ಮಳೆ ಬೆಳೆ ಇಲ್ಲ ಎಂದು ಊಟ ಮಾಡುವುದು ಬಿಡ್ತೇವೆಯೆ? ಮನೆಯಲ್ಲಿ ಅಪ್ಪ, ಅಮ್ಮ, ಅಣ್ಣ,ತಮ್ಮ, ಅಕ್ಕ, ತಂಗಿ, ಮಕ್ಕಳು ಕಾಯಿಲೆ ಬಿದ್ದಾಗ ಬೀದಿಗೆ ತಳ್ಳುತ್ತೇವೆಯೆ? ಪೇಟೆಗಳಲ್ಲಿ ಮನೆ ಮಂದಿನಾಯಿ, ಬೆಕ್ಕುಗಳಿಗೂ ಚಿಕಿತ್ಸೆ ಕೊಡಿಸುತ್ತಿಲ್ಲವೆ? ವಯಸ್ಸಾಯಿತು ಎಂದು ಅಜ್ಜ, ಅಜ್ಜಿಯನ್ನು ಕಸಾಯಿಖಾನೆಗೆ ದಬ್ಬುತ್ತೇವೆಯೆ? ಇಲ್ಲ ಎಂದಾದ ಮೇಲೆ ಗೋವುಗಳಿಗೇಕೆ ಅಂಥ ಶಿಕ್ಷೆ..? ಮಾನವೀಯತೆ ತೋರಿ.. ಅದಕ್ಕಾಗಿಯೇ ಈ ಗೋಸಂಜೀವಿನಿ ಎನ್ನುತ್ತಿದ್ದಾರೆ ಶ್ರೀಗಳು…

 

                                                                                                                                                                                                                                                                              ಪ್ರಕಟಣೆ ಕೃಪೆ: ಗೋವಾಣಿ e-ವಾರಪತ್ರಿಕೆ ( www.gouvaani.in )

 

ಗೋ ಸಂಜೀವಿನಿ : ಇದು ಮಾನವೀಯತೆಯ ಪ್ರತೀಕ

 

 

#GouSanjivini

1. ಏನಿದು ಗೋಸಂಜೀವಿನಿ ಎಂದರೆ ?

ಗೋವುಗಳನ್ನು ಕಟುಕರ ಕೈ ತಪ್ಪಿಸಿ ಕಾಯುವ ಕೈಗೊಪ್ಪಿಸಲು ಗೋ ಪ್ರೇಮಿಗಳು ಗೋ ಭಕ್ತರು ಪ್ರಜ್ಞಾವಂತ ಪ್ರಜೆಗಳು ನಿಧಿ ಸಮರ್ಪಣೆ ಮಾಡುವ ಒಂದು ಯೋಜನೆ – ಗೋ ಸಂಜೀವಿನಿ. ರೈತ ಗೋವನ್ನು ಮಾರಾಟ ಮಾಡುವ ನಿಶ್ಚಯ ಮಾಡಿರುತ್ತಾನೆ ,ಕಸಾಯಿಗಳು ಕೊಳ್ಳುವುದು ಬಹುತೇಕ ಖಚಿತವಾಗಿರುತ್ತದೆ. ಈ ಹಂತದಲ್ಲಿ ಗೋ ಸಂಜೀವಿನಿ ನಮ್ಮ ಮಠದ ಗೋಪರಿವಾರ ಕಾಮದುಘಾದ ಗೋ ಕಿಂಕರರು ಮಧ್ಯಪ್ರವೇಶ ಮಾಡಿ ರೈತನ ಮನವೊಲಿಸಿ ಗೋವನ್ನ ತಾವು ಮಠದ ಪರವಾಗಿ ಖರೀದಿ ಮಾಡಿ ಅದನ್ನ ಯೋಗ್ಯ ಹಸ್ತಗಳಿಗೆ ತಲುಪಿಸುವ ಅಥವಾ ಮಠವೇ ಅದನ್ನು ರಕ್ಷಣೆ ಮಾಡುವ0ಥ, ಸಾಕುವಂಥ ಒಂದು ಕಾರ್ಯ ವಿಧಾನ ಈ ಗೋ ಸಂಜೀವಿನಿಯದ್ದು.

