಾರೆ ಜಗದ್ಗುರು ಶಂಕರಾಚಾರ್ಯ ಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳು.

ಪ್ರಕಟಣೆ ಕೃಪೆ: ಗೋವಾಣಿ e-ವಾರಪತ್ರಿಕೆ ( www.gouvaani.in )

‘ಗೋ’ರಕ್ಷಕ-ಸಂರಕ್ಷಣೆಗೆ ಸೂಕ್ತ ನಿಯಮ-ಕಾನೂನು ಅವಶ್ಯ

1. ನಿಮ್ಮ ಚಿಂತನೆಯಲ್ಲಿ ನಿಜವಾದ ಗೋ ರಕ್ಷಕರೆಂದರೆ ಯಾರು?

ಸ್ವಂತ ಲಾಭಕ್ಕಾಗಿ ಅಲ್ಲದೇ, ಗೋಪ್ರೇಮಕ್ಕಾಗಿ – ಗೋವಿಗಾಗಿ ಗೋರಕ್ಷಣೆ ಮಾಡುವವರು ನಿಜವಾದ ಗೋರಕ್ಷಕರು.

2. ಪ್ರಾಣಿದಯೆ ಹಾಗೂ ಗೋರಕ್ಷಣೆ ಇವೆರಡೂ ಪಂಥೀಯ ವಾದವೇ?

ಪಂಥೀಯ ವಾದ ಅಂದರೆ ಎಡ ಪಂಥ – ಬಲ ಪಂಥ ಎಂದಾ ? ಅದೆಲ್ಲ ನಮಗೆ ಗೊತ್ತಿಲ್ಲ. ನಮಗೆ ಗೊತ್ತಿರುವುದು ಇಷ್ಟೆ ಗೋವು ಉಳಿಯಬೇಕು ಜೀವ ಹಿಂಸೆ ನಿಲ್ಲಬೇಕು. ಬೇರೆ ಪ್ರಾಣಿಗಳ ಮೇಲೆಯೂ ಕರುಣೆ ಇದೆ ನಮಗೆ. ಅದು ಕುರಿಯೋ ಕೋಳಿಯೋ ಇನ್ನೊಂದೋ ಯಾವ ಪ್ರಾಣಿಗೂ ಹಿಂಸೆ ಆಗಬೇಕೆಂದು ನಾವು ಬಯಸುವುದಿಲ್ಲ. ಆದರೆ ನಮ್ಮ ಬದುಕಿನ ದ್ಯೇಯ ನಾವು ಆಯ್ದುಕೊಂಡದ್ದು ಗೋರಕ್ಷಣೆಯನ್ನು. ನಮಗೆ ಹೃದಯಕ್ಕೆ ಹತ್ತಿರ ಇರತಕ್ಕದ್ದು ಅದು. ಹಾಗಾಗಿ ಇದು ಯಾವಾ ಪಂಥ, ಯಾವ ಸಿದ್ದಾಂತ ಶಾಸ್ತ್ರ ಎಲ್ಲಕ್ಕಿಂತ ಹೆಚ್ಚಾಗಿ ನಮಗೆ ಅತಿಷಯವಾದ ಪ್ರೀತಿ ಗೋವುಗಳ ಕುರಿತಾಗಿ ಇದೆ. ಮಹತ್ವ ಕೂಡಾ ಹಾಗೆನೇ ಗೋವುಗಳದ್ದು. ದೇಶಕ್ಕೆ ಬೇಕು ಪ್ರಪಂಚಕ್ಕೆ ಬೇಕು ಅವು ಹಾಗಾಗಿ ಅವುಗಳನ್ನು ಉಳಿಸಲಿಕ್ಕೆ ಹೋರಾಡುತ್ತೇವೆ.

 

3. ಗೋರಕ್ಷಕರಿಗಾಗಿ ಕಾನೂನಿನಲ್ಲಿ ನಿಯಮಾವಳಿಗಳನ್ನುಅಳವಡಿಸುವ ಅಗತ್ಯತೆ ಇದೆಯೇ?

ಅಗತ್ಯತೆ ಇದೆ. ಆದರೆ ಹೇಗೆ ಎಂದರೆ ಗೋರಕ್ಷಕರಿಗೆ ಸಹಾಯವಾಗುವ ಹಾಗೆ, ಗೋರಕ್ಷಣೆಗೆ ಸುಲಭ ಆಗುವ ಹಾಗೆ ನಿಯಮಾವಳಿ ರೂಪಿಸಲಿ. ಗೋರಕ್ಷಣೆಗೆ ಕಷ್ಟ ಆಗುವ ಹಾಗೇ ಅಥವಾ ಅವರಿಗೇ ಕಷ್ಟ ಆಗುವ ಹಾಗೆ ಅಲ್ಲ ಕಾನೂನು ರೂಪಿಸಬೇಕಾದುದು. ಅವರನ್ನು ಬೆಂಬಲಿಸಿ, ಅವರನ್ನು ಪೆÇ್ರೀತ್ಸಾಹಿಸಿ ಕಾನೂನು ಮಾಡಲಿ.

