ಪುರಾತನ ಕಾಲದಲ್ಲಿ ಶ್ರೀಮಂತಿಕೆಯನ್ನು ಗೋ ಸಂಪತ್ತಿನ ಆಧಾರದಲ್ಲಿ ಅಳೆಯಲಾಗುತ್ತಿತ್ತು. ಹಣವನ್ನು ಠೇವಣಿ ಇರಿಸುವಂತೆ ಗೋವುಗಳನ್ನು ಸಂರಕ್ಷಿಸಲು ಗೋ ಬ್ಯಾಂಕ್ ರಚನೆಯ ಪರಿಕಲ್ಪನೆ ಮೂಡಿತು. ಈ ಕುರಿತ ಚಿಂತನೆಯನ್ನು ಹಂಚಿಕೊಂಡಿದ್ದಾರೆ ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು.

ಪ್ರಕಟಣೆ ಕೃಪೆ: ಗೋವಾಣಿ e-ವಾರಪತ್ರಿಕೆ ( www.gouvaani.in )

ಗೋಬ್ಯಾಂಕ್

1. ಗೋಬ್ಯಾಂಕ್ – ಈ ವಿಶಿಷ್ಟ ಕಲ್ಪನೆ ಬಂದಿದ್ದು ಹೇಗೆ? ಸಮಾಜಕ್ಕೆ ಇದರ ಉಪಯೋಗ ಏನು?
ಪ್ರಾಚೀನ ಭಾರತದಲ್ಲಿ ಗೋವನ್ನು ಸಂಪತ್ತಿನ ರೂಪದಲ್ಲಿ ಕಾಣಲಾಗುತ್ತಿತ್ತು. ಯಾರ ಬಳಿ ಹೆಚ್ಚು ಗೋವುಗಳಿದೆಯೋ ಅವನನ್ನೇ ಶ್ರೀಮಂತ ಎಂದು ಭಾವಿಸಲಾಗುತ್ತಿತ್ತು. ಪ್ರಾಚೀನರ ಆ ಕಲ್ಪನೆ ಈ ಇಂದಿನ ಗೋಬ್ಯಾಂಕ್‍ಗೆ ಒಂದು ಪ್ರೇರಣೆ. ಇನ್ನೊಂದು ಪ್ರೇರಣೆ ಇಂದಿನ ಬ್ಯಾಂಕ್‍ಗಳು. ಹೆಚ್ಚುವರಿ ಹಣವನ್ನು ಬ್ಯಾಂಕ್‍ನಲ್ಲಿ ಠೇವಣಿಯಾಗಿ ಇಡಲಾಗುತ್ತದೆ. ಹಣ ಕಡಿಮೆ ಬಿದ್ದಾಗ ಬ್ಯಾಂಕ್ ನಿಂದ ಲೋನ್ ಪಡೆಯುವ ಪರಿಪಾಠವೋ, ಸಾಲ ಪಡೆಯುವ ಪರಿಪಾಠವೂ ಇದೆ. ಇದೆರಡೂ ಕಲ್ಪನೆ ಮೇಳೈಸಿದಾಗ ಗೋಬ್ಯಾಂಕ್ ಹೊರಹೊಮ್ಮಿದ್ದು. ಗೋವು ಒಂದು ಸಂಪತ್ತು ನಿರ್ವಹಿಸಲು ಕಷ್ಟವಾದಾಗ ಅದನ್ನು ತಂದು ಗೋ ಬ್ಯಾಂಕ್ ನಲ್ಲಿ ಬಿಡಬಹುದು. ಗೋವು ಬೇಕು ಇಲ್ಲ ನಮ್ಮ ಬಳಿಯಲ್ಲಿ ಎನ್ನುವ ಸಂದರ್ಭದಲ್ಲಿ ಗೋವನ್ನು ಗೋ ಬ್ಯಾಂಕ್ ನಿಂದ ಎರವಲಾಗಿ ಪಡೆದು ಲಾಭವನ್ನು ಪಡೆದುಕೊಂಡು ಪುನಃ ಅಲ್ಲಿಗೇ ಮರಳಿ ಸಲ್ಲಿಸಬಹುದು.

