ಗೋರಕ್ಷಣೆಗಾಗಿ ಸೀಮೋಲ್ಲಂಘನ ಮಾಡಿ ಬೆಂಗಳೂರು : ಕಸಾಯಿಖಾನೆಗೆ ಹೋಗುತ್ತಿದ್ದ ಧವಳಗಿರಿ ನಂದಿಗೆ ಅಭಯವನ್ನು ನೀಡುವುದರ ಮೂಲಕ ಆರಂಭವಾದ ಗೋಚಾತುರ್ಮಾಸ್ಯ ಯಾವುದೇ ವಿಘ್ನಗಳಿಲ್ಲದೇ ನಿರ್ವಿಘ್ನವಾಗಿ ಪರ್ಯವಸಾನವಾಗಿದೆ. ಈ ಬಾರಿ ಚಾತುರ್ಮಾಸ್ಯದಲ್ಲೂ ಮಠದ ಮೇಲೆ ಆಕ್ರಮಣದ ಪ್ರಯತ್ನಗಳಾಗಿವೆ, ಆದರೆ ಗೋವಿನ ಹೆಸರಿನಲ್ಲೇ ಕಷ್ಟಗಳನ್ನು ನಿವಾರಿಸುವ ಶಕ್ತಿ ಇರುವುದರಿಂದ ಯಾವುದೇ ಕೆಡುಕಿನ ಉದ್ದೇಶದ ಪ್ರಯತ್ನಗಳೂ ಸಫಲವಾಗಿಲ್ಲ ಎಂದು ಶ್ರೀರಾಮಚಂದ್ರಾಪುರಮಠದ ಶ್ರೀಶ್ರೀರಾಘವೇಶ್ವರಭಾರತೀ… Continue Reading →
ಬೆಂಗಳೂರು : ಮನೆಯಲ್ಲಿ ಹೆಣ್ಣು ಮಗು ಜನಿಸಿದರೆ , ಕೊಟ್ಟಿಗೆಯಲ್ಲಿ ಗಂಡುಕರು ಜನಿಸಿದರೆ ಬೇಸರಿಸುತ್ತೇವೆ. ಆದರೆ ಹಾಗಾಗಬಾರದು, ಹೆಣ್ಣುಮಗುವನ್ನು ಪ್ರೀತಿಯಿಂದ ಕಾಣಬೇಕು, ಹಾಗೆಯೇ ಗಂಡುಕರುವನ್ನು ಕಸಾಯಿಖಾನೆಗೆ ಸಾಗಿಸದೇ ಸಹಜವಾಗಿ ಸಾಕಬೇಕು. ನಂದಿ/ಎತ್ತಿನಿಂದ ಅನೇಕ ಪ್ರಯೋಜನಗಳಿದ್ದು, ಎತ್ತನ್ನು ಸರಿಯಾಗಿ ಬಳಸಿಕೊಂಡರೆ ರೈತರು ಸ್ವಾವಲಂಬಿ ಬದುಕನ್ನು ಬಾಳಲು ಸಾಧ್ಯ ಎಂದು ಶ್ರೀರಾಮಚಂದ್ರಾಪುರಮಠದ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಹೇಳಿದರು. ಶ್ರೀರಾಮಚಂದ್ರಾಪುರಮಠದ ಬೆಂಗಳೂರಿನ… Continue Reading →
Bengaluru: The chaturmasya occasion observed by SriSri Raghaveshwara Bharati Swamiji of Sri RamachandrapuraMatha has been going on at Ramashrama, Girinagar. There was an event organised by HavyakaMaha Mandala – MaatruShaake. VidwanJagadish Sharma, EshwariBerkadavu and U.S.G. Bhat were the delegates of… Continue Reading →
ಬೆಂಗಳೂರು : ಗುರುವನ್ನು ತಿರಸ್ಕರಿಸಿದರೆ, ಗುರುವನ್ನು ಅಗೌರವದಿಂದ ಕಂಡರೆ ನೋವು – ಪತನ ನಿಶ್ಚಿತ, ದೇವರಾಜ ಇಂದ್ರ ದೇವಗುರು ಬೃಹಸ್ಪತಿಯನ್ನು ಅಗೌರವದಿಂದ ಕಂಡದ್ದರಿಂದ ದಾನವರ ಜೊತೆ ನಡೆದ ಯುದ್ಧದಲ್ಲಿ ಸೋತು ಸರ್ವಪತನ ಹೊಂದಿದ ಎಂದು ಶ್ರೀರಾಮಚಂದ್ರಾಪುರಮಠದ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಹೇಳಿದರು. ಗೋಚಾತುರ್ಮಾಸ್ಯದ ಅಂಗವಾಗಿ ಶ್ರೀರಾಮಚಂದ್ರಾಪುರದ ಬೆಂಗಳೂರು ಶಾಖಾಮಠದಲ್ಲಿ ಸಂಪನ್ನವಾದ ಗೋಕಥಾದಲ್ಲಿ ಸಮುದ್ರ ಮಥನ – ಕಾಮಧೇನು… Continue Reading →
ಬೆಂಗಳೂರು : ಗೋವುಗಳಿಗೆ ಕೃತ್ರಿಮ ಗರ್ಭಧಾರಣೆ ಮಾಡುವುದು ಧಾರ್ಮಿಕತೆಗೆ ವಿರುದ್ಧ ಹೌದೋ ಅಲ್ಲವೋ ಅನ್ನುವುದಕ್ಕಿಂತ ಅದು ಮನುಷ್ಯತ್ವಕ್ಕೆ ವಿರುದ್ಧವಾಗಿದೆ. ತನ್ನಂತೆ ಪರರು ಎಂದು ಭಾವಿಸುವ ನಾವು ಗೋವುಗಳಿಗೆ ಮಾಡಿದಂತೆ, ಎಲ್ಲಾ ಮನುಷ್ಯರಿಗೆ ಕೃತ್ರಿಮ ಗರ್ಭಧಾರಣೆ ಮಾಡಲು ಒಪ್ಪುತ್ತೇವೆಯೇ ಎಂದು ಶ್ರೀರಾಮಚಂದ್ರಾಪುರಮಠದ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಹೇಳಿದರು. ಶ್ರೀರಾಮಚಂದ್ರಾಪುರಮಠದ ಬೆಂಗಳೂರಿನ ಶಾಖಾಮಠದಲ್ಲಿ ನಡೆಯುತ್ತಿರುವ ಗೋಚಾತುರ್ಮಾಸ್ಯದ ಗೋಸಂದೇಶ ಸಭೆಯಲ್ಲಿ ಸಾನ್ನಿಧ್ಯವಹಿಸಿ… Continue Reading →