ಗೋವು ಸಾಕುವ ಮನಸ್ಸಿದೆಯೇ? ಮನೆಯಲ್ಲಿ ಸಾಕುವ ಸ್ಥಳಾವಕಾಶ ಇಲ್ಲವೇ? ಬೇಸರಿಸಿಕೊಳ್ಳಬೇಡಿ. ಗೋ ಶಾಲೆಗಳಲ್ಲಿರುವ ಗೋವುಗಳನ್ನು ದತ್ತು ತೆಗೆದುಕೊಳ್ಳಿ. ಇದಕ್ಕಾಗಿಯೇ “ಗೋ ಬಂಧು” ಯೋಜನೆ ರೂಪಿಸಲಾಗಿದೆ. ಇದರ ಸದುಪಯೋಗ ಪಡೆದುಕೊಳ್ಳುವ ಕೆಲಸವನ್ನು ಗೋಪ್ರೇಮಿಗಳು ಬಳಸಬೇಕು ಎನ್ನುತ್ತಾರೆ ಜಗದ್ಗುರು ಶಂಕರಾಚಾರ್ಯ ಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳು.
ಪ್ರಕಟಣೆ ಕೃಪೆ: ಗೋವಾಣಿ e-ವಾರಪತ್ರಿಕೆ ( www.gouvaani.in )
ಗೋಬಂಧುವಾಗ ಬನ್ನಿ …
1. ಗೋ ಬಂಧು ಯೋಜನೆಯಲ್ಲಿ ತೊಡಗಿಕೊಳ್ಳುವುದು ಹೇಗೆ..? ಮತ್ತು ಇದರಲ್ಲಿ ಯಾರಿಗೆಲ್ಲ ಅವಕಾಶವಿದೆ ?
ನನ್ನ ಮನೆ, ನನ್ನ ತೋಟ, ನನ್ನ ಕಾರು, ನನ್ನ ಪೆÇೀನ್ ಇದ್ದ ಹಾಗೆಯೇ ನನ್ನ ಗೋವು ಅಂತ ಒಂದು ಬೇಕು. ಉಳಿದದ್ದು ಇಲ್ಲವಾದರೂ ಇದು ಅಗತ್ಯವಾಗಿ ಬೇಕಾಗಿರುವಂತದ್ದು. ಹಾಗೆ ನನ್ನ ಗೋವು ಅಂತ ಒಂದು ಇರಲಿ ಎಂಬ ಕಾರಣಕ್ಕೆ ಗೋಬಂಧು ಯೋಜನೆ ಇದೆ. ಗೋವನ್ನು ಸ್ವತಃ ಪಾಲನೆ ಪೆÇೀಷಣೆ ಮಾಡಲಾಗುವುದಿಲ್ಲ ಅನ್ನುವ ವಾತಾವರಣ ಅನೇಕರಿಗೆ ಇರುತ್ತದೆ. ಆದರೆ ಗೋಪಾಲನೆಯ ಮನಸ್ಸು ಇರುತ್ತದೆ. ಅವರಿಗೆ ಗೋಶಾಲೆಗಳಲ್ಲಿ ಸಹಜವಾಗಿಯೇ ಪಾಲನೆಯಾಗುತ್ತಿರುವ ಗೋವುಗಳ ಜತೆಗೆ ಬಾಂಧವ್ಯ. ಅಂದರೆ ನಿರ್ಧಿಷ್ಠವಾದ ಗೋವಿನ ಜತೆಗೆ ಬಾಂಧವ್ಯ ಬೆಳೆಸುವಂತಹದ್ದು ಗೋಬಂಧು ಯೋಜನೆಯ ಉದ್ದೇಶವಾಗಿದೆ. ಗೋಶಾಲೆಯಲ್ಲಿ ಆ ಗೋವಿನ ಯೋಗಕ್ಷೇಮದ ಬಗ್ಗೆ ಪತ್ರಗಳು ಬರುವಂತಹದು, ಆಮಂತ್ರಣಗಳು ಬರುವಂತಹದು, ಆ ಗೋವಿನ ಜನ್ಮದಿನವನ್ನು ಆಚರಣೆ ಮಾಡುವಂತಹದು, ಇವರ ಜನ್ಮದಿನವನ್ನೂ ಅಲ್ಲಿ ಹೋಗಿ ಆಚರಣೆ ಮಾಡುವಂತಹದ್ದು, ಗೋವಿನ ಆರೋಗ್ಯ ಅನಾರೋಗ್ಯದ ಬಗ್ಗೆಯೂ ಪತ್ರಗಳು ಬರುವಂತಹದು ಹೀಗೆ ಪರಸ್ಪರ ಬಾಂಧವ್ಯ ಗೋವಿಗೂ ವ್ಯಕ್ತಿಗೂ ಬೆಳೆಸುವುದು ಯೋಜನೆಯ ಪ್ರಧಾನ ಉದ್ದೇಶ. ಹಾಗೆಯೇ ಅವನು ಎಲ್ಲಿದ್ದರೂ ಒಂದು ಗೋವಿನ ಜವಾಬ್ದಾರಿ ತೆಗೆದುಕೊಳ್ಳುವುದು ಮಹತ್ತರವಾದ ಉದ್ದೇಶ. ಇದರಲ್ಲಿ ಯಾರು ಯಾರಿಗೆ ಗೋಬಂಧುವಾಗುವ ಇಚ್ಛೆ ಇದೆಯೋ ಎಲ್ಲರಿಗೂ ಯಾವ ಬೇದವೂ ಇಲ್ಲದೆ ಅವಕಾಶವಿದೆ.
