ಇಂದಿನ ದಿನ ಈ ಹಿಂದೆ:

ಎರಡು ವರ್ಷದ ಹಿಂದೆ, ಅಂದರೆ 2013ರಲ್ಲಿ ನಮ್ಮ ಶ್ರೀ ಸಂಸ್ಥಾನದವರು ಸಪರಿವಾರ ಶ್ರೀಕರಾರ್ಚಿತ ಸೀತಾರಮಚಂದ್ರ ಚಂದ್ರಮೌಳೀಶ್ವರರ ಸಮೇತರಾಗಿ, ಶಿಷ್ಯವರ್ಗದೊಂದಿಗೆ ಉತ್ತರದ ತುತ್ತತುದಿ ಕತ್ತಲೆಯ ಕಳೆವ ಕೈನೀಡಿ ಕರೆವ ಕೈಲಾಸ ಮಾನಸ ಸರೋವರ ಯಾತ್ರೆ ಕೈಗೊಂಡಿದ್ದರು.
ಮಾನಸ ತೀರದ ನೀರವ ಮೌನ, ಕರ್ಕಶ ಚಳಿ, ಗಂಭೀರ ಕೈಲಾಸದ ರುದ್ರ-ರಮಣೀಯ ತಟದಲ್ಲಿ ಶ್ರೀಕರಾರ್ಚಿತ ಪೂಜೆ!
ಶಂಕರಕರಾರ್ಚಿತ ರಾಮಾದಿವಿಗ್ರಹರೂಪೀ ದೇವರು ಕೈಲಾಸ ಶಂಕರನ ಬಳಿಗೆ ತೆರಳಿ ಪೂಜೆ ಸ್ವೀಕರಿಸಿದ್ದು ಅದೇ ಮೊದಲು.
ಅಪಾರ ಶಿಷ್ಯಸ್ತೋಮದ ಸರ್ವಯೋಗಕ್ಷೇಮಕ್ಕಾಗಿ ನಮ್ಮ ಪೀಠಾಧಿಪತಿಗಳು ಕೈಗೊಂಡ ಅಮೋಘ ಕಾರ್ಯವು ಸದಾ ಸ್ಮರಣೀಯ.
ಇದೀಗ ಎರಡು ಸಂವತ್ಸರಗಳು ಕಳೆದು ಹೋದರೂ, ಮತ್ತೆ ಮತ್ತೆ ಆ ಸನ್ನಿವೇಶಗಳು ನಮ್ಮ ಸ್ಮೃತಿಪಟಲದಲ್ಲಿ ಪುಟಿದೇಳುತ್ತದೆ.

ಕೈಲಾಸ ಯಾತ್ರೆಯ ತಂಡದಲ್ಲಿದ್ದ ಶ್ರೀಶಿಷ್ಯ, ಬೆಂಗಳೂರಿನ ಆಯುರ್ವೇದ ಕುಟೀರದ ಖ್ಯಾತ ವೈದ್ಯರಾದ ಶ್ರೀ ಡಾ. ಸೀತಾರಾಮ ಪ್ರಸಾದರು ತಮ್ಮ ಕ್ಯಾಮರಾದಲ್ಲಿ ಕೈಹಿಡಿದ ಫೋಟೋ.

ಶ್ರೀಗುರುಗಳ ಸಾರ್ಥಕ್ಯ, ಪರಮಾನಂದ ಹಾಗೂ ನಿಷ್ಕಲ್ಮಶ ಮಾತೃಹೃದಯಕ್ಕೆ ಹಿಡಿದ ಕೈಗನ್ನಡಿಯಾಗಿದೆ.

Sri Sri At Mount Kailash. (Photo: Dr. Seetharam Prasad)

Sri Sri At Mount Kailash. (Photo: Dr. Seetharam Prasad)

Facebook Comments Box