 

2.ನೀವು ಹೇಳಿದಂತೆ ಗೋವನ್ನೇನೋ ಕಟುಕರಿಂದ ರಕ್ಷಿಸಬಹುದು, ಆದರೆ ಅವುಗಳ ಮೇವಿಗೆ ಏನು ಮಾಡೋಣ? ಮಳೆಯಿಲ್ಲ, ಬೆಳೆಯೂ ಇಲ್ಲ.

ಮಳೆ ಇಲ್ಲ ಬೆಳೆ ಇಲ್ಲ ಎಂದು ನಾವು ಊಟ ಮಾಡುವುದು ನಿಲ್ಲಿಸುವುದಿಲ್ಲ. ಊಟ ಮಾಡಿಯೇ ಮಾಡುತ್ತೇವೆ ನಾವು. ಬದುಕಬೇಕು ಎಂದಾದರೆ ದಾರಿ ಇದ್ದೇ ಇರುತ್ತದಲ್ವಾ. ಹಾಗೇ ಗೋವಿಗೆ ಕೂಡಾ. ಮಲೆಮಹದೇಶ್ವರ ಬೆಟ್ಟದಲ್ಲೂ ಮಳೆ ಇಲ್ಲ ಬೆಳೆ ಇಲ್ಲ ಅನ್ನುವ ವಾತಾವರಣ ಇತ್ತು. ಆದರೆ 70ಸಾವಿರ ಗೋವುಗಳು ಮಠದ ಉಪಕ್ರಮದಿಂದ ಜೊತೆಗೆ ಬೇರೆ ಬೇರೆಯವರ ಸಹಯೋಗದಿಂದ 70 ಸಾವಿರ ಗೋವುಗಳ ಬಚಾವಾದವಲ್ಲವಾ. ಸಾಧ್ಯವಿದೆ. ನಾವು ಏನು ಕಮ್ಮಿ ಮಾಡಿದ್ದೇವಾ? ಮಳೆ ಇಲ್ಲ ಬೆಳೆ ಇಲ್ಲ ಅಂತಾ. ಅವುಗಳ ಮೇವಿಗೆ ನಾವೇನು ಮಾಡಬೇಕಾದ್ದಿಲ್ಲ, ಅವ್ವೇ ಮಾಡುತ್ತೆ. ನೀವು ಮೇವನ್ನು ಹಣಕೊಟ್ಟು ಖರೀದಿ ಮಾಡುತ್ತೀರಿ ಎಂದಾದರೆ ಅದಕ್ಕೆ ಬೇಕಾದಷ್ಟು ಹಣವನ್ನು ಗೋವೇ ಉತ್ಪಾದನೆ ಮಾಡಿಕೊಡುತ್ತದೆ. ನಾವಾಗಿಯೇ ಬಳಸಿಕೊಳ್ಳುವುದಕ್ಕೆ ಬುದ್ದಿ ಇರಬೇಕು. ಗೋ ಮೂತ್ರ, ಗೋಮಯದ ಉತ್ಪನ್ನಗಳು ಅದಕ್ಕೆ ಬೇಕಾದಷ್ಟು ಹಣದ ಉತ್ಪತ್ತಿಯನ್ನು ಮಾಡಿಕೊಡುತ್ತದೆ. ಇನ್ನು ಮೇವು ಬೆಳೆಸಬೇಕೆಂದರೆ, ಜಾಗ ಇದೆ ಎಂದರೆ ಅದಕ್ಕೆ ಗೋವಿನ ಗಂಜಳ ಮತ್ತು ಗೋಮಯಗಳೇ ಸಾಕು. ಚೆನ್ನಾಗಿ ಹುಲುಸಾಗಿ ಮೇವು ಬೆಳೆಯುತ್ತದೆ. ಇದನ್ನು ಮೀರಿ ಮಠದ ಗೋಪ್ರಾಣಭಿಕ್ಷಾ ಯೋಜನೆಯಿದೆ. ಇದರ ಅಡಿಯಲ್ಲಿ 4 ಸಾವಿರ ಟನ್ ಗಳಿಗೂ ಅಧಿಕ ಮೇವನ್ನು ಹಸಿವಿನಿಂದ ಸಾಯಬಹುದಾದ ಗೋವುಗಳಿಗೆ ವಿತರಣೆ ಮಾಡಲಾಗಿದೆ. ಆ ಗೋಪ್ರಾಣಭಿಕ್ಷಾ ಕೂಡಾ ಸಹಾಯ ಮಾಡುತ್ತೆ. ಮಠದ ಗೋವುಗಳಿಗಾಗಲಿ, ಬೇರೆಯವರ ಗೋವಿಗಾಗಲಿ.