2. ಗೋ ಬ್ಯಾಂಕ್ ಯೋಜನೆಯಲ್ಲಿ ಸಾಕಲಾಗದವರು ತಂದು ಬಿಟ್ಟ ಗೋವಿಗೆ ಮೇವು ನೀಡಿ ಸಾಕಿಯೂ, ಮಠಕ್ಕೇನು ಲಾಭ?
ಗೋವಿನ ಜೀವ ಉಳಿಯುವುದೇ ಮಠಕ್ಕೆ ಲಾಭ, ಮಠ ಮನೆಯ ಹಾಗಲ್ಲ, ಅಲ್ಲಿ ಸ್ವಂತ ಲಾಭದ ಪ್ರಶ್ನೆ ಇರೋದಿಲ್ಲ, ಅಲ್ಲಿ ಸಮಾಜದ ಲಾಭವೇ ಲಾಭ, ಹಾಗೆ ಒಂದು ಗೋವಿನ ಜೀವ ಉಳಿದರೆ ಅದು ಸಮಾಜಕ್ಕೆ ಲಾಭ ಸೃಷ್ಟಿಗೇ ಲಾಭ. ಆ ಲಾಭವೇ ಮಠದ ಲಾಭ

3. ಗೋಬ್ಯಾಂಕ್ ಮೂಲಕ ಗೋಸಂರಕ್ಷಣೆ ಉದ್ದೇಶ. ಪರೋಕ್ಷವಾಗಿ ರೈತರ ಸಂರಕ್ಷಣೆಯೇ? ಮಠದ ವ್ಯಾಪ್ತಿಯೊಳಗೆ ಇದು ಸುಲಭ ಸಾಧ್ಯವೇ?
ನಿಜವಾದ ಮಾತು ಗೋ ಸಂರಕ್ಷಣೆಯ ಮೂಲಕ ರೈತರ ಸಂರಕ್ಷಣೆಯೇ ಮಠದ ಉದ್ದೇಶ, ಸಾಧ್ಯವೇ ಅಂದರೆ ಅದಕ್ಕೆ ಸಾಧನೆಗೆ ಅಸಾಧ್ಯವಾದದ್ದು ಯಾವುದೂ ಇಲ್ಲ ಅನ್ನೋದೇ ಉತ್ತರ ಈಗ 4 ಸಾವಿರ ಟನ್ ಹಸಿರು ಮೇವನ್ನ ಮಲೆ ಮಹದೇಶ್ವರ ಬೆಟ್ಟದಲ್ಲಿ ಹಂಚಲಿಕ್ಕೆ ಸಾಧ್ಯ ಅನ್ನೋದಾದ್ರೆ ಆ ಕಾಯ9ನಡೆಯೋಕೆ ಮುಂಚೆ ಯಾರೂ ಕೂಡಾ ಸಾಧ್ಯ ಇಲ್ಲ ಅಂತಾನೇ ಹೇಳತಾ ಇದ್ದರು. ಇವತ್ತು ಅದು ಸಾಧ್ಯ ಆಗಿದೆ ಹಾಗಾಗಿ ಅಸಂಭವ ಯಾವುದೂ ಇಲ್ಲ.

4. ಗೋಬ್ಯಾಂಕ್ ಯೋಜನೆಯಿಂದ ಗೋವಿನ ರಕ್ಷಣೆಗೆ ಸಹಾಯ ಆಗಿದೆ ಎನ್ನಬಹುದೇ?
ಧಾರಾಳವಾಗಿ, ಒಂದೊಂದು ಗೋ ಬ್ಯಾಂಕಲ್ಲಿ ಈಗಾಗಲೇ ಸಾವಿರಾರು ಗೋವುಗಳ ರಕ್ಷಣೆ ಆಗಿದೆ ಆಗ್ತಾ ಇದೆ.