4. ಸಾಕಷ್ಟು ಯುವಜನರು ಗೋರಕ್ಷಕರಾಗಿ ಸೇವೆ ಮಾಡಬಯಸುತ್ತಿದ್ದು, ಅವರಿಗೆ ಏನು ಹೇಳಬಯಸುತ್ತೀರಿ?

ಯಾವುದಕ್ಕೂ ಜಗ್ಗದೆ, ಯಾವುದಕ್ಕೂ ಬಗ್ಗದೆ, ಯಾವ ಆಮಿಷಕ್ಕೂ ಒಳಗಾಗದೆ ಗೋರಕ್ಷೆಯ ಕಾರ್ಯದಲ್ಲಿ ಮುಂದುವರಿಯಿರಿ. ಭಯಕ್ಕೆ ಒಳಗಾಗಿ ಕೆಲವರು ಒಳ್ಳೆ ಕೆಲಸ ಮಾಡುವುದು ಬಿಟ್ಟು ಬಿಡುತ್ತಾರೆ. ಕೆಲವರು ಆಮಿಷಕ್ಕೆ ಒಳಗಾಗಿ ಏನಾದರೂ ಲಾಭವನ್ನುಪಡೆದುಕೊಂಡು ಇಂಥ ಒಳ್ಳೆ ಕಾರ್ಯದಿಂದ ನಿವೃತ್ತರಾಗುತ್ತಾರೆ. ಭಯ – ಆಮಿಷ ಎರಡನ್ನೂ ಮೀರಿ ಪ್ರಾಣವನ್ನು ಲೆಕ್ಕಿಸದೆ ಗೋವುಗಳಿಗೋಸ್ಕರ ಹೋರಾಡಿ ಮುನ್ನುಗ್ಗಿ.

5. ಗೋರಕ್ಷಕರ ಮೇಲೆ ದೈಹಿಕ / ಆರ್ಥಿಕ / ಕಾನೂನಾತ್ಮಕ ಪ್ರಹಾರಮಾಡಿ ಅವರನ್ನು ನಿರ್ವೀರ್ಯರನ್ನಾಗಿ ಮಾಡಲು ವ್ಯವಸ್ಥಿತವಾಗಿಪ್ರಯತ್ನಿಸುತ್ತಿರುವ ಹೊತ್ತಿನಲ್ಲಿ ಗೋ ರಕ್ಷಕರಿಗೆ ನಿಮ್ಮಸಂದೇಶವೇನು?