3.ಇದು ಪುಣ್ಯ ಪಾಪಗಳ ಕಾಲವಲ್ಲ,, ಲಾಭ ನಷ್ಟಗಳ ಚಿಂತೆ ಇರುತ್ತದೆ. ಈ ಹಿನ್ನೆಲೆಯಲ್ಲಿ ಈ ಯೋಜನೆಯ ಸಾರ್ಥಕ್ಯ ಹೇಗೆ?

ಪುಣ್ಯ ಪಾಪಗಳ ಪ್ರಜ್ಞೆ ಚಂದ. ಸಾವಿರ ಕಾನೂನು, ಜೈಲುಗಳು, ಕೋರ್ಟುಗಳು, ಮಿಲ್ಟ್ರಿ ಮಾಡುತ್ತಿರುವ ಕೆಲಸವನ್ನೇ ಪುಣ್ಯ ಪಾಪಗಳ ಪ್ರಜ್ಞೆ ಮಾಡುತ್ತಿದೆ. ಮೂಲಭೂತವಾಗಿ ಮನುಷ್ಯ ತಪ್ಪೇ ಮಾಡದಂತೆ ಮಾಡುತ್ತದೆ ಅದು. ಕಾನೂನು ಕೇವಲ ಭೀತಿಯ ಮೂಲಕವಾಗಿ ತಪ್ಪು ಮಾಡದಂತೆ ಮಾಡುತ್ತದೆ ಮನುಷ್ಯನನ್ನ, ಆದರೆ ಕಾನೂನಿಂದ ತಪ್ಪಿಸಿಕೊಳ್ಳುವ ವಿಶ್ವಾಸ ಅವನಿಗಿದ್ದರೆ ತಪ್ಪು ಮಾಡುತ್ತಾನೆ. ಆದರೆ ಪಾಪ ಪುಣ್ಯಗಳ ಪ್ರಜ್ಞೆ ಮನುಷ್ಯ ತಪ್ಪು ಮಾಡದೇ ಇರುವಂತೆ ಒಳಗಿನಿಂದ ತಡೆಯುತ್ತದೆ. ಅದು ಬೇಕು ಅದು ಒಂದು ವೇಳೆ ಅದು ಇಲ್ಲ ಬರೇ ಲಾಭದ ನಷ್ಟದ ಲೆಕ್ಕಾಚಾರ ಅಂತ ತಗೊಂಡ್ರು ಕೂಡಾ ಗೋವಿನಂತ ಉದ್ಯಮ ಬೇರೆ ಯಾವುದೂ ಇಲ್ಲ. ಹಾಗಾಗಿ ಗೋಸೇವೆ ಅದು biggest industry of modern times ಆಗೋಕೆ potential ಇರುವಂತಹದ್ದು. ಹಾಗಾಗಿ ಗೋವು ತಗೊಳೋದು ತುಂಬಾ ಕಡಿಮೆ ಅದರಲ್ಲೂ ದೇಶೀ ಗೋವು ತಗೊಳೋದು ತುಂಬಾ ಕಡಿಮೆ ಆದರೆ ಕೊಡೋದು ಜಾಸ್ತಿ. input ಕಡಿಮೆ output ಜಾಸ್ತಿ.

Gou Sanjivini

4.ಸಮಾಜದ ಬಡವರ್ಗದ ಬಹಳ ಜನ ನಿಮ್ಮ ಯೋಜನೆಯಲ್ಲಿ ಉತ್ಸುಕರಾಗಿದ್ದಾರೆ, ಅವರಿಂದ ಯಾವ ರೀತಿಯ ಸಹಕಾರ ನಿರೀಕ್ಷಿಸುತ್ತಿರುವಿರಿ?