2. ಈ ಯೋಜನೆಯಲ್ಲಿ ತೊಡಗಿಕೊಳ್ಳುವುದರಿಂದ ನಮಗೆ ಆಗುವ ಪ್ರಯೋಜನಗಳು ಏನು?
ಸಾರ್ಥಕತೆ, ಒಂದು ಗೋವಿನ ಜವಾಬ್ದಾರಿ ನಾನು ತೆಗೆದುಕೊಂಡಿದ್ದೇನೆ. ಒಂದು ಗೋವಿನ ಉಳಿವಿಗೆ ನಾನು ಕಾರಣನಾಗಿದ್ದೇನೆ. ಒಂದು ಗೋವು ನನ್ನ ಸೇವೆಯಿಂದಾಗಿ ಮೇವನ್ನ, ನೀರನ್ನ, ಕಾಣ್ತಾ ಇದೆ ಅನ್ನೋದಿದೆಯಲ್ಲಾ ದೊಡ್ಡ ಸಾರ್ಥಕತೆ ಅದು. ಮತ್ತೆ ಪುಣ್ಯದ ಲೆಕ್ಕ ಹಾಕಿದರೆ ಅದು ಬೆಲೆ ಕಟ್ಟಲಾರದ ಪುಣ್ಯ. ಯಾವ ಜೀವವನ್ನಾದರೂ ಪೆÇೀಷಣೆ ಮಾಡಿದರೆ ಮುಖ್ಯ ಇದೆ. ಆದರೆ ಗೋವನ್ನು ಪೆÇೀಷಣೆ ಮಾಡಿದರೆ ಅಪಾರವಾದ ಪುಣ್ಯ ಇದೆ. ಮತ್ತೆ ಮನಃಶಾಂತಿ, ನೆಮ್ಮದಿ, ತುಂಬಾ ದೊಡ್ಡ ನೆಮ್ಮದಿ ಸಿಗುತ್ತದೆ. ಒಂದು ಗೋವನ್ನು ನಾವು ನೋಡಿಕೊಳ್ಳುತ್ತೇವೆ ಎಂಬುದು ಮನಸ್ಸಿಗೆ ದೊಡ್ಡ ನೆಮದಿಯನ್ನು ಕೊಡುತ್ತದೆ ಮತ್ತು ಗೋಶಾಲೆಗೆ ಸಮಯ ಸಮಯಕ್ಕೆ ಹೋಗಿ ಅಲ್ಲಿ ನಾವು ಕೆಲವು ಆಚರಣೆಗಳನ್ನು ಮಾಡುವುದರಿಂದ ಅದು ಇನ್ನಷ್ಟು ನೆಮ್ಮದಿಯನ್ನು ಕೊಡುತ್ತದೆ. ಸಂತೋಷವನ್ನು ಕೊಡುತ್ತದೆ. ಮತ್ತೆ ಚಿಕ್ಕವರಿಗೆ ಮನೆಯಲ್ಲಿರುವ ಮುಂದಿನ ಪೀಳಿಗೆಗೆ ದೊಡ್ಡ ಆದರ್ಶನವನ್ನು ನಾವು ಹಾಕಿಕೊಟ್ಟಂತಾಗುತ್ತದೆ.
3. ಎಲ್ಲಿಯೋ ದೂರದ ಗೋಶಾಲೆಯಲ್ಲಿ ಗೋವನ್ನು ಇಟ್ಟು ನಾವು ಸಂಭ್ರಮ ಪಡುವುದು ಹೇಗೆ? ಇದೂ ವೃದ್ದಾಶ್ರಮದಲ್ಲಿ ಪೆÇೀಷಕರನ್ನು ಸೇರಿಸಿದಂತಾಗುವುದಲ್ಲವೇ?