ಇಂತಹ ಪ್ರಯತ್ನ ನಡೆಯುತ್ತಾ ಇದೆ. ಗೋರಕ್ಷಕರ ಮೇಲೆ ಎಲ್ಲಿಲ್ಲದ ಪ್ರಹಾರಎಲ್ಲ ಕೋನಗಳಿಂದ, ಎಲ್ಲ ಮೂಲೆಗಳಿಂದ ಆಗುತ್ತಾ ಇದೆ. ಇದು ತುಂಬ ದುಃಖದ ವಿಷಯ. ಈ ಪ್ರಹಾರ ಮಾಡೊಕೆ ಅವರು ಕೊಡೊ ಕಾರಣ ಅಂದರೆ ಗೋರಕ್ಷಕರು ಹಿಂಸೆ ಮಾಡುತ್ತಾರೆ ಹಾಗೆ, ಹೀಗೆ . ಆದರೆ ಗೋವುಗಳ ಮೇಲೆ ಆಗ್ತಿರೊ ಹಿಂಸೆನ ಅವರು ಗಮನಿಸೋದಿಲ್ಲ. ಹಾಗಾಗಿ ಗೋರಕ್ಷಕರಿಗೂ ತುಂಬಾ ಹಿಂಸೆಯಾಗುತ್ತಿದೆ. ಒಂದು ಕಡೆ ಗೋವುಗಳಿಗೆ ಕಲ್ಪನಾತೀತವಾದ ಹಿಂಸೆಯಾಗುತ್ತಿದೆ. ಗೋರಕ್ಷಕರಿಗೂ ಕೂಡ. ಕಟುಕರು ಸಾಮಾನ್ಯವಾಗಿ ಆಯುಧಗಳನ್ನು ಹಿಡಿದುಕೊಂಡಿರ್ತಾರೆ. ಯಾವುದಕ್ಕೂ ತಯಾರಿರ್ತಾರೆ. ಎಷ್ಟೋ ಸಲ ಗೋರಕ್ಷಕರು ಅನ್ನ, ಪ್ರಾಣಗಳನ್ನು ಕಳಕೊಳ್ತಾರೆ. ಮತ್ತೆ ಅವರ ಮೇಲೆ ಕೇಸು ಮತ್ತೊಂದೆಲ್ಲ ಆಗೋದರಿಂದ ಆರ್ಥಿಕವಾಗಿ ತುಂಬಾ ಹಿನ್ನಡೆಯಾಗ್ತದೆ. ಶ್ರೀಮಂತರು ಗೋರಕ್ಷಕರು ಕಡಿಮೆ. ಮಧ್ಯಮ ವರ್ಗದವರು ಬಡವರೆ ಜಾಸ್ತಿ. ಅವರಿಗೆ ಜೀವನೋಪಾಯಕ್ಕೂ ಕಷ್ಟ ಇರ್ತದೆ. ಜೈಲಿಗೆ ಹೋದರೆ ಹೊರಗೆ ಬರೆದು ಎಷ್ಟೋ ಸಲ ತಿಂಗಳುಗಳಾನುಗಟಲೆಟ ಆಗಿಬಿಡ್ತವೆ. ಇದೆಲ್ಲ ಮಾಡತಾರೆ. ಆದರೆ ಈ ಹಿಂಸೆಯನ್ನು ಸಮಾಜ ಅಥವಾ ಗೋರಕ್ಷಕರ ಮೇಲೆ ಪ್ರಹಾರ ಮಾಡುವಂತಹವರು ಇದನ್ನು ಗಮನಿಸೊದಿಲ್ಲ. ಹಾಗಾಗಿ ಗೋವುಗಳ, ಗೋರಕ್ಷಕರ ಹಿಂಸೆಯನ್ನು ಮೊದಲು ಗಮನಿಸಿ. ಅವರಿಗೆ ರಕ್ಷಣೆ ಕೊಡಿ ಅಂತ ಹೇಳೊಕೆ ಇಷ್ಟಪಡ್ತೇವೆ. ಮತ್ತೆ ಇನ್ನೊಂದು ಸೀದಾಸೀದಾ ಮಾತು. ಆರಕ್ಷಕರು ತಮ್ಮ ಕೆಲಸ ಸರಿಯಾಗಿ ಮಾಡಿದರೆ ಆಗ ಗೋರಕ್ಷಕರ ಅಗತ್ಯ ಎಲ್ಲಿದೆ?
ಆರಕ್ಷಕರು ತಮ್ಮ ಕೆಲಸ ಸರಿಯಾಗಿ ಮಾಡ್ತಿಲ್ಲ. ಹಾಗಾಗಿ ಗೋರಕ್ಷಕರ ಕಾನೂನು ಕೈಗೆತ್ತಿಕೊಳ್ಳಬೇಕಾದ ಸಂದರ್ಭಗಳು ಬಂದವು. ಭಯೋತ್ಪಾದನಾ ನಿಗ್ರಹ ದಳ, ನಕ್ಸಲ್ ನಿಗ್ರಹ ದಳ ಇದ್ದ ಹಾಗೆ ಗೋಹಂತಕರನ್ನು ನಿಗ್ರಹ ಮಾಡಲಿಕ್ಕೂ ಒಂದು ದಳ ರೂಪಿಸಿ ಒಳ್ಳೊಳ್ಳೆ ಅಧಿಕಾರಿಗಳನ್ನ ಅದಕ್ಕೆ ತೊಡಗಿಸಿ ಅವರೇ ಗೋಹಂತಕರನ್ನ, ಕಟುಕರನ್ನ ನಿಗ್ರಹಿಸಿದರೆ ಆಗ ಗೋರಕ್ಷಕರ ಅಗತ್ಯವೆಲ್ಲಿದೆ. ಮಾಡಲಿ ಸರಕಾರ ಅದನ್ನ ಯಾರು ಬೇಡ ಅಂತ ಹೇಳಿದ್ದು. ತಾವು ಮಾಡದೆ ಮಾಡುವವರಿಗೂ ಮಾಡಕೆ ಬಿಡದಿರುವಂತಹದ್ದು ಘೋರ ಅನ್ಯಾಯ. ಶುದ್ಧ ತಪ್ಪು.

 

Read Gouvaani E-Magazine: www.gouvaani.in 

www.gouvaani.in

 

Facebook Comments Box