ಬಡವರು ಒಳ್ಳೆಯವರು ಅಪೇಕ್ಷೆ ಪಟ್ಟರೆ ಗೋವುಗಳನ್ನು ಅವರಿಗೆ ಕೊಡಬಹುದು ಅವರಿಂದ ಗೋಮೂತ್ರ ಗೋಮಯವನ್ನು ಮೌಲ್ಯ ಕೊಟ್ಟು ಪಡೆದುಕೊಳ್ಳಬಹುದು ಅದರೆ ಪ್ರಾವಗತರಾಗಿ ಪ್ರೀತಿಯಿಂದ ಗೋವನ್ನು ಸಾಕಬೇಕು ಸಂಪೂರ್ಣ ಲಾಭವನ್ನು ತಗೊಬೇಕು ಹಾಗಾಗಿ ಅವರ ಮನೆಯ ಗೋಶಾಲೆಯನ್ನೇ ಪುಟ್ಟ ಯಾಗಿ ಅವರನ್ನು ಮಾರ್ಪಡಿಸಿ ಅವರನ್ನು ದೊಡ್ಡ ಮಟ್ಟಕ್ಕೆ ಬೆಳೆಯಲ್ಲಿಕ್ಕೆ ಸಾದ್ಯ ಇದೆ.

 