ಮನೆಯಲ್ಲೇ ಗೋವನ್ನು ಇಟ್ಟುಕೊಳ್ಳಬಹುದು. ಆದ್ರರೆ ಮನೆಯಲ್ಲಿ ಇಟ್ಟುಕೊಳ್ಳಲು ತಾಂತ್ರಿಕವಾಗಿ ಆಗದಿದ್ದಾಗ, ಮಾನಸಿಕವಾಗಿ ತಯಾರಿದ್ದಾಗಲೂ ಬೇರೆ ಕಾರಣಕ್ಕೆ ಆಗದಿದ್ದ ಸಂದರ್ಭ ಈ ಆಯ್ಕೆ. ವೃದ್ದಾಶ್ರಮಕ್ಕೂ ಇದಕ್ಕೂ ಹೋಲಿಕೆ ಮಾಡಲು ಸಾಧ್ಯವಿಲ್ಲ. ಯಾಕೆಂದರೆ ವೃದ್ದಾಶ್ರಮ ಮನೆಯಲ್ಲಿರುವ ತಂದೆ ತಾಯನ್ನು ತೆಗೆದುಕೊಂಡು ಹೋಗಿ ಎಲ್ಲೋ ಬಿಟ್ಟು ಬರುವಂತಹದು. ಎಷ್ಟೋ ಬಾರಿ ಕಾಳಜಿಯೂ ಇಲ್ಲದ ಜಾಗದಲ್ಲಿ ಬಿಟ್ಟು ಬರುವುದು, ಮತ್ತೆ ಇವರು ಹೋಗದೇ ಇರುವಂತಹದು, ಅದರ ರೀತಿಯೇ ಬೇರೆ. ಆದರೆ ಗೋಶಾಲೆಯಲ್ಲಿ ಹಾಗಲ್ಲ. ವೃದ್ಧಾಶ್ರಮ ಎನ್ನುವಾಗ ಜೀವನದ ಭಾಗವಾಗಿದ್ದ, ತಂದೆತಾಯಿರನ್ನು ಹೊರಗೆ ಹಾಕುವಂತಹದು. ಗೋ ಬಂಧು ಹಾಗಲ್ಲ ಈವರೆಗೆ ಜೀವನದ ಭಾಗವಾಗಿಲ್ಲದ ಗೋವುಗಳನ್ನು ಜೀವನದ ಭಾಗ ಮಾಡಿಕೊಳ್ಳುವುದು. ಹಾಗಾಗಿ ಇದಕ್ಕೂ ಅದಕ್ಕೂ ತುಂಬಾ ವ್ಯತ್ಯಾಸ ವಿದೆ.
4. ಗೋ ಬಂಧು ಯೋಜನೆ ಮೂಲಕ ಈ ತನಕ ಆಗಿರುವ ಕಾರ್ಯಸಾಧನೆ ಏನು?
ಇದುವರೆಗೆ ಗೋಬಂಧುಗಳಾದವರ ಅಂಕಿ ಅಂಶ ಈ ರೀತಿ ಇದೆ.
ವತ್ಸ ಬಂಧು – 121 ಮಕ್ಕಳು
ಧೇನು (ಗೋ) ಬಂಧು – 30 ಜನರು
ಸವತ್ಸ ಬಂಧು – 29 ಜನರು
ನಂದಿ ಬಂಧು – 3 ಜನರು
ವಿಶೇಷ ಬಂಧು – 2 ಜನರು
ಇದರಿಂದ ಸಮಾಜಕ್ಕೆ ತುಂಬ ಪ್ರೇರಣೆ ಸಿಕ್ಕಿದೆ. ತುಂಬಾ ಜನ ಗೋಬಂಧುವಾಗಲು ಮುಂದೆ ಬರುತ್ತಿದ್ದಾರೆ. ಜೊತೆಗೆ ಮಕ್ಕಳು ವತ್ಸಬಂಧುವಾಗಲು ಮುಂದೆ ಬರುತ್ತಿದ್ದಾರೆ. ಕರುವನ್ನು ದತ್ತು ತೆಗೆದುಕೊಳ್ಳಲು ಮಕ್ಕಳು ಮುಂದೆ ಬರುತ್ತಿದ್ದಾರೆ. ಪ್ರೇರಣೆ ತುಂಬಾ ಸಿಕ್ಕಿದೆ ಸಮಾಜಕ್ಕೆ.
5. ಗೋ ಬಂಧು ಯೋಜನೆಯಡಿ ಸಂಗ್ರಹಿತವಾದ ನಿಧಿಯು ಯಾವ ರೀತಿಯಲ್ಲಿ ವಿನಿಯೋಗವಾಗುತ್ತದೆ ?
ಗೋ ಬಂಧು ಯೋಜನೆಯಡಿ ಸಂಗ್ರಹಿತವಾದ ನಿಧಿಯು ಗೋವಿನ ನಿತ್ಯ ನಿರ್ವಹಣೆಗಾಗಿ, ಗೋವಿನ ಮೇವು, ನೀರು, ಆರೋಗ್ಯ, ಅನಾರೋಗ್ಯಕ್ಕೆ ಇರಬಹುದು, ಗೋವನ್ನು ಪಾಲನೆ ಮಾಡುವ ಸಲುವಾಗಿ ವಿನಿಯೋಗವಾಗುತ್ತದೆ.
Leave a Reply