5. ಗೋಬ್ಯಾಂಕ್ ಯೋಜನೆಯಲ್ಲಿ ತೊಡಗಿಸಿಕೊಳ್ಳಲು ಯಾರಿಗೆಲ್ಲ ಅವಕಾಶವಿದೆ? ಹೇಗೆ ತೊಡಗಿಸಿಕೊಳ್ಳಬಹುದು? ಅವರಿಗೆ ಶ್ರೀಮಠ ಹೇಗೆ ಸಹಾಯ ಮಾಡುತ್ತದೆ? 
ಯಾರಿಗೆಲ್ಲಾ ಗೋವಿನ ಬಗ್ಗೆ ಪ್ರೀತಿ ಮಮತೆ ಇದೆಯೋ ಯಾರಿಗೆಲ್ಲಾ ಗೋವು ಉಳಿಯಬೇಕು, ಉಳಿಸಬೇಕು ಗೋವನ್ನ ಮತ್ತು ಸರಿಯಾದ ರೀತಿಯಲ್ಲಿ ಬಳಸಬೇಕು ಅಂತ ಇದೆಯೋ ಅವರೆಲ್ಲರೂ ಗೋ ಬ್ಯಾಂಕ್ ಯೋಜನೆಯಲ್ಲಿ ಪಾಲುದಾರರಾಗಲು ಅರ್ಹರು. ಅಂದರೆ ಇಲ್ಲಿಂದ ಗೋವನ್ನು ಪಡೆದುಕೊಂಡು ಕಟುಕರಿಗೆ ಕೊಡುವವರು ಅರ್ಹರಲ್ಲ. ಹಾಗಾಗಿ ಗೋಬ್ಯಾಂಕ್ ನಲ್ಲಿ ಆ ರೀತಿಯಾರುವ ಕಾನೂನು ಬದ್ದವಾದ ಕಾಗದ ಪತ್ರ ಮಾಡಲಾಗುತ್ತದೆ. ಅಂದರೆ ಅಲ್ಲಿಂದ ಎರವಲಾಗಿ ಪಡೆದ ಗೋವನ್ನು ಮಾರಾಟ ಮಾಡುವುದಿಲ್ಲ. ಪರಬಾರೆ ಮಾಡುವುದಿಲ್ಲ. ಗೋ ಬ್ಯಾಂಕ್ ಒಪ್ಪಿಗೆ ಇಲ್ಲದೆ ಅದನ್ನು ಏನೂ ಮಾಡುವುದಿಲ್ಲ ಎನ್ನು ಕಾನೂನು ಬದ್ದ ಕರಾರು ಪತ್ರಮಾಡಿಕೊಂಡೇ ಕೊಡಲಾಗುತ್ತದೆ. ಸಾಕಲಾಗದ ಗೋವಿದ್ದರೆ ತಂದು ಬಿಡುವ ಮೂಲಕ ನಾವು ಈ ಯೋಜನೆಯನ್ನು ಬಳಸಿಕೊಳ್ಳಬಹುದು. ಗೋವಿನ ಅಗತ್ಯ ಇದ್ದರೆ, ಅಂದರೆ ನಿಜವಾದ ಅಗತ್ಯ ಇದ್ದರೆ, ಪ್ರಾಮಾಣಿಕ ಅಗತ್ಯ ಇದ್ದರೆ ಗೋಬ್ಯಾಂಕ್‍ಗೆ ಅರ್ಜಿಕೊಟ್ಟು ಗೋ ಬ್ಯಾಂಕ್‍ಗೆ ಸರಿಯಾದ ಕರಪತ್ರವನ್ನು ಮಾಡಿಕೊಟ್ಟು ಪರಬಾರೆ ಮಾಡುವುದಿಲ್ಲ ಎಂದು ಕರಪತ್ರ ಮಾಡಿಕೊಟ್ಟು ಪಡೆದುಕೊಳ್ಳಬಹುದು. ತನ್ಮೂಲಕವೂ ಉಪಯೋಗ ಪಡೆದುಕೊಳ್ಳಬಹುದು. ಅವರಿಗೆ ಮಠ ಸಹಾಯ ಮಾಡುವುದು ಹೇಗೆಂದರೆ ಗೋವನ್ನು ಪಡೆದುಕೊಳ್ಳುವ ಮೂಲಕ ಸಾಕಲಾಗದವರ ಗೋವನ್ನು ಪಡೆದುಕೊಂಡು ಸಾಕುವ ಮೂಲಕ ಬೇಕಾದ ಮರಳಿ ಕೊಡುವ ಮೂಲಕ ಹಾಗೇ ಗೋವಿನ ಅಗತ್ಯ ಇರುವವರಿಗೆ ಗೋವನ್ನು ಪ್ರಧಾನ ಮಾಡುವ ಮೂಲಕ ಮಠ ಸಹಾಯ ಮಾಡುತ್ತದೆ.

 

Read Gouvaani E-Magazine: www.gouvaani.in 

www.gouvaani.in

Facebook Comments Box