5. ಖಾಯಿಲೆಗಳಿಂದ ಬಳಲುತ್ತಿರುವ ಗೋವುಗಳ ಉತ್ಪನ್ನಗಳು ಬಳಕೆಗೆ ಅರ್ಹವಲ್ಲ ಎನ್ನುವುದಾದರೆ, ಗೋಸಂರಕ್ಷಣೆ ಮಾಡಲು ಬೇರೇನು ಉಪಾಯ?
ಹಾಗೇನಿಲ್ಲ, ಖಾಯಿಲೆಯಿಂದ ಬಳಲುತ್ತಿರುವ ಗೋವುಗಳ ಉತ್ಪನ್ನಗಳು ಕೂಡ ಉಪಯುಕ್ತವೇ ಯಾಕಂದರೆ ಅದಕ್ಕೆ ಯಾವುದೇ ಒಂದು ಖಾಯಿಲೆ ಬಂದಿದೆ ಅಂದ ಮಾತ್ರಕ್ಕೆ ಅದರ ಕ್ಷೀರ, ಮೂತ್ರ, ಗೋಮಯಗಳಲ್ಲಿ ಅದರ ಗುಣಗಳು ಬರಬೇಕಂತ ಇಲ್ಲ. ಯಾವುದೇ ದೇಶೀಯ ಗೋವಿನ ಸ್ವಭಾವ ಏನು ಅಂದರೆ ದೋಷವನ್ನು ತನ್ನೊಳಗೆ ಇಟ್ಟಕೊಂಡು ಗುಣವನ್ನು ಮಾತ್ರಾ ಹೊರಹಾಕುತ್ತೆ ಅನ್ನೋದು ಅನೇಕ ಆಧುನಿಕ ವೈಜ್ಞಾನಿಕ ಸಂಶೋಧನೆಗಳಿಂದ ಕೂಡಾ ಸಿದ್ಧವಾಗಿರತಕ್ಕಂಥ ವಿಷ್ಯ, ವಿಷಕಂಠನ ಹಾಗೆ ದೋಷಗಳ ಒಳಗಿಟ್ಟುಕೊಂಡು ಇನ್ನು ಸ್ವಲ್ಪ ದೋಷ ಉಳಿತದೆ ಅಂತಾದ್ರೆ ನೀವು ಅದರಿಂದ ಔಷಧಿಗಳನ್ನ ತಯಾರಿ ಮಾಡದಿದ್ದರೆ ಆಯಿತು ಅಷ್ಟೇ. ಗೋಮೂತ್ರ ಗೋಮಯಗಳಿಂದ ಕೃಷಿ ಉತ್ಪನ್ನಗಳನ್ನು ತಯಾರಿಸಬಹುದು ಅದು ಯಾವ ಸ್ಥಿತಿಯಲ್ಲಿದೆ ಅನ್ನೋದು ಲೆಕ್ಕಕ್ಕೆ ಬರಲ್ಲ, ಯಾವ ಸ್ಥಿತಿಯಲ್ಲಿದ್ದರೂ ಕೂಡಾ ಅದು ಮಾಡುವ ಕೆಲಸ ಮಾಡೇ ಮಾಡುತ್ತೆ ಹಾಗೇ ಹೊರಗಡೆಯಿಂದ ಏನು ಶರೀರಕ್ಕೆ ಹಚ್ಚುವ ತರಹದ ಒಂದು ಮೆಡಿಸಿನ್ ಇದೆ ಅಥವಾ ಆ ತರಹದ ಕಾಸ್ಮೆಟಿಕ್ಸ್ ಅದನ್ನ ಮಾಡಲಿಕ್ಕೆ ತೊಂದರೆ ಇಲ್ಲ… ಕೃಷಿಗೆ ಸಂಬಂಧಿಸಿದ ಪ್ರಾಡಕ್ಟ್ಸ್ ಮಾಡಲಿಕ್ಕೆ ತೊಂದರೆನೇ ಇಲ್ಲ’ ಇನ್ನ ಫಿನಾಯಿಲ್ ಇದೆ ಇವುಗಳು ಗೋವು ಯಾವುದೇ ಸ್ಥಿತಿಯಲ್ಲಿದ್ದರೂ ಕೂಡಾ ಗವ್ಯೋತ್ಪನ್ನಗಳು ಅತ್ಯಂತ ಪ್ರಯೋಜನ ಕಾರಿಯಾಗಿ ಇದ್ದೇ ಇರುತ್ತದೆ.
ಇಲ್ಲ ತಾನೇ ಈಗ ನಮಗೇ ಆ ರೀತಿ ಆದರೆ ನಮ್ಮ ಆಲೋಚನೆ ಹೇಗೆ ಇರುತ್ತೆ? ನಮಗೇ ತೊಂದರೆ ಆದಾಗ, ಔಷಧೋಪಚಾರ ಮಾಡಿಸಬೇಕಾದಾಗ ಖರ್ಚು ವೆಚ್ಚ ಭರಿಸ್ತಾರೆ ” ಕ್ಯಾನ್ಸರ್ ಬ0ದಿದೆ ಕಿಡ್ನಿ ತೊಂದರೆ ಬಂದಿದೆ. ದುಬಾರಿ ವೆಚ್ಚ ಆಗತ್ತೆ. ಲಕ್ಷ ಲಕ್ಷ ಸಾಲ ಮಾಡಿ ಮನೆಯವರು ಖಚು9 ಮಾಡಿ ಚಿಕಿತ್ಸ ಮಾಡಿಸುವುದಿಲ್ಲವಾ – .. ಆಗ ಏನು ಅವರು ದುಡಿಮೆ ಮಾಡುವುದಕ್ಕೂ ಸಾಧ್ಯ ಇರಲ್ಲ ಗಂಭೀರ ಖಾಯಿಲೆಗಳು ಬ0ದಾಗ ದುಡಿಮೆ ಮಾಡೋ ಪರಿಸ್ಥಿತಿ ಕೂಡಾ ಇರಲ್ಲ. ಆಗ ಅವರ ಹತ್ತಿರದವರು ಅವರನ್ನ ತಾವೇ ಖರ್ಚು ಮಾಡಿ ಸಾಲ ಮಾಡಿಯಾದರೂ ಕೂಡಾ ಉಳಿಸಿಕೊಳ್ಳುವ ಪ್ರಯತ್ನ ಮಾಡೋದಿಲ್ವಾ… ಅಂಥಾ ಮಾನವೀಯ ದೃಷ್ಟಿ ಗೋವುಗಳ ಕುರಿತು ಬೇಕು. ಹೆಚ್ಚಾಗಿ ಬೇಕು ಯಾಕೆಂದರೆ ಮನುಷ್ಯನಿಗಿಂತ ಎಲ್ಲಾ ರೀತಿಯಿಂದ ಒಂದು ಹೆಜ್ಜೆ ಮೇಲೇ ಇದೆ ಅದು ಹಾಗಾಗಿ ಇನ್ನೂ ಹೆಚ್ಚು ಬೇಕು ಮಾನವೀಯ ದೃಷ್ಟಿ.
ಮತ್ತಿಲ್ಲಿ ಒಂದಷ್ಟು ಮನುಷ್ಯತ್ವ ಕೂಡಾ ಬೇಕು. ನಮ್ಮ ಮನೆಯಲ್ಲಿ ಯಾರಾದರೂ ಖಾಯಿಲೆಯಿಂದ ಬಳಲುತ್ತಿದ್ದರೆ ಸ್ಲಾಟರ್ ಹೌಸ್ ಗೆ ಕಳುಹಿಸಿ ಅ0ದರೆ ಇಷ್ಟ ಪಡತೀವಾ.

 

 

 

Read Gouvaani E-Magazine: www.gouvaani.in 

Facebook Comments Box